ಪ್ರತಿ ವರ್ಷಕ್ಕೆ ಬಾಬಾ ವಾಂಗಾ ಏನು ಭವಿಷ್ಯವಾಣಿ ನುಡಿದಿದ್ದಾರೆ ಎಂಬುದು ಸದಾ ಚರ್ಚೆಯಾಗುತ್ತಲೇ ಇರುತ್ತದೆ. ಆದರೆ, ನಿಜವಾಗಿ ಬಾಬಾ ವಾಂಗಾ ಅವನ್ನೆಲ್ಲ ನುಡಿದಿದ್ದರೇ ಎಂಬುದು ಮಾತ್ರ ತನಿಖಾರ್ಹ.  

ಬಾಬಾ ವಾಂಗಾ ಖ್ಯಾತಿ ಏರಿದ್ದು ಎರಡನೆಯ ಮಹಾಯುದ್ಧದ ಕರಾಳ ದಿನಗಳಲ್ಲಿ. ನಂತರ 1996 ರಲ್ಲಿ ಅವಳ ಸಾವಿನವರೆಗೂ, ಬಲ್ಗೇರಿಯನ್‌ನ ಬಾಬಾ ವಾಂಗಾ ಅತೀಂದ್ರಿಯ ಶಕ್ತಿ, ಭವಿಷ್ಯವನ್ನು ಮುನ್ಸೂಚಿಸುವ ಸ್ಪಷ್ಟ ಸಾಮರ್ಥ್ಯ ಅತಿಯಾಗಿ ಹೆಸರು ತಂದು ಕೊಟ್ಟಿದೆ. 
ಆಕೆಯ ಮುನ್ಸೂಚನೆಗಳು ಎಷ್ಟು ಕರಾರುವಕ್ಕಾಗಿ ಸಾಬೀತಾದವೆಂದರೆ, ಪ್ರಖ್ಯಾತ ನಾಸ್ಟ್ರಾಡಾಮಸ್‌ನೊಂದಿಗೆ ಆಕೆಯನ್ನು ಹೋಲಿಸಲಾಯಿತು. ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್ ಎಂದೇ ಬಿರುದು ಪಡೆದಿರುವ ಬಾಬಾ ವಾಂಗಾ ಅವಳಿ ಗೋಪುರಗಳ ಮೇಲಿನ ಭಯೋತ್ಪಾದಕ ದಾಳಿ, ಚೆರ್ನೋಬಿಲ್ ಅಪಘಾತ, ರಾಜಕುಮಾರಿ ಡಯಾನಾ ಸಾವು, ಯುರೋಪಿಯನ್ ಒಕ್ಕೂಟದಿಂದ ಯುನೈಟೆಡ್ ಕಿಂಗ್‌ಡಮ್‌ನ ನಿರ್ಗಮನ, 2004 ರ ಸುನಾಮಿ, ಡೊನಾಲ್ಡ್ ಟ್ರಂಪ್‌ನ ಆಡಳಿತ ಮುಂತಾದ ಮಹತ್ವದ ಘಟನೆಗಳನ್ನು ನಿಖರವಾಗಿ ಊಹಿಸಿದ್ದಕ್ಕಾಗಿ ಗುರುತಿಸಲ್ಪಟ್ಟಿದ್ದಾರೆ.

ಬಾಬಾ ವಾಂಗಾ ಅವರ ಭವಿಷ್ಯವಾಣಿಗಳು: ಬಾಬಾ ವಾಂಗಾ ಸುಮಾರು 5079ರವರೆಗೆ ನಡೆಯುವ ಮುನ್ನೋಟಗಳನ್ನು ಹೇಳಿದ್ದಾರೆ ಎನ್ನಲಾಗುತ್ತದೆ. 5079ರಲ್ಲಿ ಜಗತ್ತು ಅಂತ್ಯವಾಗುತ್ತದೆ ಎಂದವರು ಹೇಳಿದ್ದಾರೆ.

ಹಿಂದೂಗಳ ಈ ಧಾರ್ಮಿಕ ಸ್ಥಳ ಸಂಜೆಯಾಗುತ್ತಿದ್ದಂತೆ ಭಯ ಹುಟ್ಟಿಸುವ ಸ್ಮಶಾನವಾಗುತ್ತೆ!

ಅದರಂತೆ, 2021ಕ್ಕೆ, ಗಮನಾರ್ಹವಾದ ಭೂಕಂಪನ ಮತ್ತು ಜ್ವಾಲಾಮುಖಿ ಚಟುವಟಿಕೆ ಇರುತ್ತದೆ ಎಂದು ಬಾಬಾ ವಾಂಗಾ ಬರೆದಿದ್ದಾರೆ. ಜೊತೆಗೆ, ಪ್ರವಾಹಗಳು ಮತ್ತು ಬಿರುಗಾಳಿಗಳು ಇರುತ್ತವೆ ಎಂದಿದ್ದರು.
2022ರ ವರ್ಷದಲ್ಲಿ, ಬಾಬಾ ವಂಗಾ ಅನ್ಯಲೋಕದ ಆಕ್ರಮಣ ಮತ್ತು ಹೊಸ ಸಾಂಕ್ರಾಮಿಕ ರೋಗದ ಬಗ್ಗೆ ಭವಿಷ್ಯ ನುಡಿದರು. ಕೊರೋನಾ ಹಿನ್ನೆಲೆಯಲ್ಲಿ ಈ ಮಾತು ಕೂಡಾ ನಿಖರವಾಯ್ತೆಂದು ವಾಂಗಾ ಖ್ಯಾತಿ ಹಬ್ಬಿತು. 
2023ನೇ ವರ್ಷಕ್ಕೆ ಸಂಬಂಧಿಸಿದಂತೆ ಮಾತನಾಡುವುದಾದರೆ, ಬಾಬಾ ವಂಗಾ ಅವರು ಈ ವರ್ಷಕ್ಕೆ ಅನೇಕ ಭೀಕರ ಭವಿಷ್ಯವಾಣಿಗಳನ್ನು ನುಡಿದಿದ್ದಾರೆ. ಅವುಗಳಲ್ಲಿ ಸೌರ ಚಂಡಮಾರುತ, ಅಕಾಲಿಕ ಮಳೆ, ಟರ್ಕಿ ಭೂಕಂಪ, ಭೂಮಿಯ ಕಕ್ಷೆಯಲ್ಲಿ ಬದಲಾವಣೆ, ದೊಡ್ಡ ದೇಶದಿಂದ ಜೈವಿಕ ಶಸ್ತ್ರಾಸ್ತ್ರ ಪರೀಕ್ಷೆ, ಅನ್ಯಲೋಕದ ಜೀವಿಗಳ ಆಕ್ರಮಣ ಮತ್ತು ಹೊಸ ಸಾಂಕ್ರಾಮಿಕ ಸೇರಿವೆ. ಇವೆಲ್ಲವೂ ಜನರನ್ನು ಬೆಚ್ಚಿ ಬೀಳಿಸುತ್ತಲೇ ಇರುತ್ತವೆ. 

ಎಲ್ಲವೂ ಸುಳ್ಳೇ?
ಅದಾಗ್ಯೂ, ಮಾಧ್ಯಮವೊಂದರ ತನಿಖೆಯ ಪ್ರಕಾರ ಬಾಬಾ ವಾಂಗಾರ ಹೆಚ್ಚಿನ ಭವಿಷ್ಯವಾಣಿಗಳು ಇಂಟರ್ನೆಟ್ ಟ್ರೋಲ್‌ಗಳಿಂದ ರಚಿಸಲ್ಪಟ್ಟಿವೆ. ಬಾಬಾ ವಾಂಗಾ ತಾವು ಹೇಳಿದ ಯಾವುದನ್ನ ಪುಸ್ತಕ ರೂಪದಲ್ಲಿ ಬರೆದಿಲ್ಲ. ಆದರೆ, ಅವರ ಬಗ್ಗೆ, ಅವರ ಸಾಮರ್ಥ್ಯಗಳು ಮತ್ತು ಭವಿಷ್ಯವಾಣಿಗಳ ಬಗ್ಗೆ ಅನೇಕ ಪುಸ್ತಕಗಳು ರಚನೆಯಾಗಿವೆ. ಹಾಗಿದ್ದರೆ, ಬಾಬಾ ವಾಂಗಾ ಭವಿಷ್ಯವಾಣಿ ಎಂಬುದು ಆಧುನಿಕ ಯುಗದ ಮಿಥ್ಯವೇ? ಅಂತರ್ಜಾಲದ ಸೃಷ್ಟಿಯೇ ಅಥವಾ ಆಕೆ ಹೀಗೆಲ್ಲ ಹೇಳಿದ್ದಾರೆಯೇ?

Budh Gochar 2023: ಮಿಥುನದಲ್ಲಿ ಬುಧನಿಂದ ಮೇಷ ಸೇರಿ 4 ರಾಶಿಗಳಿಗೆ ಯಶಸ್ಸು

ಯಾರು ಈ ಬಾಬಾ ವಾಂಗಾ?
ಬಾಬಾ ವಾಂಗಾ 1911ರಲ್ಲಿ ಉತ್ತರ ಮ್ಯಾಸಿಡೋನಿಯಾದಲ್ಲಿ ಜನಿಸಿದರು. ಆದರೂ ಅವರು ತಮ್ಮ ಜೀವನದ ಬಹುಪಾಲು ಬಲ್ಗೇರಿಯಾದಲ್ಲಿ ವಾಸಿಸುತ್ತಿದ್ದರು. ಆಕೆಯ ಮೂಲ ಹೆಸರು ವಂಜೆಲಿಯಾ ಪಾಂಡೆವಾ ಗುಷ್ಟರೋವಾ. ಆಕೆಯ ಜೀವಿತಾವಧಿಯಲ್ಲಿ, ಆಕೆಯ ಭವಿಷ್ಯವಾಣಿಯ ಶಕ್ತಿಗಳು ಮತ್ತು ಸತ್ತವರನ್ನು ಸಂಪರ್ಕಿಸುವ ಸಾಮರ್ಥ್ಯದಿಂದಾಗಿ ಅವಳು ಕುಖ್ಯಾತಿಯನ್ನು ಗಳಿಸಿದಳು. ಆಕೆಯ ಬಾಲ್ಯದ ವರದಿಗಳ ಪ್ರಕಾರ, ದೇವದೂತರನ್ನು ಎದುರಿಸಿದ ನಂತರ ಭವಿಷ್ಯವನ್ನು ನೋಡುವ ಸಾಮರ್ಥ್ಯಕ್ಕಾಗಿ ಅವಳು ತನ್ನ ದೈಹಿಕ ದೃಷ್ಟಿಯನ್ನು ವ್ಯಾಪಾರ ಮಾಡಿದಳು.