ವಾರದ ಯಾವ ದಿನ ಯಾವ ಕೆಲಸ ಮಾಡಲೇಬಾರದು ತಿಳ್ಕೊಂಡಿದೀರಾ?
ವಾರದಲ್ಲಿ ಒಂದೊಂದು ದಿನ ಒಬ್ಬೊಬ್ಬ ದೇವರಿಗೆ ಮೀಸಲಾಗಿದೆ. ಹೀಗಾಗಿ, ವಾರದ ಪ್ರತಿ ದಿನವೂ ಕೆಲವೊಂದು ಕೆಲಸಗಳನ್ನು ಮಾಡಕೂಡದು. ಅವು ಯಾವುವು ಬಲ್ಲಿರಾ?
ಹಿಂದೂ ಪಂಚಾಂಗ(Hindu Panchang)ದ ಪ್ರಕಾರ, ವಾರದ ಎಲ್ಲ ಏಳು ದಿನಗಳನ್ನು ನಿರ್ದಿಷ್ಟ ದೇವರು ಅಥವಾ ಗ್ರಹಕ್ಕೆ ಮೀಸಲಿರಿಸಲಾಗಿದೆ. ಇದೇ ಕಾರಣಕ್ಕೆ ವಾರ(week)ದ ಪ್ರತಿ ದಿನವೂ ತನ್ನದೇ ಆದ ವಿಶೇಷ ಮಹತ್ವವನ್ನು ಹೊಂದಿದೆ. ಅಂತೆಯೇ, ವಾರದ ನಿರ್ದಿಷ್ಟ ದಿನಗಳಲ್ಲಿ ಕೆಲವೊಂದು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ವಾರದ ಏಳು ದಿನಗಳಲ್ಲಿ ಯಾವ ದಿನ ಯಾವೆಲ್ಲ ಕೆಲಸಗಳನ್ನು ಮಾಡುವುದರಿಂದ ದೂರ ಉಳಿಯಬೇಕು ಎಂದು ತಿಳಿಯೋಣ.
ಭಾನುವಾರ(Sunday)
ಭಾನುವಾರವು ಸೂರ್ಯನಿಗೆ ಸಮರ್ಪಿತವಾಗಿದೆ. ವೈದಿಕ ಜ್ಯೋತಿಷ್ಯದಲ್ಲಿ ಸೂರ್ಯದೇವ(Lord Surya)ನು ಎಲ್ಲ ಗ್ರಹಗಳ ಅಧಿಪತಿ ಸ್ಥಾನಮಾನವನ್ನು ಹೊಂದಿದ್ದಾನೆ. ಪುರುಷನ ಜಾತಕ(horoscope)ದಲ್ಲಿ ಸೂರ್ಯನನ್ನು ತಂದೆಯ ಅಂಶವೆಂದು ಪರಿಗಣಿಸಿದರೆ ಮಹಿಳೆಯ ಜಾತಕದಲ್ಲಿ ಇದನ್ನು ಗಂಡನ ಅಂಶವೆಂದು ಪರಿಗಣಿಸಲಾಗುತ್ತದೆ. ಅದರಂತೆ, ಪುರುಷರು ಭಾನುವಾರ ತಮ್ಮ ತಂದೆಯೊಂದಿಗೆ ಜಗಳವಾಡಬಾರದು ಮತ್ತು ಮಹಿಳೆಯರು ತಮ್ಮ ಗಂಡನೊಂದಿಗೆ ಯಾವುದೇ ಕಾರಣಕ್ಕೂ ಜಗಳವಾಡಬಾರದು ಹಾಗೂ ಅವಮಾನಿಸಬಾರದು. ಭಾನುವಾರ ಕಪ್ಪು ಬಟ್ಟೆ(black cloth)ಗಳನ್ನು ಧರಿಸುವುದನ್ನು ಸಹ ನಿಷೇಧಿಸಲಾಗಿದೆ. ಈ ದಿನ ತಪ್ಪಾಗಿಯೂ ತುಳಸಿ ಎಲೆಗಳನ್ನು ಕೀಳಬೇಡಿ ಮತ್ತು ತುಳಸಿ ಗಿಡಕ್ಕೆ ನೀರು ಕೊಡಬೇಡಿ. ಭಾನುವಾರ ತಡವಾಗಿ ನಿದ್ದೆ ಮಾಡುವುದು ಸಹ ತಪ್ಪು.
ಸೋಮವಾರ(Monday)
ಸೋಮವಾರವನ್ನು ಶಿವ(Lord Shiva) ಮತ್ತು ಚಂದ್ರ(Moon)ನಿಗೆ ಸಮರ್ಪಿಸಲಾಗಿದೆ. ಈ ದಿನ ಉದ್ಯೋಗವನ್ನು ಪ್ರಾರಂಭಿಸಬಾರದು. ಹಾಗೊಂದು ವೇಳೆ ಮಾಡಿದರೆ, ವ್ಯಕ್ತಿಯು ಶೀಘ್ರದಲ್ಲೇ ತನ್ನ ಕೆಲಸ ಕಳೆದುಕೊಳ್ಳುತ್ತಾನೆ ಅಥವಾ ಕೆಲಸದ ಸ್ಥಳದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗಬಹುದು. ಸೋಮವಾರ ಪೂರ್ವ(east) ಮತ್ತು ಉತ್ತರ(north) ದಿಕ್ಕುಗಳಲ್ಲಿ ಪ್ರಯಾಣಿಸುವುದು ಸಹ ಒಳ್ಳೆಯದಲ್ಲ. ಈ ದಿನ ಮಧ್ಯಾಹ್ನ ಮಲಗುವುದರಿಂದ ಚಂದ್ರನಿಗೆ ಕೋಪ ಬರುತ್ತದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ, ಚಂದ್ರನನ್ನು ತಾಯಿಯ ಸೂಚಕ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಈ ದಿನ ತಾಯಿಯೊಂದಿಗೆ ಜಗಳವಾಡಬೇಡಿ. ಆಕೆಯನ್ನು ಅವಮಾನಿಸಬೇಡಿ.
ಹೊಂದಿದರೆ ರಾಜಯೋಗ, ಹೊಂದದಿದ್ದರೆ ರಾಜನನ್ನೂ ಬೀದಿಗೆ ತರುವ ರತ್ನವಿದು!
ಮಂಗಳವಾರ(Tuesday)
ಮಂಗಳವಾರ ಆಂಜನೇಯ(hanuman) ಮತ್ತು ಮಂಗಳ(mars) ಗ್ರಹಕ್ಕೆ ಮೀಸಲಾಗಿದೆ. ಜಾತಕದಲ್ಲಿ, ಮಂಗಳವನ್ನು ಧೈರ್ಯ, ಶಕ್ತಿ ಮತ್ತು ಒಡಹುಟ್ಟಿದವರ ಅಂಶವೆಂದು ಪರಿಗಣಿಸಲಾಗುತ್ತದೆ. ಈ ಕಾರಣದಿಂದಾಗಿ, ಮಂಗಳವಾರ, ಹಿರಿಯ ಸಹೋದರನೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಿ ಮತ್ತು ಅವನನ್ನು ಅವಮಾನಿಸಬೇಡಿ. ಮಂಗಳವಾರ ಯಾರಿಗೂ ಸಾಲ ಅಥವಾ ಸಾಲ ನೀಡಬಾರದು. ಅದು ಹಿಂದಿರುಗುವುದಿಲ್ಲ ಇಲ್ಲವೇ, ಬೇರೆ ರೀತಿಯ ಆರ್ಥಿಕ ನಷ್ಟ ಎದುರಾಗುತ್ತದೆ. ಗಡ್ಡ, ಕೂದಲು ಮತ್ತು ಉಗುರು ಕತ್ತರಿಸುವುದನ್ನು ಸಹ ಈ ದಿನ ನಿಷೇಧಿಸಲಾಗಿದೆ. ಮಂಗಳವಾರ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮತ್ತು ಪ್ರಕರಣಗಳನ್ನು ತಪ್ಪಿಸಬೇಕು.
ಬುಧವಾರ(Wednesday)
ಬುಧವಾರ ಗಣೇಶ(Ganesha) ಮತ್ತು ಬುಧ(Mercury) ಗ್ರಹಕ್ಕೆ ಮೀಸಲಾಗಿದೆ. ಈ ಎರಡೂ ದೇವರು ಜ್ಞಾನ(wisdom) ಕರುಣಿಸುವವರು. ಬುಧವು ಯಾವುದೇ ವ್ಯಕ್ತಿಯ ಜಾತಕದಲ್ಲಿ ಸಂವಹನ ಮತ್ತು ವ್ಯವಹಾರ ಇತ್ಯಾದಿಗಳ ಸೂಚಕವಾಗಿರುತ್ತದೆ. ಬುಧವಾರ ಸಾಲ ಕೊಡುವುದು ಮತ್ತು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ಬುಧವಾರದಂದು ಕೆಲಸವನ್ನು ಪ್ರಾರಂಭಿಸುವುದು ಆರ್ಥಿಕ ಜೀವನ ಮತ್ತು ವೃತ್ತಿಜೀವನದಲ್ಲಿ ಅಸ್ಥಿರತೆ ತರುತ್ತದೆ. ನೀವು ಪಾನ್ ಚಟ ಬಿಡಬೇಕಿದ್ದರೆ ಬುಧವಾರ ಅದನ್ನು ಬಿಡಿ. ಇದಲ್ಲದೇ, ಬುಧವಾರದಂದು ಹೆಣ್ಣು ಅಥವಾ ನಪುಂಸಕನನ್ನು ಅವಮಾನಿಸುವುದರಿಂದ ಜಾತಕ(horoscope)ದಲ್ಲಿ ಬುಧನ ಸ್ಥಾನ ದುರ್ಬಲವಾಗುತ್ತದೆ.
ಸೇರಿದ ಮನೆಗೆ ಅದೃಷ್ಟ ತರೋ Lucky Girls ಹೆಸರು ಈ ಅಕ್ಷರದಿಂದ ಶುರುವಾಗುತ್ತೆ!
ಗುರುವಾರ(Thursday)
ಗುರುವಾರ ಬೃಹಸ್ಪತಿ ಮತ್ತು ವಿಷ್ಣುವಿಗೆ ಸಮರ್ಪಿತವಾಗಿದೆ. ಗುರು(Jupiter)ವು ಯಾವುದೇ ವ್ಯಕ್ತಿಯ ಜಾತಕದಲ್ಲಿ ವಿದ್ಯೆ, ಗುರು, ಆಧ್ಯಾತ್ಮ ವಿಷಯಗಳಿಗೆ ಕಾರಣನಾಗುತ್ತಾನೆ. ಗುರುವಾರ ಉಗುರು ಕತ್ತರಿಸುವುದು ಮತ್ತು ಕ್ಷೌರ(shaving) ಮಾಡುವುದು ಒಳ್ಳೆಯದಲ್ಲ. ಇದರ ಹೊರತಾಗಿ ಈ ದಿನ ಗುರುಗಳನ್ನು, ಮನೆಯ ಹಿರಿಯರನ್ನು ನಿಂದಿಸಬಾರದು. ಈ ದಿನ ದಕ್ಷಿಣ ದಿಕ್ಕಿನಲ್ಲಿ ಪ್ರಯಾಣಿಸುವುದು ಒಳಿತಲ್ಲ. ಈ ದಿನ ಮದುವೆಯಾದ ಮಗಳನ್ನು ಮನೆಯಿಂದ ಕಳುಹಿಸಬಾರದು. ಮಹಿಳೆಯರು ಗುರುವಾರ ತಮ್ಮ ಕೂದಲನ್ನು ತೊಳೆಯಬಾರದು. ಗುರುವಾರ ಮಾಂಸ, ಮದ್ಯ ಸೇವಿಸುವುದು ಮತ್ತು ಜೇಡರ ಬಲೆಗಳನ್ನು ಸ್ವಚ್ಛಗೊಳಿಸುವುದರಿಂದ ನಕಾರಾತ್ಮಕ ಫಲಿತಾಂಶ ಎದುರಿಸಬೇಕಾಗುತ್ತದೆ.
ಶುಕ್ರವಾರ(Friday)
ಶುಕ್ರವಾರ ಲಕ್ಷ್ಮಿ ಮತ್ತು ಶುಕ್ರ ಗ್ರಹಕ್ಕೆ ಸಮರ್ಪಿತವಾಗಿದೆ. ಜಾತಕದಲ್ಲಿ ಶುಕ್ರನನ್ನು ಭೌತಿಕ ಸಂತೋಷ ಮತ್ತು ವೈವಾಹಿಕ ಜೀವನದ ಸಂತೋಷಕ್ಕೆ ಕಾರಣ ಎಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ಶುಕ್ರವಾರ ಗಂಡ ಹೆಂಡತಿ ಜಗಳವಾಡಬಾರದು. ಈ ದಿನದಂದು ಯಾವುದೇ ಅಂಧರನ್ನು ಅವಮಾನಿಸಬಾರದು. ಸಕ್ಕರೆ ಮತ್ತು ಬೆಳ್ಳಿಯನ್ನು ದಾನ ಮಾಡಬಾರದು. ಅಲ್ಲದೆ, ಈ ದಿನ ಹುಡುಗಿಯನ್ನು ಅವಮಾನಿಸಿದರೆ, ಜಾತಕದಲ್ಲಿ ಶುಕ್ರ ದುರ್ಬಲಗೊಳ್ಳುತ್ತಾನೆ.
Weekly Horoscope: ಸಾಡೇಸಾತಿಯಿಂದ ನಲುಗಿರುವ ಈ ರಾಶಿಗೀಗ ಶುಭ ಫಲಗಳ ಆರಂಭ
ಶನಿವಾರ(Saturday)
ಶನಿವಾರವನ್ನು ಶನಿ ದೇವರಿಗೆ(Saturn) ಸಮರ್ಪಿಸಲಾಗಿದೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ಶನಿಯು ಸಂಕಟ, ದುಃಖ ಇತ್ಯಾದಿಗಳ ಸೂಚಕನಾಗಿದ್ದಾನೆ. ಶನಿವಾರ ಕತ್ತರಿ, ಉದ್ದಿನಬೇಳೆ, ಕಬ್ಬಿಣ ಖರೀದಿಸುವುದನ್ನು ನಿಷೇಧಿಸಲಾಗಿದೆ. ಈ ದಿನ ಜನರು ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಪ್ರಯಾಣಿಸಬಾರದು. ಶನಿಯು ನ್ಯಾಯದ ದೇವರಾಗಿದ್ದು, ಜನರಿಗೆ ಕರ್ಮಗಳನುಸಾರ ಶಿಕ್ಷೆ ನೀಡುತ್ತಾನೆ. ಇಂದು ಅಸಹಾಯಕರು, ಬಡವರು ಹಾಗೂ ದುರ್ಬಲರನ್ನು ಅವಮಾನಿಸಬಾರದು.