ಗುಜರಾತ್‌ನಿಂದ ಅಯೋಧ್ಯೆಗೆ ಹೊರಟಿದೆ 108 ಅಡಿ ಉದ್ದದ ಊದುಬತ್ತಿ!

ಗುಜರಾತ್‌ನಿಂದ ಅಯೋಧ್ಯೆಗೆ ಹೊರಟಿದೆ 108 ಅಡಿ ಉದ್ದದ ಊದುಬತ್ತಿ. ಇದರ ಪರಿಮಳ ಸುಮಾರು 50 ಕಿಲೋಮೀಟರ್ ದೂರಕ್ಕೆ ಹರಡಬಲ್ಲದು. ಮತ್ತಷ್ಟು ವಿಶೇಷತೆಗಳನ್ನು ತಿಳಿಯೋಣ ಬನ್ನಿ. 

108 feet long incense stick from Gujarat is on its way to Ayodhya for Pran Pratishtha skr

ಗುಜರಾತ್‌ನಲ್ಲಿ ತಯಾರಾದ ಬರೋಬ್ಬರಿ 3,610 ಕೆಜಿ ತೂಕದ 108 ಅಡಿ ಉದ್ದದ ಊದುಬತ್ತಿಯು ರಾಮಲಲ್ಲಾನ ಪ್ರಾಣಪ್ರತಿಷ್ಠೆಯ ಸಂಭ್ರಮ ಹೆಚ್ಚಿಸಲು ಅಯೋಧ್ಯೆಯತ್ತ ಪಯಣ ಬೆಳೆಸುತ್ತಿದೆ. ಸಾಮಾನ್ಯವಾಗಿಯೇ ಇದು ಅಯೋಧ್ಯೆಗೆ ಹೊರಟರೂ, ದಾರಿಯುದ್ದಕ್ಕೂ ಇದನ್ನು ವೀಕ್ಷಿಸಲು ನೂರಾರು ಜನರು ಸೇರುತ್ತಿರುವುದರಿಂದ ಇದೊಂದು ದೊಡ್ಡ ಮೆರವಣಿಗೆಯೇ ಆಗಿದೆ. ಜನರು ಈ ದೂಪಧ್ರವ್ಯಕ್ಕೆ ದಾರಿಯುದ್ದಕ್ಕೂ ಅದ್ಧೂರಿ ಸ್ವಾಗತ ನೀಡುತ್ತಿದ್ದು, ಅದು ಕಂಡಂತೆಲ್ಲ ಜೈ ಶ್ರೀ ರಾಂ ಘೋಷಣೆ ಕೂಗುತ್ತಿದ್ದಾರೆ. ಅಷ್ಟೇ ಅಲ್ಲ, ದೀಪ ಬೆಳಗಿ, ಹೂಮಳೆ ಸುರಿಸಿ ಸಂಭ್ರಮ ತೋರುತ್ತಿದ್ದಾರೆ.

ಸಧ್ಯ ಆಗ್ರಾ ತಲುಪಿರುವ ಈ ಧೂಪದ್ರವ್ಯವನ್ನು ಆರು ತಿಂಗಳ ಅವಧಿಯಲ್ಲಿ ತಯಾರಿಸಲಾಗಿದೆ. ಒಮ್ಮೆ ಉರಿಸಿದರೆ ಬರೋಬ್ಬರಿ ಒಂದೂವರೆ ತಿಂಗಳವರೆಗೆ ಇರುತ್ತದೆ ಹಾಗೂ ಸುಮಾರು 50 ಕಿಲೋಮೀಟರ್‌ಗಳವರೆಗೆ ಅದರ ಪರಿಮಳವನ್ನು ಹರಡುತ್ತದೆ. ವಡೋದರಾ ನಿವಾಸಿ ವಿಹಾ ಭಾರವಾಡ್ ಅವರು ತಯಾರಿಸಿದ್ದು, 3.5 ಅಡಿ ಅಗಲದ ಈ ಧೂಪದ್ರವ್ಯವು ಪರಿಸರ ಸ್ನೇಹಿಯಾಗಿದೆ. ಆರು ತಿಂಗಳ ಕಾಲ ಅದರ ತಯಾರಿಕೆಯಲ್ಲಿ ವಿವಿಧ ರೀತಿಯ ಗಿಡಮೂಲಿಕೆಗಳನ್ನು ಬಳಸಲಾಗಿದೆ.

ರಾಮ ಮಂದಿರ ಮಂತ್ರಾಕ್ಷತೆ ಮೆರವಣಿಗೆ ಮೇಲೆ ಕಲ್ಲು ತೂರಾಟ, ಭಕ್ತರಿಗೆ ಗಾಯ!

ಬರೋಡಾದಿಂದ ಆರಂಭವಾದ ಅಗರಬತ್ತಿಯ ಪಯಣ ಇದೀಗ ಮೆರವಣಿಗೆಯಾಗಿ ಮಾರ್ಪಟ್ಟಿದೆ. ಸೋಮವಾರ, ರಾಜಸ್ಥಾನದ ಭರತ್‌ಪುರ ಮೂಲಕ, ಈ ಮೆರವಣಿಗೆಯು ಆಗ್ರಾದ ಫತೇಪುರ್ ಸಿಕ್ರಿ ಮತ್ತು ಕಿರಾವಲಿ ತಲುಪಿದೆ. ಅಲ್ಲಿಂದ ಅಯೋಧ್ಯೆಯ ಪಯಣ ಮುಂದುವರೆದಿದೆ.

ಅಯೋಧ್ಯೆಯ ಶ್ರೀರಾಮ ಮಂದಿರದ 'ಪ್ರಾಣ ಪ್ರತಿಷ್ಠೆ' ಜನವರಿ 22 ರಂದು ನಡೆಯಲಿದ್ದು, ಈ ಅಗರಬತ್ತಿಯು ಈ ಸಂದರ್ಭಕ್ಕಾಗಿ ಅವರ ಅರ್ಪಣೆಯಾಗಿದೆ ಎಂದು ಅಗರಬತ್ತಿಗಳನ್ನು ತಯಾರಿಸುವ ಗುಜರಾತ್ ನಿವಾಸಿ ಬಿಹಭರಬಾದ್ ಹೇಳಿದ್ದಾರೆ.

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ನಟ-ರಾಜಕಾರಣಿ ನಿಖಿಲ್ ಕುಮಾರಸ್ವಾಮಿಗೆ ಆಹ್ವಾನ

ದೇಸಿ ಹಸುವಿನ ಸಗಣಿ, ದೇಸಿ ಹಸುವಿನ ತುಪ್ಪ, ಅಗರಬತ್ತಿ ಪದಾರ್ಥಗಳು ಸೇರಿದಂತೆ ಹಲವು ಬಗೆಯ ಗಿಡಮೂಲಿಕೆಗಳನ್ನು ಇದರ ತಯಾರಿಕೆಯಲ್ಲಿ ಬಳಸಲಾಗಿದೆ.

Latest Videos
Follow Us:
Download App:
  • android
  • ios