Kannada

1 ಗ್ರಾಂ ಚಿನ್ನದಲ್ಲಿ 6 ಚಂಕಿ ಡಿಸೈನ್ಸ್

ಚಿಕ್ಕ ಮಕ್ಕಳಿಗಾಗಿ ಚಿನ್ನದ ಓಲೆಗಳ ಹೊಸ ವಿನ್ಯಾಸಗಳು ಇಲ್ಲಿವೆ. ಕೇವಲ 1 ಗ್ರಾಂ ಚಿನ್ನದಲ್ಲಿ ಮಾಡಿಸಬಹುದಾದ ಈ ಡಿಸೈನ್ಸ್ ನೋಡಲು ತುಂಬಾ ಆಕರ್ಷಕವಾಗಿವೆ.
Kannada

ರಿಯಲ್ ಗೋಲ್ಡ್ ಇಯರಿಂಗ್ಸ್

5 ವರ್ಷದ ಮಗಳಿಗೆ ಈ ರೀತಿಯ ಮಿಡ್-ಸೈಜ್ ಫ್ಲವರ್ ಇಯರಿಂಗ್ಸ್ ಖರೀದಿಸಬಹುದು. ಈ ಡಿಸೈನ್ ಪ್ಲೇನ್ ಎನಿಸಿದರೆ, ಹೂವಿನ ವಿನ್ಯಾಸದ ಜೊತೆಗೆ ಕಲ್ಲು ಇರುವ ಡಿಸೈನ್ ಆಯ್ಕೆ ಮಾಡಿ. ಇದನ್ನು 1 ಗ್ರಾಂ ಚಿನ್ನದಲ್ಲಿ ರೆಡಿಯಾಗತ್ತೆ.

Image credits: pinterest
Kannada

ಸ್ಟೋನ್ ಇರುವ ಚಿನ್ನದ ವಾಲೆ

ನಿಮ್ಮ ಮಗಳು ಶಾಲೆಗೆ ಹೋಗುತ್ತಿದ್ದರೆ, ಹೆಚ್ಚು ಭಾರವಾದ ಅಥವಾ ಥಳಕುಪಳಕಿನ ಡಿಸೈನ್ ಬದಲು, ಈ ರೀತಿ ಚಿನ್ನದ ಓಲೆ ಖರೀದಿಸಿ. ಇವು ಸ್ಕ್ರೂ ಲಾಕ್ ಜೊತೆ ಬರುವುದರಿಂದ, ಸುಲಭವಾಗಿ ಹಾಕಬಹುದು ಮತ್ತು ತೆಗೆಯಬಹುದು.

Image credits: pinterest
Kannada

1 ಗ್ರಾಂ ಚಂಕಿ ಗೋಲ್ಡ್ ಇಯರಿಂಗ್ಸ್

5 ವರ್ಷದ ಮಗಳಿಗಾಗಿ ಚಿನ್ನದ ಓಲೆ ಹುಡುಕುತ್ತಿದ್ದೀರಾ? ಹಾಗಿದ್ರೆ ಸ್ಟಡ್ ಅಥವಾ ಹೂಪ್ಸ್ ಬದಲು 1 ಗ್ರಾಂ ಚಿನ್ನದ ಈ ಚಂಕಿ ಇಯರಿಂಗ್ಸ್ ಟ್ರೈ ಮಾಡಿ. ಇವು ಬಾಳಿಕೆ ಹಾಗೂ ಫ್ಯಾಷನ್ ಎರಡರಲ್ಲೂ ಬೆಸ್ಟ್.

Image credits: pinterest
Kannada

22 ಕ್ಯಾರೆಟ್ ಚಿನ್ನದ ಓಲೆಗಳು

1 ಗ್ರಾಂ ಚಿನ್ನ ಮತ್ತು ಪುಟ್ಟ ಡೈಮಂಡ್ ಇರುವ ಈ ಫ್ಲವರ್ ಇಯರಿಂಗ್ಸ್ ನಿಮ್ಮ ಮಗಳಿಗೆ ಈಗ ಮಾತ್ರವಲ್ಲ, ಮುಂದೆಯೂ ಜೊತೆಯಾಗಿರುತ್ತದೆ. 5 ವರ್ಷದ ಮಗಳ ಜೊತೆ, ನೀವೂ ಕೂಡ ಫಾರ್ಮಲ್ ಲುಕ್‌ಗಾಗಿ ಇದನ್ನು ಧರಿಸಬಹುದು.
Image credits: pinterest
Kannada

0.5 ಗ್ರಾಂ ಚಿನ್ನದ ವಾಲೆ

1 ರಿಂದ 5 ವರ್ಷದೊಳಗಿನ ಮಕ್ಕಳಿಗೆ, ಪ್ರತಿದಿನ ಧರಿಸಲು ಈ ರೀತಿಯ ಚಿನ್ನದ ಓಲೆಗಳು ಪರ್ಫೆಕ್ಟ್. ಇದರಲ್ಲಿ ಯಾವುದೇ ಹರಳು ಅಥವಾ ಕಲ್ಲುಗಳಿಲ್ಲ. ಹಾಗಾಗಿ ಕಿವಿಗೆ ಆರಾಮದಾಯಕವಾಗಿರುತ್ತದೆ.

Image credits: pinterest
Kannada

ಹೂವಿನ ದಳದ ಶೈಲಿಯ ಓಲೆ

ಹೂವಿನ ದಳದಂತೆ ಕಾಣುವ ಈ ಚಂಕಿ ಇಯರಿಂಗ್ಸ್, ಮಿನಿಮಲ್ ಆಗಿದ್ದರೂ ಯೂನಿಕ್ ಲುಕ್ ನೀಡುತ್ತದೆ. ಈ ಪ್ಯಾಟರ್ನ್ ತುಂಬಾ ಸಿಂಪಲ್ ಆಗಿದೆ. ಬೇಕಿದ್ದರೆ, ಅಮೆರಿಕನ್ ಡೈಮಂಡ್ ಸೇರಿಸಿ ಇನ್ನಷ್ಟು ಆಕರ್ಷಕವಾಗಿ ಮಾಡಿಸಬಹುದು.

Image credits: pinterest
Kannada

ಡೈಸಿ ಹೂವಿನ ಚಂಕಿ ಇಯರಿಂಗ್ಸ್

ಸ್ಕ್ರೂ ಬ್ಯಾಕ್ ಲಾಕ್‌ನ ಭದ್ರತೆ & ಡೈಸಿ ಹೂವಿನ ಸೌಂದರ್ಯ, ಇದೊಂದು ಅದ್ಭುತ ಕಾಂಬಿನೇಷನ್. ನಿಮ್ಮ ಮಗಳು ಯಾವುದೇ ಕಿರಿಕಿರಿ ಇಲ್ಲದೆ ವರ್ಷಗಟ್ಟಲೆ ಧರಿಸಬಹುದು. ಅಕ್ಕಸಾಲಿಗರ ಬಳಿ ಸಾಕಷ್ಟು ವೆರೈಟಿಗಳು ಸಿಗುತ್ತವೆ.

Image credits: pinterest

ಕಡಿಮೆ ಬೆಲೆಗೆ ಭಾರಿ ಸ್ಟೈಲ್, 925 ಸಿಲ್ವರ್ ಬ್ಯಾಂಗಲ್+ಬ್ರೇಸ್ಲೆಟ್ ಡಿಸೈನ್ ನೋಡಿ

ಇಲ್ಲಿವೆ 6 ವಿಶಿಷ್ಟ ಸಿಲ್ವರ್ ಚೈನ್ ಬ್ರೇಸ್‌ಲೆಟ್.. ಮರೀದೆ ಮನೆಯವರಿಗೆ ಕೊಡಿಸಿ

ತಮ್ಮನ ಮದುವೆಯಲ್ಲಿ ಸಾರಾ ತೆಂಡೂಲ್ಕರ್ ಸೆಂಟರ್ ಆಫ್ ಅಟ್ರಾಕ್ಷನ್! ಟ್ರೆಂಡಿ ಡ್ರೆಸ್

ಹೆವಿ ಗೋಲ್ಡ್ ಜ್ಯುವೆಲರಿ ಧರಿಸಿದ ರಶ್ಮಿಕಾ ಮಂದಣ್ಣ ಬ್ರೈಡಲ್ ಲುಕ್ ವೈರಲ್