ಕುಕ್ಕೆ ಸುಬ್ರಹ್ಮಣ್ಯ: ₹123 ಕೋಟಿ ಆದಾಯ: ರಾಜ್ಯದ ಇತಿಹಾಸದಲ್ಲೇ ಅತೀ ಹೆಚ್ಚು!

ಕುಕ್ಕೆ ಸುಬ್ರಹ್ಮಣ್ಯ ಮತ್ತು ರಾಜ್ಯದ ಮುಜುರಾಯಿ ವ್ಯಾಪ್ತಿಯ ದೇವಸ್ಥಾನಗಳ ಇತಿಹಾಸದಲ್ಲೇ ಅತೀ ಹೆಚ್ಚು ಅದಾಯ ಈ ಬಾರಿ ಕುಕ್ಕೆಯಲ್ಲಿ ದಾಖಲಾಗಿದ್ದು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವಾರ್ಷಿಕ ಆದಾಯ 123 ಕೋಟಿ ರೂ. ಆಗಿದೆ.

123 crore income for Kukke subrahmanya deval the highest in the history of the state at dakshina kannada rav

ಮಂಗಳೂರು (ಏ.17): ಕುಕ್ಕೆ ಸುಬ್ರಹ್ಮಣ್ಯ ಮತ್ತು ರಾಜ್ಯದ ಮುಜುರಾಯಿ ವ್ಯಾಪ್ತಿಯ ದೇವಸ್ಥಾನಗಳ ಇತಿಹಾಸದಲ್ಲೇ ಅತೀ ಹೆಚ್ಚು ಅದಾಯ ಈ ಬಾರಿ ಕುಕ್ಕೆಯಲ್ಲಿ ದಾಖಲಾಗಿದ್ದು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವಾರ್ಷಿಕ ಆದಾಯ 123 ಕೋಟಿ ರೂ. ಆಗಿದೆ.

ದ.ಕ ಜಿಲ್ಲೆ(Dakshina kannada)ಯ ಕಡಬ ತಾಲೂಕಿನ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ(Kukke subrahmanya temple) ಈಗಷ್ಟೇ ಮುಗಿದ ಆರ್ಥಿಕ ವರ್ಷದಲ್ಲಿ 123 ಕೋಟಿ ರೂ. ಆದಾಯ ಗಳಿಕೆ ಮಾಡಿದೆ. 2022ರ ಎಪ್ರಿಲ್‌ನಿಂದ 2023 ಮಾರ್ಚ್ 31ರ ತನಕದ ಆರ್ಥಿಕ ವರ್ಷದಲ್ಲಿ 123,64,49,480.47 ರೂ. ಆದಾಯ ಗಳಿಸಿರುವ ಕ್ಷೇತ್ರ ಇದಾಗಿದೆ.

4 ವರ್ಷದ ಹಿಂದಿನ ಹರಕೆ ಈಗ ತೀರಿಸಿದ ನಟ; ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಿಂಹ ಪ್ರಿಯಾ 

ಈ ಬಾರಿಯೂ ರಾಜ್ಯದಲ್ಲಿ ಮೊದಲ ಸ್ಥಾನಿಯಾಗುವ ನಿರೀಕ್ಷೆ ಇದೆ. ಹರಕೆ ಸೇವೆ, ಕಾಣಿಕೆ ಡಬ್ಬಿ, ಬಡ್ಡಿ, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಮತ್ತು ಕೃಷಿ ತೋಟದಿಂದ ಆದಾಯ ಬರುತ್ತಿದೆ. 2006-07ನೇ ಸಾಲಿನಲ್ಲಿ ದೇವಸ್ಥಾನದ ಆದಾಯ 19,76 ಕೋಟಿ ರೂ. ಆಗಿತ್ತು. 2007- 08ರಲ್ಲಿ 24.44 ಕೋಟಿ ರೂ. ಗಳಿಗೆ ಏರಿತ್ತು. 2008-09ರಲ್ಲಿ 31 ಕೋಟಿ ರೂ., 2009-10ರಲ್ಲಿ 38.51 ಕೋಟಿ, 2011-12ರಲ್ಲಿ 56.24 ಕೋಟಿ, 2012-13ರಲ್ಲಿ 66.76 ಕೋಟಿ, 2013-14ರಲ್ಲಿ 68 ಕೋಟಿ, 2014-15ರಲ್ಲಿ 77 ಕೋ, 2015-16ರಲ್ಲಿ 88 ಕೋಟಿ, 2016-17ರಲ್ಲಿ 91.69 ಕೋಟಿ, 2017-18ರಲ್ಲಿ 95.92 ಕೋಟಿ, 2018-19ರಲ್ಲಿ 92,09 ಕೋಟಿ, 2019-20ರಲ್ಲಿ 98.92 ಕೋಟಿ, 2020-21ರಲ್ಲಿ 68.94 ಕೋಟಿ, 2021-22ರಲ್ಲಿ 12.73 ಕೋಟಿ ಆದಾಯದ ಮೂಲಕ ಸತತ ರಾಜ್ಯದ ನಂಬರ್ ವನ್ ಆದಾಯ ಗಳಿಕೆಯ ದೇವಸ್ಥಾನವಾಗಿ ಕುಕ್ಕೆ ಮತ್ತೆ ನಂಬರ್ ವನ್ ಆಗಿದೆ.

ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ

2021-22ನೇ ಆರ್ಥಿಕ ವರ್ಷದಲ್ಲಿ ದೇವಸ್ಥಾನವು 12,73,23,758.07 ರೂ. ಆದಾಯ ಗಳಿಸುವ ಮೂಲಕ ಕೊರೊನಾ ಹೊಡೆತಕ್ಕೆ ಸಿಲುಕಿತ್ತು. ಭಕ್ತರ ಪ್ರವೇಶಕ್ಕೆ ನಿರ್ಬಂಧವಿದ್ದ ಕಾರಣ 2019ರಿಂದ 22ರ ವರೆಗೆ ಆದಾಯ ಇಳಿಮುಖವಾಗಿತ್ತು. 2019-20ರಲ್ಲಿ 98,92,24,193.34 ರೂ., 2020-21ರಲ್ಲಿ 68,94,88,039.17, 2021-22ರಲ್ಲಿ72,73,758,07 ಆದಾಯ ಗಳಿಸಿತ್ತು.

Latest Videos
Follow Us:
Download App:
  • android
  • ios