Miss World 2021: ಭಾರತ ಸ್ಪರ್ಧಿಗೆ ಕೊರೋನಾ ಪಾಸಿಟಿವ್, ವಿಶ್ವ ಸುಂದರಿ ಸ್ಪರ್ಧೆ ಮುಂದೂಡಿಕೆ
Miss World 2021: ಬಹು ನಿರೀಕ್ಷಿತ ವಿಶ್ವ ಸುಂದರಿ ಸ್ಪರ್ಧೆ ದಿಢೀರ್ ಮುಂದೂಡಲಾಗಿದೆ. ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದ ಮಾನಸ ವಾರಣಾಸಿ ಅವರಿಗೆ ಕೊರೋನಾ ಪಾಸಿಟಿವ್ ಬಂದಿದೆ.
ಮಿಸ್ ಯುನಿವರ್ಸ್ ಪಟ್ಟವನ್ನು ಗೆದ್ದು ಭಾರತ ಸಂಭ್ರಮಿಸುತ್ತಿರುವಾಗಲೇ ವಿಶ್ವಸುಂದರಿ ಸ್ವರ್ಧೆಯ ಹವಾ ಜೋರಾಗಿತ್ತು. ಸೌಂದರ್ಯ ಲೋಕದಲ್ಲಿ ಎಲ್ಲರ ಕುತೂಹಲವನ್ನು ಹೆಚ್ಚಿಸಿದ Miss World 2021 ಸ್ಪರ್ಧೆಯನ್ನು ಈಗ ಸದ್ಯಕ್ಕೆ ಮುಂದೂಡಲಾಗಿದೆ. ಸ್ಫರ್ಧಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರ ಆರೋಗ್ಯ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ವಿಶ್ವಸುಂದರಿ ಸ್ಪರ್ಧೆ ಮುಂದೂಡಲಾಗಿದೆ. ಹೆಚ್ಚಿನ ಕೊರೋನಾ ಪಾಸಿಟಿವ್ ದೃಢಪಟ್ಟ ನಂತರ ಸ್ಪರ್ಧೆ ಮುಂದೂಡಲಾಗಿದೆ. ಪುರ್ಟೋ ರಿಕೊದಲ್ಲಿ ಗುರುವಾರಕ್ಕೆ ನಿಗದಿಯಾಗಿದ್ದ ಸ್ಪರ್ಧೆಯನ್ನು ಮುಂದಿನ 90 ದಿನಗಳಲ್ಲಿ ರಿಶೆಡ್ಯೂಲ್ ಮಾಡಲಾಗಿದೆ.
ವಿಶ್ವ ಸುಂದರಿ 2021 ಕಾರ್ಯಕ್ರಮದ ಮೇಲ್ವಿಚಾರಣೆ ಮಾಡಲು ನೇಮಕಗೊಂಡಿದ್ದ ವೈರಾಲಜಿಸ್ಟ್‌ಗಳು ಮತ್ತು ವೈದ್ಯಕೀಯ ತಜ್ಞರನ್ನು ಭೇಟಿಯಾದ ನಂತರ ಈ ನಿರ್ಧಾರ ಮಾಡಲಾಗಿದೆ. ಪೋರ್ಟೊ ರಿಕೊ ಆರೋಗ್ಯ ಇಲಾಖೆಯೊಂದಿಗೆ ಚರ್ಚಿಸಿದ ನಂತರ, ಪೋರ್ಟೊ ರಿಕೊ ಕೊಲಿಸಿಯಂ ಜೋಸ್ ಮಿಗುಯೆಲ್ ಅಗ್ರಲೋಟ್‌ನಲ್ಲಿ ಜಾಗತಿಕವಾಗಿ ಪ್ರಸಾರವಾಗುವ ಅಂತಿಮ ಶೋ ಮುಂದೂಡಲು ಇವೆಂಟ್‌ನ ಸಂಘಟಕರು ನಿರ್ಧರಿಸಿದ್ದಾರೆ. ಮುಂದಿನ 90 ದಿನಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದು ಸ್ಪರ್ಧೆಯ ಅಧಿಕಾರಿಗಳು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
ಸ್ಪರ್ಧಿಗಳು, ನಿರ್ಮಾಣ ತಂಡ ಮತ್ತು ವೀಕ್ಷಕರ ಹಿತದೃಷ್ಟಿಯಿಂದ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆ. ಇವೆಂಟ್ ಅನ್ನು ವೇದಿಕೆಯಲ್ಲಿ ಮತ್ತು ಡ್ರೆಸ್ಸಿಂಗ್ ರೂಮ್‌ನಲ್ಲಿ ಹೆಚ್ಚಿದ ಅಪಾಯಗಳನ್ನು ಅರ್ಥೈಸಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ಸೇರಿಸಲಾಗಿದೆ. ಆರೋಗ್ಯ ಅಧಿಕಾರಿಗಳು ಮತ್ತು ತಜ್ಞರೊಂದಿಗೆ ಸಮಾಲೋಚಿಸಿದ ನಂತರ ಇಂದು ಬೆಳಗ್ಗೆ ಹೆಚ್ಚು ಪಾಸಿಟಿವ್ ಪ್ರಕರಣಗಳು ದೃಢಪಟ್ಟ ನಂತರ, ಸ್ಪರ್ಧೆ ಮುಂದೂಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ. ವೈದ್ಯಕೀಯ ತಜ್ಞರ ಪ್ರಕಾರ ಮುಂದಿನ ಹಂತವು ತಕ್ಷಣದ ಕ್ವಾರಂಟೈನ್, ಬಾಕಿ ಉಳಿದಿರುವ ವ್ಯವಸ್ಥೆಗಳ ವೀಕ್ಷಣೆಗೆ ಗಮನ ಹರಿಸಲಾಗುತ್ತದೆ. ಮಿಸ್ ವರ್ಲ್ಡ್ ಕಿರೀಟಕ್ಕಾಗಿ ಸ್ಪರ್ಧಿಸಲು ನಮ್ಮ ಸ್ಪರ್ಧಿಗಳು ಮರಳುವುದನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಮಿಸ್ ವರ್ಲ್ಡ್ ಲಿಮಿಟೆಡ್‌ನ ಸಿಇಒ ಜೂಲಿಯಾ ಮೊರ್ಲಿ ಹೇಳಿದ್ದಾರೆ. ಪೋರ್ಟೊ ರಿಕೊ ಸುರಕ್ಷಿತ ವಾತಾವರಣವನ್ನು ನೀಡುತ್ತದೆ. ವಿಶ್ವ ಸುಂದರಿ ಉತ್ಸವದ ಚಿತ್ರೀಕರಣಕ್ಕಾಗಿ ಅದ್ಭುತ ಹಿನ್ನೆಲೆಯನ್ನು ಒದಗಿಸುತ್ತದೆ ಎಂದಿದ್ದಾರೆ.
ಈ ವರ್ಷ ಮಾನಸಾ ವಾರಣಾಸಿ 70 ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ತೆಲಂಗಾಣ ಮೂಲದವರಾದ ಮಾನಸ ಮಿಸ್ ಇಂಡಿಯಾ 2020 ಕಿರೀಟವನ್ನು ಗೆದ್ದಿದ್ದಾರೆ. ಮಿಸ್ ಇಂಡಿಯಾ ಕಿರೀಟವನ್ನು ಅಲಂಕರಿಸುವುದರ ಜೊತೆಗೆ, ಅವರು ಮಿಸ್ ರಾಂಪ್ ವಾಕ್ ಎಂದು ಘೋಷಿಸಲ್ಪಟ್ಟರು. ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ, ಮಿಸ್ ಇಂಡಿಯಾ ಸಂಸ್ಥೆಯು ಈ ಬಗ್ಗೆ ಅಪ್ಡೇಟ್ ನೀಡಿದೆ. ಬಾಧಿತರಾದವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ. ಮಿಸ್ ವರ್ಲ್ಡ್ ಫಿನಾಲೆಯಲ್ಲಿ ನಿಮ್ಮನ್ನು ನೋಡಲು ಇನ್ನಷ್ಟು ಕಾಯಲು ಸಾಧ್ಯವಿಲ್ಲ. ಮಾನಸ ವಾರಣಾಸಿ ನೀವು ಇನ್ನಷ್ಟು ಬಲವಾಗಿ ಹಿಂತಿರುಗುತ್ತೀರಿ ಎಂದಿದ್ದಾರೆ.
ಸ್ಪರ್ಧಿಗಳಲ್ಲಿ ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ವಿಶ್ವ ಸುಂದರಿ ಸಂಸ್ಥೆ ವಿಶ್ವ ಸುಂದರಿ ಫಿನಾಲೆಯನ್ನು ಮುಂದೂಡುವ ನಿರ್ಧಾರವನ್ನು ತೆಗೆದುಕೊಂಡಿದೆ. ಮಾನಸಾ ವಾರಣಾಸಿ ಅವರು ಕೋವಿಡ್ ಪಾಸಿಟಿವ್ ಎಂದು ಪರೀಕ್ಷಿಸಲ್ಪಟ್ಟ ಸ್ಪರ್ಧಿಗಳಲ್ಲಿ ಒಬ್ಬರು. ಪ್ರಸ್ತುತ ಪೋರ್ಟೊ ರಿಕೊದಲ್ಲಿ ಪ್ರತ್ಯೇಕವಾಗಿದ್ದಾರೆ. ಮಿಸ್ ಇಂಡಿಯಾ ಆರ್ಗನೈಸೇಶನ್‌ನಲ್ಲಿರುವ ನಾವು, ಆಕೆಯ ಕಠಿಣ ಶ್ರಮದ ಹೊರತಾಗಿಯೂ ವಿಶ್ವ ವೇದಿಕೆಯನ್ನು ಅಲಂಕರಿಸಲು ಸಾಧ್ಯವಾಗದಿರಬಹುದು ಎಂಬ ಅಪನಂಬಿಕೆಯಲ್ಲಿದ್ದೆವು. ಆದಾರೂ ಆಕೆಯ ಸುರಕ್ಷತೆಯು ನಮಗೆ ಆದ್ಯತೆಯಾಗಿದೆ ಎಂದು ಬರೆಯಲಾಗಿದೆ.
"ಮನೆಗೆ ಮರಳಿದ ಮಾನಸಾಳನ್ನು ಸ್ವಾಗತಿಸಲು ನಾವು ಕಾಯಲು ಸಾಧ್ಯವಿಲ್ಲ, ಅವಳನ್ನು ಆರೋಗ್ಯಕ್ಕೆ ಮರಳಿ ಪೋಷಿಸಲು ಮತ್ತು ಬಲಶಾಲಿಯಾಗಿ, ಆರೋಗ್ಯಕರವಾಗಿ ಮತ್ತು ಸಂತೋಷದಿಂದ ಹಿಂತಿರುಗಿ ಕಳುಹಿಸುತ್ತೇವೆ" ಎಂದು ಅದು ಸೇರಿಸಿದೆ.