ಕುತ್ತಿಗೆ, ಮೊಣಕೈ ಮತ್ತು ಮೊಣಕಾಲುಗಳ ಮೇಲಿನ ಕಪ್ಪು ಕಲೆಗಳನ್ನು ಹೋಗಲಾಡಿಸಲು ದುಬಾರಿ ಕ್ರೀಮ್‌ಗಳ ಬದಲು ಅಡುಗೆಮನೆಯಲ್ಲಿ ಸಿಗುವ ನೈಸರ್ಗಿಕ ಪದಾರ್ಥ ಬಳಸುವುದು ಉತ್ತಮ. ಹಾಲು, ಅರಿಶಿನ ಮತ್ತು ಜೇನುತುಪ್ಪದ ಮಿಶ್ರಣವನ್ನು ಹಚ್ಚುವುದರಿಂದ ಸತ್ತ ಚರ್ಮ ಮತ್ತು ಕೊಳೆ ನಿವಾರಣೆಯಾಗಿ ಚರ್ಮ ಕಾಂತಿಯುತವಾಗುತ್ತದೆ.
ಅನೇಕ ಮಹಿಳೆಯರ ದೊಡ್ಡ ಸಮಸ್ಯೆ ಎಂದರೆ ಕುತ್ತಿಗೆ, ಮೊಣಕೈ ಕಾಲುಗಳ ಎರಡು ಬದಿಯ ಕೀಲುಗಳಲ್ಲಿ ಕಪ್ಪು ಕಲೆ. ಇದರಿಂದಾಗಿ ಇತರರೊಂದಿಗೆ ಬರೆಯಲು ಬಹುತೇಕ ಮಹಿಳೆಯರು ಹಿಂಜರಿಯುತ್ತಾರೆ, ಕುತ್ತಿಗೆ ಕಪ್ಪಾಗಿದೆ, ಮೊಣಕೈ ಕಪ್ಪಗಿದೆ ಎಂದು ತುಂಬಾ ತೋಳಿನ ಡ್ರೆಸ್ ಅನ್ನೇ ತಮಗೆ ಇಷ್ಟವಿಲ್ಲದಿದ್ದರೂ ಯಾವಾಗಲೂ ಧರಿಸುತ್ತಾರೆ.
ಇನ್ನು ಈ ಸಮಸ್ಯೆ ಹೋಗಲಾಡಿಸಲು ಅವರು ಪಡುವ ಪಾಡು ಅಷ್ಟಿಷ್ಟಲ್ಲ, ಸ್ಕಿನ್ ಕೇರ್ ಶಾಪಿಂಗ್ ನಲ್ಲಿ ಸಿಗುವ ದುಬಾರಿ ಬೆಲೆಯ ಕ್ರೀಮ್ ಬಳಸಿದ್ರೂ ಅದರಲ್ಲಿ ಎಳ್ಳಷ್ಟು ಬದಲಾವಣೆ ಕಂಡು ಬರೋದಿಲ್ಲ ಆದರೆ ಸಮಸ್ಯೆ ಮಾತ್ರ ಹಾಗೆ ಉಳಿಯುತ್ತದೆ. ಹೀಗಾಗಿ ದುಬಾರಿ ಪ್ರಾಡಕ್ಟ್ ಬಿಟ್ಟು ಈ ಸರಳ ಉಪಾಯ ಫಾಲೋ ಮಾಡಿದರೆ ಕಪ್ಪು ಕಲೆ ತೆಗೆದುಹಾಕಬಹುದು. ಅದು ಹೇಗೆ ಎಂಬುದು ಇಲ್ಲಿ ತಿಳಿದುಕೊಳ್ಳೋಣ.
ಮಹಿಳೆಯರು ತಮ್ಮ ಮುಖಂದ ಅಂದಕ್ಕಾಗಿ ನಿರಂತರವಾಗಿ ಏನಾದರೊಂದು ಪ್ರಯೋಗ ಮಾಡುತ್ತಲೇ ಇರುತ್ತಾರೆ. ಸ್ಕಿನ್ ಕೇರ್ ಕ್ರೀಮ್‌ಗಳು, ದುಬಾರಿ ಫೇಸ್ ಪ್ಯಾಕ್‌ಗಳು ಬಳಸುತ್ತಾರೆ. ಆದರೆ ಮುಖದ ಅಂದಕ್ಕೆ ಕೊಡುವ ಪ್ರಾಮುಖ್ಯತೆ ಕುತ್ತಿಗೆ, ಮೊಣಕೈ ಮತ್ತು ಮೊಣಕಾಲುಗಳ ಮೇಲಿನ ಚರ್ಮಕ್ಕೆ ಕೊಡುವುದಿಲ್ಲ ಎಂಬುದೇ ಅಚ್ಚರಿ ಹುಟ್ಟಿಸುತ್ತದೆ. ಈಗಾಗಿ ನೋಡೋಕೆ ಮುಖ ಅಂದವಾಗಿದ್ದರೂ ಕುತ್ತಿಗೆ, ಮೊಣಕೈ ಮತ್ತು ಮೊಣಕಾಲುಗಳ ಮೇಲಿನ ಚರ್ಮವು ಕಪ್ಪಾದ ಕಾಣುತ್ತದೆ. ಅದನ್ನು ನಿರ್ಲಕ್ಷಿಸದೆ ಮುಖದ ಅಂದಕ್ಕಾಗಿ ವಹಿಸಿದಂತೆಯೇ ಕಾಳಜಿ ಅವಶ್ಯವಾಗಿ ಬೇಕು.
ಚರ್ಮ ಕಪ್ಪಾಗಲು ಪ್ರಾರಂಭಿಸಿದ ನಂತರ ಅದರ ಮೇಲೆಮೇಲೆ ಕೊಳಕು ಸಂಗ್ರಹವಾಗಲು ಪ್ರಾರಂಭಿಸುತ್ತದೆ. ದೇಹದ ಮೇಲೆ ಸತ್ತ ಜೀವಕೋಶಗಳು ಸಂಗ್ರಹವಾದ ನಂತರ ಟ್ಯಾನಿಂಗ್ ಸಮಸ್ಯೆ ಹೆಚ್ಚಾಗುತ್ತದೆ. ದೇಹದ ಮೇಲಿನ ಕೊಳೆ ತೆಗೆದುಹಾಕಲು ಚರ್ಮವನ್ನು ಗಟ್ಟಿಯಾಗಿ ಉಜ್ಜಲಾಗುತ್ತೆ. ಇದರಿಂದ ಸಮಸ್ಯೆ ಹೆಚ್ಚಾಗುತ್ತೆ ವಿನಹ ಕಡಿಮೆಯಾಗುವುದಿಲ್ಲ. ಅದರ ಬದಲಾಗಿ ಅಡುಗೆಮನೆಯಲ್ಲೇ ಸಿಗುವ ಕೆಲವು ಪದಾರ್ಥಗಳನ್ನು ಬಳಸಿಕೊಂಡು ಬಾಡಿ ಮಾಸ್ಕ್ ತಯಾರಿಸಬಹುದು. ಮನೆಮದ್ದುಗಳನ್ನು ಬಳಸುವುದರಿಂದ ಚರ್ಮಕ್ಕೆ ಯಾವುದೇ ಹಾನಿಯಾಗುವುದಿಲ್ಲ
ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಟ್ಯಾನಿಂಗ್ ಹೆಚ್ಚುವುದಿಲ್ಲ:
ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಟ್ಯಾನಿಂಗ್ ಹೆಚ್ಚಾಗುವುದಿಲ್ಲ, ಆದರೆ ದೇಹದ ಮೇಲೆ ಕೊಳಕು ಸಂಗ್ರಹವಾಗುತ್ತದೆ. ಟ್ಯಾನಿಂಗ್ ಅಥವಾ ಪಿಗ್ಮೆಂಟೇಶನ್ ದೇಹದ ಮೇಲಿನ ಚರ್ಮವನ್ನು ಕಪ್ಪಾಗಿಸುತ್ತದೆ. ಕೆಲವೊಮ್ಮೆ ತೆಗೆದುಕೊಳ್ಳುವ ಮಾತ್ರೆ, ಔಷಧಿಗಳ ಸೇವನೆಯಿಂದ ದೇಹದ ಮೇಲಿನ ಚರ್ಮವು ಕಪ್ಪಾಗುತ್ತದೆ. ಆದ್ದರಿಂದ, ದುಬಾರಿ ತ್ವಚೆ ಉತ್ಪನ್ನಗಳನ್ನು ಬಳಸುವ ಬದಲು ಚರ್ಮದಿಂದ ಕೊಳೆಯನ್ನು ತೆಗೆದುಹಾಕಲು ಕೆಲವು ಮನೆಮದ್ದುಗಳನ್ನು ಬಳಸಬೇಕು. ನೀವು ಚರ್ಮದ ಸ್ವಚ್ಛತೆಗೆ ಸರಿಯಾದ ಮತ್ತು ನೈಸರ್ಗಿಕವಾದ ವಿಧಾನ ಅಳವಡಿಸಿಕೊಂಡರೆ ದೇಹದ ಮೇಲಿನ ಚರ್ಮವು ಸ್ವಚ್ಛವಾಗಿರುತ್ತದೆ, ಚರ್ಮವು ಕಾಂತಿಯುತವಾಗಿ ಕಾಣುತ್ತದೆ. ಅಲ್ಲದೆ ಯಾವುದೇ ದುಬಾರಿ ಪ್ರಾಡಕ್ಟ್ ಬೇಕಾಗಿಯೂ ಇಲ್ಲ.
ಬಾಡಿ ಮಾಸ್ಕ್ ತಯಾರಿಸುವ ವಿಧಾನ ಹೇಗೆ?
ದೇಹದಿಂದ ಟ್ಯಾನಿಂಗ್ ತೆಗೆದುಹಾಕಲು ಸಾಮಾಜಿಕ ಮಾಧ್ಯಮದಲ್ಲಿ ವಿಭಿನ್ನ ಪರಿಹಾರಗಳನ್ನು ತೋರಿಸಲಾಗುತ್ತದೆ. ಬಾಡಿ ವಾಶ್ ಅಥವಾ ಮಾಸ್ಕ್ ಅನ್ನು ನಿಂಬೆ, ಎನೋ, ಕಾಫಿ ಅಥವಾ ಶಾಂಪೂ ಮುಂತಾದ ಪದಾರ್ಥಗಳನ್ನು ಬೆರೆಸಿ ತಯಾರಿಸಲಾಗುತ್ತದೆ. ಆದರೆ ಮನೆ ಮದ್ದುಗಳನ್ನು ಸ್ವಲ್ಪ ತಪ್ಪಾಗಿ ಬಳಸಿದರೂ ಚರ್ಮದ ಅಲರ್ಜಿ ಅಥವಾ ತುರಿಕೆಗೆ ಕಾರಣವಾಗಬಹುದು ಹೀಗಾಗಿ ಸೂಕ್ಷ್ಮ ಚರ್ಮ ಹೊಂದಿರುವ ಮಹಿಳೆಯರು ತಮ್ಮ ಚರ್ಮದ ಬಗ್ಗೆ ಸರಿಯಾದ ಕಾಳಜಿ ವಹಿಸಬೇಕಾಗುತ್ತದೆ. ಯಾವುದೇ ಪದಾರ್ಥ ಅಥವಾ ಮಾಸ್ಕ್ ಅನ್ನು ಅನ್ವಯಿಸುವ ಮೊದಲು ಪ್ಯಾಚ್ ಪರೀಕ್ಷೆಯನ್ನು ಮಾಡಬೇಕಾಗುತ್ತದೆ.
ಟ್ಯಾನಿಂಗ್ ಕುತ್ತಿಗೆ ನಡುವೆ ಕಪ್ಪು ಕಲೆಗೆ ಮನೆ ಮದ್ದುಗಳು:
ಬಿಸಿಲು ಅಥವಾ ಟ್ಯಾನಿಂಗ್ ನಿಂದ ಉಂಟಾಗುವ ಕಪ್ಪಾಗುವ ಕುತ್ತಿಗೆಗೆ ಮನೆಮದ್ದುಗಳು. ಇದಕ್ಕಾಗಿ ಒಂದು ಬಟ್ಟಲಿನಲ್ಲಿ ಒಂದು ಚಮಚ ಹಾಲು, ಒಂದು ಚಮಚ ಅರಿಶಿನ ಮತ್ತು ಅರ್ಧ ಚಮಚ ಜೇನುತುಪ್ಪವನ್ನು ಬೆರೆಸಿ ಮಿಶ್ರಣವನ್ನು ತಯಾರಿಸಿ. ತಯಾರಾದ ಮಿಶ್ರಣವನ್ನು ಕುತ್ತಿಗೆ, ಮೊಣಕಾಲುಗಳು ಮತ್ತು ದೇಹದ ಕಪ್ಪು ಭಾಗಗಳಿಗೆ ಹಚ್ಚಿ ನಿಧಾನವಾಗಿ ಮಸಾಜ್ ಮಾಡಿ. ಮಸಾಜ್ ಮಾಡುವುದರಿಂದ ದೇಹದ ಮೇಲೆ ಸಂಗ್ರಹವಾಗಿರುವ ಸತ್ತ ಚರ್ಮ, ಕೊಳೆ ಕಡಿಮೆಯಾಗುತ್ತದೆ. 10 ನಿಮಿಷಗಳ ನಂತರ, ಚರ್ಮವನ್ನು ನೀರಿನಿಂದ ಸ್ವಚ್ಛಗೊಳಿಸಿ. ಇದರ ಹೊರತಾಗಿ ಟ್ಯಾನಿಂಗ್ ಕಡಿಮೆ ಮಾಡಲು ಫೇಸ್ ಪ್ಯಾಕ್‌ಗಳು ಮಾತ್ರವಲ್ಲದೆ ಹೊರಗೆ ಹೋಗುವಾಗ ಸನ್‌ಸ್ಕ್ರೀನ್ ಹಚ್ಚುವುದು ಸಹ ಅಷ್ಟೇ ಮುಖ್ಯ. ಇದು ಸೂರ್ಯನ ಕಿರಣಗಳಿಂದ ಉಂಟಾಗುವ ಟ್ಯಾನಿಂಗ್‌ನಿಂದ ಚರ್ಮವನ್ನು ರಕ್ಷಿಸುತ್ತದೆ.
ಗಮನಿಸಿ: ಈ ಲೇಖನವು ಆರೋಗ್ಯ ನಿಯತಕಾಲಿಕೆಗಳಿಂದ ಸಂಗ್ರಹಿಸಿದ ಪ್ರಾಥಮಿಕ ಮಾಹಿತಿಯಾಗಿದೆ. ಚರ್ಮ ಸಂಬಂಧಿತ ಯಾವುದೇ ಸಮಸ್ಯೆಗೆ ಸಂಬಂಧಿಸಿದ ವೈದ್ಯರನ್ನ ಸಂಪರ್ಕಿಸಿ


