Gemstones For Luck: ಈ ಎರಡು ಹರಳಿಂದ ಬದಲಾಗುತ್ತೆ ನಿಮ್ಮ ಅದೃಷ್ಟ!

ಮನೆಯಲ್ಲಿ ಸಮೃದ್ಧಿ ಮತ್ತು ನೆಮ್ಮದಿ ನೆಲೆಸಿರುವಂತೆ ಮಾಡಲು ಅನೇಕ ಪ್ರಯತ್ನಗಳನ್ನು ಮಾಡಲಾಗುತ್ತದೆ. ವಿಶೇಷ ರತ್ನಗಳನ್ನು, ಪ್ರತಿಮೆಗಳನ್ನು ಮತ್ತು ಹರಳುಗಳನ್ನು ಮನೆಯಲ್ಲಿಟ್ಟುಕೊಳ್ಳುತ್ತಾರೆ. ಅಂಥ ಹರಳುಗಳಲ್ಲಿ ಆತ್ಮರತ್ಮ ಮತ್ತು ಅಂಡಾಕಾರದ ಬಿಳಿ ಹರಳು ಸಹ ಒಂದಾಗಿದೆ. ಇವುಗಳಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ.

2 Gemstones that Bestow Good Luck

ಹಿಂದೂ ಧರ್ಮದಲ್ಲಿ (Hindu religion) ಕೆಲವು ದೇವತೆಗಳ (God) ಪ್ರತೀಕವೆಂದು ಬೇರೆ ಬೇರೆ ವಸ್ತುಗಳನ್ನು ಪೂಜಿಸಲಾಗುತ್ತದೆ. ಧಾರ್ಮಿಕ ಮಾನ್ಯತೆಗಳ ಅನುಸಾರ ಶಿವನ (Shiva) ಪ್ರತೀಕವೆಂದು ಶಿವಲಿಂಗವನ್ನು, ಹಾಗೆಯೇ ವಿಷ್ಣುವಿನ (Vishnu) ಪ್ರತೀಕವೆಂದು ಸಾಲಿಗ್ರಾಮವನ್ನು (Shaligrama) ಪೂಜಿಸುತ್ತಾರೆ. ಇದನ್ನು ಹೊರತುಪಡಿಸಿ ಕೆಲವು ವಸ್ತುಗಳಿದ್ದು, ಅವುಗಳನ್ನು ಮನೆಯಲ್ಲಿ (Home) ಇಟ್ಟುಕೊಳ್ಳುವುದರಿಂದ ಅದೃಷ್ಟ (Luck) ಒಲಿದು ಬರುವುದಲ್ಲದೇ, ಮನೆಯಲ್ಲಿ ಸುಖ –ಶಾಂತಿ, ನೆಮ್ಮದಿ ನೆಲೆಸಿರುತ್ತದೆ.

ಅಂಥ ಹಲವಾರು ವಸ್ತುಗಳಿವೆ. ಅವುಗಳಲ್ಲಿ ಧರಿಸುವ ರತ್ನಗಳಾಗಿರಬಹುದು, ಪೂಜಿಸುವ ರುದ್ರಾಕ್ಷಿ (Rudraksh) ಆಗಿರಬಹುದು ಅಥವಾ ಇನ್ನಿತರ ವಸ್ತುಗಳಾದ, ಹರಳು (Stone), ಕಲ್ಲು ಇತ್ಯಾದಿಗಳಿಂದ ಮನೆಗೆ ಅದೃಷ್ಟ ಒಲಿದು ಬರುತ್ತದೆ. ಹಾಗಾದರೆ ಅಂಥ ಎರಡು ವಸ್ತುಗಳು ಯಾವುವು ಎಂಬುದನ್ನು ತಿಳಿಯೋಣ..

ಆತ್ಮರತ್ನ ಹರಳು (Atmaratna stone):
ಧಾರ್ಮಿಕ ಗ್ರಂಥಗಳ ಅನುಸಾರ ಸಮುದ್ರದ (Sea) ತೀರಗಳಲ್ಲಿ (Beach) ಸಿಗುವ ಅದ್ಭುತ ಕಲ್ಲುಇದಾಗಿದೆ. ಈ ಕಲ್ಲು ಬೇರೆ ಬೇರೆ ಬಣ್ಣಗಳಲ್ಲಿ(Color) ದೊರೆಯುತ್ತದೆ. ನೋಡಲು ತುಂಬಾ ಆಕರ್ಷಕವಾಗಿರುವ (Attractive) ಈ ಕಲ್ಲನ್ನು ಆತ್ಮರತ್ನ ಹರಳು ಅಥವಾ ಆತ್ಮರತ್ನ ಕಲ್ಲು ಎಂದು ಕರೆಯುತ್ತಾರೆ. ಈ ಹರಳುಗಳು ಸಮುದ್ರದಲ್ಲಿ ತೇಲುತ್ತಿರುತ್ತವೆ. ಅಲ್ಲದೇ ಸಮುದ್ರದ ನಾವಿಕರಿಗೆ ಇವು ಉಪಯುಕ್ತವಾಗುತ್ತವೆ. ಈ ಹರಳುಗಳಲ್ಲಿ ಗುಂಡಾಗಿ (Round) ಮತ್ತು ತೆಳ್ಳಗೆ (Thin) ಇರುವ ಕಲ್ಲುಗಳಿಂದ ಮಾಲೆಗಳನ್ನು (Chain) ಸಹ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಮನೆಯನ್ನು ಸಜ್ಜುಗೊಳಿಸಲು (Decoration) ಸಹ ಈ ಹರಳುಗಳನ್ನು ಬಳಸಲಾಗುತ್ತದೆ (Use).

ಇದನ್ನು ಓದಿ: Sunday Born Personality: ಭಾನುವಾರ ಹುಟ್ಟಿದೋರು ಅಹಂಕಾರಿಗಳಾ? ಅವ್ರ್ ಲವ್ ಲೈಫ್ ಹೇಗೆ?

ಪೌರಾಣಿಕ ಗ್ರಂಥಗಳ ಅನುಸಾರ ಈ ಹರಳು ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಕಪ್ಪು (Black) ಮತ್ತು ಕಂದು ಬಣ್ಣದ (Brown) ಈ ಹರಳುಗಳು ನೋಡಲು ಶಾಲಿಗ್ರಾಮದಂತೆಯೇ ಕಾಣುತ್ತವೆ. ಧಾರ್ಮಿಕ ನಂಬಿಕೆಗಳ (Belief) ಪ್ರಕಾರ ಈ ಹರಳುಗಳನ್ನು ಮನೆಯಲ್ಲಿ ಇಡುವುದರಿಂದ ಮನೋಕಾಮನೆಗಳು (Desires) ಪೂರ್ಣಗೊಳ್ಳುತ್ತವೆ. ಗುಂಡಗೆ ಮತ್ತು ತೆಳ್ಳಗಿರುವ ಈ ಹರಳುಗಳು ಮನೆಗೆ ಅದೃಷ್ಟವನ್ನು ನೀಡುತ್ತವೆ. ಈ ಹರಳುಗಳ ಬಗ್ಗೆ ಧಾರ್ಮಿಕ ಗ್ರಂಥಗಳಲ್ಲಿ ಮತ್ತು ಪೌರಾಣಿಕ ಗ್ರಂಥಗಳಲ್ಲಿ ಸಹ ಈ ಆತ್ಮರತ್ನ ಹರಳಿನ ಬಗ್ಗೆ ಉಲ್ಲೇಖವಿದೆ. ಇದರಿಂದ ಅದ್ಭುತ ಚಮತ್ಕಾರಗಳು (Miracle) ಆಗುತ್ತವೆ. ಅಷ್ಟೇ ಅಲ್ಲದೆ, ಈ ಹರಳುಗಳನ್ನು ಬಂಗಾರದ (Gold) ಅಥವಾ ಬೆಳ್ಳಿಯ (Silver) ಉಂಗುರಕ್ಕೆ (Ring) ಪೋಣಿಸಿ ಧರಿಸಿಕೊಳ್ಳಬಹುದಾಗಿದೆ.  ಇದರಿಂದ ಒಂದು ಅದೃಶ್ಯ ಶಕ್ತಿ ಆ ವ್ಯಕ್ತಿಯನ್ನು ಕಾಯುತ್ತದೆ ಎಂಬ ನಂಬಿಕೆ ಇದೆ. ಈ ಹರಳಿನ ವಿಶೇಷತೆ ಏನೆಂದರೆ ಈ ಹರಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರ ರೇಖೆಗಳು ಅಲುಗಾಡುವುದು ಕಾಣಿಸುತ್ತದೆ. ಅಷ್ಟೇ ಅಲ್ಲದೆ ವಿದೇಶಗಳಲ್ಲಿ ಆತ್ಮಗಳನ್ನು ಕರೆಸುವುದಕ್ಕೆ ಈ ಹರಳುಗಳನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ.

ಇದನ್ನು ಓದಿ: Personality Traits And Zodiacs: ಈ ನಾಲ್ಕು ರಾಶಿಯವರದು ಬಹಳ ಸೌಮ್ಯ ಸ್ವಭಾವ

ಮೊಟ್ಟೆಯಾಕಾರದ ಶ್ವೇತ ಹರಳು (Egg shape white stone):
ಆತ್ಮರತ್ನ ಹರಳನ್ನು ಹೊರತುಪಡಿಸಿದರೆ ಮೊಟ್ಟೆಯ ಆಕಾರದಲ್ಲಿರುವ (Shape) ಬಿಳಿ (White) ಬಣ್ಣದ ಹರಳು ಮನೆಗೆ ಅದೃಷ್ಟವನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಈ ಹರಳು ಅತ್ಯಂತ ಶುಭದಾಯಕವೆಂದು (Goodluck) ಸಹ ಹೇಳಲಾಗುತ್ತದೆ. ಈ ಹರಳನ್ನು ನೀವು ಧರಿಸಲೇ ಬೇಕು ಎಂದೇನಿಲ್ಲ. ಇದನ್ನು ಜೇಬಿನಲ್ಲಿ ಸಹ ಇಟ್ಟುಕೊಳ್ಳಬಹುದಾಗಿದೆ. ಈ ಹರಳನ್ನು ಮನೆಯಲ್ಲಿ ಇಟ್ಟರೆ ಸಂಪತ್ತು (Wealth), ಸುಖ - ಸಮೃದ್ಧಿ ನೆಲೆಸುತ್ತದೆ. ಶ್ವೇತ ವರ್ಣದ ಹರಳು ಮನೆಯಲ್ಲಿದ್ದರೆ ಶುಭಕಾರಕ ಎಂದು ಹೇಳಲಾಗುತ್ತದೆ. ಈ ಹರಳಿನಿಂದ ಮಾನಸಿಕ ನೆಮ್ಮದಿ (Mental peace) ಸಹ ಲಭಿಸುತ್ತದೆ.

Latest Videos
Follow Us:
Download App:
  • android
  • ios