ಇದು ಪ್ರೀ- ವೆಡ್ಡಿಂಗ್ ಶೂಟ್ ಅಂತೆ! ಮದ್ವೆಯಾದ್ಮೇಲಿನ ಫೋಟೋ ನೋಡಲು ತುದಿಗಾಲಲ್ಲಿ ನಿಂತ ನೆಟ್ಟಿಗರು
ಮದುವೆಗೂ ಮೊದಲಿನ ಥಹರೇವಾರಿ ಪ್ರೀ- ವೆಡ್ಡಿಂಗ್ ಶೂಟ್ ನೀವು ನೋಡಿರಲಿಕ್ಕೆ ಸಾಕು, ಆದರೆ ಇಂಥ ಫೋಟೋಶೂಟ್ ಎಲ್ಲಿಯಾದ್ರೂ ನೋಡಿದ್ರಾ? ಏನಿದು ನೋಡಿ.
ಕೆಲ ದಶಕಗಳ ಹಿಂದೆ ಮದುವೆಯ ದಿನ ಫೋಟೋ ತೆಗೆಸಿಕೊಂಡರೆ ಅದೇ ದೊಡ್ಡ ಸಂಭ್ರಮವಾಗಿತ್ತು. ಆದರೆ ಬರಬರುತ್ತಾ ಮದುವೆಯ ಬಳಿಕವೂ ಒಂದಿಷ್ಟು ಫೋಟೋಶೂಟ್, ವಿಡಿಯೋ ಶೂಟ್ಗಳು ನಡೆದವು. ತಮಗೆ ಬೇಕಾದ ರೀತಿಯಲ್ಲಿ, ಬೇಕಾದ ಜಾಗವನ್ನು ಆಯ್ಕೆ ಮಾಡಿಕೊಂಡು ವಿವಿಧ ಭಂಗಿಗಳಲ್ಲಿ ಫೋಟೋ, ವಿಡಿಯೋಶೂಟ್ ಮಾಡಿಸಿಕೊಂಡರು. ಆದರೆ ಕಾಲ ಕ್ರಮೇಣ ಈ ಫೋಟೋ- ವಿಡಿಯೋ ಹುಚ್ಚು ಯಾರ ಮಟ್ಟಿಗೆ ಬೆಳೆಯಿತು ಎಂದರೆ ಈಗಂತೂ ಮದುವೆಗೂ ಮೊದಲಿನ ಫೋಟೋಶೂಟ್ (ಪ್ರೀ-ವೆಡ್ಡಿಂಗ್ ಫೋಟೋಶೂಟ್) ಮಾಮೂಲಾಗಿ ಬಿಟ್ಟಿದೆ. ಯಾರೂ ಮಾಡದ ರೀತಿಯಲ್ಲಿ ತಾವು ಫೋಟೋಶೂಟ್ ಮಾಡಿಸಬೇಕು ಎಂದು ಎಷ್ಟೋ ಭಾವಿ ದಂಪತಿ ಸಾಹಸಮಯ ಕೃತ್ಯಕ್ಕೂ ಕೈಹಾಕುವುದು ಇದೆ. ನದಿಯ ಮಧ್ಯೆ, ಬೆಟ್ಟದ ತುದಿಯಲ್ಲಿ... ಹೀಗೆ ಏನೇನೋ ಫೋಟೋಶೂಟ್ ಮಾಡಿಸಲು ಹೋಗಿ ಎಡವಟ್ಟಾಗಿ ಸಾವನ್ನಪ್ಪಿರುವ ಉದಾಹರಣೆಗಳೂ ಇವೆ.
ಅವೆಲ್ಲಾ ಬಿಡಿ. ಈಗ ಈ ಫೋಟೋಗಳನ್ನು ನೋಡಿ. ಒಂದೇ ಬಾಳೆ ಎಲೆಯನ್ನು ಇಬ್ಬರೂ ಸುತ್ತುಕೊಂಡು ಫೋಟೋಶೂಟ್ ಮಾಡಿಸಿದ್ದಾರೆ. ಇದು ಪ್ರೀ-ವೆಡ್ಡಿಂಗ್ ಫೋಟೋಶೂಟ್ ಎಂಬ ಶೀರ್ಷಿಕೆಯಡಿಯಲ್ಲಿ ವೈರಲ್ ಆಗುತ್ತಿದೆ. ಇವರು ಎಲ್ಲಿಯವರು ಎಂಬ ಮಾಹಿತಿ ಇಲ್ಲದಿದ್ದರೂ ಈ ಫೋಟೋ ನೋಡಿದವರು ಶಾಕ್ ಆಗೋದಂತೂ ಗ್ಯಾರೆಂಟಿ. ಈ ಇಬ್ಬರೂ ಒಳಗೆ ಯಾವ ಬಟ್ಟೆಗಳನ್ನು ಹಾಕಿಕೊಂಡಿದ್ದಾರೋ, ಬಿಟ್ಟಿದ್ದಾರೋ ಗೊತ್ತಿಲ್ಲ. ಆದರೆ ಬಾಳೆ ಎಲೆ ಸುತ್ತಿಕೊಂಡು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಅಂತೂ ಅವರ ಆಸೆ ಈಡೇರಿದೆ. ಯಾರೂ ಮಾಡಿಸದಂತೆ ಫೋಟೋಶೂಟ್ ಮಾಡಿಸಿದರೆ ಅದು ಜಗಜ್ಜಾಹೀರವಾಗುತ್ತದೆ ಎಂದುಕೊಂಡೇ ಹೀಗೆ ಮಾಡಿಸಿರಲಿಕ್ಕೆ ಸಾಕು. ಅದೇ ರೀತಿ ಸೋಷಿಯಲ್ ಮೀಡಿಯಾದಲ್ಲಿಯೂ ಈ ಫೋಟೋಗಳು ಭಾರಿ ಹಲ್ಚಲ್ ಸೃಷ್ಟಿಸುತ್ತಿವೆ.
ಬಾಳೆ ಎಲೆಯನ್ನು ವಿಭಿನ್ನ ರೀತಿಯಲ್ಲಿ ಸುತ್ತುಕೊಂಡಿರುವುದನ್ನು ಈ ಫೋಟೋಗಳಲ್ಲಿ ನೋಡಬಹುದು. ಇದಕ್ಕೆ ಸಹಸ್ರಾರು ಮಂದಿ ಕಮೆಂಟ್ ಮಾಡಿದ್ದಾರೆ. ಬಹುತೇಕ ಮಂದಿಯ ಆಸೆ ಏನೆಂದರೆ ಪ್ರೀ-ವೆಡ್ಡಿಂಗ್ ಶೂಟ್ನಲ್ಲಿಯೇ ಹೀಗೆ ಇದ್ದರೆ ಇನ್ನು ಪೋಸ್ಟ್ ವೆಡ್ಡಿಂಗ್ ಶೂಟ್ನಲ್ಲಿ ಇನ್ಯಾವ ರೀತಿ ಇರಬಹುದು ಎನ್ನುವುದು, ಅದಕ್ಕಾಗಿಯೇ ಅದರ ಫೋಟೋಗಳನ್ನೂ ಶೇರ್ ಮಾಡಿ ಎನ್ನುತ್ತಿದ್ದಾರೆ ತರ್ಲೆ ಕಮೆಂಟಿಗರು. ಮತ್ತೆ ಕೆಲವರಿಗೆ ಕ್ಯಾಮೆರಾಮೆನ್ ಎಷ್ಟು ಲಕ್ಕಿ, ತಮಗೆ ಇಂಥ ಛಾನ್ಸ್ ಸಿಗಲಿಲ್ಲ ಎಂಬ ಹೊಟ್ಟೆ ಉರಿಇದ್ದಂತೆ ಕಾಣುತ್ತಿದೆ. ಈ ಬಗ್ಗೆ ಖುದ್ದು ಕಮೆಂಟಿಗರು ಬರೆದುಕೊಂಡಿದ್ದಾರೆ. ನನಗೂ ಇಂಥ ಛಾನ್ಸ್ ಸಿಗಬೇಕಿತ್ತು ಎನ್ನುತ್ತಿದ್ದಾರೆ.
ಈ ಫೋಟೋಗೆ ಜನರು ಅದ್ಯಾವ ಪರಿಯಲ್ಲಿ ಫಿದಾ ಆಗಿದ್ದಾರೆ ಎಂದರೆ ಫೋಟೋ ಅಪ್ಲೋಡ್ ಮಾಡಿದ ಒಂದೇ ದಿನಕ್ಕೆ ಐದೂವರೆ ಸಾವಿರಕ್ಕೂ ಅಧಿಕ ಮಂದಿ ಕಮೆಂಟ್ ಮಾಡಿದ್ದು, ಇದನ್ನು ಎರಡೂವರೆ ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ. ಅಲ್ಲಿಗೆ ಈ ಮದುಮಕ್ಕಳ ಆಸೆ ಈಡೇರಿದೆ. ಆದರೆ ಫೋಟೋಶೂಟ್ ಮಾಡಿಸುವಾಗ ಸ್ವಲ್ಪ ಎಡವಟ್ಟು ಆಗಿದ್ದರೂ ಬಾಳೆ ಎಲೆ ಜಾರಿದ್ದರೂ ಏನಾಗುತ್ತಿತ್ತು ಎನ್ನುವ ಚಿಂತೆ ಕೆಲವರದ್ದಾದರೆ, ಹಾಗೆ ಆಗಿದ್ದರೂ ಅದು ಗೊತ್ತಾಗುವುದು ಹೇಗೆ ಎನ್ನುವುದನ್ನು ಮತ್ತಿಷ್ಟು ಮಂದಿಯ ಪ್ರತಿಕ್ರಿಯೆ. ಒಟ್ಟಿನಲ್ಲಿ ಈ ಫೋಟೋಶೂಟ್ ನೆಟ್ಟಿಗರ ನಿದ್ದೆ ಕದಿಯುತ್ತಿದೆ. ಇನ್ನು ತಮಗೆ ಯಾವ ರೀತಿಯ ಫೋಟೋಶೂಟ್ ಬಾಕಿ ಇದೆ ಎನ್ನುವ ಬಗ್ಗೆ ತಲೆ ಕೆಡಿಸಿಕೊಳ್ತಿದ್ದಾರೆ ಹೈಕಳು. ಶೋಯೇಬ್ ಶೇಖ್ ಎನ್ನುವವರು ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಆಟೋದವ ಪ್ಯಾಂಟ್ ಜಿಪ್ ತೆರೆದ, ಟೈಲರ್ ತಬ್ಬಿಕೊಂಡ... ಭಯಾನಕ ಘಟನೆ ನೆನಪಿಸಿಕೊಂಡ 'ವೀರ ಕನ್ನಡಿಗ' ನಟಿ ಅನಿತಾ
ಇದರ ಫೋಟೋ ಫೇಸ್ಬುಕ್ನಲ್ಲಿ ಶೇರ್ ಮಾಡಿದವರ ಲಿಂಕ್ ಇಲ್ಲಿದೆ ನೋಡಿ