Asianet Suvarna News Asianet Suvarna News

Akshaya Tritiya 2023: ತ್ರೇತಾಯುಗ ಆರಂಭದ ಈ ದಿನ ಅದೆಷ್ಟೊಂದು ಮಹತ್ವದ ಘಟನೆಗಳಿಗೆ ಸಾಕ್ಷಿ ಗೊತ್ತಾ?

ಅಕ್ಷಯ ತೃತೀಯದಂದು ಕ್ರಮಬದ್ಧವಾಗಿ ಪೂಜಿಸುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಉಂಟಾಗುತ್ತದೆ. ಇದಲ್ಲದೆ, ಅಕ್ಷಯ ತೃತೀಯ ದಿನದಂದು ಆಭರಣಗಳನ್ನು ಖರೀದಿಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ, ಆದರೆ ಈ ಹಬ್ಬವನ್ನು ಏಕೆ ಆಚರಿಸಬೇಕು ಗೊತ್ತಾ?

Akshaya Tritiya 2023 Know what are the 4 main reasons behind celebrating Akshaya Tritiya skr
Author
First Published Apr 12, 2023, 3:58 PM IST | Last Updated Apr 12, 2023, 3:59 PM IST

ಅಕ್ಷಯ ತೃತೀಯ ಹಬ್ಬವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಆಚರಿಸಲಾಗುತ್ತದೆ. ಸಂಸ್ಕೃತದಲ್ಲಿ ಅಕ್ಷಯ ಎಂದರೆ 'ಸಂತೋಷ, ಯಶಸ್ಸು ಮತ್ತು ಆನಂದದ ಅಂತ್ಯವಿಲ್ಲದ ಭಾವನೆ' ಮತ್ತು ತೃತೀಯಾ ಎಂದರೆ 'ಮೂರನೇ'. ಹಿಂದೂ ಪುರಾಣಗಳ ಪ್ರಕಾರ, ತ್ರೇತಾಯುಗವು ಅಕ್ಷಯ ತೃತೀಯ ದಿನದಂದು ಪ್ರಾರಂಭವಾಯಿತು. ಅಕ್ಷಯ ತೃತೀಯ ಹಬ್ಬವನ್ನು ಮೂರು ಪ್ರಮುಖ ಕಾರಣಗಳಿಗಾಗಿ ಆಚರಿಸಲಾಗುತ್ತದೆ. ಆ ಮೂರು ಮುಖ್ಯ ಕಾರಣಗಳು ಯಾವುವು ಎಂದು ತಿಳಿಯೋಣ.

ಗಂಗೆಗೆ ಸಂಬಂಧಿಸಿದ ಕಾರಣ
ಹಿಂದೂ ಧರ್ಮದ ನಂಬಿಕೆಗಳ ಪ್ರಕಾರ, ಅಕ್ಷಯ ತೃತೀಯ ದಿನದಂದು, ತಾಯಿ ಗಂಗಾ ಸ್ವರ್ಗದಿಂದ ಭೂಮಿಗೆ ಇಳಿದಳು ಮತ್ತು ಗಂಗಾ ತಾಯಿಯನ್ನು ಭೂಮಿಗೆ ಇಳಿಸಲು ರಾಜ ಭಗೀರಥ ಸಾವಿರಾರು ವರ್ಷಗಳ ಕಾಲ ತಪಸ್ಸು ಮಾಡಿದನು. ನಂಬಿಕೆಯ ಪ್ರಕಾರ, ಅಕ್ಷಯ ತೃತೀಯದಂದು ಗಂಗಾಸ್ನಾನ ಮಾಡುವುದರಿಂದ ಎಲ್ಲಾ ಪಾಪಗಳು ನಾಶವಾಗುತ್ತವೆ.

ಅನ್ನಪೂರ್ಣ ಮಾತೆಯ ಜನನ
ಮಾತಾ ಅನ್ನಪೂರ್ಣೆಯ ಮೂಲವನ್ನು ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಅನ್ನಪೂರ್ಣ ಜಯಂತಿ ಎಂದು ಆಚರಿಸಲಾಗುತ್ತದೆ ಮತ್ತು ಅಕ್ಷಯ ತೃತೀಯ ದಿನದಂದು ಕೂಡಾ ಮಾತಾ ಅನ್ನಪೂರ್ಣೆಯ ಜನ್ಮದಿನವನ್ನು ಆಚರಿಸಲಾಗುತ್ತದೆ. ಅನ್ನಪೂರ್ಣ ಮಾತೆಯನ್ನು ಪೂಜಿಸುವುದರಿಂದ ಆಹಾರದ ರುಚಿ ಅನೇಕ ಪಟ್ಟು ಹೆಚ್ಚಾಗುತ್ತದೆ. ಈ ದಿನದಂದು ಬಡವರಿಗೆ ಅನ್ನ ನೀಡಬೇಕೆಂಬ ನಿಯಮವಿದ್ದು, ಈ ದಿನದಂದು ಜನರಿಗೆ ಊಟ ನೀಡಿದರೆ ಮನೆಯಲ್ಲಿ ಅನ್ನದ ಕೊರತೆ ಎಂದಿಗೂ ಇರುವುದಿಲ್ಲ ಎಂಬ ನಂಬಿಕೆ ಇದೆ.

ಈ ವರ್ಷ Akshaya Tritiyaದಂದು 7 ಯೋಗಗಳ ಸಂಯೋಗ; ಇದನ್ನು ಖರೀದಿಸೋಕೆ ಮರೀಬೇಡಿ!

ಮಹಾಭಾರತ ಬರವಣಿಗೆ
ಸನಾತನ ಧರ್ಮದಲ್ಲಿ ಮಹಾಭಾರತವನ್ನು ಐದನೇ ವೇದವೆಂದು ಪರಿಗಣಿಸಲಾಗಿದೆ ಮತ್ತು ಮಹರ್ಷಿ ವೇದ ವ್ಯಾಸರು ಅಕ್ಷಯ ತೃತೀಯ ದಿನದಿಂದಲೇ ಮಹಾಭಾರತವನ್ನು ಬರೆಯಲು ಪ್ರಾರಂಭಿಸಿದರು. ಶ್ರೀಮದ್ ಭಗವದ್ಗೀತೆಯನ್ನು ಮಹಾಭಾರತದಲ್ಲಿಯೇ ಸೇರಿಸಲಾಗಿದೆ ಮತ್ತು ಅಕ್ಷಯ ತೃತೀಯ ದಿನದಂದು ಗೀತೆಯ 18ನೇ ಅಧ್ಯಾಯವನ್ನು ಪಠಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ನಂಬಿಕೆಗಳ ಪ್ರಕಾರ, ಮಹಾಭಾರತದ ಪಠ್ಯವನ್ನು ಪಠಿಸುವುದನ್ನು ಸಹ ಈ ದಿನ ಮಂಗಳಕರವೆಂದು ಪರಿಗಣಿಸಲಾಗುತ್ತದೆ.

Akshaya Tritiya 2023 ಯಾವಾಗ? ಚಿನ್ನ ಖರೀದಿಗೆ ಶುಭ ಸಮಯವೇನು?

ಪರಶುರಾಮನ ಜನನ
ಅಕ್ಷಯ ತೃತೀಯ ದಿನದಂದು, ಭಗವಾನ್ ಪರಶುರಾಮನು ಮಹರ್ಷಿ ಜಮದಗ್ನಿ ಮತ್ತು ಮಾತಾ ರೇಣುಕಾ ದೇವಿಗೆ ಜನಿಸಿದನು. ಪರಶುರಾಮನು ವಿಷ್ಣುವಿನ ಆರನೇ ಅವತಾರವೆಂದು ಪರಿಗಣಿಸಲ್ಪಟ್ಟಿದ್ದಾನೆ. ಅದಕ್ಕಾಗಿಯೇ ಅಕ್ಷಯ ತೃತೀಯ ದಿನದಂದು ಭಗವಾನ್ ವಿಷ್ಣುವನ್ನು ಪೂಜಿಸಲಾಗುತ್ತದೆ. ಅಕ್ಷಯ ತೃತೀಯದಂದು ಪರಶುರಾಮನನ್ನು ಪೂಜಿಸುವ ಅಭ್ಯಾಸ ಕೂಡಾ ಇದೆ.

ಕೃಷ್ಣ ಸುಧಾಮನ ಕತೆ
ಶ್ರೀ ಕೃಷ್ಣನ ಬಡ ಬ್ರಾಹ್ಮಣ ಸ್ನೇಹಿತ, ಸುಧಾಮ, ಒಮ್ಮೆ ಒಂದು ಮುಷ್ಟಿ ಅವಲಕ್ಕಿಯೊಂದಿಗೆ ಕೃಷ್ಣನ ಅರಮನೆಗೆ ಭೇಟಿ ನೀಡಿದ್ದನು. ಸುಧಾಮನು ಬಾಲ್ಯದಲ್ಲಿ ಶ್ರೀ ಕೃಷ್ಣನ ಆಹಾರವನ್ನು ಕದ್ದು ಸೇವಿಸಿದ್ದನು. ಆದ್ದರಿಂದ, ಅವನು ಋಣ ಕಳೆದುಕೊಳ್ಳಲು ಬಯಸಿದ್ದನು.
ಶ್ರೀ ಕೃಷ್ಣನು ರಾಜನಾದರೂ ಬಡ ಸ್ನೇಹಿತ ಸುಧಾಮನ ವಿನಮ್ರ ಕಾಣಿಕೆಯನ್ನು ಮನಃಪೂರ್ವಕವಾಗಿ ಸ್ವೀಕರಿಸಿದನು ಮತ್ತು ಮೌನವಾಗಿ ತನ್ನ ಸ್ನೇಹಿತನಿಗೆ ಅದೃಷ್ಟವನ್ನು ಹರಸಿದನು. ಸುಧಾಮ ಮನೆಗೆ ಹಿಂದಿರುಗುವ ವೇಳೆಗಾಗಲೇ ಚಮತ್ಕಾರವೇ ನಡೆದು ಆತ ಶ್ರೀಮಂತನಾಗಿದ್ದನು. ಅವನ ಗುಡಿಸಲಿದ್ದ ಜಾಗದಲ್ಲಿ ದೊಡ್ಡ ಬಂಗಲೆಯಿತ್ತು. ಅಲ್ಲಿ ಎಲ್ಲವೂ ಇದ್ದವು. ಈ ಘಟನೆಯು ತೃತೀಯಾ ತಿಥಿ, ವೈಶಾಖ, ಶುಕ್ಲ ಪಕ್ಷದಂದು ಸಂಭವಿಸಿತು ಮತ್ತು ಆದ್ದರಿಂದ ಅಕ್ಷಯ ತೃತೀಯಕ್ಕೆ ವಿಶೇಷ ಪ್ರಾಮುಖ್ಯತೆ ಇದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios