ಟ್ರೆಡಿಷನಲ್ ಜೊತೆ ವೆಸ್ಟರ್ನ್ ಮಿಕ್ಸ್  ಆ್ಯಂಡ್ ಮ್ಯಾಚ್ ಮಾಡಿ ಫ್ಯೂಷನ್ ಟಚ್ ಕೊಟ್ಟರೆ ಸ್ಟೈಲಿಶ್ ಆಗಿ ಕಾಣಿಸುತ್ತೆ. ಇದು ಆರಾಮದಾಯಕ ಲುಕ್ ನೀಡುವುದರ ಜೊತೆ ಸ್ಟೈಲಿಶ್ ಲುಕ್ ನೀಡುತ್ತದೆ. ಈ ಬಗ್ಗೆ ಮುಖ್ಯವಾದ ಟಿಪ್ಸ್ ಇಲ್ಲಿವೆ.. 

ಪಲಾಜೋ ಪ್ಯಾಂಟ್: ಪಲಾಸೋ ಪ್ಯಾಂಟ್ ಈಗಿನ ಟ್ರೆಂಡ್. ಇದರ ಜೊತೆ ಕ್ರಾಪ್ ಟಾಪ್‌ನೊಂದಿಗೆ ಎಥ್ನಿಕ್ ಲಾಂಗ್ ಜಾಕೆಟ್ ಧರಿಸಿದರೆ, ಸುಂದರವಾಗಿ ಕಾಣಿಸುತ್ತದೆ. ಇದಲ್ಲದೆ ಡಿಸೈನರ್ ಲಾಂಗ್ ಕುರ್ತಾವೂ ಚೆಂದ. 

ಜ್ಯುವೆಲ್ಲರಿ: ಲಾಂಗ್ ಜಾಕೆಟ್ ಲುಕ್ ಜೊತೆಗೆ ಚೋಕರ್ ಟ್ರೈ ಮಾಡಬಹುದು. ಕುರ್ತಾ ಧರಿಸುವುದಾದರೆ ಇತ್ತೀಚಿನ ದಿನಗಳಲ್ಲಿ ಪಾಮ್ ಪಾಮ್ ಇಯರಿಂಗ್ಸ್ ಟ್ರೆಂಡಿಂಗ್‌ನಲ್ಲಿದೆ ಅದನ್ನು ಧರಿಸಬಹುದು. 

ಎಥ್ನಿಕಲ್ ಸ್ಕರ್ಟ್: ಎಥ್ನಿಕ್ ಸ್ಕರ್ಟ್, ಪ್ಲೈನ್ ಶರ್ಟ್ ಕಾಂಬಿನೇಷನ್ ಚೆನ್ನಾಗಿರುತ್ತದೆ. ಆಫೀಸ್ ಮತ್ತು ಕಾಲೇಜಿಗೆ ಹೋಗುವ ಹುಡುಗಿಯರ ಬಳಿ ಶರ್ಟ್ ಹೆಚ್ಚಿರುತ್ತವೆ. ಸ್ಕರ್ಟ್ ಜೊತೆ ಅದನ್ನು ಧರಿಸಿದರೆ ಚೆನ್ನಾಗಿ ಕಾಣುತ್ತದೆ. ಇದರ ಜೊತೆ ಹಳೆ ಜ್ಯುವೆಲ್ಲರಿಯೂ ಚೆಂದ. 

ನೈರೋ ಪ್ಯಾಂಟ್ಸ್: ಇದರ ಜೊತೆ ಲಾಂಗ್ ಜಾಕೆಟ್, ಸ್ಟ್ರೈಟ್ ಫಿಟ್ ಕುರ್ತಾ ಮತ್ತು ಪೆಪ್ಲಮ್ ಟಾಪ್ ಚೆನ್ನಾಗಿ ಕಾಣಿಸುತ್ತದೆ. ನಿಮ್ಮ ಸ್ಟೈಲ್ ಮತ್ತು ಕಂಫರ್ಟ್ ಕಡೆಗೆ ಗಮನ ಹರಿಸಿ ಸ್ಟೈಲಿಶ್ ಆಗಿ ಕಾಣಬಹುದು. ಈ ಡ್ರೆಸ್ ಜೊತೆಗೆ ಪರ್ಲ್ ಮತ್ತು ಪೊಲ್ಕಿ ಡಿಸೈನ್ ಕಿವಿಯೋಲೆಯೂ ಸೂಟ್ ಆಗುತ್ತದೆ. 

ಕೇಪ್ : ಈ ಔಟ್ ಫಿಟ್ ಅನ್ನು ಬೇರೆ ಯಾವುದೇ ಡ್ರೆಸ್ ಜೊತೆ ಮ್ಯಾಚ್ ಮಾಡಿಕೊಳ್ಳಬಹುದು. ಸೀರೆ ಉಡುವುದಾದರೆ ಇದನ್ನು ಬ್ಲೌಸ್ ಜೊತೆಯೂ ಮ್ಯಾಚ್ ಮಾಡಬಹುದು. ಸೂಟ್ ಸಲ್ವಾರ್‌ನೊಂಗಿಗೂ ಓಕೆ.