ಪ್ರಾಣಿ ಕೂದಲಲ್ಲ, ಮನುಷ್ಯನ ಕೂದಲಿಂದಲೂ ಸಿದ್ಧವಾಗ್ತಿದೆ ಬಟ್ಟೆ!

ಪ್ರತಿ ದಿನ ಹೊಸ ಹೊಸ ಪ್ರಯೋಗಗಳು ನಡೆಯುತ್ತಿರುತ್ತವೆ. ಈಗ ಮತ್ತೊಂದು ಪ್ರಯೋಗ ನಡೆದಿದೆ. ಮನುಷ್ಯನ ಕೂದಲು ಬಳಸಿ ಬಟ್ಟೆ ಸಿದ್ಧಪಡಿಸಲಾಗಿದೆ. ಈ ಡ್ರೆಸ್ ನಲ್ಲಿರುವ ವಿಶೇಷವೇನು ಎಂಬ ಮಾಹಿತಿ ಇಲ್ಲಿದೆ. 
 

Why A Dutch Designer Is Knitting Jumpers From Human Hair roo

ಪ್ರಾಣಿ ಚರ್ಮ, ಕೂದಲಿನಿಂದ ಬಟ್ಟೆ ತಯಾರಿಸೋದು ನಿಮಗೆಲ್ಲ ಗೊತ್ತು. ಮೈ ಬೆಚ್ಚಗಿಡಲು ಉಣ್ಣೆ ಬಟ್ಟೆಯನ್ನು ನಾವು ಬಳಸ್ತೇವೆ. ಆದ್ರೆ ಮನುಷ್ಯನ ಕೂದಲು ಕೂಡ ಬಟ್ಟೆ ತಯಾರಿಸಲು ಬಳಕೆಯಾಗ್ತಿದೆ ಅಂದ್ರೆ ನೀವು ನಂಬ್ಲೇಬೇಕು. ನಮ್ಮ ಕೂದಲಿನಿಂದ ವಿಗ್, ಚೌಲಿ ತಯಾರಿಸೋದನ್ನು ನೀವೆಲ್ಲ ಕೇಳಿದ್ದೀರಿ. ಈಗ ಕೂದಲಿನ ಮೇಲೂ ಪ್ರಯೋಗ ನಡೆಯುತ್ತಿದೆ. ಮನುಷ್ಯನ ಕೂದಲು ಬಟ್ಟೆಯಾಗಿ ಹೊರಗೆ ಬರ್ತಿದೆ. 

ಡಚ್ (Dutch )  ಡಿಸೈನರ್ (Designer) ಮನುಷ್ಯನ ಕೂದಲಿ (Hair) ನಿಂದ ಜಂಪರ್ ತಯಾರಿಸಿದ್ದಾರೆ. ಈ ಜಂಪರ್ ದೇಹವನ್ನು ಬೆಚ್ಚಗಿಡಲು ಸಹಾಯ ಮಾಡಿದೆ. ಈ ಜಂಪರನ್ನು ತಯಾರಿಸಲು ಕೆರಾಟಿನ್ ಪ್ರೋಟೀನ್ ಫೈಬರ್ ಬಳಸಲಾಗಿದೆ. ಇದು ಚಳಿಗಾಲದಲ್ಲಿ ಬೆಚ್ಚಗಿನ ಭಾವನೆಯನ್ನು ನೀಡುತ್ತದೆ.

ಸ್ಯಾಂಡಲ್‌ವುಡ್‌‌ಗೆ ಎಂಟ್ರಿ ಕೊಟ್ಟ ತೀರ್ಥಹಳ್ಳಿ ಬ್ಯೂಟಿ, ಇಷ್ಟುದ್ದದ ನಟಿಗೆ ಸಿಗುತ್ತಾ ಸೂಕ್ತ ಆಪರ್ಚುನಟಿ!

ಡಚ್ ಸ್ಟಾರ್ಟ್‌ಅಪ್ ಕಂಪನಿ ಈ ಸಾಹಸಕ್ಕೆ ಕೈ ಹಾಕಿದೆ. ಈ ಸ್ಟಾರ್ಟ್ ಅಪ್  ಕಂಪನಿ ಹೆಸರು ಹ್ಯೂಮನ್ ಮೆಟೀರಿಯಲ್ ಲೂಪ್ ಆಗಿದ್ದು,ಈ ಕಂಪನಿ ಮಾನವ ಕೂದಲನ್ನು ಬಟ್ಟೆಯಾಗಿ ಪರಿವರ್ತಿಸಿದೆ.  ಈ ಮೂಲಕ ಫ್ಯಾಷನ್ ಉದ್ಯಮವನ್ನು ಬದಲಾಯಿಸುವ ಹೊಸ ಹಾದಿ ಹಿಡಿದಿದೆ. ಕಂಪನಿ ಬರೀ ಜಂಪರ್ ಮಾತ್ರವಲ್ಲ ಬ್ಲೇಜರನ್ನು ಕೂಡ ಮಾನವ ಕೂದಲಿನಿಂದ ತಯಾರಿಸಿದೆ. 

ಸ್ಟಾರ್ಟಪ್‌ನ ಸಹ ಸಂಸ್ಥಾಪಕಿ ಜೊಫಿಯಾ ಕೊಲ್ಲರ್. ಕೂದಲಿನಿಂದ ಮಾಡಿದ ಬಟ್ಟೆಗಳತ್ತ ಅವರು ಆಕರ್ಷಿತರಾಗಿದ್ದರು. ಅನೇಕ ಜನರು ಈ ವಿನ್ಯಾಸವನ್ನು ಮೆಚ್ಚಿಕೊಂಡಿರುವುದಾಗಿ ಜೊಫಿಯಾ ಕೊಲ್ಲರ್ ಹೇಳ್ತಾರೆ. ಮನುಷ್ಯನ ಕೂದಲು ಬೆಳೆಯುತ್ತದೆ. ಅದನ್ನು ಕಾಲ ಕಾಲಕ್ಕೆ ಕತ್ತರಿಸಲಾಗುತ್ತದೆ. ಅನೇಕರು ಉದ್ದ ಕೂದಲನ್ನು ಇಷ್ಟಪಡುವುದಿಲ್ಲ. ಹಾಗಾಗಿ ಕೂದಲನ್ನು ಕತ್ತರಿಸುವ ನಿರ್ಧಾರಕ್ಕೆ ಬರ್ತಾರೆ. ಈ ಕೂದಲನ್ನೇ ಬಳಸಿಕೊಂಡು ಜಂಪರ್ ತಯಾರಿಸಲಾಗಿದೆ.

ಕಪ್ಪು ಸೀರೆ ಧರಿಸಿ ಪೋಸ್‌ ಕೊಟ್ಟ ರಶ್ಮಿಕಾ, ತಮನ್ನಾ, ಶ್ರೀಲೀಲಾ: ನಮಗೂ ಅದೇ ಬೇಕಿರೋದು ಎಂದ ಫ್ಯಾನ್ಸ್ !

 ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಡಿಸೈನರ್ ಕೊಲ್ಲರ್ ಸಾಕಷ್ಟು ಸಮಸ್ಯೆ ಎದುರಿಸಿದ್ದರು. ಆ ವೇಳೆ ಅವರು ಕೂದಲಿನಿಂದ ಕೋಟ್ ವಿನ್ಯಾಸಗೊಳಿಸುವ ಬಗ್ಗೆ ಆಲೋಚನೆ ಮಾಡಿದ್ದರು. ಅದ್ರ ಮೇಲೆ ಕೆಲಸ ಮಾಡಿದ್ದಲ್ಲದೆ ಮನುಷ್ಯನ ಕೂದಲಿನಿಂದ ಜಂಪರ್ ತಯಾರಿಸುವಲ್ಲಿ ಯಶಸ್ವಿಯಾದರು. ವಿಶ್ವದಾದ್ಯಂತ ಈ ಮನುಷ್ಯನ ಕೂದಲಿಗೆ ಬರವಿಲ್ಲ. ಯುಎಸ್ ಮತ್ತು ಕೆನಡಾದಲ್ಲಿನ ಸಲೂನ್‌ಗಳು ಪ್ರತಿ ನಿಮಿಷಕ್ಕೆ 877 ಪೌಂಡ್‌ಗಳಷ್ಟು ಕೂದಲು ತ್ಯಾಜ್ಯವನ್ನು ಉತ್ಪಾದಿಸುತ್ತವೆ. ಈ ಕೂದಲು ಹವಾಮಾನ ಬದಲಾವಣೆಗೆ ಕಾರಣವಾಗುತ್ತದೆ. ಹ್ಯೂಮನ್ ಮೆಟೀರಿಯಲ್ ಲೂಪ್ ಪ್ರಕಾರ, ಪ್ರತಿ ವರ್ಷ 72 ಮಿಲಿಯನ್ ಕಿಲೋಗ್ರಾಂಗಳಷ್ಟು ಮಾನವ ಕೂದಲಿನ ತ್ಯಾಜ್ಯವು ಯುರೋಪಿಯನ್ ಭೂಕುಸಿತಗಳಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಏಳು ಐಫೆಲ್ ಟವರ್‌ಗಳ ತೂಕಕ್ಕೆ ಸಮನಾಗಿರುತ್ತದೆ. ಇದನ್ನು ನೈಸರ್ಗಿಕ ಸಂಪನ್ಮೂಲವೆಂದು ನೀವು ಪರಿಗಣಿಸಬಹುದು ಎನ್ನುತ್ತಾರೆ ಕೊಲ್ಲರ್. ಬಹುತೇಕ ದೇಶಗಳು ಕೂದಲನ್ನು ಸರಿಯಾದ ರೀತಿಯಲ್ಲಿ ಮರುಬಳಕೆ ಮಾಡ್ತಿಲ್ಲ. ಇದನ್ನು ಅನೇಕ ದೇಶಗಳು ಸುಡುತ್ತವೆ. ಆದ್ರೆ ಇದು ಸೂಕ್ತ ವಿಧಾನವಲ್ಲ ಎನ್ನುತ್ತಾರೆ ಕೊಲ್ಲರ್. 

ಬೇರೆ ವಸ್ತುಗಳ ಜೊತೆ ಸ್ವೆಟರ್ ತಯಾರಿಸಿದ ರೀತಿಯಲ್ಲೇ ಕೂದಲಿನ ಸ್ವೆಟರ್ ತಯಾರಿಸಲಾಗುತ್ತದೆ. ಚಿಕ್ಕ ಕೂದಲನ್ನು ಒಟ್ಟಿಗೆ ತಿರುಗಿಸಲಾಗುತ್ತದೆ. ಇದನ್ನು ನೂಲು ಮಾಡಲಾಗುತ್ತದೆ. ಅದಕ್ಕೆ ಶುದ್ಧ ಬಣ್ಣವನ್ನು ಹಾಕಲಾಗುತ್ತದೆ. ಜನರಿಗೆ ಅಗತ್ಯವಿರುವ ಬಟ್ಟೆಯಲ್ಲಿ ಇದನ್ನು ಬಳಸುವ ಅಗತ್ಯವಿತ್ತು. ಕೊಲ್ಲರ್ ಸ್ವೆಟರ್ ರೀತಿಯಲ್ಲಿ ಮೊದಲು ಇದನ್ನು ತಯಾರಿಸಿದ್ರು. ಅರ್ಜೆಂಟೀನಾದ ಪರ್ವತಗಳಲ್ಲಿಯೂ ಕೂದಲಿನಿಂದ ಮಾಡಿದ ಬಟ್ಟೆಗಳನ್ನು ಧರಿಸಬಹುದು. ಇದು ನಿಮ್ಮ ದೇಹವನ್ನು ಬೆಚ್ಚಗಿಡುತ್ತದೆ. ಕೊಲ್ಲರ್ ಇದನ್ನು ಅರ್ಜೆಂಟೀನಾದ ಅತ್ಯುನ್ನತ ಪರ್ವತವಾದ ಅಕಾನ್ಕಾಗುವಾದಲ್ಲಿ ಧರಿಸಿ, ಯಶಸ್ವಿಯಾಗಿದ್ದಾರೆ. 

ಮಾನವನ ಕೂದಲು ಬಾಳಿಕೆ ಬರುವ ವಸ್ತುವಾಗಿದೆ. ಅದರಿಂದ ತಯಾರಿಸಿ ವಸ್ತು ಕೂಡ ತುಂಬಾ ಬಾಳಿಕೆ ಬರುತ್ತದೆ ಎನ್ನುವ ಅವರು, ಕಂಪನಿ ತಯಾರಿಸಿದ ವಸ್ತುಗಳು ಸದ್ಯ ಮಾರಾಟಕ್ಕಿಲ್ಲ. ಬೇರೆ ಕಂಪನಿಗಳಿಗೆ ಇವು ಕಚ್ಚಾ ವಸ್ತುಗಳನ್ನು ಒದಗಿಸುತ್ತವೆ. ಹ್ಯೂಮನ್ ಮೆಟೀರಿಯಲ್ ಲೂಪ್   ನೆದರ್ಲ್ಯಾಂಡ್ಸ್, ಬೆಲ್ಜಿಯಂ ಮತ್ತು ಲಕ್ಸೆಂಬರ್ಗ್‌ನಲ್ಲಿನ ಸಲೂನ್‌ಗಳಿಂದ ಕೂದಲನ್ನು ಪಡೆಯುತ್ತದೆ. 

Latest Videos
Follow Us:
Download App:
  • android
  • ios