ಆಯಾ ತಿಂಗಳಿಗೆ ಹುಟ್ಟಿದವರ ವ್ಯಕ್ತಿತ್ವ, ಅಭಿರುಚಿಗಳೂ ವಿಭಿನ್ನವಾಗಿರುತ್ತೆ. ಹಾಗಾದರೆ ಫೆಬ್ರವರಿಯಲ್ಲಿ ಜನಿಸಿದವರು ವ್ಯಕ್ತಿತ್ವ ಹೇಗಿರುತ್ತೆ? ಓದಿ...
ಈಗಾಗಲೇ ವರ್ಷದ ಎರಡನೇ ತಿಂಗಳು ಈಗ ತಾನೇ ಮುಗಿದಿದೆ. ನೀವು, ನಿಮ್ಮ ಸ್ನೇಹಿತರು ಅಥವಾ ಆಪ್ತರು ವರ್ಷದ ಎರಡನೇ ತಿಂಗಳಲ್ಲಿ ಜನಿಸಿದ್ದರೆ ಅವರ ವ್ಯಕ್ತಿತ್ವ ಹೇಗಿರುತ್ತೆ? ಓದಿ ಇಲ್ಲಿದೆ ಮಾಹಿತಿ...
Add Asianetnews Kannada as a Preferred Source

- ಫೆಬ್ರವರಿ ತಿಂಗಳಲ್ಲಿ ಹುಟ್ಟಿದವರು ಹೈಟ್ ಇರುತ್ತಾರೆ. ಜೊತೆಗೆ ತುಂಬಾ ಸ್ಮಾರ್ಟ್ ಆಗಿರುತ್ತಾರೆ.
- ಚಳಿಗಾಲದಲ್ಲಿ ಹುಟ್ಟಿದ ಮಕ್ಕಳು ಹೆಚ್ಚು ರಗಳೆ ಮಾಡುವುದಿಲ್ಲ. ಜೊತೆಗೆ ಅವರ ಮೂಡ್ ಅವಾಗವಾಗ ಬದಲಾಗೋದೂ ಇಲ್ಲ.
- ಹಂಚಿಕೊಳ್ಳುವುದರಲ್ಲಿ, ಏಕಾಗ್ರತೆಯಲ್ಲಿ ಮತ್ತು ಹೆಚ್ಚು ಹೆಚ್ಚು ಸ್ನೇಹಿತರನ್ನು ಸಂಪಾದಿಸುವುದರಲ್ಲಿ ನಿಪುಣರು.
- ಪ್ರೀ ಮೆಚ್ಯೂರ್ ಮಕ್ಕಳು ಫೆಬ್ರುವರಿಯಲ್ಲಿಯೇ ಹುಟ್ಟುತ್ತಾರೆ.
- ಈ ತಿಂಗಳಲ್ಲಿ ಹುಟ್ಟಿದವರು ಕಲಾವಿದರು ಅಥವಾ ಟ್ರಾಫಿಕ್ ಪೊಲೀಸ್ ಆಗಿರುತ್ತಾರೆ.
- ಈ ತಿಂಗಳಲ್ಲಿ ಹುಟ್ಟಿದವರು ಹೆಚ್ಚು ಹೆಚ್ಚು ಜನಪ್ರಿಯತೆ ಪಡೆಯಬಲ್ಲರು.
- ಇವರ ಹುಟ್ಟು ಹೂವು ವಾಯ್ಲೆಟ್ ಮತ್ತು ಗುಲಾಬಿ. ಇದರರ್ಥ ನಂಬಿಕಸ್ಥರು. ಮತ್ತೊಬ್ಬರನ್ನು ಪ್ರೀತಿಸುತ್ತಾರೆ.
- ಫೆಬ್ರುವರಿ 29ಕ್ಕೆ ಹುಟ್ಟಿದವರ ಹುಟ್ಟುಹಬ್ಬ ಮಾತ್ರ ನಾಲ್ಕು ವರ್ಷಕ್ಕೊಮ್ಮೆ ಮಾತ್ರ ಬರುತ್ತೆ.
- ಇವರಿಗೆ ನರ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುವುದು ಕಡಿಮೆ.
- ಹೆಚ್ಚಿನ ನಿದ್ರೆ ಸಮಸ್ಯೆಯಿಂದ ಬಳಲುವವರು ಫೆಬ್ರುವರಿ ತಿಂಗಳಲ್ಲಿಯೇ ಹುಟ್ಟಿರುತ್ತಾರೆ.
- ಫೆಬ್ರವರಿಯಲ್ಲಿ ಹುಟ್ಟಿದ ಪುರುಷ ಮತ್ತು ಮೇ ತಿಂಗಳಲ್ಲಿ ಹುಟ್ಟಿದ ಮಹಿಳೆ ಮದುವೆಯಾದಲ್ಲಿ ಡಿವೋರ್ಸ್ ಆಗುವ ಸಾಧ್ಯತೆ ಹೆಚ್ಚು.
- ಫೆಬ್ರವರಿ 22ಕ್ಕೆ ಹುಟ್ಟಿದವರು ತುಂಬಾ ಲಕ್ಕಿ.
