Asianet Suvarna News Asianet Suvarna News

195 ವರ್ಷಗಳ ಇತಿಹಾಸ ಹೊಂದಿರುವ ಛಬ್ಬಿ ಗಣಪ! ಸಂತಾನದಾತ ಈ ವಿನಾಯಕ

ಬೇಡಿದ್ದ ವರ ಕರುಣಿಸುವ ಛಬ್ಬಿ ಗಣಪನ ಇತಿಹಾಸವೇನು ಗೊತ್ತಾ..?
ಮೂರು ದಿನಗಳ ಕಾಲ ನಡೆಯುವ ಕೆಂಪು ಗಣಪ ಉತ್ಸವ!
ಛಬ್ಬಿ ಗಣಪತಿಗೆ 2027ಕ್ಕೆ 200 ವರ್ಷ..!
ಉತ್ತರ ಕರ್ನಾಟಕದಲ್ಲೇ ಪ್ರಸಿದ್ಧವಾದ ಗಣಪತಿ ಉತ್ಸವ

195 years to Chebbi Ganesh Utsav know his story skr
Author
First Published Sep 6, 2022, 4:25 PM IST

ಅದೊಂದು ಪುಟ್ಟ ಗ್ರಾಮ. ಈ ಗ್ರಾಮದಲ್ಲಿ ವರುಷಕ್ಕೊಮ್ಮೆ ಪ್ರತಿಷ್ಠಾಪನೆ ಮಾಡುವ ಗಣಪತಿಗಳನ್ನು ನೋಡಲು ನಾಡಿನ ಮೂಲೆ ಮೂಲೆಗಳಿಂದ ಜನ ಬರ್ತಾರೆ. ಮಕ್ಕಳಿಲ್ಲದವರು, ಮದುವೆಯಾಗದವರು, ನೌಕರಿ ಇಲ್ಲದವರು, ವಿದ್ಯೆ ಬುದ್ದಿ ಬೇಕಾದವರು ಹೀಗೆ ಹತ್ತಾರು ಸಮಸ್ಯೆಗಳನ್ನು ಹೊತ್ತುಕೊಂಡು ಬಂದ ಭಕ್ತರಿಗೆ ಇಲ್ಲಿನ ಗಣಪತಿ ಸಂಕಷ್ಟಗಳನ್ನು ನಿವಾರಣೆ ಮಾಡಿ ಅಶೀರ್ವಾದ ಮಾಡ್ತಾನೆ ಅನ್ನೋ ಪ್ರತೀತಿ ಇದೆ. ಮೂರು ದಿನಗಳ ಕಾಲ ಪ್ರತಿಷ್ಠಾನೆಯಾಗುವ ಗಣಪತಿಯನ್ನು ರಾತ್ರಿ ಹಗಲು ಎನ್ನದೇ ಐದಾರು ಕಿಲೋ ಮೀಟರಗಳ ಉದ್ದುದ್ದ ಸರದಿ ಸಾಲಿನಲ್ಲಿ ನಿಂತಕೊಂಡು ಜನ ದರ್ಶನ ಪಡಿತಾರೆ. ಯಾವುದು ಆ ಗ್ರಾಮ ಅಲ್ಲಿನ ಗಣಪತಿಯ ವಿಶೇಷ ಏನು?

ಗಣಪತಿ ಹಬ್ಬಕ್ಕೆ ಹೆಚ್ಚು ಹೆಸರಾಗಿರೋದು ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮ(Chebbi village). ಗಣೇಶ ಹಬ್ಬ ಎಂದರೆ ಸ್ವಾತಂತ್ರ್ಯ ಚಳುವಳಿಯ ಹೋರಾಟದ ಸಮಯದಲ್ಲಿ ಬ್ರೀಟಿಷರ ವಿರುದ್ಧ ಹೋರಾಟ ಮಾಡಲು ಎಲ್ಲಾ ವರ್ಗದ ಜನರನ್ನು ಒಂದೆಡೆ ಕೂಡಿಸುವ ಉದ್ದೇಶದಿಂದ ಬಾಲಗಂಗಾಧರ ತಿಲಕರು ಇದನ್ನು ಹುಟ್ಟು ಹಾಕಿರುವ ಕೀರ್ತಿ ಸಲ್ಲುತ್ತದೆ. ಆದರೆ ಇದಕ್ಕೂ ಮುಂಚೆಯೇ ಅಂದರೆ 75 ವರ್ಷಗಳ ಹಿಂದೆಯೇ ಛಬ್ಬಿ ಗ್ರಾಮದಲ್ಲಿ ಈ ಆಚರಣೆ ಆರಂಭವಾಗಿದ್ದು ವಿಶೇಷವಾಗಿ ಕಂಡು ಬರುತ್ತದೆ. ಅದ್ರಲ್ಲೂ ಛಬ್ಬಿ ಕೆಂಪು ಗಣಪನನ್ನು ನೋಡುವುದೇ ಒಂದು ಭಾಗ್ಯ. ಆತನ ದರ್ಶನದಿಂದ ಇಷ್ಟಾರ್ಥ ಪೂರೈಸುತ್ತೆ ಎಂಬ ನಂಬಿಕೆ ಸಹಸ್ರಾರು ಭಕ್ತರಲ್ಲಿ ಇಂದಿಗೂ ಇದೆ‌..

195 ವರ್ಷಗಳ ಇತಿಹಾಸ ಹೊಂದಿದ ಛಬ್ಬಿ ಗಣೇಶ..!
ಛಬ್ಬಿ ಗ್ರಾಮದ ಗಣಪತಿ ಆಚರಣೆಯ ಹಿನ್ನಲೆಯನ್ನು ನೋಡಿದಾಗ ಛಬ್ಬಿ ಮತ್ತು ಸುತ್ತ ಮುತ್ತಲಿನ ಗ್ರಾಮಗಳ ಕುಲಕರ್ಣಿಕೆ ಮತ್ತು ಗೌಡ ಹಕ್ಕುಗಳು, ಹತ್ತಾರು ತಲೆ ಮಾರುಗಳಿಂದ ಕುಲಕರ್ಣಿ ಮನೆತನದ್ದಾಗಿದ್ದವು. ಈ ಶಾನಭೋಗ, ಮನೆತನವು ಮೊದಲಿನಿಂದಲೂ ಧರ್ಮಾಸಕ್ತರು, ಸಾಧು ಸತ್ಪುರುಷರ ಸೇವೆ ಮಾಡುತ್ತಿದ್ದವರು. ಆದ್ರೆ, ಅವ್ರಿಗೆ ಸಂತಾನ ಭಾಗ್ಯ ಇರ್ಲಿಲ್ಲ. ಈ ಹಿನ್ನೆಲೆಯಲ್ಲಿ  ಒಮ್ಮೆ ಶ್ರೀದತ್ತಾವತಾರಿ ಶ್ರೀಕೃಷ್ಟ್ಣೇಂದ್ರ ಸ್ವಾಮಿಗಳು ಹಾಗೂ ಶತಾವಧಾನಿ ಶ್ರೀ ಚಿದಂಬರ ಮಹಾಸ್ವಾಮಿಗಳು ಕುಲಕರ್ಣಿ ಮನೆತನಕ್ಕೆ ಬಂದು ನೀವು ರಕ್ತ ವರ್ಣದ ಗಣಪನನ್ನ ಪ್ರತಿಷ್ಠಾಪಿಸಿ ಪೂಜಿಸಿ. ನಿಮ್ಮ ಮನೋಕಾಮನೆ ಈಡೇರುತ್ತೆ ಅಂತ ಆಶಿರ್ವಾದಿಸಿದ್ರಂತೆ. ಕೃಷ್ಣ್ರೇಂದ್ರ ಗುರುಗಳ ಮಾತಿನಂತೆ ಕೆಂಪು ಗಣಪನ ಪ್ರತಿಷ್ಠಾಪನೆ ಮಾಡಿದಾಗ  ಕುಲಕರ್ಣಿ ಮನೆತನಕ್ಕೆ ಸಂತಾನ ಪ್ರಾಪ್ತವಾಯಿತಂತೆ. ಅಲ್ಲಿಂದ ಪ್ರತಿ ವರ್ಷ ಕೆಂಪು ಗಣಪನನನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ.  ಹೀಗೆ  ಒಂದು ಮನೆತನದಿಂದ ಆರಂಭಗೊಂಡ ಗಣೇಶ ಉತ್ಸವ ಇಂದು ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿದೆ.

Garuda Purana: ಪ್ರತಿ ದಿನ ಈ ಕೆಲಸ ಮಾಡಿದ್ರೆ ಯಶಸ್ಸು ಕಟ್ಟಿಟ್ಟ ಬುತ್ತಿ

ಪುಟ್ಟದಾದ ಈ ಛಬ್ಬಿ ಗ್ರಾಮದಲ್ಲಿ 1827ರಲ್ಲಿ ಕುಲಕರ್ಣಿ ಮನೆತನದಲ್ಲಿ ಗಣೇಶನನ್ನು ಪ್ರತಿಷ್ಠಾಪನೆ ಮಾಡುವ ಆಚರಣೆ ಆರಂಭಗೊಂಡಿತು. ಸಧ್ಯ ತಮ್ಮಪ್ಪನವರ ಐದನೆಯ ತಲೆಮಾರಿನ ಕುಟುಂಬದ ಐದು ಮನೆತನಗಳು ಈ ಹಬ್ಬವನ್ನು ಮಾಡಿಕೊಂಡು ಬರುತ್ತಿದ್ದಾರೆ. ಇಂದು ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದ ಗಣೇಶ ಚತುರ್ಥಿ ಹೆಸರಾಗಿದ್ದು, ಇಲ್ಲಿಗೆ ಹರಿದು ಬರುವ ಜನಸ್ಥೋಮವನ್ನ ನಿಯಂತ್ರಿಸಲು ಪೊಲೀಸ್ರು ಹರಸಾಹಸ ಪಡುತ್ತಾರೆ.

ಕೇವಲ ಮೂರು ದಿನಗಳ ಕಾಲ ಇಲ್ಲಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದ್ದು ಮೂರು ದಿನಗಳಲ್ಲಿ ಹಗಲು ರಾತ್ರಿ ಎನ್ನದೇ ನಾಡಿನ ಮೂಲೆ ಮೂಲೆಗಳಿಂದ ಮತ್ತು ಬೇರೆ ಬೇರೆ ರಾಜ್ಯಗಳಿಂದಲೂ ಕೂಡಾ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಇಲ್ಲಿಗೆ ಬಂದು ಗಣಪತಿಗಳನ್ನು ದರ್ಶನ ಮಾಡುತ್ತಾರೆ. ಅಂದಿನಿಂದ ನಡೆದುಕೊಂಡು ಬಂದ ಈ ಗಣೇಶನ ಹಬ್ಬ ಈಗಲೂ ಕೂಡಾ ಅಷ್ಟೇ ಶ್ರದ್ದಾ ಭಕ್ತಿಯಿಂದ ನಡೆಯುತ್ತಿದ್ದು ಮುಖ್ಯವಾಗಿ ಮಕ್ಕಳು ಆಗದವರು ಇಲ್ಲಿಗೆ ಬರುತ್ತಾರೆ. 

ಈ ಕುಲಕರ್ಣಿ ಮನೆತನಕ್ಕೆ ಕೃಷ್ಣೇಂದ್ರ ಸ್ವಾಮೀಜಿಗಳು ತಮ್ಮ ಉಡೆಯಲ್ಲಿದ್ದ ಅಡಕೆ ಬೆಟ್ಟ ಕೊಟ್ಟು ನೀವು ಪ್ರತಿ ವರ್ಷ ಗಣೇಶ ಚತುರ್ಥಿ ದಿನದಿಂದ ಮೂರು ದಿನಗಳ ಕಾಲ ಕೆಂಪು ಗಣೇಶನನ್ನ ಪ್ರತಿಷ್ಠಾಪನೆ ಮಾಡಬೇಕೆಂದು ಹೇಳಿದ್ದರಂತೆ. ಅದೇ ರೀತಿ ಈ ಕುಟುಂಬ ಪರಿವಾರದವರು ನಡೆಸಿಕೊಂಡು ಬಂದಿದ್ದಾರೆ. ಈ ಗಣೇಶನ ಸಂಪೂರ್ಣ ಶಕ್ತಿ ಅಡಗಿರುವುದೇ ಈ ಅಡಕೆ ಬೆಟ್ಟದಲ್ಲಿ. ಇಲ್ಲಿಗೆ ಬರುವ ಭಕ್ತರು, ದೇವರ ಪಾದಕ್ಕೆ ಅಡಕೆ ಬೆಟ್ಟ ಮುಟ್ಟಿಸಿಕೊಂಡು ಹೋದ್ರೆ ಅವರ ಎಲ್ಲಾ ಕಷ್ಟಗಳು ದೂರವಾಗುತ್ತವೆ ಅನ್ನೊದು ಛಬ್ಬಿ ಗಣಪನ ಪ್ರತೀತಿ.. 

ಹಲ್ಲಿ ಶಕುನ: ಬೆಳ್‌ಬೆಳ್ಗೆ ಹಲ್ಲಿ ಹೀಗೆ ಚಲಿಸೋದು ನೋಡಿದ್ರೆ, ಅದು ಹಣ ಬರೋದ್ರ ಸೂಚನೆ!

ಈ ದೇವರ ದರ್ಶನಕ್ಕೆ ಬರುವವರು, ಕೇವಲ ಒಂದು ವರ್ಷ ಬಂದ್ರೆ ನಡೆಯುವುದಿಲ್ಲ. ಒಮ್ಮೆ ಬಂದವರು ಮೂರು ವರ್ಷ ಬರಲೇ ಬೇಕು. ಪ್ರತಿವರ್ಷ ಅಡಕೆ ಬೆಟ್ಟವನ್ನ ಬದಲಿಸಬೇಕು. ಇಲ್ಲಿ ಕೊಡುವ ಅಡಕೆ ಬೆಟ್ಟವನ್ನ ತೆಗೆದುಕೊಂಡು ಹೋಗಿ ತಮ್ಮ ಮನೆಯ ಜಗಲಿ‌ ಮೇಲೆ ಇಟ್ಟು ಪೂಜೆ ಮಾಡಬೇಕು. ಆ ಪೂಜೆಯ ಪ್ರತಿಫಲದಿಂದ ಅವರಿಗೆ ಬಂದಿರುವ ಕಷ್ಟಗಳು ದೂರವಾಗುತ್ತವೆ ಅನ್ನೊದು ಭಕ್ತರ ನಂಬಿಕೆ..  ಅದಕ್ಕೆ ಈ ಏಕದಂತನನ್ನ ಅಡಕೆ ಗಣಪ‌ ಅಂತಲೂ ಕರೆಯುತ್ತಾರೆ. 

Follow Us:
Download App:
  • android
  • ios