Asianet Suvarna News Asianet Suvarna News

ಜಿಮ್‌ನಲ್ಲಿ ತಿಂಗಳೆಲ್ಲಾ ಕಸರತ್ತು ಮಾಡಿದ್ರೂ ಬರದ ಸಿಕ್ಸ್ ಪ್ಯಾಕ್ ಒಂದೇ ಗಂಟೆಯಲ್ಲಿ ಬಂದಿದ್ದು ಹೇಗೆ?

ಇತ್ತೀಚಿನ ದಿನಗಳಲ್ಲಿ ಫಿಟ್ನೆಸ್ ಫ್ಯಾಶನ್ ಆಗಿದೆ. ಹಾಗಾಗಿಯೇ ಜಿಮ್ ನಲ್ಲಿ ಜನ ಜಾಸ್ತಿ. ಆದ್ರೆ ಕಷ್ಟಪಟ್ಟು ವರ್ಕ್ ಔಟ್ ಮಾಡುವ ಜೊತೆಗೆ ತಾಳ್ಮೆಯಿಂದ ಕಾಯುವ ಮನಸ್ಸಿಲ್ಲದೆ ಹೋದ್ರೆ ಕೆಲವರು ಅಡ್ಡ ದಾರಿ ಹುಡುಕ್ತಾರೆ. ಈ ಹುಡುಗ ಕೂಡ ಅದೇ ಮಾಡಿದ್ದಾನೆ., 
 

Man Tired Of Spending Hours At Gym Gets Six Pack Tattoo
Author
Bangalore, First Published May 11, 2022, 2:39 PM IST

ಸಿಕ್ಸ್ ಪ್ಯಾಕ್ (Six Pack)  ಹುಡುಗರ ಕನಸು (Dream). ಸಿಕ್ಸ್ ಪ್ಯಾಕ್ ಹೊಂದಿರುವ ಹುಡುಗರು, ಹುಡುಗಿಯರ ಗಮನ ಸೆಳೆಯುತ್ತಾರೆ ಅಂತಾ ಪ್ರತ್ಯೇಕವಾಗಿ ಹೇಳ್ಬೇಕಾಗಿಲ್ಲ. ಕಟುಮಸ್ತಾದ ದೇಹ (Body) ಪಡೆಯಲು ಹುಡುಗರು ಸಾಕಷ್ಟು ಕಸರತ್ತು ಮಾಡ್ತಾರೆ. ಜಿಮ್ ಗೆ ಹೋಗಿ ಬೆವರು ಸುರಿಸ್ತಾರೆ. ಈ ಸಿಕ್ಸ್ ಪ್ಯಾಕ್ ಒಂದು ದಿನದಲ್ಲಿ ಬರೋದಲ್ಲ. ವರ್ಷಾನುಗಟ್ಟಲೆ ಕಸರತ್ತು ಮಾಡಿ, ಬೆವರು (Sweat) ಹರಿಸಿಕೊಂಡು, ಡಯಟ್ (Diet) ಮೆಂಟೇನ್ ಮಾಡಿದ್ರೂ ದೇಹ ಕರಗೋದು ಕಷ್ಟ. ಹಾಗಿರುವಾಗ ಸಿಕ್ಸ್ ಪ್ಯಾಕ್ ಬೇಕೆಂದ್ರೆ ಇನ್ನೊಂದಿಷ್ಟು ವರ್ಷ ಕಾಯ್ಬೇಕಾಗುತ್ತದೆ. ಬೇಸಿಗೆಯಲ್ಲಿ ವ್ಯಾಯಾಮ (Exercise) , ಜಿಮ್ ಮಾಡೋದು ಸ್ವಲ್ಪ ಕಷ್ಟ. ಯಾಕೆಂದ್ರೆ ಬೆವರು ಕಿರಿಕಿರಿಯುಂಟು ಮಾಡುತ್ತೆ. ಬೆಳಿಗ್ಗೆ ಬೇಗ ಎದ್ದು, ಜಿಮ್ ಗೆ ಹೋಗಿ ಮೈ ಬೆವರು ಮಾಡಿಕೊಂಡು, ಸಾಕಷ್ಟು ಕಷ್ಟಪಟ್ಟರೂ ಫಿಟ್ನೆಸ್ (Fitness ) ಬರ್ಲಿಲ್ಲವೆಂದ್ರೆ ಬೇಸರವಾಗೋದು ಸಹಜ. ಇಲ್ಲೊಬ್ಬ ಹುಡುಗನಿಗೂ ಅದೇ ಆಗಿದೆ. ಒಂದು ವರ್ಷದಿಂದ ಜಿಮ್ ಗೆ ಹೋದ್ರೂ ಸಿಕ್ಸ್ ಪ್ಯಾಕ್ ಮಾಡೋಕೆ ಆಗ್ಲಿಲ್ಲ. ಇದ್ರಿಂದ ಬೇಸರಗೊಂಡ ಹುಡುಗ ಮಾಡಿದ ಕೆಲಸ ಗಮನ ಸೆಳೆದಿದೆ. ಟಿಕ್ ಟಾಕ್ ನಲ್ಲಿ ಸದ್ಯ ಇವನದ್ದೇ ಸುದ್ದಿ. ಒಂದೇ ದಿನದಲ್ಲಿ ಸಿಕ್ಸ್ ಪ್ಯಾಕ್ ಪಡೆದವನ ಬಗ್ಗೆ ಎಲ್ಲರೂ ಅಚ್ಚರಿಗೊಂಡಿದ್ದಾರೆ. ಅಷ್ಟಕ್ಕೂ ಆತ ಹೇಗೆ ಒಂದೇ ದಿನದಲ್ಲಿ ಸಿಕ್ಸ್ ಪ್ಯಾಕ್ ಪಡೆದ ಅನ್ನೋದನ್ನು ನಾವು ಹೇಳ್ತೇವೆ.

ಸಿಕ್ಸ್ ಪ್ಯಾಕ್ ಬೇಕು. ಅದು ಹೇಗೆ ಬಂತು ಎಂಬುದು ಆತನಿಗೆ ಮ್ಯಾಟರ್ ಆಗಿರಲಿಲ್ಲ. ಹಾಗಾಗಿ ಜಿಮ್ ಗೆ ಹೋಗಿ ಸುಸ್ತಾಗಿದ್ದವನು ನೇರವಾಗಿ ಟ್ಯಾಟೂ ಹಾಕೋರ ಬಳಿ ಹೋಗ್ತಾನೆ. ಅಷ್ಟೇ ನೋಡಿ, ಒಂದೇ ದಿನದಲ್ಲಿ ಆತ ಸಿಕ್ಸ್ ಪ್ಯಾಕ್ ಹಿರೋ ಆಗ್ತಾನೆ. 
ಯಸ್. ಡೀನ್ ಗುಂಥರ್ ಹೆಸರಿನ ವ್ಯಕ್ತಿಯೊಬ್ಬ ಟಿಕ್‌ಟಾಕ್‌ನಲ್ಲಿ ಅದ್ಭುತವಾದ ಟ್ಯಾಟೂವನ್ನು ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡ ವಿಡಿಯೋ ಎಲ್ಲರ ಗಮನ ಸೆಳೆದಿದೆ. 

ನೀವು ಪರ್ಫೆಕ್ಟ್ ಐಲೈನರ್ ಹಾಕಲು ಬಯಸಿದ್ರೆ ಈ ಟಿಪ್ಸ್ ನಿಮ್ಮದಾಗಿಸಿ

ಗ್ರಾಹಕರು ಟೋನ್ಡ್ ಹೊಟ್ಟೆಯನ್ನು ಬಯಸುತ್ತಿದ್ದರು. ಅದಕ್ಕಾಗಿ ವರ್ಷಗಳಿಂದ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದರು. ಆದ್ರೆ ಫಲಿತಾಂಶ ಶೂನ್ಯವಾಗಿತ್ತು. ಹಾಗಾಗಿ ಗ್ರಾಹಕರು ನನ್ನ ಬಳಿ ಬಂದಿದ್ದಾರೆ ಎನ್ನುತ್ತಾರೆ ಗುಂಥರ್. 
ಅಷ್ಟಕ್ಕೂ ಆ ಗ್ರಾಹಕ ಮಾಡಿದ್ದೇನೆಂದ್ರೆ ಹೊಟ್ಟೆ ಮೇಲೆ ಸಿಕ್ಸ್ ಪ್ಯಾಕ್ ಟ್ಯಾಟೂ ಹಾಕಿಸಿಕೊಂಡಿರೋದು. ಗುಂಥರ್ ಅವರು ಈ ವೀಡಿಯೊಗೆ ಶೀರ್ಷಿಕೆ ಕೂಡ ನೀಡಿದ್ದಾರೆ. '2 ದಿನಗಳಲ್ಲಿ ಸಿಕ್ಸ್ ಪ್ಯಾಕ್ ಪಡೆಯುವುದು ಹೇಗೆ ! ನೀವು ಈ ಹಚ್ಚೆ ಹಾಕಿಸಿಕೊಳ್ಳಿ ! ನನ್ನ ಸಹೋದರನು ಜಿಮ್‌ನಲ್ಲಿ ಗಂಟೆಗಟ್ಟಲೆ ಕಸರತ್ತು ಮಾಡಿ ಸುಸ್ತಾಗಿದ್ದನು. ಆದ್ದರಿಂದ ನಾನು ಅವನಿಗೆ ಸಿಕ್ಸ್ ಪ್ಯಾಕ್ ಟ್ಯಾಟೂವನ್ನು ಹಾಕಿದೆ. ವಿಡಿಯೋ ನೋಡು ಎಂದು ಬರೆದಿದ್ದಾರೆ. 

ಪ್ರಸ್ತುತ ಮ್ಯಾಂಚೆಸ್ಟರ್‌ನಲ್ಲಿರುವ ದಕ್ಷಿಣ ಆಫ್ರಿಕಾದ ಟ್ಯಾಟೂ ಕಲಾವಿದ ಗುಂಥರ್, ಮನುಷ್ಯನ ಹೊಟ್ಟೆಯ ಮೇಲೆ ಪ್ರಭಾವಶಾಲಿಯಾಗಿ ಕಾಣುವ ಎಬಿಎಸ್‌ನ ಚಿತ್ರವನ್ನು ಚಿತ್ರಿಸಿದ್ದಾರೆ. 

ಫಟಾಫಟ್ ಸ್ಟೈಲಿಶ್ ಜಡೆ ಹಾಕೋದ್ಹೇಗೆ.? ಶ್ರೀನಿಧಿ ಶೆಟ್ಟಿ ಟಿಪ್ಸ್

ಹಣ ತೆಗೆದುಕೊಳ್ಳದ ಗುಂಥರ್ : ಗ್ರಾಹಕ, ಗುಂಥರ್ ಬಳಿ ಬಂದಾಗ ಇದು ತಮಾಷೆಯಾಗಿರುತ್ತದೆ ಎಂದು ಭಾವಿಸಿದ್ದರಂತೆ. ಈವರೆಗೂ ಇಂಥ ಟ್ಯಾಟೂವನ್ನು ಗುಂಥರ್ ಹಾಕಿರಲಿಲ್ಲವಂತೆ. ಪ್ರಯತ್ನಕ್ಕೆ ಸೂಕ್ತ ಫಲ ಸಿಕ್ಕಿದೆ. ಇದು ಹೊಸ ಪ್ರಯೋಗ. ನನಗೆ ಇದರಿಂದ ಖುಷಿಯಾಗಿದೆ ಎನ್ನುತ್ತಾರೆ ಗುಂಥರ್.  ಹಚ್ಚೆ ತುಂಬಾ ಹೊಸ ಮತ್ತು ವಿಶೇಷವಾದ ಕಾರಣ ಕ್ಲೈಂಟ್‌ರಿಂದ ಯಾವುದೇ ಹಣವನ್ನು ತೆಗೆದುಕೊಳ್ಳಲಿಲ್ಲವಂತೆ. 

ಪ್ರತಿಕ್ರಿಯೆ : ಗುಂಥರ್ ಗ್ರಾಹಕನ ಈ ವಿಡಿಯೋ ಹಾಕ್ತಿದ್ದಂತೆ ಜನರು ಪ್ರತಿಕ್ರಿಯೆ ನೀಡಲು ಶುರು ಮಾಡಿದ್ದಾರೆ. ಇದು ತಮಾಷೆ ವಿಡಿಯೋ ಎಂದು ಅನೇಕರು ಹೇಳಿದ್ದಾರೆ. 

Follow Us:
Download App:
  • android
  • ios