ಉತ್ತರಪ್ರದೇಶದ ಕಾಲೇಜೊಂದರಲ್ಲಿ ಮುಸ್ಲಿಂ ಯುವತಿಯರ ನೇತೃತ್ವದಲ್ಲಿ ನಡೆದ ಫ್ಯಾಷನ್ ಶೋ ಕಾರ್ಯಕ್ರಮಕ್ಕೆ ಮುಸ್ಲಿಂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಮುಜಾಫರ್‌ನಗರ: ಉತ್ತರ ಪ್ರದೇಶದ ಮುಜಾಫರ್‌ನಗರದ ಶ್ರೀರಾಮ್‌ ಗ್ರೂಪ್‌ ಆಫ್‌ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಮುಸ್ಲಿಂ ವಿದ್ಯಾರ್ಥಿನಿಯರ ಬುರ್ಖಾ ಕ್ಯಾಟ್‌ವಾಕ್‌ ವಿವಾದಕ್ಕೀಡಾಗಿದೆ. ಈ ಬಗ್ಗೆ ಇಸ್ಲಾಂ ಸಂಘಟನೆಯಾದ ಜಮಿಯತ್‌ ಉಲಾಮಾ ತೀವ್ರ ಅಸಮಾಧಾನ ಹೊರಹಾಕಿದೆ.

ಹಿಜಾಬ್‌ ಮತ್ತು ಬುರ್ಖಾ ಕೂಡ ಫ್ಯಾನ್ಸಿ ಬಟ್ಟೆಯಾಗಿದ್ದು, ಮುಸ್ಲಿಂ ಮಹಿಳೆಯರು ಬುರ್ಖಾದೊಂದಿಗೆ ಫ್ಯಾಷನ್‌ ಶೋನಲ್ಲಿ ಭಾಗವಹಿಸಬಹುದು ಎಂಬುದನ್ನು ತೋರಿಸಲು ಮುಸ್ಲಿಂ ವಿದ್ಯಾರ್ಥಿಗಳು ಕಾಲೇಜಿನ ವಾರ್ಷಿಕ ಫ್ಯಾಷನ್‌ ಸಮಾರಂಭ ಭಾಗವಾಗಿ ಬುರ್ಖಾ ಫ್ಯಾಷನ್‌ ಶೋ ಆಯೋಜಿಸಿದ್ದರು. ‘ಬೇಟಿ ಬಚಾವೊ ಬೇಟಿ ಪಢಾವೋ’ ಎಂಬ ಥೀಮ್‌ನಲ್ಲಿ ಬುರ್ಖಾ ಧರಿಸಿ 13 ವಿದ್ಯಾರ್ಥಿನಿಯರು ಕ್ಯಾಟ್‌ವಾಕ್‌ ಮಾಡುತ್ತಿರುವ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಉಲಾಮಾ ಆಕ್ಷೇಪ ವ್ಯಕ್ತಪಡಿಸಿದೆ.

ರಿಸೆಪ್ಷನ್​ ದಿನ ಪತ್ನಿ ಗೌರಿಗೆ ಬುರ್ಖಾ ಹಾಕ್ಕೋ, ನಮಾಜ್​ ಮಾಡೋಣ ಅಂದೆ: ಆ ದಿನದ ಘಟನೆ ವಿವರಿಸಿದ ಶಾರುಖ್​

ಇದಕ್ಕೆ ಜಮೀಯತ್ ಉಲಮಾ ಜಿಲ್ಲಾ ಸಂಚಾಲಕ ಮೌಲಾನಾ ಮುಕರ್ರಂ ಕಾಜ್ಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ‘ಯಾವುದೇ ಫ್ಯಾಷನ್ ಶೋನಲ್ಲಿ ಬುರ್ಖಾ ಹಾಕುವಂತಿಲ್ಲ ಮತ್ತು ಈ ಕಾರ್ಯಕ್ರಮವನ್ನು ಆಯೋಜಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಬುರ್ಖಾದಲ್ಲಿ ಕ್ಯಾಟ್‌ವಾಕ್ ಮಾಡುವುದು ಮುಸ್ಲಿಮರ ಭಾವನೆಗಳನ್ನು ಕೆರಳಿಸುತ್ತದೆ. ಭವಿಷ್ಯದಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಬಾರದು. ಬುರ್ಖಾ ಫ್ಯಾಷನ್ ಶೋನ ಭಾಗವಲ್ಲ’ ಎಂದಿದ್ದಾರೆ.