Night Dress : ಪುರುಷ ಬಂಜೆತನಕ್ಕೆ ಕಾರಣವಾಗುತ್ತೆ ಬಿಗಿಯಾದ ಒಳಉಡುಪು!
ಧರಿಸುವ ಬಟ್ಟೆಗೂ ನಮ್ಮ ಆರೋಗ್ಯಕ್ಕೂ ಸಂಬಂಧವಿದೆ. ಬಿಗಿಯಾದ ಬಟ್ಟೆ ಆರೋಗ್ಯ ಹದಗೆಡಿಸುತ್ತದೆ. ರಾತ್ರಿ ಸುಖ ನಿದ್ರೆ ಬಹಳ ಮುಖ್ಯ. ನಾವು ಧರಿಸುವ ಬಟ್ಟೆ ನಿದ್ರೆಗೆ ಭಂಗ ತಂದ್ರೆ ಆರೋಗ್ಯ ಹಾಳಾಗುತ್ತದೆ.
ಆಫೀಸ್ (Office) ಗೆ ಹೋಗುವಾಗ ಯಾವ ಡ್ರೆಸ್ (Dress) ಧರಿಸ್ಬೇಕೆಂದು ಹಿಂದಿನ ದಿನವೇ ಪ್ಲಾನ್ ಮಾಡಿರ್ತೇವೆ. ಮದುವೆ (Marriage),ಸಮಾರಂಭಗಳಿಗೆ ಧರಿಸುವ ಡ್ರೆಸ್ ಬಗ್ಗೆ ತಿಂಗಳ ಮೊದಲೇ ಸಿದ್ಧತೆಯಾಗಿರುತ್ತದೆ. ಕೆಲವರು ಮನೆಯಲ್ಲಿಯೂ ಚಂದದ,ಆರಾಮದಾಯ ಡ್ರೆಸ್ ಧರಿಸಲು ಇಷ್ಟಪಡ್ತಾರೆ. ಆದ್ರೆ ರಾತ್ರಿ ಡ್ರೆಸ್ (Night Dress )ಬಗ್ಗೆ ಬಹುತೇಕರು ಗಮನ ನೀಡುವುದಿಲ್ಲ. ಮಲಗುವಾಗ ಧರಿಸುವ ಡ್ರೆಸ್ ಗೆ ಯಾಕೆ ಇಂಪಾರ್ಟೆನ್ಸ್ ನೀಡ್ಬೇಕು ಎಂಬುದು ಅನೇಕರ ಪ್ರಶ್ನೆ. ಆದ್ರೆ ರಾತ್ರಿ ಮಲಗಲು ಕೂಡ ಡ್ರೆಸ್ ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯ.
ರಾತ್ರಿಯ ಉಡುಗೆ ನಮ್ಮ ಉತ್ತಮ ನಿದ್ರೆ ಮತ್ತು ಆರೋಗ್ಯಕ್ಕೆ ಮುಖ್ಯವಾಗಿದೆ. ಯಾವ ಡ್ರೆಸ್ ಧರಿಸಬೇಕು ಎಂಬ ಗೊಂದಲ ಮೂಡುತ್ತದೆ. ಯಾವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿರುವುದಿಲ್ಲ. ಬಹುತೇಕ ಪುರುಷರು ಒಳ ಉಡುಪನ್ನು ಧರಿಸಿ ಮಲಗುತ್ತಾರೆ. ಅವರಲ್ಲಿ ನೀವೂ ಒಬ್ಬರಾಗಿದ್ದರೆ, ನೀವು ಮಾಡ್ತಿರೋದು ತಪ್ಪು ಅಂದ್ರೆ ಅಚ್ಚರಿಯಾಗ್ಬಹುದು. ಆದರೆ ಇದು ಸಂಶೋಧನೆಯಲ್ಲಿ ಬೆಳಕಿಗೆ ಬಂದಿದೆ.ರಾತ್ರಿ ವೇಳೆ ಒಳಉಡುಪಿನಲ್ಲಿ ಮಲಗುವುದು ಆರೋಗ್ಯಕ್ಕೆ ಹಾನಿಕರ ಎಂದು ಸಂಶೋಧಕರು ಹೇಳಿದ್ದಾರೆ. ಅನೇಕ ಹುಡುಗರು ರಾತ್ರಿಯಲ್ಲಿ ಜೀನ್ಸ್, ಪ್ಯಾಂಟ್, ಶರ್ಟ್, ಟಿ-ಶರ್ಟ್ ಹಾಕಿ ಮಲಗ್ತಾರೆ. ಇಂದು ರಾತ್ರಿ ಪುರುಷರು ಯಾವ ಡ್ರೆಸ್ ಧರಿಸಿದ್ರೆ ಉತ್ತಮ ಎಂಬುದನ್ನು ಹೇಳ್ತೆವೆ.
ಒಳ ಉಡುಪಿನಲ್ಲಿ ಮಲಗುವುದು : ಮೊದಲೇ ಹೇಳಿದಂತೆ ರಾತ್ರಿಯಲ್ಲಿ ಒಳಉಡುಪು ಧರಿಸಿ ಮಲಗಬಾರದು. ಒಳಉಡುಪಿನಲ್ಲಿ ಮಲಗುವುದು ಫಲವತ್ತತೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪುರುಷರು ಹೆಚ್ಚಾಗಿ ಬಿಗಿಯಾದ ಒಳ ಉಡುಪುಗಳನ್ನು ಧರಿಸುತ್ತಾರೆ. ಹಗಲಿನಲ್ಲಿ ಬಿಗಿಯಾದ ಒಳ ಉಡುಪುಗಳನ್ನು ಧರಿಸಿದರೆ, ಮಲಗುವಾಗ ಅದನ್ನು ಬದಲಿಸಿ. ಸಡಿಲವಾದ ಒಳ ಉಡುಪನ್ನು ಧರಿಸಿ. ದಿನದ ಬೆವರು ಸೋಂಕನ್ನು ಹರಡುತ್ತದೆ. ಇದಲ್ಲದೆ ಖಾಸಗಿ ಅಂಗದ ಮೇಲೆ ಮೇಲೆ ಒತ್ತಡವುಂಟಾಗುತ್ತದೆ.
ಯುಎಸ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ ಅಂಡ್ ಹ್ಯೂಮನ್ ಡೆವಲಪ್‌ಮೆಂಟ್ ಪ್ರಕಾರ, ಬಿಗಿಯಾದ ಒಳ ಉಡುಪು ಧರಿಸುವುದರಿಂದ ವೀರ್ಯದ ಸಂಖ್ಯೆ ಕಡಿಮೆಯಾಗುತ್ತದೆ. ಅದೇ ಸಮಯದಲ್ಲಿ, ಟೆಸ್ಟೋಸ್ಟೆರಾನ್ ಮಟ್ಟವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದು ಪುರುಷರಲ್ಲಿ ಬಂಜೆತನದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ರಾತ್ರಿ ವೇಳೆ ಒಳಉಡುಪು ಧರಿಸಿ ಮಲಗುವುದನ್ನು ತಪ್ಪಿಸಬೇಕು. ಸರಿಯಾಗಿ ಗಾಳಿಯಾಡುವ ಉಡುಪು ಧರಿಸಬೇಕು.ಹಾಗಿದ್ರೆ ಒಳ ಉಡುಪಿನ ಬದಲು ಏನು ಧರಿಸಬೇಕು ಎಂದು ನೀವು ಕೇಳ್ಬಹುದು. ಇದಕ್ಕೆ ಉತ್ತರ ಕಾಟನ್ ಬಾಕ್ಸರ್. ಹೌದು ಹತ್ತಿಯಿಂದ ಮಾಡಿದ ಬಾಕ್ಸರ್ ಧರಿಸಿ ನೀವು ಮಲಗಬಹುದು. ಇವು ಸಡಿಲವಾಗಿರುತ್ತವೆ. ಖಾಸಗಿ ಅಂಗಕ್ಕೆ ಯಾವುದೇ ಒತ್ತಡ ನೀಡುವುದಿಲ್ಲ. ಇನ್ನೂ ಕಾಟನ್ ಬಾಕ್ಸರ್ ಬಳಕೆ ಮಾಡಿಲ್ಲವೆಂದ್ರೆ ಇಂದೇ ಪ್ರಯೋಗ ಮಾಡಿ. ಅದು ನಿಮಗೆ ಆರಾಮದಾಯಕವೆನಿಸುತ್ತದೆ.
Make UP tips : ನಿಮ್ಮ ಬಣ್ಣಕ್ಕೆ ತಕ್ಕಂತೆ ಫೌಂಡೇಶನ್ ಆಯ್ಕೆ ಮಾಡೋದು ಹೇಗೆ?
ನೈಟ್ ಡ್ರೆಸ್ ( ಟೀ ಶರ್ಟ್,ವೆಸ್ಟ್ ಅಥವಾ ಕುರ್ತಾ) : ಈಗಾಗಲೇ ಕೆಳಗೆ ಏನು ಧರಿಸಬೇಕೆಂದು ಹೇಳಿದ್ದೇವೆ. ಬಾಕ್ಸರ್ ಮೇಲೆ ಏನು ಧರಿಸೋದು? ಟೀ ಶರ್ಟ್,ಕುರ್ತಾ ಇದ್ರಲ್ಲಿ ಯಾವುದು ಬೆಸ್ಟ್?. ಟಾಪ್ ವೇರ್ ಆಯ್ಕೆ ಮಾಡುವಾಗ ಮೊದಲು ಬಟ್ಟೆಯನ್ನು ಗಮನದಲ್ಲಿಟ್ಟುಕೊಳ್ಳಿ. ಹತ್ತಿ ಅತ್ಯುತ್ತಮ ಆಯ್ಕೆಯಾಗಿದೆ. ಹಾಗಾಗಿ ಹತ್ತಿ ಬಟ್ಟೆಯನ್ನೇ ಧರಿಸಿ. ಮೊದಲನೆಯದು ಭಾರವಾದ ಉಡುಗೆಯನ್ನು ಧರಿಸಬಾರದು. ಹಗುರವಾದ ಬಟ್ಟೆಗಳನ್ನು ಧರಿಸಬೇಕು. ನೀವು ವೆಸ್ಟ್ ಅಥವಾ ಸರಳ ಟಿ ಶರ್ಟ್ ಧರಿಸಬಹುದು. ಟಾಪ್ ವೇರ್ ಇಲ್ಲದೆಯೂ ನೀವು ರಾತ್ರಿ ಮಲಗಬಹುದು. ಇದ್ರಿಂದ ನಷ್ಟವೇನಿಲ್ಲ.
Blouse Designs: ಮದ್ವೆ ಸೀಸನ್ ಶುರು, ರಶ್ಮಿಕಾ ಸ್ಟೈಲಿಷ್ ಬ್ಲೌಸ್ ಡಿಸೈನ್ಸ್ ಇಲ್ಲಿವೆ
ರಾತ್ರಿ ಬಟ್ಟೆ ಇಲ್ಲದೆ ಮಲಗಬಹುದೇ? : ಈ ಪ್ರಶ್ನೆಗೆ ಉತ್ತರ ಹೌದು. ರಾತ್ರಿ ಬಟ್ಟೆ ಇಲ್ಲದೆ ಮಲಗಬಹುದು. ಅನೇಕ ಜನರು ವಿವಸ್ತ್ರವಾಗಿ ಮಲಗ್ತಾರೆ. ರಾತ್ರಿ ಡ್ರೆಸ್ ಹಾಕದೆ ಮಲಗುವುದು ಪ್ರಯೋಜನಕಾರಿ. ಇದು ಸಂಶೋಧನೆಯಲ್ಲಿ ಸಾಬೀತಾಗಿದೆ. ದೇಹದ ಪ್ರತಿಯೊಂದು ಭಾಗವೂ ಮುಕ್ತವಾಗಿ ಉಸಿರಾಡಲು ಸಾಧ್ಯವಾಗುತ್ತದೆ.