ಹೆಚ್ಚಾಯ್ತು ಸೌಂದರ್ಯದ ಹುಚ್ಚು… ಅಂದಕ್ಕಾಗಿ 100 ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳೆ ಈಕೆ..!
ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಅಗತ್ಯ. ಬಾಹ್ಯ ಸೌಂದರ್ಯ ನಮ್ಮನ್ನು ಆಕರ್ಷಿಸಿದ್ರೂ ಶಾಶ್ವತವಾಗಿ ನೆಲೆನಿಲ್ಲೋದಿಲ್ಲ. ಕೆಲವರಿಗೆ ಈ ಸೌಂದರ್ಯವೇ ಮುಖ್ಯವಾಗುತ್ತೆ. ಅದಕ್ಕೆ ಕೋಟಿ ಕೋಟಿ ಖರ್ಚು ಮಾಡ್ತಾರೆ.
ಎಲ್ಲರಿಗಿಂತ ನಾನು ಸುಂದರವಾಗಿ ಕಾಣ್ಬೇಕು ಎನ್ನುವ ಆಸೆ ಬಹುತೇಕ ಎಲ್ಲರಿಗೂ ಇರುತ್ತೆ. ಸೌಂದರ್ಯ ಹೆಚ್ಚಿಸಿಕೊಳ್ಳಲು ಕೆಲವರು ನಿರಂತರ ಪ್ರಯತ್ನ ಮಾಡಿದ್ರೆ ಮತ್ತೆ ಕೆಲವರು ಅಂದಕ್ಕಿಂತ ಯಶಸ್ಸಿಗೆ ಆದ್ಯತೆ ನೀಡ್ತಾರೆ. ಈ ಸೌಂದರ್ಯದ ಹುಚ್ಚು ಮಿತಿಯಲ್ಲಿದ್ರೆ ಓಕೆ. ಅತಿಯಾದ್ರೆ ಆಪತ್ತು. ನೀನು ಸುಂದರವಾಗಿದ್ದೀಯಾ ಎಂದು ಹೇಳುವಾಗ ಎಷ್ಟು ಸಂತೋಷವಾಗುತ್ತೋ ಅದರ ದುಪ್ಪಟ್ಟು ಬೇಸರ ನೀನು ಅಮ್ಮನಂತೆ, ಸಹೋದರಿಯರಷ್ಟು ಸುಂದರವಾಗಿಲ್ಲ ಎಂದಾಗ ಆಗುತ್ತೆ. ಇದು ಸಹಜ. ಆದ್ರೆ ಇಲ್ಲೊಬ್ಬ ಹುಡುಗಿ ಬರೀ ಬೇಸರಪಟ್ಟುಕೊಂಡು ಕೈಕಟ್ಟಿ ಕುಳಿತುಕೊಳ್ಳಲಿಲ್ಲ. ಅಮ್ಮನಿಗಿಂತ ಮಾತ್ರವಲ್ಲ ಎಲ್ಲರಿಗಿಂತ ಹೆಚ್ಚು ಚೆಂದ ಕಾಣ್ಬೇಕು ಎನ್ನುವ ಕನಸು ಕಂಡಿದ್ದಲ್ಲದೆ ಅದನ್ನು ಸಾಕಾರಗೊಳಿಸಲು ಒಂದಲ್ಲ ಎರಡಲ್ಲ 100 ಕ್ಕೂ ಹೆಚ್ಚು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳೆ. ಮುಂದೆ ಅಪಾಯವಿದೆ ಎಂಬ ವೈದ್ಯರ ಎಚ್ಚರಿಕೆಯನ್ನು ನಿರ್ಲಕ್ಷ್ಯ ಮಾಡಿರುವ ಈಕೆ ಪಾಲಕರ ಹಣವನ್ನು ನೀರಿನಂತೆ ಖರ್ಚು ಮಾಡ್ತಿದ್ದಾಳೆ. ಪ್ಲಾಸ್ಟಿಕ್ ಸರ್ಜರಿಗೆ ಈವರೆಗೆ 563,000 ಡಾಲರ್ ಸುಮಾರು 4.66 ಕೋಟಿ ರೂಪಾಯಿ ಹಾಳು ಮಾಡಿದ್ದಾಳೆ.
ಇಷ್ಟೊಂದು ಪ್ಲಾಸ್ಟಿಕ್ (Plastic) ಸರ್ಜರಿಗೆ ಒಳಗಾಗಿರುವ ಹುಡುಗಿ ಹೆಸರು ಝೌ ಚುನಾ. ಆಕೆ ಪೂರ್ವ ಚೀನಾ (China) ದ ಝೆಜಿಯಾಂಗ್ ಪ್ರಾಂತ್ಯದ ನಿವಾಸಿ. 13 ವರ್ಷ ವಯಸ್ಸಿನಲ್ಲೇ ಪ್ಲಾಸ್ಟಿಕ್ ಸರ್ಜರಿ (Surgery)ಯ ಗೀಳನ್ನು ಹೊಂದಿದ್ದಳು. ನೆಚ್ಚಿನ ನಟಿ ಎಥೆಲ್ ಯುಳಂತೆ ಸುಂದರವಾಗಿ ಕಾಣಬೇಕು ಹಾಗೆ ಪ್ರಸಿದ್ಧಿ ಪಡೆಯಬೇಕು ಎಂಬುದು ಈಕೆ ಕನಸಾಗಿತ್ತು.
ಪಚ್ಚೆ ಹರಳಿನ ದೊಡ್ಡ ವಜ್ರದ ಹಾರ ಧರಿಸಿದ ನೀತಾ ಅಂಬಾನಿ, ಕೊಹಿನೂರ್ ವಜ್ರಕ್ಕಿಂತಲೂ ಬೆಲೆ ಬಾಳುತ್ತಾ?
ಶಾಲೆಗೆ ಹೋಗ್ತಿದ್ದ ಸಮಯದಲ್ಲಿಯೇ ಸೌಂದರ್ಯದ ಬಗ್ಗೆ ಹೆಚ್ಚು ಆಸಕ್ತಿ ತೋರಿದ್ದಳು ಝೌ ಚುನಾ. ನಿನ್ನ ಅಮ್ಮನಷ್ಟು ನೀನು ಆಕರ್ಷಕವಾಗಿಲ್ಲ ಎಂದಾಗ ಆಕೆಗೆ ಸಂಕಟವಾಗ್ತಿತ್ತು. ಶಾಲೆಯಲ್ಲಿದ್ದ ಹುಡುಗಿಯರು ತನಗಿಂತ ಚೆನ್ನಾಗಿದ್ದಾರೆ, ಆತ್ಮವಿಶ್ವಾಸಿಂದ ಕೂಡಿದ್ದಾರೆ ಎಂಬುದನ್ನು ನೋಡಿ ಈಕೆಗೆ ಹೊಟ್ಟೆಕಿಚ್ಚಾಗುತ್ತಿತ್ತು. ತಾನು ಸುಂದರವಾಗಿ ಕಾಣ್ಬೇಕು ಎನ್ನುವ ಛಲ ಹುಟ್ಟಿಕೊಂಡಿತ್ತು. ಹಾಗಾಗಿ ಹದಿಮೂರನೇ ವಯಸ್ಸಿನಲ್ಲಿಯೇ ಮೊದಲ ಬಾರಿ ಪ್ಲಾಸ್ಟಿಕ್ ಸರ್ಜರಿಗೆ ಒಳಗಾದಳು. ಆಕೆ ತಾಯಿ ಇದಕ್ಕೆ ಒಪ್ಪಿಗೆ ನೀಡಿದ್ದಳು. ಆ ವೇಳೆ ಝೌ ಚುನಾ, ಕಣ್ಣಿನ ರೆಪ್ಪೆಗೂದಲುಗಳನ್ನು ದ್ವಿಗುಣಗೊಳಿಸಿಕೊಂಡಿದ್ದಳು. ಇದಾದ ನಂತರ ತನ್ನ ನೋಟವನ್ನು ಬದಲಾಯಿಸುವ ಚಟಕ್ಕೆ ಬಿದ್ದಳು. ಪ್ಲಾಸ್ಟಿಕ್ ಸರ್ಜರಿ, ಸೌಂದರ್ಯ ವೃದ್ಧಿಗಾಗಿ ಈಕೆ ಶಾಲೆ ಕೂಡ ಬಿಟ್ಟಳು.
ನೀವು ಯಾವೆಲ್ಲ ಪ್ಲಾಸ್ಟಿಕ್ ಸರ್ಜರಿ ಬಗ್ಗೆ ಆಲೋಚನೆ ಮಾಡ್ತಿರೋ ಆ ಎಲ್ಲ ಪ್ಲಾಸ್ಟಿಕ್ ಸರ್ಜರಿಯನ್ನು ನಾನು ಮಾಡಿಸಿಕೊಂಡಿದ್ದೇನೆ ಎನ್ನುತ್ತಾಳೆ ಝೌ ಚುನಾ. ವೈದ್ಯರು ಕೂಡ ಝೌ ಚುನಾಗೆ ಎಚ್ಚರಿಕೆ ನೀಡಿದ್ದಾರೆ. ಇನ್ನು ಕಣ್ಣು ದೊಡ್ಡ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಝೌ ಚುನಾಗೆ ಈಗಾಗಲೇ ಹತ್ತು ಬಾರಿ ಕಣ್ಣಿನ ಚಿಕಿತ್ಸೆ ಆಗಿದೆ.
ತನ್ನ ಅಂದವನ್ನು ಹೆಚ್ಚಿಸಿಕೊಳ್ಳಲು ಎಂಥ ಅಪಾಯಕಾರಿ ಶಸ್ತ್ರಚಿಕಿತ್ಸೆಗೂ ಆಕೆ ಸಿದ್ಧವಿದ್ದಾಳೆ. ಅತ್ಯಂತ ನೋವಿನ ಶಸ್ತ್ರಚಿಕಿತ್ಸೆಯೆಂದರೆ ಬೋನ್ ಶೇವಿಂಗ್. ಇದನ್ನು ಕೂಡ ಆಕೆ ಮಾಡಿಸಿಕೊಂಡಿದ್ದಾಳೆ. ಹತ್ತು ಗಂಟೆಗಳ ಕಾಲ ಈ ಆಪರೇಷನ್ ನಡೆದಿದೆ. ಈ ಸಮಯದಲ್ಲಿ ಝೌ ಚುನಾಗೆ ಹದಿನೈದು ವರ್ಷ ವಯಸ್ಸಾಗಿತ್ತು. ಹದಿನೈದು ದಿನಗಳ ಕಾಲ ಆಕೆ ಬೆಡ್ ಮೇಲಿದ್ದಳು.
ಅಂತೂ ಹೇರ್‌ಸ್ಟೈಲ್ ಬದಲಿಸಿದ ಐಶ್ ಮಗಳು; ಆರಾಧ್ಯ ಹೊಸ ಲುಕ್ ನೋಡಿ ನೆಟಿಜನ್ಸ್ ಶಾಕ್
ಝೌ ಚುನಾ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವ ಮೂಲಕ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದ್ದು, ಆಕೆ ಪಾಲಕರು ಬೆಂಬಲ ನೀಡ್ತಿದ್ದಾರೆ. ಆದ್ರೆ ಸಾಮಾಜಿಕ ಜಾಲತಾಣ ಬಳಕೆದಾರರು ಈಕೆ ಕೆಲಸವನ್ನು ಖಂಡಿಸಿದ್ದಾರೆ. ಕೆಲವರು ಝೌ ಚುನಾ ಆಲೋಚನೆಗೆ ಮರುಗಿದ್ದಾರೆ. ವ್ಯಕ್ತಿ ತನ್ನ ಸಹಜ ಸೌಂದರ್ಯವನ್ನು ಪ್ರೀತಿಸಬೇಕು. ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು. ಪ್ಲಾಸ್ಟಿಕ್ ಸರ್ಜರಿಯಿಂದ ಬದಲಾದ ಮುಖವನ್ನಲ್ಲ ಎಂದಿದ್ದಾರೆ.