ದ್ರೌಪದಿ ಮುರ್ಮು ರಾಷ್ಟ್ರಪತಿಯಾಗ್ತಿದ್ದಂತೆ ಸಂತಾಲಿ ಸೀರೆಗೆ ಸಿಕ್ತು ರಾಜ ಮನ್ನಣೆ

ಬುಡಕಟ್ಟು ಜನಾಂಗದ ಮಹಿಳೆಯೊಬ್ಬರು ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದ್ರ ಜೊತೆಗೆ ದ್ರೌಪದಿ ಮುರ್ಮು ಮತ್ತೊಂದು ಹೆಮ್ಮೆಯ ಕೆಲಸ ಮಾಡಿದ್ದಾರೆ. ಇಡೀ ಪ್ರಪಂಚಕ್ಕೆ ಬುಡಕಟ್ಟು ಜನಾಂಗದ ಸೀರೆಯ ಪರಿಚಯ ಮಾಡಿಸಿದ್ದಾರೆ. 
 

Draupadi Murmu expected to take oath wearing traditional Santali Sari

ದ್ರೌಪದಿ ಮುರ್ಮು ಅವರು ದೇಶದ ಮೊದಲ ಬುಡಕಟ್ಟು ಮಹಿಳಾ ರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ, ಭಾರತದ ಬುಡಕಟ್ಟು ಸಂಸ್ಕೃತಿ ಮತ್ತು ಸಂಪ್ರದಾಯವು ಮತ್ತೊಮ್ಮೆ ಪ್ರಪಂಚದಾದ್ಯಂತ ಗಮನ ಸೆಳೆದಿದೆ.  ಸಂಪ್ರದಾಯಿಕ ಸಂತಾಲಿ ಶೈಲಿಯ ಸೀರೆ ಎಲ್ಲರನ್ನು ಆಕರ್ಷಿಸಿದೆ. ನಾವಿಂದು ಸಂತಾಲಿ ಶೈಲಿಯ ಸೀರೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿಮಗೆ ನೀಡ್ತೇವೆ.

ಸಂತಾಲಿ ಸೀರೆ (Santali Saree) ಅಂದ್ರೇನು?: ಸಂತಾಲ್ ಮಹಿಳೆಯರು ಬಳಸುವ ಸೀರೆ ಇದು. ಪೂರ್ವ ಭಾರತದಲ್ಲಿ ಸಂತಾಲ್ ಮಹಿಳೆಯರು ಉಡುವ ಸೀರೆಯನ್ನು ಸಂತಾಲಿ ಶೈಲಿ ಸೀರೆ ಎಂದು ಕರೆಯಲಾಗುತ್ತದೆ.  ಸಂತಾಲಿ ಸೀರೆಗಳು ಉದ್ದದಲ್ಲಿ ಏಕರೂಪದ ಪಟ್ಟಿಗಳನ್ನು ಮತ್ತು ಎರಡೂ ತುದಿಗಳಲ್ಲಿ ಒಂದೇ ರೀತಿಯ ವಿನ್ಯಾಸ (Design) ವನ್ನು ಹೊಂದಿರುತ್ತವೆ.  ಸಂತಾಲಿ ಸೀರೆಯು ಒಡಿಶಾ (Odisha) ದ ಮಯೂರ್‌ಭಂಜ್‌ನಲ್ಲಿರುವ ಸಂತಾಲಿ ಬುಡಕಟ್ಟು ಮಹಿಳೆಯರೊಂದಿಗೆ ಸಂಬಂಧ ಹೊಂದಿದೆ.  ಸಂತಾಲಿ ಸೀರೆಯು ಒಡಿಶಾ ಮಾತ್ರವಲ್ಲದೆ ಜಾರ್ಖಂಡ್‌ (Jharkhand) , ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಸೇರಿದಂತೆ ಇತರ ರಾಜ್ಯಗಳಲ್ಲಿಯೂ ಪ್ರಚಲಿತವಾಗಿದೆ. 

ಸಂತಾಲಿ ಸೀರೆ ಬಣ್ಣ : ಹೆಚ್ಚಿನ ಸಂತಾಲಿ ಉಡುಪಿನಲ್ಲಿ ಬಿಳಿ ಬಣ್ಣವು ಆದ್ಯತೆ ಪಡೆಯುತ್ತದೆ. ಆದ್ರೆ ಬಿಳಿ ಬಣ್ಣದಲ್ಲಿಯೇ ಇರಬೇಕೆಂಬ ನಿಯಮವಿಲ್ಲ. ಬೇರೆ ಬೇರೆ ಬಣ್ಣಗಳಲ್ಲಿಯೂ ಈ ಸೀರೆ ನಮಗೆ ಲಭ್ಯವಿದೆ.  ನೇಕಾರರು ಬಣ್ಣದ ಎಳೆಗಳಿಂದ ಸೀರೆಗಳನ್ನು ತಯಾರಿಸುತ್ತಾರೆ. ಇದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕನಸಿಗೆ ಈ ಸೀರೆ ಬಣ್ಣ ತುಂಬುತ್ತದೆ. ಜನರು ಸ್ವದೇಶಿ ಬಟ್ಟೆಗಳನ್ನು ಧರಿಸಬೇಕೆಂದು ಗಾಂಧೀಜಿ ಬಯಸಿದ್ದರು.

ರಾಷ್ಟ್ರಪತಿ ಸ್ಥಾನಕ್ಕೇರಿದ್ದು ದೇಶದ ಬಡವರ ಸಾಧನೆ: ದ್ರೌಪದಿ

ವಿನ್ಯಾಸ : ಫ್ಯಾಷನ್  ಕೇವಲ ನಗರ ಜೀವನಕ್ಕೆ ಮೀಸಲಲ್ಲ. ಬುಡಕಟ್ಟು ಜನಾಂಗದಲ್ಲಿಯೂ ಫ್ಯಾಷನ್ ಇದೆ. ಅಲ್ಲಿನ ಜನರು ತಮ್ಮದೇ ಆದ ಫ್ಯಾಷನ್ ಗೆ ಆದ್ಯತೆ ನೀಡ್ತಾರೆ. ಸಂತಾಲ್ ಜನಾಂಗದವರು ಕೂಡ ಸಂತಾಲಿ ಶೈಲಿಗೆ ಮಹತ್ವ ನೀಡ್ತಾರೆ. ಸಂತಾಲಿ ಸೀರೆಯನ್ನು ಸಾಮಾನ್ಯವಾಗಿ ಸಂಸ್ಕರಿಸಿ ಕೈಮಗ್ಗಗಳ ಮೂಲಕ ಉತ್ಪಾದಿಸಲಾಗುತ್ತದೆ. ಕಸೂತಿಗೆ ಇಲ್ಲಿ ಮಹತ್ವದ ಸ್ಥಾನವಿದೆ. ವಿವಿಧ ಕ್ಲಾಸಿಕ್ ವಿನ್ಯಾಸಗಳಲ್ಲಿ ಇದು ಲಭ್ಯವಿದೆ. ಹಿಂದಿನ ಕಾಲದಲ್ಲಿ  ಈ ಸೀರೆ ಮೂರು ಬಿಲ್ಲು ವಿನ್ಯಾಸದೊಂದಿಗೆ ಬರ್ತಿತ್ತು. ಈ ಚಿಹ್ನೆಯು ಮಹಿಳೆಯರ ಸ್ವಾತಂತ್ರ್ಯದ ಬಯಕೆಯನ್ನು ಅರ್ಥೈಸುತ್ತದೆ. ಆದರೆ ಹೊಸ ಯುಗದಲ್ಲಿ ಸಂತಾಲಿ ಸೀರೆಗಳನ್ನು ನವಿಲು, ಹೂವು ಮತ್ತು ಬಾತುಕೋಳಿ ವಿನ್ಯಾಸಗಳೊಂದಿಗೆ ತಯಾರಿಸಲಾಗುತ್ತದೆ. 

ಹಬ್ಬಗಳಲ್ಲಿ ವಿಶೇಷ ಮಹತ್ವ : ಸಂತಾಲಿ ಸೀರೆಯನ್ನು ವಿಶೇಷ ಸಂದರ್ಭಗಳಲ್ಲಿ ಧರಿಸಲಾಗುತ್ತದೆ. ಸಂತಾಲಿ ಜನಾಂಗದ ವಿಶೇಷ ಹಬ್ಬಗಳಲ್ಲಿ ಈ ಸೀರೆಯನ್ನು ಮಹಿಳೆಯರು ಧರಿಸ್ತಾರೆ. ಅಲ್ಲಿನ ಜನಾಂಗದ ವಿಶೇಷ ಹಬ್ಬ ಪ್ಲಾವರ್ ಪೆಸ್ಟಿವಲ್ ನಲ್ಲಿ ಈ ಸೀರೆ ಧರಿಸುವುದನ್ನು ನಾವು ಕಾಣಬಹುದು. ಹಾಗೆಯೇ ಮದುವೆಯಲ್ಲಿ ವಧು ಈ ಸೀರೆ ಧರಿಸಿ ಹಸೆಮಣೆ ಏರ್ತಾಳೆ.

ದ್ರೌಪದಿ ಇನ್ನು ದೇಶದ ಸುಪ್ರೀಂ ಕಮಾಂಡರ್

ಸಂತಾಲಿ ಸೀರೆಯನ್ನು ವಿನ್ಯಾಸ ಸರಳವಾಗಿದೆ. ಇದೇ ಕಾರಣಕ್ಕೆ ಇದು ಮಹಿಳೆಯರಿಗೆ ಮಾತ್ರ ಸೀಮಿತವಾಗಿಲ್ಲ. ಇದನ್ನು ಪುರುಷರು ಧರಿಸ್ತಾರೆ ಅಂದ್ರೆ ನಿಮಗೆ ವಿಚಿತ್ರವೆನ್ನಿಸಬಹುದು. ಆದ್ರೆ ಸತ್ಯ. ಸಂತಾಲ್ ಬುಡಕಟ್ಟು ಜನಾಂಗದ ಪುರುಷರು ಇದನ್ನು ಲುಂಗಿ ರೂಪದಲ್ಲಿ ಧರಿಸ್ತಾರೆ. ಸಂತಾಲಿ ಸೀರೆ ಧರಿಸುವ ವಿಧಾನ ಕೂಡ ಸ್ವಲ್ಪ ಭಿನ್ನವಾಗೊದೆ. ಮೊಣಕಾಲಿಗಿಂತ ಸ್ವಲ್ಪ ಕೆಳಗೆ ಬರುವಂತೆ ಇದನ್ನು ಮಹಿಳೆಯರು ಉಡುತ್ತಾರೆ. ಸಂತಾಲಿ ಸೀರೆ ಹೆಚ್ಚು ಪ್ರಸಿದ್ಧಿ ಪಡೆದಿಲ್ಲ. ಆದ್ರೆ ಆನ್ಲೈನ್ ನಲ್ಲಿ  ಈ ಸೀರೆಗಳು ಲಭ್ಯವಿದೆ. ಹೆಚ್ಚು ಆಕರ್ಷಕವಾಗಿ ಕಾಣುವುದ್ರಿಂದ ಈಗಿನ ಯುವಜನತೆಗೆ ಇದನ್ನು ಧರಿಸಲು ಇಷ್ಟಪಡ್ತಾರೆ. ಫ್ಲಿಪ್ಕಾರ್ಟ್,ಅಮೆಜಾನ್ ಸೇರಿದಂತೆ ಅನೇಕ ಆನ್ಲೈನ್ ವೆಬ್ಸೈಟ್ ಮೂಲಕ ನೀವು ಈ ಸೀರೆ ಖರೀದಿ ಮಾಡಬಹುದು. 

Latest Videos
Follow Us:
Download App:
  • android
  • ios