Asianet Suvarna News Asianet Suvarna News

2024 ಈ ರಾಶಿಯವರಿಗೆಲ್ಲ ತುಂಬಾ ರೊಮ್ಯಾಂಟಿಕ್‌ ಆಗಿರುತ್ತಂತೆ!

ಯಾವ ಜನ್ಮರಾಶಿಗಳು ಮುಂದಿನ ವರ್ಷ ಹೆಚ್ಚು ರೊಮ್ಯಾಂಟಿಕ್‌ ಆಗಿ ಬದುಕುತ್ತಾರೆ ಎಂಬುದನ್ನು ಅವರ ಜಾತಕ ಹಾಗೂ ಗ್ರಹಗಳ ಸ್ಥಿತಿಗತಿಯ ಮೂಲಕ ಇಲ್ಲಿ ತಿಳಿಯೋಣ ಬನ್ನಿ.

2024 will be very romantic for these zodiac born
Author
First Published Dec 23, 2023, 1:19 PM IST

2023 ಮುಗಿಯಿತು, 2024 ಆಗಮಿಸಿತು. ಇದೀಗ ನಿಮ್ಮ ಮುಂದಿನ ವರ್ಷ ಭವಿಷ್ಯ ನಿಮ್ಮ ಪ್ರಣಯ ಜೀವನದಲ್ಲಿ ಹೇಗಿರುತ್ತದೆ ಎಂಬುದನ್ನು ತಿಳಿಯುವ ಸಮಯ. ಯಾವ ಜನ್ಮರಾಶಿಗಳು ಮುಂದಿನ ವರ್ಷ ಹೆಚ್ಚು ರೊಮ್ಯಾಂಟಿಕ್‌ ಆಗಿ ಬದುಕುತ್ತಾರೆ ಎಂಬುದನ್ನು ಅವರ ಜಾತಕ ಹಾಗೂ ಗ್ರಹಗಳ ಸ್ಥಿತಿಗತಿಯ ಮೂಲಕ ಇಲ್ಲಿ ತಿಳಿಯೋಣ ಬನ್ನಿ.

ಮೇಷ ರಾಶಿ
ನಿಮ್ಮನ್ನು ಆಳುವ ಗ್ರಹವಾದ ಮಂಗಳವು ನಿಮ್ಮ ಒಂಬತ್ತನೇ ಮನೆಯಲ್ಲಿ ಧನು ರಾಶಿಯ ಅಡಿಯಲ್ಲಿ ವರ್ಷದ ಆರಂಭದಲ್ಲಿ ಸೂರ್ಯನೊಂದಿಗೆ ಹೊಂದಿಕೆಯಾಗುತ್ತದೆ. ಶನಿಯು ನಿಮ್ಮ ಪ್ರಣಯ ಬಂಧದ ಸತ್ಯಾಸತ್ಯತೆಯನ್ನು ಪರೀಕ್ಷಿಸುತ್ತದೆ. ಹೀಗಾಗಿ ನಿಮ್ಮ ಪ್ರಣಯ ಸಂಬಂಧದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳುವುದು ಮುಖ್ಯ. ಪ್ರೀತಿಯ ಒಡನಾಟ ಏರಿಳಿತಗಳಿಂದ ಕೂಡಿರುವುದರಿಂದಲೇ ಹೆಚ್ಚು ರೋಮಾಂಚಕವಾಗಿರುತ್ತದೆ. ವಿವಾಹದಾಚೆಗಿನ ಪ್ರಣಯಗಳು ಕೈಬೀಸಿ ಕರೆಯಬಹುದು. ಆದರೆ ಬೇಲಿ ಹಾರಿದರೆ ಶನಿಯು ನಿಮ್ಮನ್ನು ಬೆನ್ನಟ್ಟಿ ಕಾಡುತ್ತಾನೆ. ಹೀಗಾಗಿ ಪರಿಶುದ್ಧ ಸಂಬಂಧಗಳ ಒಳಗೇ ಹೊಸ ಸಾಹಸಗಳನ್ನು ನಿರೀಕ್ಷಿಸಿ.  

ಮಿಥುನ ರಾಶಿ
ಹನ್ನೊಂದನೇ ಮನೆಯಲ್ಲಿ ಇರುವ ಗುರು ಪ್ರೀತಿಯ ಸಾಂಗತ್ಯದಲ್ಲಿ ಯಶಸ್ಸನ್ನು ನೀಡುತ್ತಾನೆ. ಪ್ರೀತಿಯ ವಿಷಯಗಳಲ್ಲಿ ನಿಮ್ಮ ಪ್ರಯತ್ನಗಳು ಹೆಚ್ಚು ಹೆಚ್ಚು ಫಲ ನೀಡುತ್ತವೆ. ವರ್ಷದ ಆರಂಭಿಕ ಹಂತವು ಪ್ರಣಯ ಸಂಬಂಧಗಳಿಗೆ ಒಲವು ನೀಡುತ್ತದೆ. ಐದನೇ ಮನೆಯ ಮೇಲೆ ಗುರುಗ್ರಹದ ಪರೋಪಕಾರಿ ಅಂಶವು ಪ್ರೀತಿಯನ್ನು ಬೆಳೆಸುತ್ತದೆ. ಅವಿವಾಹಿತರು ಪ್ರೀತಿ ಮತ್ತು ಮದುವೆಯ ವಿಷಯಗಳಲ್ಲಿ ಯಶಸ್ಸನ್ನು ಸಾಧಿಸಬಹುದು. ವಿವಾಹ ವಿಚ್ಛೇದಿತರು ಕೂಡ ಹೊಸ ಸಂಬಂಧಗಳು ಕುಡಿಯೊಡೆಯುವುದನ್ನು ಕಾಣಬಹುದು. ಸೂರ್ಯನನ್ನು ಧ್ಯಾನಿಸಿ ಪ್ರೇಮಕ್ಕೆ ಅಗತ್ಯವಾದ ದೇಹಾರೋಗ್ಯ ಮತ್ತು ವಿವೇಕ ಕಾಪಾಡಿಕೊಳ್ಳಿ.

ಇಂಥ ವ್ಯಕ್ತಿಗಳ ಪಾದ ಸ್ಪರ್ಶಿಸಿದರೆ ನಿಮಗೆ ಆಗೋಲ್ಲ ಶುಭ!

ಕರ್ಕ ರಾಶಿ
ಬುಧ ಮತ್ತು ಶುಕ್ರ ಗ್ರಹಗಳು ಪ್ರೀತಿಯ ಮನೆಯನ್ನು ಅನುಗ್ರಹಿಸುವುದರಿಂದ ನಿಮ್ಮ ಪ್ರೇಮ ಜೀವನದಲ್ಲಿ ತಾಜಾ ಶಕ್ತಿಯನ್ನು ತುಂಬುತ್ತವೆ. ಪ್ರಣಯ ಸಂಬಂಧಗಳ ಗಾಢತೆಯು ಬಲವಾದ ಮತ್ತು ಹೆಚ್ಚು ಬಾಳಿಕೆ ಬರುವ ಸಂಬಂಧಗಳಿಗೆ ಕಾರಣವಾಗುತ್ತದೆ. ಈ ವರ್ಷ ಅವಿವಾಹಿತರಿಗೆ ಮದುವೆ ಯೋಜನೆ ಪೂರೈಸಬಹುದು. ಆರೋಗ್ಯವನ್ನು ಚುರುಕಾಗಿಟ್ಟುಕೊಂಡರೆ ನಿಮ್ಮ ಪ್ರಣಯ ಸುಖವನ್ನು ಯಾರೂ ತಡೆಯಲು ಸಾಧ್ಯವಿಲ್ಲ. ವರ್ಷದ ಆರಂಭಿಕ ತಿಂಗಳುಗಳಲ್ಲಿ ಬುಧ ಮತ್ತು ಶುಕ್ರನ ಮಂಗಳಕರ ಪ್ರಭಾವಗಳಿಂದಾಗಿ ನೀವು ಇದುವರೆಗೆ ದೊರೆಯದೇ ಇದ್ದ ಪ್ರಣಯ ಸುಖಗಳನ್ನು ಪಡೆಯಬಹುದು. ಯಾವುದಕ್ಕೂ ಸಿದ್ಧರಾಗಿರಿ!

ಸಿಂಹ (Leo) ರಾಶಿ
ಶನಿಯು (Saturn) ವರ್ಷವಿಡೀ ನಿಮ್ಮ ಏಳನೇ ಮನೆಯಲ್ಲಿ ನೆಲೆಸಿರುತ್ತಾನೆ. ಈತ ನಿಮ್ಮ ವೈವಾಹಿಕ ಜೀವನವನ್ನು ಬಲಪಡಿಸುತ್ತಾನೆ ಮತ್ತು ನಿಮ್ಮ ಸಂಗಾತಿಯ ಮೂಲಕ ಪ್ರೇಮಕ್ಕೆ ಧನಾತ್ಮಕ ರೂಪಾಂತರಗಳನ್ನು ನೀಡುತ್ತಾನೆ. ನಿಮ್ಮ ಪ್ರಣಯ ಕ್ಷೇತ್ರದಲ್ಲಿ ಕೆಲವು ಸವಾಲುಗಳು ಬರಬಹುದು. ಐದನೇ ಮನೆಯಲ್ಲಿ ಸೂರ್ಯ ಮತ್ತು ಮಂಗಳ ಗ್ರಹಗಳು ನಿಮ್ಮ ಪ್ರೇಮ ಜೀವನದಲ್ಲಿ ಅಡಚಣೆ ಮಾಡಬಹುದು. ಆದರೆ ಒಂಬತ್ತನೇ ಮನೆಯ ಗುರುವು ನಿಮ್ಮಲ್ಲಿ ಪ್ರಣಯ ಸಾಮರಸ್ಯವನ್ನು ಪುನಃಸ್ಥಾಪಿಸುತ್ತಾನೆ. ಇದು ನಿಮ್ಮ ಸಂಬಂಧಗಳನ್ನು ಬಲಪಡಿಸುತ್ತದೆ. ಹೊಸ ಕಡೆಗಳಿಗೆ ಸಂಗಾತಿಯಿಂದಿಗೆ ಪ್ರವಾಸ ಹೋಗಿ, ಪ್ರೀತಿ ವರ್ಧಿಸುತ್ತದೆ.

ವೃಶ್ಚಿಕ ರಾಶಿ
ಮುಂದಿನ ವರ್ಷ ವೃಶ್ಚಿಕ ರಾಶಿಯ ವ್ಯಕ್ತಿಗಳಿಗೆ ಹೊಸ ಆರಂಭದ ಭರವಸೆ. ಶುಕ್ರ ಮತ್ತು ಬುಧ ವೃಶ್ಚಿಕದಲ್ಲಿ ಇರುವುದರಿಂದ ಪ್ರಣಯದಲ್ಲಿ ಸಕಾರಾತ್ಮಕತೆ ಇರುತ್ತದೆ. ನಿಮ್ಮ ನಡವಳಿಕೆ ಮತ್ತು ಕಾಂತೀಯ ವರ್ಚಸ್ಸು ಸಂಗಾತಿಯನ್ನು ನಿಮ್ಮ ಕಡೆಗೆ ಸೆಳೆಯುತ್ತದೆ, ನಿಮ್ಮನ್ನು ಆಕರ್ಷಣೆಯ ಕೇಂದ್ರಬಿಂದುವನ್ನಾಗಿ ಮಾಡುತ್ತದೆ. ವರ್ಷದ ಪ್ರಾರಂಭದಲ್ಲಿ ಪ್ರೀತಿಯ ವಿಷಯಗಳಲ್ಲಿ ಅನುಕೂಲಕರ ಸಂದರ್ಭಗಳಿವೆ. ಮೊದಲ ಮನೆಯಲ್ಲಿ ಬುಧ ಮತ್ತು ಶುಕ್ರನ ಸ್ಥಾನವು ಐದನೇ ಮನೆಯಲ್ಲಿ ರಾಹುವಿನ ಉಪಸ್ಥಿತಿಯೊಂದಿಗೆ ಸೇರಿಕೊಂಡು ಪ್ರಣಯ ಭಾವನೆಗಳನ್ನು ವರ್ಧಿಸುತ್ತದೆ. ನಿಮ್ಮ ರೊಮ್ಯಾನ್ಸ್‌ ಅನ್ನು ತಡೆದುಕೊಳ್ಳಲು ಸಂಗಾತಿಯು ಕಷ್ಟಪಡಬೇಕಾದೀತು.

ಈ ದಿನಾಂಕಗಳಲ್ಲಿ ಜನಿಸಿದ ಮಕ್ಕಳು ಅಧ್ಯಯನದಲ್ಲಿ ಬುದ್ಧಿವಂತರು ಮತ್ತು ಅದೃಷ್ಟದಲ್ಲಿ ಶ್ರೀಮಂತರು

Follow Us:
Download App:
  • android
  • ios