Asianet Suvarna News Asianet Suvarna News

ಮೀನರಾಶಿಯಲ್ಲಿ ರಾಹು: ಬಣ್ಣದ ಲೋಕದವರಿಗೆ ಕಾದಿದೆ ಅಪಾಯ..

ಚಿತ್ರರಂಗ ಹಾಗೂ ಕಿರುತೆರೆ ಲೋಕಕ್ಕೆ ಗಂಡಾಂತರ ಕಾದಿದ್ದು, ಕೆಲವೊಂದು ಅಹಿತಕರ ಘಟನೆಗಳು ನಡೆಯಲಿವೆ ಎಂದಿರುವ ಖ್ಯಾತಿ ಜ್ಯೋತಿಷಿ ಅದಕ್ಕೆ ನೀಡಿರುವ ಸಲಹೆ ಏನು?
 

Advice given by  astrologer  Prakash Ammannay to cinema and television suc
Author
First Published Aug 19, 2023, 8:53 AM IST

ಕಳೆದ ಕೆಲ ವರ್ಷಗಳಿಂದ ಚಿತ್ರರಂಗದಲ್ಲಿ ಸಾವು ನೋವುಗಳ ಸುದ್ದಿಯೇ ಹೆಚ್ಚಾಗಿ ಕೇಳಿಬರುತ್ತಿದೆ. ಅದರಲ್ಲಿಯೂ ಚಿಕ್ಕ ವಯಸ್ಸಿನಲ್ಲಿಯೇ ಸಾಯುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹೃದಯಾಘಾತಕ್ಕೆ (Heart Attack) ಹೆಚ್ಚಿನವರು ಬಲಿಯಾಗಿದ್ದರೆ, ಅಪಘಾತದಿಂದಲೂ ಸಾವನ್ನಪ್ಪಿದ್ದಾರೆ. ಇದೇ ವೇಳೆ ಚಿತ್ರರಂಗದಲ್ಲಿಯೂ ಕಾಂಟ್ರವರ್ಸಿಗಳೇ ಹೆಚ್ಚಾಗಿವೆ. ಚಿತ್ರ ಬಿಡುಗಡೆಗೂ ಮುನ್ನವೇ ಸಿಕ್ಕಾಪಟ್ಟೆ ವಿವಾದಗಳಿಗೆ ಚಿತ್ರಗಳು ಸಿಲುಕುತ್ತಿವೆ, ಇದೇ ಕಾರಣಕ್ಕೆ ಗಲಾಟೆ, ಗದ್ದಲ, ಹೋರಾಟ, ಪ್ರತಿಭಟನೆಗಳೂ ನಡೆಯುತ್ತಿವೆ. ಇದನ್ನೆಲ್ಲಾ ನೋಡಿದಾಗ ಚಿತ್ರರಂಗಕ್ಕೆ ಇದೇನಾಗಿದೆ ಎಂದು ಕಾಡುವುದು ಸಹಜ. ಯಾವುದೇ ಸಮಸ್ಯೆ ಇದ್ದರೂ ಅದಕ್ಕೊಂದು ಜ್ಯೋತಿಷದ ಟಚ್ ನೀಡಲಾಗುತ್ತದೆ. ಜ್ಯೋತಿಷ ಕೂಡ ವಿಜ್ಞಾನ ಎನ್ನುವುದನ್ನು ಕೆಲವರು ಸಾಬೀತು ಮಾಡಿದ್ದಾರೆ. ಜ್ಯೋತಿಷ (Astorlogy) ನಂಬುವುದಿಲ್ಲ ಎನ್ನುವವರು ಕೂಡ ಕೆಲವೊಮ್ಮೆ ಕಷ್ಟ ಬಂದಾಗ ಜ್ಯೋತಿಷಿಗಳ ಕಡೆ ಗುಟ್ಟಾಗಿ ಹೋಗುವುದೂ ಇದೆ.

ಕುಜ-ರಾಹು ಗಂಡಾಂತರದಿಂದ ಅಪಾಯ; ರಾಜಕೀಯ ನಾಯಕರಿಗೆ ಕಂಟಕ..!

ಅದೇನೆ ಇದ್ದರೂ, ಈಗ ಚಿತ್ರರಂಗದ ವಿಷಯಕ್ಕೆ ಬಂದರೆ, ಹೀಗೇಕೆ ಆಗುತ್ತಿದೆ. ಈ ಸಮಸ್ಯೆಗಳು ಉಂಟಾಗಲು ಕಾರಣವೇನು ಎಂಬುದನ್ನು ಖ್ಯಾತ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ (Prakash Ammannay) ವಿವರಿಸಿದ್ದಾರೆ. ಸಮಸ್ಯೆ ಇದ್ದರೆ ಜ್ಯೋತಿಷಿಗಳ ಬಳಿ ಪರಿಹಾರವೂ ಇದ್ದೇ ಇರುತ್ತದೆ. ಹಾಗೆಯೇ ಪ್ರಕಾಶ್​ ಅಮ್ಮಣ್ಣಾಯ ಅವರು ಕೂಡ ಈ ಸಮಸ್ಯೆಗೆ ಪರಿಹಾರವನ್ನು ನೀಡಿದ್ದಾರೆ. ಹಾಗಿದ್ದರೆ, ಬಣ್ಣದ ಲೋಕಕ್ಕೆ ಬರುವ ಸಮಸ್ಯೆ ಏನು, ಅದಕ್ಕೆ ಪರಿಹಾರವೇನು ಎಂದು ಪ್ರಕಾಶ್​ ಅಮ್ಮಣ್ಣಾಯ ಅವರಿಂದಲೇ ಕೇಳೋಣ:  

ಖ್ಯಾತ ಜ್ಯೋತಿಷಿ ಪ್ರಕಾಶ ಅಮ್ಮಣ್ಣಾಯ ಜ್ಯೋತಿರ್ವಿಜ್ಞಾನಂ ಅವರು ತಮ್ಮ ಫೇಸ್‌ಬುಕ್‌ನಲ್ಲಿ ವಿಶೇಷವಾದ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.  ಅದರಲ್ಲಿ ಅವರು, ಕರ್ಕ, ವೃಶ್ಚಿಕ, ಮೀನ ರಾಶಿಯಲ್ಲಿ ಯಾವುದೇ ಗ್ರಹನು ಮೀನಾಂಶದಲ್ಲಿ ಬಂದರೆ ಮೋಕ್ಷ ಎಂದರ್ಥ. ಮೋಕ್ಷ ಎಂದರೆ ನಿರ್ಗಮನ ಎಂದೂ ವ್ಯಾಖ್ಯಾನಿಸಬಹುದು. ಅಕ್ಟೋಬರ್ 30 ಕ್ಕೆ ರಾಹು ಗ್ರಹನು ಮೀನರಾಶಿಯಲ್ಲಿ ಮೀನಾಂಶ ಪಡೆಯುತ್ತಾನೆ. ರಾಹುವಿನಿಂದ ಛಾಯಾ ಲೋಕದ ಚಿಂತನೆಯನ್ನೂ ಮಾಡಬಹುದು. ಛಾಯಾಲೋಕ ಎಂದರೆ ಬಣ್ಣ ಹಾಕಿ ನಟಿಸುವವರು. ಸಿನಿಮಾ, ನಾಟಕ, ಸೀರಿಯಲ್. ಇದರಲ್ಲಿ ಇರುವವರಿಗೆ ಅಪಾಯ ಸೂಚನೆ. ಅವರಿಗೇನೋ ಉತ್ತಮ ಆಗಬಹುದು. ಆದರೆ ಛಾಯಾ ಲೋಕಕ್ಕೆ ನಷ್ಟ. ಈಗಾಗಲೇ ಅವರ ಮೇಲೆ ದಾಳಿ, ಅವರಲ್ಲಿ ಅನಿರೀಕ್ಷಿತ ಮರಣಗಳಾಗುತ್ತಿರುವುದನ್ನು ಕಾಣುತ್ತೇವೆ. ಹೆಚ್ಚಾಗಿ ಹೃದಯಾಘಾತ, ಅಪಘಾತ ಮರಣಗಳಾಗುತ್ತಿವೆ ಎಂದಿದ್ದಾರೆ ಪ್ರಕಾಶ್ ಅಮ್ಮಣ್ಣಾಯ.

ಇದಕ್ಕೆ ಪರಿಹಾರವನ್ನೂ ಸೂಚಿಸಿರುವ ಅವರು,  ಸಣ್ಣದ್ದಾಗಿ ನಾಗಾರಾಧನೆ, ಮಧ್ಯಮ ಪರಿಹಾರ ಆಶ್ಲೇಷಾ ಬಲಿ,ಅತಿ ದೊಡ್ಡ  ಪರಿಹಾರ (Remedies) ನಾಗ ಮಂಡಲ ಸೇವೆ. 18 ವರ್ಷಗಳಿಗೊಮ್ಮೆ ರಾಹು ಮೀನ ರಾಶಿಗೆ ಬರುವುದು.ಅದರಲ್ಲಿ ಕೆಲವೇ ಸಮಯ ಮೀನಾಂಶದಲ್ಲಿ ಇರುತ್ತಾನೆ ಎಂದಿದ್ದಾರೆ. ಇದೇ ವೇಳೆ ಚಿಕ್ಕ ಸ್ಪಷ್ಟನೆಯನ್ನೂ ನೀಡಿದ್ದಾರೆ. ಅದೇನೆಂದರೆ, 'ತಪ್ಪಾಗಿ ತಿಳಿಯಬಾರದು. ನಿರ್ಗಮನ ಎಂದರೆ ಸಾವು ಎಂದೇ ಅಲ್ಲ ಜಿಗುಪ್ಸೆಗೊಂಡು ಆ ರಂಗವನ್ನೇ ಬಿಟ್ಟು ನಿರ್ಗಮಿಸೋದೂ ಆಗಬಹುದು. ಕಾರಣವೂ ಇದೆ. ಅತಿಯಾದ ಬೆಳಕಿನ ಕಿರಣ, ಕ್ಷಣ ಕ್ಷಕ್ಕೆ ಬದಲಾಗುವ ಭಾವನಾ ಉದ್ವೇಗ, ಪ್ರವಾಸ, ಆಹಾರ ಇತ್ಯಾದಿ ವೈಪರೀತ್ಯ' ಎಂದಿದ್ದಾರೆ.

GADAR-2: ಜಾತಕದಲ್ಲಿ ಗುರು ಸ್ಥಿರ, ಮುಂದೇನು? ಸನ್ನಿ ಡಿಯೋಲ್ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ!
 

Follow Us:
Download App:
  • android
  • ios