ಹೇರ್ ಫ್ಯಾಶನ್ ಜಗತ್ತು ಭಾರಿ ಬೇಡಿಕೆಯ ಕ್ಷೇತ್ರ. ಸೆಲೆಬ್ರೆಟಿಗಳು ಲಕ್ಷ ಲಕ್ಷ ಹಣ ಸುರಿದು ಸ್ಟೈಲಿಶ್, ಭಿನ್ನವಾದ ಹೇರ್ ಕಟ್ ಮಾಡಿಸುತ್ತಾರೆ. ಇದೀಗ ಮಾರ್ಕೆಟ್‌ಗೆ ಹೊಸ ಚಾಯ್ ಕಟ್ ಫ್ಯಾಶನ್ ಬಂದಿದೆ. ಈ ವಿಡಿಯೋ ವೈರಲ್ ಆಗಿದೆ. 

ಹೇರ್ ಡಿಸೈನ್, ಹೇರ್ ಕಟ್, ಹೇರ್ ಫ್ಯಾಶನ್ ಬಹುಬೇಡಿಕೆ ಮಾತ್ರವಲ್ಲ, ಬಲು ದುಬಾರಿ ಕೂಡ. ಸೆಲೆಬ್ರೆಟಿಗಳು ತಮ್ಮ ಹೇರ್ ಫ್ಯಾಶನ್‌ಗೆ ಡಿಸೈನರ್ ಇಟ್ಟುಕೊಂಡಿರುತ್ತಾರೆ. ಹಲವರು ಖ್ಯಾತ ಡಿಸೈನರ್ ಬಳಿ ಹೇರ್ ಕಟ್ ಮಾಡಿಸುತ್ತಾರೆ. ಇದೀಗ ಮಾರ್ಕೆಟ್‌ಗೆ ಹೊಸ ಹೇರ್ ಫ್ಯಾಶನ್ ಡಿಸೈನ್ ಆಗಮಿಸಿದೆ. ಇದು ಚಾಯ್ ಕಟ್. ಹೌದು, ಚಾಯ್ ಪಾತ್ರೆ, ಅದರೊಳಗಿಂದ ಚಹಾವನ್ನು ಕಪ್‌ಗೆ ಸುರಿದು ಕುಡಿಯಬಹುದು. ಈ ಹೊಸ ಫ್ಯಾಶನ್ ವಿಡಿಯೋ ಭಾರಿ ವೈರಲ್ ಆಗಿದೆ.

ಇರಾನ್ ಮೂಲಕ ಹೇರ್ ಡಿಸೈನರ್ ಸಯಿದೇಹ್ ಅರ್ಯೈ ವಿನೂತನ ಚಾಯ್ ಕಟ್ ಹೇರ್ ಡಿಸೈನ್ ಮಾಡಿದ್ದಾರೆ. ಸಯಿದೇಹ್ ಅರ್ಯೈ ಈಗಾಗಲೇ ಹಲವು ಮಾಡೆಲ್‌ಗಳಿಗೆ ಊಹೆಗೂ ನಿಲುಕದ ಹೇರ್ ಡಿಸೈನ್ ಮಾಡಿದ್ದಾರೆ. ಇದೀಗ ಹೊಸ ಚಾಯ್ ಕಟ್ ಡಿಸೈನ್ ಭಾರಿ ವೈರಲ್ ಆಗಿದೆ. 

ಐಪಿಎಲ್ ಮುಗಿದ ಬೆನ್ನಲ್ಲೇ ಧೋನಿ ಹೇರ್‌ಸ್ಟೈಲ್, 2007 ಟಿ20 ವಿಶ್ವಕಪ್ ನೆನಪಿಸಿದ ಥಲಾ!

ಮಾಡೆಲ್ ಕೂದಲನ್ನು ಪಿಂಕ್ ಶೇಡ್ ಕಲರ್ ಮಾಡಲಾಗಿದೆ. ಬಳಿಕ ತಲೆಯ ಮೇಲ್ಬಾಗದಲ್ಲಿ ಕೂದಲನ್ನು ಚಾಯ್ ಪಾತ್ರೆ ರೀತಿ ಡಿಸೈನ್ ಮಾಡಲಾಗಿದೆ. ಕೂದಲಿನ ಒಳಗೆ ಇದಕ್ಕೆ ಬೇಕಾದ ಡಿಸೈನ್ ಇಡಲಾಗಿದೆ. ಬಳಿಕ ಕೂದಲನ್ನು ಸುತ್ತುವರಿದು ಹೇರ್ ಫ್ಯಾಶನ್ ಮಾಡಲಾಗಿದೆ. ವಿಶೇಷ ಅಂದರೆ ಈ ಡಿಸೈನ್ ಒಳಗಡೆ ಒಂದು ಕಪ್ ಆಗುವಷ್ಟು ಸಣ್ಣ ಪಾತ್ರೆ ಇಡಲಾಗಿದೆ. ಅದರಿಂದ ಚಹಾವನ್ನು ಕಪ್‌ಗೆ ಸುರಿಯುವ ಮೂಲಕ ಊಹೆಗೂ ನಿಲುಕದ ರೀತಿಯಲ್ಲಿ ಹೇರ್ ಡಿಸೈನ್ ಮಾಡಿದ್ದಾರೆ.

ಸಯಿದೇಹ್ ಅರ್ಯೈ ಈಗಾಗಲೇ ಹಲವು ಮಾಡೆಲ್‌ಗಳಿಗೆ ಈ ರೀತಿ ವಿಶೇಷ ವಿನೂತನ ಹೇರ್ ಡಿಸೈನ್ ಮಾಡಿದ್ದಾರೆ. ಕೂದಲಿಗೆ ತಕ್ಕಂತೆ ಬಣ್ಣ ಹಾಕಿ ಬಳಿಕ ಥೀಮ್ ಬೇಸ್ ಅಡಿಯಲ್ಲಿ ಈ ರೀತಿ ವಿನ್ಯಾಸ ಮಾಡಲಾಗುತ್ತದೆ. ಪ್ರೀತಿಯ ಸಿಂಬಲ್ ಡಿಸೈನ್ ಸೇರಿದಂತೆ ಹಲವು ಕೇಶವಿನ್ಯಾಸಗಳು ಭಾರಿ ಜನಪ್ರಿಯತೆ ಪಡೆದಿದೆ.

View post on Instagram

ಹೇರ್ ಡಿಸೈನಿಂಗ್ ಭಾರಿ ಬೇಡಿಕೆಯ ಕ್ಷೇತ್ರವಾಗಿದೆ. ಬಾಲಿವುಡ್ ಸೆಲೆಬ್ರೆಟಿಗಳು ಈ ರೀತಿ ಚಿತ್ರಕ್ಕಾಗಿ ಹಾಗೂ ವೈಯುಕ್ತಿ ಜೀವನದಲ್ಲೂ ಬಗೆ ಬಗೆಯ ಹೇರ್ ಸ್ಟೈಲ್ ಮಾಡಿ ಗಮನಸೆಳೆದ ಉದಾಹರಣೆಗಳಿವೆ. ವಿಶೇಷ ಅಂದರೆ ಟೀಂ ಇಂಡಿಯಾ ಕ್ರಿಕೆಟಿಗರು ತಮ್ಮ ಹೇರ್ ಡಿಸೈನ್‌ನಲ್ಲಿ ಮಹತ್ತರ ಬದಲಾವಣೆ ಮಾಡಿ ಗಮನಸೆಳೆದಿದ್ದಾರೆ. ಹೈರ್ ಡಿಸೈನ್ ಪೈಕಿ ವಿರಾಟ್ ಕೊಹ್ಲಿ ಹಾಗೂ ಎಂಎಸ್ ಧೋನಿ ಮುಂಚೂಣಿಯಲ್ಲಿದ್ದಾರೆ. ಅದರಲ್ಲೂ ಎಂಎಸ್ ಧೋನಿ ಹಲವು ರೀತಿಯಲ್ಲಿ ಅಭಿಮಾನಿಗಳನ್ನು ಮೋಡಿ ಮಾಡಿದ್ದಾರೆ.

ಐಪಿಎಲ್ 2024ಗೆ ಹೊಸ ಹೈರ್‌ಸ್ಟೈಲ್, ಆಕರ್ಷಕ ಲುಕ್‌ನೊಂದಿಗೆ ಬೆಂಗಳೂರಿಗೆ ಎಂಟ್ರಿಕೊಟ್ಟ ಹೀರೋ!