ನಾವು ತೊಡುವ ಬಟ್ಟೆಯೊಂದಿಗೆ, ಅದರ ಬಣ್ಣವೂ ನಮ್ಮ ಆತ್ಮ ವಿಶ್ವಾಸದ ಮೇಲೆ ಪ್ರಭಾವ ಬೀರುತ್ತದೆ.  ಕೆಲವೊಂದು ನಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸಿದರೆ ಮತ್ತೆ ಕೆಲವು ಅದನ್ನು ಕುಗ್ಗಿಸಲೂಬಹುದೂ. ಕೆಲವು ಬಣ್ಣದ ಬಟ್ಟೆ ತೊಟ್ಟರೆ ಲಕ್ ಕೈ ಹಿಡಿದರೆ, ಮತ್ತೆ ಕೆಲವು ಬಣ್ಣಗಳು ನಮಗೆ ಕೆಟ್ಟದ್ದನ್ನೇ ಮಾಡುತ್ತವೆ. ಇದರಲ್ಲಿ ಎಷ್ಟು ವೈಜ್ಞಾನಿಕವಾಗಿ ಪ್ರೂವ್ ಆಗಿದೆಯೋ , ಇಲ್ಲವೋ ಬೇರೆ ವಿಷಯ. ಆದರೆ, ಹಸಿರಿನಂಥ ಕೆಲವು ಬಣ್ಣಗಳು ಪ್ರಕೃತಿಯ ಸಂಕೇತವಾಗಿದ್ದು, ಮನಸ್ಸಿಗೆ ಮುದ ನೀಡುವುದರಲ್ಲಿ ಅನುಮಾನವೇ ಇಲ್ಲ. 

ಬಣ್ಣವೇ ಇಲ್ಲದ ಜಗತ್ತನ್ನು ಊಹಿಸಿಕೊಳ್ಳುವುದೂ ಕಷ್ಟ. ಅಂಥ ಕಲರ್‌ಫುಲ್ ಜಗತ್ತಿನೊಂದಿಗೆ ಮನಸ್ಸೂ ಸಹಜವಾಗಿಯೇ ಮಿಳಿತವಾಗಿರುತ್ತವೆ. ಬಟ್ಟೆ. ಗೋಡೆ ಹಾಗೂ ನಾವು ತಿನ್ನುವ ಆಹಾರದ ಬಣ್ಣವೂ ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುವುದು ಸುಳ್ಳಲ್ಲ... ಅಂಥ ಬಣ್ಣದ ಬಗ್ಗೆ ಇಲ್ಲಿವೆ ಕೆಲವು ಇಂಟರೆಸ್ಟಿಂಗ್ ಮಾಹಿತಿಗಳು....

- ರುಚಿ ಮೇಲೆ ಪ್ರಭಾವ ಬೀರುತ್ತೆ ಬಣ್ಣ
ನಾವು ಸೇವಿಸುವ ಆಹಾರದ ಬಣ್ಣ ರುಚಿ ಮೇಲೆ ಪ್ರಭಾವ ಬೀರುತ್ತದೆ. ಉದಾಹರಣೆಗೆ ಕಪ್ ಚಾಕಲೇಟ್ ಡ್ರಿಂಕ್ ರುಚಿಯನ್ನೇ ಕೇಸರಿ ಬಣ್ಣ ಬದಲಾಯಿಸಬಲ್ಲದು.

ಬಣ್ಣದ ಭಯ: 
ಬಣ್ಣದ ಪ್ರಭಾವದಿಂದ ನಮ್ಮಲ್ಲಿ ಉಂಟಾಗುವ ಭಯವನ್ನು ಕ್ರೋಮೋಫೋಭಿಯಾ ಎನ್ನುತ್ತಾರೆ. ಈ ಫೋಬಿಯಾ ಹೆಚ್ಚಾದರೆ ನಮ್ಮ ದೈನಂದಿನ ಬದುಕಿನ ಮೇಲೂ ಪರಿಣಾಮ ಬೀರುತ್ತದೆ. 

ಸೊಳ್ಳೆಗೆ ನೀಲಿ ಬಣ್ಣವಿಷ್ಟ
ಪರ್ವತಾರೋಹಣ ಅಥವಾ ಪ್ರವಾಸಕ್ಕೆ ಹೋಗುವಾಗ ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು ತಿಳಿ ಬಣ್ಣದ ಬಟ್ಟೆ ಬೆಸ್ಟ್. ಸೊಳ್ಳೆಗಳು ಗಾಢ ಬಣ್ಣ, ಅದರಲ್ಲೂ ಕಡು ನೀಲಿ ಬಣ್ಣಕ್ಕೆ ಬಹುಬೇಗ ಆಕರ್ಷಿತವಾಗುತ್ತವೆ. ಹೀಗಾಗಿ ತಿಳಿ ಬಣ್ಣದ ಉದ್ದ ಸ್ಲೀವ್ಸ್ ಇರುವ ಬಟ್ಟೆ ಧರಿಸಿ ಸೊಳ್ಳೆಗಳನ್ನು ದೂರವಿಡಿ.

ಹಳದಿ ಕಿರಿಕಿರಿಯ ಸಂಕೇತ
ಹಳದಿ ಬಣ್ಣ ವಾಕರಿಕೆಯುಂಟು ಮಾಡುತ್ತದೆ. ಹೀಗಾಗಿ ವಿಮಾನಗಳಲ್ಲಿ ಹಳದಿ ಬಣ್ಣ ಬಳಸುವುದಿಲ್ಲ. ಅದರಲ್ಲಿ ಅತ್ಯಂತ ಹೊಳಪುಳ್ಳ ಹಳದಿ ಬಣ್ಣವಂತೂ ಕಣ್ಣಿಗೆ ಅತಿ ಹೆಚ್ಚು ಕಿರಿ ಕಿರಿಯುಂಟು ಮಾಡುವ ಬಣ್ಣ. 

ಶಾಂತವಾಗಿಸೋ ಗುಲಾಬಿ
ಹಳದಿ ಬಣ್ಣದ ಕಥೆ ಒಂದಾದರೆ, ಗುಲಾಬಿ ಮನಸ್ಸನ್ನು ಶಾಂತಗೊಳಿಸುವ ಕ್ಷಮತೆ ಹೊಂದಿದೆ. ಗುಲಾಬಿಯ ಈ ಕ್ಷಮತೆ ಕೋಪ ಹಾಗೂ ಆತಂಕವನ್ನು ಕಡಿಮೆಗೊಳಿಸಿ ಶಾಂತರನ್ನಾಗಿಸುತ್ತದೆ. ಇದೇ ಕಾರಣದಿಂದ ಜೈಲು, ಮಾನಸಿಕ ರೋಗಿಗಳ ಆಸ್ಪತ್ರೆ ಗೋಡೆಗಳಿಗೆ ಗುಲಾಬಿ ಬಣ್ಣ ಬಳಿಯುತ್ತಾರೆ. ಇದು ರೋಗಿಗಳು ಹಾಗೂ ಕೈದಿಗಳ ಮನಸ್ಸಿನ ನಿಯಂತ್ರಣಕ್ಕೆ ಅನುವು ಮಾಡಿಕೊಳ್ಳುತ್ತದೆ. 

ಬಿಳಿ ಹೆಚ್ಚಿಸುತ್ತೆ ವಿಶ್ವಾಸ
ಸಹಜವಾಗಿ ಶುಭ್ರತೆಯ ಸಂಕೇತವಾಗಿರುವ ಬಿಳಿ, ಮನಸ್ಸಿನ ಶಾಂತತೆ ಮೇಲೂ ಪ್ರಭಾವ ಬೀರುತ್ತದೆ. ಬಿಳಿ ಹಟ್ಟೆ ಧರಿಸಿದಾಗ ವಿಶ್ವಾಸ ಹೆಚ್ಚುವುದರೊಂದಿಗೆ, ಮನಸನ್ನೂ ಶಾಂತವಾಗಿರುತ್ತದೆ. ಮನೆಗೂ ಬಿಳಿ ಬಣ್ಣ ಬಳಿದರೆ ಬೆಳಕು ಹೆಚ್ಚಿ, ಖಿನ್ನತೆಯನ್ನು ಹೋಗಿಸುತ್ತದೆ.

ನಾಲಿಗೆ ಕುಲ ಹೇಳಿದ್ರೆ, ಅದರ ಬಣ್ಣ ಆರೋಗ್ಯ ಹೇಳುತ್ತೆ

ಬೂದು ಡಲ್‌ನ ಸಂಕೇತ
ಖಿನ್ನತೆ ಅಥವಾ ಡಲ್‌ನೆಸ್ಸನ್ನು ಸಂಕೇತಿಸುತ್ತದೆ ಬೂದು ಬಣ್ಣ. ಇದು ಕಪ್ಪಿನ ಮತ್ತೊಂದು ರೂಪವಾಗಿದ್ದು, ಪಾಸಿಟಿವ್ ಎನರ್ಜಿಯನ್ನು ಬಿತ್ತುವಲ್ಲಿ ವಿಫಲವಾಗುತ್ತದೆ. 

ಆದರೆ, ಕೆಲವರಿಗೆ ಕೆಲವು ಬಣ್ಣಗಳ ಅರ್ಥ, ಸಂಕೇತ ಏನೇ ಇದ್ದರೂ ಖುಷಿ ಎನಿಸುತ್ತದೆ. ಅದು ಅವರವರ ಭಾವಕ್ಕೆ, ಭುಕುತಿಗೆ ಸಂಬಂಧಿಸಿದ ವಿಷ್ಯ.

ಬಣ್ಣ ಬಣ್ಣಗಳ ನಂಟು ನೂರೆಂಟು, ಅನುಬಂಧ ಅವಾರ್ಡ್ಸ್ ಯಾರು ಯಾರಿಗೆ?