Asianet Suvarna News Asianet Suvarna News

ಮಗನ ಪ್ರೀವೆಡ್ಡಿಂಗ್ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಧರಿಸಿದ್ದ ವಾಚ್ ಬೆಲೆ 3 ಕೋಟಿ! ಅಂಥದ್ದೇನಿದೆ ಈ ವಾಚ್ ನಲ್ಲಿ?

ಇತ್ತೀಚೆಗಷ್ಟೇ ಇಟಲಿಯಲ್ಲಿ ನಡೆದ ಪುತ್ರ ಅನಂತ್ ಅಂಬಾನಿ ಪ್ರೀವೆಡ್ಡಿಂಗ್ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಧರಿಸಿದ್ದ ವಾಚ್ ಎಲ್ಲರ ಗಮನ ಸೆಳೆದಿತ್ತು. ಈ ವಾಚ್ ಸಾಮಾನ್ಯದ್ದಲ್ಲ, ಇದರ ಬೆಲೆ ಬರೋಬ್ಬರಿ 3 ಕೋಟಿ ರೂ. 
 

Nita Ambanis Rs 3 Crore Sapphire Studded Watch For PreWedding Festivities Is Simply Timeless anu
Author
First Published Jun 4, 2024, 5:26 PM IST

ಈಗ ಎಲ್ಲಿ ನೋಡಿದ್ರೂ ಅಂಬಾನಿ ಕುಟುಂಬದ್ದೇ ಸುದ್ದಿ. ಇದಕ್ಕೆ ಕಾರಣ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ಎರಡನೇ ಪ್ರೀವೆಡ್ಡಿಂಗ್ ಕಾರ್ಯಕ್ರಮ ಇತ್ತೀಚೆಗಷ್ಟೇ ಇಟಲಿಯ ಕ್ರೂಸ್ ನಲ್ಲಿ ಅದ್ದೂರಿಯಾಗಿ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಅಂಬಾನಿ ಕುಟುಂಬದ ಪ್ರತಿಯೊಬ್ಬ ಸದಸ್ಯರು ತಮ್ಮ ಉಡುಗೆ, ಸ್ಟೈಲಿಷ್ ಲುಕ್ ಮೂಲಕ ಗಮನ ಸೆಳೆದಿದ್ದಾರೆ. ಅದರಲ್ಲೂ ನೀತಾ ಅಂಬಾನಿಯಂತೂ 60ರ ಹರೆಯದಲ್ಲೂ ಸ್ಟೈಲಿಷ್ ಲುಕ್ ಮೂಲಕ ಫ್ಯಾಷನ್ ಪ್ರಿಯರ ಮೆಚ್ಚುಗೆ ಗಳಿಸಿದ್ದಾರೆ. ಪ್ರೀವೆಡ್ಡಿಂಗ್ ಕಾರ್ಯಕ್ರಮದ ಕೊನೆಯ ದಿನ ನೀತಾ ಅಂಬಾನಿ ಧರಿಸಿದ್ದ ವಾಚ್ ಈಗ ಸಾಕಷ್ಟು ಸದ್ದು ಮಾಡುತ್ತಿದೆ. ಜಾಕೋಬ್ & ಕೋ ಬ್ರ್ಯಾಂಡ್ ನ ಈ ವಾಚ್ ಬೆಲೆ ಬರೋಬ್ಬರಿ 3 ಕೋಟಿ ರೂ. ಈ ದುಬಾರಿ ಬೆಲೆಯ ವಾಚ್ 18 ಕ್ಯಾರಟ್ ರೋಸ್ ಗೋಲ್ಡ್ ಕೇಸ್ ಹೊಂದಿದೆ. ಇದರಲ್ಲಿ ಬೆಝೆಲ್ ಹಾಗೂ ಇನರ್ ರಿಂಗ್ ಸೆಟ್ ಜೊತೆಗೆ ಕಾಮನಬಿಲ್ಲಿನ ನೀಲಿಮಣಿ ಇದೆ. 

ಇನ್ನು ನೀತಾ ಅಂಬಾನಿ ಈ ಕಾರ್ಯಕ್ರಮಕ್ಕೆ ಶ್ವೇತ ವರ್ಣದ ಮೇಲೆ ಗುಲಾಬಿ ವರ್ಣದ ಹೂಗಳಿರುವ ಮ್ಯಾಕ್ಸಿ ಡ್ರೆಸ್ ಧರಿಸಿದ್ದರು. ಈ ಡ್ರೆಸ್ ಅನ್ನು ಆಸ್ಕರ್ ಡಿ ಲಾ ರೆಂಟ ವಿನ್ಯಾಸಗೊಳಿಸಿದ್ದಾರೆ. ಇನ್ನು ಈ ಡ್ರೆಸ್ ಬೆಲೆ ಕೇಳಿದ್ರೆ ನೀವು ಒಂದು ಕ್ಷಣ ಅಚ್ಚರಿಯಾಗೋದು ಪಕ್ಕಾ. ಏಕೆಂದ್ರೆ ಈ ಡ್ರೆಸ್ ಬೆಲೆ 6,02,819 ರೂ. ಆದ್ರೂ ನೀತಾ ಅಂಬಾನಿ ಧರಿಸಿರುವ ವಾಚ್ ಮುಂದೆ ಈ ಡ್ರೆಸ್ ಏನೇನೂ ಅಲ್ಲ. ಏಕೆಂದ್ರೆ ಆ ವಾಚ್ ಬೆಲೆ 3 ಕೋಟಿ ರೂ.

ವಿಶ್ವದ ಅತ್ಯಂತ ದುಬಾರಿ ನೀರು ಕುಡಿಯುತ್ತಾರಂತೆ ನೀತಾ ಅಂಬಾನಿ; ಈ ಗೋಲ್ಡ್ ವಾಟರ್ ಬೆಲೆ ಅರ್ಧಕೋಟಿ!

ನೀತಾ ಅಂಬಾನಿ ದುಬಾರಿ ಬೆಲೆಯ ಡ್ರೆಸ್ ಹಾಗೂ ವಾಚ್ ಧರಿಸಿರುವ ಜೊತೆಗೆ ಸಿಂಪಲ್ ಮೇಕಪ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದರು. ಕೂದಲನ್ನು ಫ್ರೀಯಾಗಿ ಬಿಡುವ ಮೂಲಕ ಡ್ರೆಸ್ ಗೆ ಸರಿಹೊಂದುವ ಹೇರ್ ಸ್ಟೈಲ್ ಮಾಡಿದ್ದರು. 

ಇತ್ತೀಚೆಗಷ್ಟೇ ನೀತಾ ಅಂಬಾನಿ ವಿಶ್ವದ ಅತ್ಯಂತ ದುಬಾರಿ ನೀರು ಕುಡಿಯುತ್ತಾರೆ ಎಂದು ಸುದ್ದಿಯಾಗಿತ್ತು. ಈ ಸಂಬಂಧ ಒಂದು ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆದರೆ, ಅದು ಮಾರ್ಫ್ ಮಾಡಿರುವ ಫೋಟೋ ಎಂದು ಹೇಳಲಾಗಿತ್ತು. ನೀತಾ ಅಂಬಾನಿ ಕುಡಿಯುವ ನೀರನ್ನು 'ಅಕ್ವಾ ಡಿ ಕ್ರಿಸ್ಟಾಲೊ ಟ್ರಿಬ್ಯೂಟೊ ಎ ಮೊಡಿಗ್ಲಿಯಾನಿ' ಎಂದು ಕರೆಯಲಾಗುತ್ತದೆ. ಈ ನೀರನ್ನು ಗ್ರಾಹಕರು ಬಯಸಿದ ವಿನ್ಯಾಸದಲ್ಲಿ ಖ್ಯಾತ ಡಿಸೈನರ್ ಫೆರ್ನಾನ್ಡೋ ಅಲ್ಟಮಿರಾನೋ ವಿನ್ಯಾಸಗೊಳಿಸಿದ ಬಾಟಲ್ ನಲ್ಲಿ ನೀಡಲಾಗುತ್ತದೆ. ಈ ಬಾಟಲ್ 24 ಕ್ಯಾರಟ್ ಚಿನ್ನದ ಕವರ್ ಹೊಂದಿದ್ದು, ಫ್ರಾನ್ಸ್ ಮತ್ತು ಫಿಜಿಯ ನೈಸರ್ಗಿಕ ಬುಗ್ಗೆ ನೀರು ಹಾಗೂ ಐಸ್ ಲ್ಯಾಂಡ್ ನ ಹಿಮನದಿಯ ನೀರಿನ ಮಿಶ್ರಣವಾಗಿದೆ.  ಈ ಪ್ರತಿ ಬಾಟಲ್ ಬೆಲೆ ಬರೋಬ್ಬರಿ 49 ಲಕ್ಷ ರೂ.

ಇನ್ನು ನೀತಾ ಅಂಬಾನಿ ಬಳಿ  ದುಬಾರಿ ಬೆಲೆಯ ಟೀ ಸೆಟ್ ಇದೆ. ಇದರಲ್ಲೇ ಅವರು ಪ್ರತಿದಿನ ಟೀ ಕುಡಿಯುತ್ತಾರೆ. ಇದನ್ನು ಜಪಾನ್ ಮೂಲದ ಕಂಪನಿ ಸಿದ್ಧಪಡಿಸಿದ್ದು, ಅದರ ಬೆಲೆ ಸುಮಾರು 1.5 ಕೋಟಿ ರೂ.!

ಹೇರ್ ಸ್ಟೈಲ್ ನಿರ್ವಹಣೆಗೂ ನೌಕರನ ನೇಮಿಸಿಕೊಂಡಿರುವ ನೀತಾ ಅಂಬಾನಿ;ದುಡ್ಡಿದ್ರೆ ಏನೂ ಮಾಡ್ಬಹುದೆಂದ ನೆಟ್ಟಿಗರು

ನೀತಾ ಅಂಬಾನಿ ಅವರು ಧರಿಸುವ ಡ್ರೆಸ್, ಬಳಸುವ ವಸ್ತುಗಳು ದುಬಾರಿ ಬೆಲೆಯದ್ದೇ ಆಗಿರುತ್ತವೆ. ನೀತಾ ಅಂಬಾನಿಗೆ ದುಬಾರಿ ಬೆಲೆಯ ವಸ್ತುಗಳನ್ನು ಬಳಸೋದು ಇಷ್ಟದ ಸಂಗತಿ. ಹೀಗಾಗಿ ಅವರು ಬಳಸುವ ಪ್ರತಿ ವಸ್ತುವು ವಿಶಿಷ್ಟವಾಗಿರುವ ಜೊತೆಗೆ ದುಬಾರಿ ಬೆಲೆಯನ್ನು ಕೂಡ ಹೊಂದಿರುತ್ತದೆ. ಅಲ್ಲದೆ, ಅವರು ಬಳಸುವ ಇಂಥ ದುಬಾರಿ ಬೆಲೆಯ ವಸ್ತುಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. 

Latest Videos
Follow Us:
Download App:
  • android
  • ios