ದೀಪಾವಳಿ ಹಬ್ಬ ಹತ್ತಿರ ಬರ್ತಿದೆ. ಮಹಿಳೆಯರು ಡ್ರೆಸ್ ಜೊತೆ ಎಕ್ಸಸೆರಿಸ್ ಬಗ್ಗೆ ತಲೆ ಕೆಡಿಸಿಕೊಳ್ತಾರೆ. ದೀಪಾವಳಿ ಟೈಂನಲ್ಲಿ ಹೆಚ್ಚು ಟ್ರೆಂಡ್ ಆಗಿರುವ ಬಳೆಗಳ ಮಾಹಿತಿ ಇಲ್ಲಿದೆ.
ಹಬ್ಬದ ಸೀಸನ್ ನಲ್ಲಿ ಪೂಜೆ, ಮನೆ ಅಲಂಕಾರದ ಜೊತೆ ಮಹಿಳೆಯರು ತಮ್ಮ ಅಲಂಕಾರಕ್ಕೂ ಹೆಚ್ಚಿನ ಆದ್ಯತೆ ನೀಡ್ತಾರೆ. ಹಬ್ಬಕ್ಕೆಂದೇ ಹೊಸ ಡ್ರೆಸ್ ಖರೀದಿ ಮಾಡುವ ಮಹಿಳೆಯರು ಅದಕ್ಕೆ ಮ್ಯಾಚ್ ಆಗುವ ಎಕ್ಸಸೆರಿಸ್ ಖರೀದಿ ಮಾಡ್ತಾರೆ. ಅದ್ರಲ್ಲಿ ಬಳೆ ಕೂಡ ಒಂದು. ಸದ್ಯ ದೀಪಾವಳಿ ಹಬ್ಬಕ್ಕೆ ಟ್ರೆಂಡ್ ಆಗ್ತಿರುವ ಬಳೆಗಳ್ಯಾವುವು ಗೊತ್ತಾ?.
ಜೆಲ್ಲಿ ಬಳೆಗಳು
ಜೆಲ್ಲಿ ಬಳೆಗಳು ಇತ್ತೀಚೆಗೆ ಸಾಕಷ್ಟು ಜನಪ್ರಿಯವಾಗುತ್ತಿವೆ. ಇವುಗಳ ಪಾರದರ್ಶಕ ವಿನ್ಯಾಸ ಮತ್ತು ತಿಳಿ ಬಣ್ಣಗಳು ಇತರ ಬಳೆಗಳಿಗಿಂತ ವಿಭಿನ್ನವಾಗಿ ಕಾಣಿಸುತ್ತವೆ. ಸೀರೆ, ಸಲ್ವಾರ್ ಸೂಟ್ ಅಥವಾ ಅನಾರ್ಕಲಿ ಡ್ರೆಸ್ ಜೊತೆ ಇದನ್ನು ಧರಿಸಬಹುದು. ಕಲರ್ ಫುಲ್ ಜೆಲ್ಲಿ ಬಳೆಗಳು ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡುತ್ತವೆ.
ಥ್ರೆಡ್ ಬಳೆಗಳು
ಸಾಮಾನ್ಯ ಬಳೆಗಳಿಗಿಂತ ವಿಭಿನ್ನವಾದ ವಿನ್ಯಾಸವನ್ನು ಇಷ್ಟಪಡುವವರು ಥ್ರೆಡ್ ಬಳೆಗಳನ್ನು ಆಯ್ಕೆ ಮಾಡಬಹುದು. ಬಣ್ಣಬಣ್ಣದ ದಾರಗಳಿಂದ ತಯಾರಿಸುವ ಈ ಬಳೆಗಳನ್ನು ಮುತ್ತು, ಕನ್ನಡಿ ಚೂರುಗಳು ಹಾಗೂ ಗೋಲ್ಡ್ ಲೇಸ್ಗಳಿಂದ ಅಲಂಕಾರಗೊಂಡಿರುತ್ವೆ. ಇಂಡೋ-ವೆಸ್ಟರ್ನ್ ಉಡುಗೆಗಳೊಂದಿಗೆ ಇವುಗಳನ್ನು ಒಂದರ ಮೇಲೊಂದರಂತೆ ಧರಿಸಿದರೆ ಸುಂದರವಾಗಿ ಕಾಣುತ್ತೆ.
ರೇನ್ಡ್ರಾಪ್ ಬಳೆ
ಚಿಕ್ಕ ಚಿಕ್ಕ ಹೊಳೆಯುವ ಹರಳುಗಳಿಂದ ಅಲಂಕರಿಸಲಾದ ರೇನ್ಡ್ರಾಪ್ ಬಳೆಗಳು ವಿಶೇಷ ಆಕರ್ಷಣೆ ಹೊಂದಿವೆ. ಮಳೆಯ ಹನಿಗಳಂತೆ ಇವುಗಳ ಮೇಲೆ ಮೂಡುವ ಹೊಳಪು ಕೈಗಳಿಗೆ ಆಕರ್ಷಕ ನೋಟ ನೀಡುತ್ತದೆ. ಹಬ್ಬದ ಪಾರ್ಟಿ ಅಥವಾ ಮದುವೆ ಸಮಾರಂಭಗಳಲ್ಲಿ ಸಾಂಪ್ರದಾಯಿಕ ಉಡುಗೆಗಳೊಂದಿಗೆ ಇವುಗಳನ್ನು ಧರಿಸಬಹುದು.
ಮ್ಯಾಗಿ ಬಳೆಗಳು
ಸಾಮಾನ್ಯ ಬಳೆಗಳಿಗಿಂತ ವಿಭಿನ್ನವಾದ ವಿನ್ಯಾಸ ಬೇಕೆನ್ನುವವರು ಮ್ಯಾಗಿ ಬಳೆಗಳನ್ನು ಟ್ರೈ ಮಾಡಬಹುದು. ಇವುಗಳ ಜಿಗ್ಜ್ಯಾಗ್ ವಿನ್ಯಾಸವೇ ಪ್ರಮುಖ ಆಕರ್ಷಣೆ. ಮಾರುಕಟ್ಟೆಯಲ್ಲಿ ಹಲವು ಬಣ್ಣಗಳು ಹಾಗೂ ಬಹುವರ್ಣದ ಕಾಂಬಿನೇಷನ್ಗಳಲ್ಲಿ ಈ ಬಳೆಗಳು ಲಭ್ಯವಿವೆ.
ಸರಳ ಗಾಜಿನ ಬಳೆಗಳು
ಫ್ಯಾಷನ್ ಎಷ್ಟೇ ಬದಲಾದರೂ ಸರಳವಾದ ಗಾಜಿನ ಬಳೆಗಳ ಕ್ರೇಜ್ ಮಾತ್ರ ಕಡಿಮೆಯಾಗುವುದಿಲ್ಲ. ಸೀರೆ, ಸಲ್ವಾರ್ ಸೂಟ್ ಹಾಗೂ ಲೆಹೆಂಗಾಗಳೊಂದಿಗೆ ಇವು ಸುಲಭವಾಗಿ ಹೊಂದಿಕೆಯಾಗುತ್ತವೆ. ಒಂದೇ ಬಣ್ಣದ ಬಳೆಗಳನ್ನು ಧರಿಸಬಹುದು ಅಥವಾ ವಿವಿಧ ಬಣ್ಣಗಳನ್ನು ಮಿಕ್ಸ್ ಮಾಡಿ ಸುಂದರವಾದ ಸೆಟ್ ಸಿದ್ಧಪಡಿಸಬಹುದು.
ಕಸ್ಟರ್ ಗ್ಲಾಸ್ ಬಳೆಗಳು
ಹೊಳೆಯುವ ಬಳೆಗಳನ್ನು ಇಷ್ಟಪಡುವವರು ಕಸ್ಟರ್ ಗ್ಲಾಸ್ ಬಳೆಗಳನ್ನು ಆಯ್ಕೆ ಮಾಡಬಹುದು. ಇವುಗಳ ಹೊಳೆಯುವ ಫಿನಿಶ್ ಕೈಗಳಿಗೆ ಆಕರ್ಷಕ ನೋಟ ನೀಡುತ್ತದೆ. ನಿಮ್ಮ ಆಯ್ಕೆಗೆ ತಕ್ಕಂತೆ ತಿಳಿ ಬಣ್ಣದ ಅಥವಾ ಭಾರೀ ವಿನ್ಯಾಸದ ಸಾಂಪ್ರದಾಯಿಕ ಉಡುಗೆಗಳೊಂದಿಗೆ ಇವುಗಳನ್ನು ಧರಿಸಬಹುದು.






