Asianet Suvarna News Asianet Suvarna News

ಮಾರುಕಟ್ಟೆಗೆ ಬಂದಿದೆ ಮನುಷ್ಯರ ಕಾಲಿನಂತೆ ಕಾಣುವ ಶೂ! ಬೆಲೆ ಎಷ್ಟು ಗೊತ್ತಾ?

ಈಗಿನ ದಿನಗಳಲ್ಲಿ ಯಾವೆಲ್ಲ ವಸ್ತು ಮಾರುಕಟ್ಟೆಗೆ ಬರುತ್ತೆ ಅನ್ನೋದನ್ನು ಊಹಿಸಲು ಸಾಧ್ಯವಿಲ್ಲ. ಗ್ರಾಹಕರನ್ನು ಆಕರ್ಷಿಸಲು ಕಂಪನಿಗಳ ಕಸರತ್ತು ನಿರಂತರ ನಡೆಯುತ್ತಿರುತ್ತದೆ. ಈಗ ಮತ್ತೊಂದು ಫ್ಯಾಷನ್ ಬ್ರ್ಯಾಂಡ್ ಸುದ್ದಿಯಲ್ಲಿದೆ.
 

Louis Vuitton Boots That Look Like Human Leg Cost Over Rs Two Lakh roo
Author
First Published Dec 2, 2023, 2:18 PM IST

ಮಾರುಕಟ್ಟೆಗೆ ಹೊಸ ಹೊಸ ಫ್ಯಾಷನ್ ಕಂಪನಿಗಳು ಲಗ್ಗೆ ಇಡ್ತಿದ್ದಂತೆ ಸ್ಪರ್ಧೆ ಹೆಚ್ಚಾಗುತ್ತದೆ. ಜನರ ಗಮನ ಸೆಳೆಯುವುದು, ಗ್ರಾಹಕರನ್ನು ಹಿಡಿದಿಡುವುದು ಸವಾಲಿನ ಕೆಲಸ. ಜನರ ಮನಸ್ಥಿತಿಗೆ ತಕ್ಕಂತೆ ಉತ್ಪನ್ನಗಳನ್ನು ತಯಾರಿಸೋದು ಫ್ಯಾಷನ್ ಬ್ರಾಂಡ್ ಕಂಪನಿಗಳಿಗೆ ದೊಡ್ಡ ಚಾಲೆಂಜ್. ಅನೇಕ ಐಷಾರಾಮಿ ಫ್ಯಾಷನ್ ಕಂಪನಿಗಳು ಚಿತ್ರವಿಚಿತ್ರ ವಸ್ತುಗಳ ಮೂಲಕ ಸುದ್ದಿಯಲ್ಲಿರುತ್ತವೆ. ಇತ್ತೀಚಿನ ದಿನಗಳಲ್ಲಿ ಐಷಾರಾಮಿ ಫ್ಯಾಷನ್ ಬ್ರ್ಯಾಂಡ್‌ಗಳು ತಮ್ಮ ಹೊಸ ಆಲೋಚನೆಗಳಿಗೆ ಹೆಸರುವಾಸಿಯಾಗ್ತಿವೆ. ಈ ವಸ್ತುಗಳು ನೋಡಲು ಭಿನ್ನತೆ ಹೊಂದಿರುವ ಜೊತೆಗೆ ಬೆಲೆಯಲ್ಲೂ ದುಬಾರಿಯಾಗಿರುತ್ತವೆ. 

ಕೆಲ ದಿನಗಳ ಹಿಂದೆ ಡೋಲ್ಸ್ & ಗಬ್ಬಾನಾ ಕಂಪನಿಯ ಖಾಕಿ ಸ್ಕೀ ಮಾಸ್ಕ್ ಕ್ಯಾಪ್ ಸುದ್ದಿ ಮಾಡಿತ್ತು. ಈ ಕ್ಯಾಪ್ ನ ವಾಸ್ತವಿಕ ಬೆಲೆ 40 ಸಾವಿರ ರೂಪಾಯಿಯಾಗಿದ್ದು, ಸ್ವಲ್ಪ ರಿಯಾಯಿತಿ ನಂತರ ಅದನ್ನು 31,990 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಹೆಚ್ಚುವರಿಯಾಗಿ ಇಎಂಐ ಸೌಲಭ್ಯ ಕೂಡ ಇದಕ್ಕೆ ನೀಡಲಾಗಿದೆ. ಇದಲ್ಲದೆ ಕೆಲ ದಿನಗಳ ಹಿಂದೆ ಐಷಾರಾಮಿ ಫ್ಯಾಷನ್ ಬ್ರ್ಯಾಂಡ್ ನ ಬಾಲೆನ್ಸಿಯಾದ ಟವೆಲ್ ಸ್ಕರ್ಟ್ ಸುದ್ದಿ ಮಾಡಿತ್ತು. ಅದ್ರ ಬೆಲೆ 77 ಸಾವಿರ ರೂಪಾಯಿಯಾಗಿದ್ದು, ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದರು. ಹ್ಯೂಗೋ ಬಾಸ್ ಫ್ಲಿಪ್-ಫ್ಲಾಪ್‌ ಬೆಲೆ ಕೇಳಿ ಜನರು ದಂಗಾಗಿದ್ದರು. ಇದಕ್ಕೆ 9 ಸಾವಿರ ನೀಡ್ಬೇಕಾ ಎಂದು ಪ್ರಶ್ನಿಸಿದ್ದರು. ಈಗ ಲೂಯಿಸ್ ವಿಟಾನ್ ಕಂಪನಿಯ ಫ್ಯಾಷನ್ ವಸ್ತು ಚರ್ಚೆಗೆ ಬಂದಿದೆ.

ಜಗತ್ತಿನ ಸಿರಿವಂತೆ ಥೈಲ್ಯಾಂಡ್ ರಾಜಕುಮಾರಿ ಸಿರಿವಣ್ಣವರಿ ಕ್ರೀಡೆಗೂ ಸೈ, ಯದ್ಧಕ್ಕೂ ಸೈ, ಆಸ್ತಿ ಮೌಲ್ಯವೇನು?

ಫ್ರೆಂಚ್ (French) ಐಷಾರಾಮಿ ಬ್ರ್ಯಾಂಡ್ ಲೂಯಿಸ್ ವಿಟಾನ್ ವಿಚಿತ್ರ ಫ್ಯಾಷನ್ ನೊಂದಿಗೆ ಬಂದಿದೆ. ಅದು ಮಹಿಳೆಯರ ಕಾಲಿನಂತೆ ಕಾಣುವ ಬಿಳಿ ಬಣ್ಣದ ಸಾಕ್ಸ್ ಹಾಗೂ ಕಪ್ಪು ಸ್ಟಿಲೆಟ್ಟೊದ ಶೂಗಳನ್ನು ಪರಿಚಯಿಸಿದೆ. ಶೂ, ಸಾಕ್ಸ್ ಸಮೇತ ಕಾಲುಗಳಂತೆ ಕಾಣುವ ಫ್ಯಾಷನ್ ಇದಾಗಿದೆ.  ನಿಮ್ಮ ಮೊಣಕಾಲಿನವರೆಗೆ ಇದು ಬರುತ್ತದೆ. ಇದನ್ನು ಧರಿಸಿದ ಮೇಲೆ ಮತ್ತೆ ನೀವು ಸಾಕ್ಸ್ (Socks), ಶೂ ಹಾಕ್ಬೇಕಾಗಿಲ್ಲ. 

ಇದರ ಬೆಲೆ ಎಷ್ಟು ಗೊತ್ತಾ? : ಎರಡು ಸ್ಕಿನ್ ಟೋನ್ ನಲ್ಲಿ ಇದು ನಿಮಗೆ ಲಭ್ಯವಿದೆ. ಇದರ ಬೆಲೆ ಸುಮಾರು 2,500 ಡಾಲರ್ ಅಂದ್ರೆ 2 ಲಕ್ಷ ರೂಪಾಯಿ.  ಸಾಮಾಜಿಕ ಜಾಲತಾಣದಲ್ಲಿ ಈ ಶೂ ವೈರಲ್ ಆಗ್ತಿದೆ. ಕಂಟೆಂಟ್ ಕ್ರಿಯೆಟರ್ ಈ ಉತ್ಪನ್ನವನ್ನು ಅನ್‌ಬಾಕ್ಸ್ ಮಾಡಿದ್ದಾರೆ. ಇದನ್ನು ಇನ್ಸ್ಟಾಗ್ರಾಮ್ (Instagram) ನಲ್ಲಿ ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ. ಫ್ಯಾಷನ್ ಪ್ರಭಾವಿ ಇಸಾಬೆಲ್ಲೆ ಅಲೈನ್ ಈ ಬೂಟುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವಿಚಿತ್ರ ಅಸಂಬದ್ಧ ಎಂದಿದ್ದಾರೆ. 

Online Earning : ಒಂದು ಫೋಸ್ಟ್ ಗೆ ಲಕ್ಷಾಂತರ ಹಣ ಗಳಿಸುವ ಈ ಮಾಡೆಲ್ ಅಸಲಿಯತ್ ಏನು ಗೊತ್ತಾ

ಈಗ, ಈ ವಿಶಿಷ್ಟವಾದ ಪಾದರಕ್ಷೆ ವಿನ್ಯಾಸವು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ  ಕೋಲಾಹಲ ಸೃಷ್ಟಿಸಿದೆ. ಕೆಲವು ಬಳಕೆದಾರರು ವಿನ್ಯಾಸವನ್ನು ಅಸಹ್ಯಕರ ಎಂದು ಪರಿಗಣಿಸಿದ್ದಾರೆ. ಕಂಪನಿ ಇದೇ ರೀತಿ ಸ್ಕಿನ್ ಟೋನ್ ನ ಇರುವ ಇನ್ನೂ ಅನೇಕ ಶೂ ತಯಾರಿಸಿದ್ರೆ ಖರೀದಿ ಮಾಡುವ ಬಗ್ಗೆ ಆಲೋಚನೆ ಮಾಡೋದಾಗಿ ಹೇಳಿದ್ದಾರೆ. ನಿಮ್ಮ ಮೊದಲ ಪೋಸ್ಟ್ ನಲ್ಲಿ ಶೇಕಡಾ 1000ರಷ್ಟು ನಿಮ್ಮ ಬೂಟ್ ಭಯಾನಕ ಎಂದು ನಾನು ಭಾವಿಸಿದ್ದೆ. ಆದ್ರೆ ಈಗ ನನಗೆ ಈ ಬೂಟ್ ಬೇಕು ಎನ್ನಿಸುತ್ತಿದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ನೀವು ಸುಂದರವಾಗಿದ್ದೀರಿ ಆದ್ರೆ ನಾನು ಶೂ ದ್ವೇಷ ಮಾಡ್ತೇನೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನು ಅನೇಕರು ಶೂ ವಿನ್ಯಾಸವನ್ನು ಇಷ್ಟಪಟ್ಟಿದ್ದಾರೆ. ಇದು ವಿಚಿತ್ರವಾಗಿದ್ರೂ ಚೆನ್ನಾಗಿದೆ. ಇದು ನಮಗೆ ಇಷ್ಟವಾಯ್ತು ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. 
 

 
 
 
 
 
 
 
 
 
 
 
 
 
 
 

A post shared by IZZI (@izzipoopi)

Follow Us:
Download App:
  • android
  • ios