No Wash Club: ದಿನವಲ್ಲ ಒಂದು ವರ್ಷ ಬಟ್ಟೆ ಒಗೆಯದೇ ಧರಿಸ್ಬೇಕಂತೆ!
ಜನರು ಚಿತ್ರವಿಚಿತ್ರ ಅಭಿಯಾನ ನಡೆಸ್ತಾರೆ. ಈಗ ನೋ ವಾಶ್ ಅಭಿಯಾನ ಶುರುವಾಗಿದೆ. ಈ ನೋ ವಾಶ್ ಥೀಮ್ ಭಿನ್ನವಾಗಿದೆ. ಧರಿಸಿದ ಉಡುಪನ್ನೇ ಮತ್ತೆ ಮತ್ತೆ ಧರಿಸಬೇಕಾದ ಸಂದರ್ಭದಲ್ಲಿ ಜನ ಏನ್ ಮಾಡ್ತಿದ್ದಾರೆ ಗೊತ್ತಾ?
ನಿತ್ಯ ಸ್ನಾನ ಮಾಡಿ, ಒಗೆದ ಬಟ್ಟೆ ಧರಿಸಿದ್ರೆ ಫ್ರೆಶ್ ಅನ್ನಿಸುತ್ತೆ. ಅದೇ ಹಳೆ ಬಟ್ಟೆ ಧರಿಸಿದಾಗ ಮೈನಿಂದ ಗಬ್ಬು ವಾಸನೆ ಬಂದಂತೆ ಫೀಲ್ ಆಗುತ್ತೆ. ಅದ್ರ ಜೊತೆ ಮನಸ್ಸಿನ ಉತ್ಸಾಹಕ್ಕೂ ಈ ಕೊಳಕು ಬಟ್ಟೆ ಅಡ್ಡಿ ಮಾಡುತ್ತೆ. ಪ್ರತಿ ದಿನ ಒಗೆದ ಬಟ್ಟೆ ಧರಿಸುವ ಅಭ್ಯಾಸ ಇರೋರಿಗೆ, ಕೊಳಕು ಬಟ್ಟೆ ಧರಿಸುವಂತೆ ಸಲಹೆ ನೀಡಿದ್ರೆ ಅವರು ಮುಖ ಹಿಂಡುತ್ತಾರೆ. ಬೇರೆ ಯಾರೋ ಬಳಸಿದ ಬಟ್ಟೆ ಧರಿಸಿದ್ದಾರೆ ಎಂಬುದು ಗೊತ್ತಾದ್ರೆ ವಾಕರಿಸುತ್ತಾರೆ. ಆದ್ರೆ ಪಾಶ್ಚಿಮಾತ್ಯ ದೇಶಗಳಲ್ಲಿ ಒಗೆಯದ ಬಟ್ಟೆ ಧರಿಸುವ ಅಭಿಯಾನ ಶುರುವಾಗಿದೆ.
ಯಸ್, ಡೆಮಿನ್ (Demin) ಕಂಪನಿಯೊಂದು ಈ ಅಭಿಯಾನ ಶುರು ಮಾಡಿದೆ. ಅದಕ್ಕೆ ನೋ ವಾಶ್ (NO Wash) ಎಂದು ಹೆಸರಿಡಲಾಗಿದೆ. ಒಂದು ವರ್ಷದವರೆಗೆ ಬಟ್ಟೆ (Clothes) ಹಾಗೂ ಒಳ ಉಡುಪನ್ನು ಒಗೆಯದೇ ಬಳಸುವುದು ಇದ್ರ ಉದ್ದೇಶ. ಅನೇಕರು ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಅವರೆಲ್ಲ ಬಟ್ಟೆ ಒಗೆಯದೆ ಧರಿಸುವುದು ಮಾತ್ರವಲ್ಲದೆ ಮತ್ತೊಂದಿಷ್ಟು ಜನರನ್ನು ಈ ಅಭಿಯಾನಕ್ಕೆ ಸೇರಿಸುವ ಕೆಲಸ ಮಾಡ್ತಿದ್ದಾರೆ. ಯಾವ ವಸ್ತುವನ್ನು ಸ್ವಚ್ಛಗೊಳಿಸುವ ಅವಶ್ಯಕತೆ ಇರೋದಿಲ್ಲವೋ ಅಲ್ಲಿಯವರೆಗೆ ಅದನ್ನು ಸ್ವಚ್ಛಗೊಳಿಸಬಾರದು. ಬಟ್ಟೆಯನ್ನು ಪ್ರತಿ ದಿನ ಒಗೆದ್ರೆ ಪರಿಸರಕ್ಕೆ ಹಾನಿಯಾಗುತ್ತದೆ ಎಂದು ಈ ಅಭಿಯಾನದಲ್ಲಿ ಪಾಲ್ಗೊಂಡ ಅನೇಕ ಫ್ಯಾಷನ್ ವಿನ್ಯಾಸಕರು ಹೇಳ್ತಾರೆ. ಬಟ್ಟೆಯನ್ನು ನೀರಿನಲ್ಲಿ ಮಾತ್ರ ಸ್ವಚ್ಛಗೊಳಿಸಬೇಕಾಗಿಲ್ಲ. ಈ ಅಭಿಯಾನದಲ್ಲಿ ಪಾಲ್ಗೊಂಡವರು ಬೇರೆ ಬೇರೆ ವಿಧದಲ್ಲಿ ಬಟ್ಟೆಯನ್ನು ಸ್ವಚ್ಛಗೊಳಿಸ್ತಾರೆ.
ಬಿಸಿಲಿದ್ದರೆ ಟೈಟ್ ಜೀನ್ಸ್ ಧರಿಸೋ ಬಗ್ಗೆ ಯೋಚನೇನೂ ಮಾಡ್ಬೇಡಿ.. ಯಾಕ್ ಗೊತ್ತಾ?
ಒಗೆಯದ ಬಟ್ಟೆ ತಾಜಾ ಇರುತ್ತೆ: ನೋ ವಾಶ್ ಅಭಿಯಾನದಲ್ಲಿ ಪಾಲ್ಗೊಂಡವರು ಬಟ್ಟೆಯನ್ನು ನೀರು ಹಾಗೂ ಸೋಪ್ ಬಳಸದೆ ಕ್ಲೀನ್ ಮಾಡ್ತಾರೆ. ಅವರು ಬಟ್ಟೆಯನ್ನು ಬಿಸಿಲಿಗೆ ಒಣ ಹಾಕ್ತಾರೆ. ಕಲೆಯಾದ ಜಾಗಕ್ಕೆ ವಿನೆಗರ್ ಅಥವಾ ಆಲ್ಕೋಹಾಲ್ ಬಳಕೆ ಮಾಡ್ತಾರೆ. ಪ್ರತಿ ದಿನ ಬಟ್ಟೆ ಒಗೆಯುವುದಕ್ಕಿಂತ ಈ ವಿಧಾನ ಹೆಚ್ಚು ಉತ್ತಮವಾಗಿರುತ್ತದೆ. ಬಟ್ಟೆ ಕೂಡ ಫ್ರೆಶ್ ಆಗಿರುತ್ತದೆ.
ಜೀನ್ಸ್ ಫ್ರಿಜ್ ನಲ್ಲಿಟ್ಟರೆ ಸಾಕು: ಜೀನ್ಸ್ ಮೇಲೆ ಗಾಢವಾದ ಯಾವುದೇ ಕಲೆಯಾಗಿಲ್ಲವೆಂದ್ರೆ ನೀವದನ್ನು ತೊಳೆಯುವ ಅಗತ್ಯವಿಲ್ಲ. ಒಂದು ರಾತ್ರಿ ಪೂರ್ತಿ ಜೀನ್ಸನ್ನು ಫ್ರಿಜ್ ನಲ್ಲಿ ಇಟ್ಟರೆ ಸಾಕು. ಜೀನ್ಸ್ ಸ್ವಚ್ಛವಾಗುತ್ತದೆ. ಜೀನ್ಸನ್ನು ಆಗಾಗ ನೀರು ಹಾಕಿ ಒಗೆದ್ರೆ ಅದು ಬೇಗ ಹಾಳಾಗುತ್ತದೆ.
Beauty Tips: ಕಪ್ಪಾದ ಬೆನ್ನಿಗೆ ಮನೆಯಲ್ಲೇ ಔಷಧ
ಎಣ್ಣೆ ಕಲೆ ತೆಗೆಯೋದು ಸುಲಭ: ಒಂದ್ವೇಳೆ ನಿಮ್ಮ ಬಟ್ಟೆಗೆ ಎಣ್ಣೆ ಕಲೆಯಾಗಿದ್ದರೆ ಚಿಂತಿಸುವ ಅಗತ್ಯವಿಲ್ಲ. ಅದನ್ನು ಸ್ವಚ್ಛಗೊಳಿಸೋದು ಸುಲಭ. ಟಿಶ್ಯೂ ಹಾಗೂ ಬೇಬಿ ಪೌಡರ್ ಬಳಸಿ ನೀವು ಅದನ್ನು ಕ್ಲೀನ್ ಮಾಡಬಹುದು. ಬಟ್ಟೆ ಮೇಲೆ ಎಣ್ಣೆ ಬಿದ್ದ ತಕ್ಷಣ ಅದ್ರ ಮೇಲೆ ಟಿಶ್ಯೂ ಹಾಕ್ಬೇಕು. ಆಗ ಟಿಶ್ಯೂ ಎಲ್ಲ ಎಣ್ಣೆಯನ್ನು ಹೀರಿಕೊಳ್ಳುತ್ತದೆ. ನಂತ್ರ ಅದ್ರ ಮೇಲೆ ಬೇಬಿ ಪೌಡರ್ ಹಾಕಿ ಸ್ವಲ್ಪ ಸಮಯ ಬಿಡಬೇಕು. ನಂತ್ರ ಕ್ಲೀನ್ ಮಾಡಿದ್ರೆ ಸಾಕು. ಬಟ್ಟೆ ಮೇಲೆ ಯಾವುದೇ ಎಣ್ಣೆ ಕಲೆ ಕಾಣಿಸೋದಿಲ್ಲ.
ಬಟ್ಟೆ ಕಲೆ ತೆಗೆಯೋಕೆ ಆಲ್ಕೋಹಾಲ್ ಬಳಸಿ: ವರ್ಷಗಟ್ಟಲೆ ಬಳಸಿದ ಬಟ್ಟೆಯನ್ನೇ ಬಳಸಬೇಕು ಎಂದಾಗ ಅನೇಕ ಸವಾಲಿರುತ್ತದೆ. ಕೆಲವೊಮ್ಮೆ ಬಟ್ಟೆಗೆ ಗಾಢವಾದ ಕಲೆ ಕಾಣಿಸಿಕೊಳ್ಳುತ್ತದೆ. ಅದನ್ನು ಹಾಗೇ ಧರಿಸಲು ಸಾಧ್ಯವಿಲ್ಲ. ಬಟ್ಟೆಯನ್ನು ತೊಳೆಯುಂತಿಲ್ಲ ಎಂದಾದಾಗ ಅದಕ್ಕೆ ಆಲ್ಕೋಹಾಲ್ ಹಾಕಬೇಕು. ರಬ್ಬಿಂಗ್ ಆಲ್ಕೋಹಾಲ್ ಬಳಕೆ ಮಾಡ್ಬೇಕಾಗುತ್ತದೆ. ಬಟ್ಟೆ ಕಲೆಯಾದ ಜಾಗದ ಕೆಳಗೆ ಒಂದು ಪೇಪರ್ ಇಡಿ. ನಂತ್ರ ಹತ್ತಿಗೆ ಆಲ್ಕೋಹಾಲ್ ಅದ್ದಿ, ಕಲೆಯಾದ ಜಾಗದ ಮೇಲೆ ಇಡಿ. ಸ್ವಲ್ಪ ಸಮಯ ಒಣಗಲು ಬಿಡಿ. ನಿಮ್ಮ ಲಿಪ್ಸ್ಟಿಕ್, ಶಾಹಿ ಕಲೆ ಮಾಯವಾಗುತ್ತದೆ.