Asianet Suvarna News Asianet Suvarna News

ಬ್ಯಾಕ್‌ಲೆಸ್‌ ತುಂಡುಡುಗೆಯಲ್ಲಿ ಕೆಜಿಎಫ್‌ ನಟಿ, ಇಷ್ಟ್ ಕಡಿಮೆ ಬಟ್ಟೆ ಹಾಕೋ ಬದ್ಲು ಹಾಗೇ ಬರ್ಬೋದಿತ್ತಲ್ಲ ಎಂದ ನೆಟ್ಟಿಗರು!

ಕೆಜಿಎಫ್‌ ನಟಿ ಮೌನಿ ರಾಯ್‌ ಯಾವಾಗ್ಲೂ ಬೋಲ್ಡ್ ಆಂಡ್ ಹಾಟ್ ಲುಕ್‌ನಲ್ಲಿ ಕಾಣಿಸಿಕೊಳ್ತಿರುತ್ತಾರೆ. ಸದ್ಯ ಈ ನಟಿ ಅತೀ ಚಿಕ್ಕದಾಗಿರುವ ಗೋಲ್ಡನ್ ಕಲರ್ ಡ್ರೆಸ್ ಧರಿಸಿಕೊಂಡು ಪಾರ್ಟಿಯೊಂದರಲ್ಲಿ ಕಾಣಿಸಿಕೊಂಡಿದ್ದು, ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡ್ತಿದ್ದಾರೆ.

Bollywood Actress Mouni Roy trolled for her short backless dress in viral video Vin
Author
First Published Dec 15, 2023, 12:53 PM IST

ಬಾಲಿವುಡ್‌ ಮತ್ತು ಹಿಂದಿ ಕಿರುತೆರೆ ನಟಿ ಮೌನಿ ರಾಯ್‌ ಯಾವಾಗ್ಲೂ ಬೋಲ್ಡ್ ಆಂಡ್ ಹಾಟ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಪಶ್ಚಿಮ ಬಂಗಾಳ ಮೂಲದ ಈ ನಟಿ ನಾಗಿಣಿ ಸೀರಿಯಲ್ ಮೂಲಕ ಫೇಮಸ್ ಆಗಿದ್ದು, ನಂತರ ಕೆಜಿಎಫ್‌ನ ಐಟಂ ಸಾಂಗ್‌ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಆಗಾಗ ಸಖತ್ ಹಾಟ್ ಆಗಿ ಫೋಟೋಶೂಟ್ ಮಾಡಿಸ್ಕೊಂಡು ಎಲ್ಲರು ಹುಬ್ಬೇರುವಂತೆ ಮಾಡುತ್ತಾರೆ. ಬಿಕಿನಿ, ಶಾರ್ಟ್‌ ಡ್ರೆಸ್ ಧರಿಸಿಕೊಂಡು ವೆಕೇಷನ್‌ ಎಂಜಾಯ್ ಮಾಡ್ತಿರೋ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಸದ್ಯ ಈ ನಟಿ ಅತೀ ಚಿಕ್ಕದಾಗಿರುವ ಗೋಲ್ಡನ್ ಕಲರ್ ಡ್ರೆಸ್ ಧರಿಸಿಕೊಂಡು ಪಾರ್ಟಿಯೊಂದರಲ್ಲಿ ಕಾಣಿಸಿಕೊಂಡಿದ್ದು, ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.

ಮೌನಿ ರಾಯ್‌, ಯಾವಾಗ್ಲೂ ಸ್ಟೈಲಿಶ್ ಡ್ರೆಸ್‌ನಲ್ಲಿ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಆದರೆ ಈ ಬಾರಿ ಮಾತ್ರ ತುಂಡುಡುಗೆ ಧರಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ. ಗೋಲ್ಡನ್ ಕಲರ್‌ನ ಬ್ಯಾಕ್‌ಲೆಸ್ ಡ್ರೆಸ್ ಧರಿಸಿರೋ ನಟಿ, ಮುಂಬೈನ ಪಾರ್ಟಿಯೊಂದರಲ್ಲಿ ಕಾಣಿಸಿಕೊಂಡಿರೋ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ಹಾಟ್​​​ ಲುಕ್‌ನಲ್ಲಿ ಕೆಜಿಎಫ್ ಬೆಡಗಿ ಮೌನಿ ರಾಯ್; ಅಯ್ಯೋ ಮೂಡ್ ಬರಿಸಿ ಬಿಡ್ತೀರಪ್ಪಾ ಎಂದ ನೆಟ್ಟಿಗರು!

ಕೈ ಒರೆಸೋ ಬಟ್ಟೇನೆ ಇದಕ್ಕಿಂತ ದೊಡ್ಡದಾಗಿರುತ್ತೆ ಎಂದ ನೆಟ್ಟಿಗರು
ಕೆಜಿಎಫ್‌ ನಟಿಯ ಬೋಲ್ಡ್‌ ಲುಕ್‌ಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. 'ಬಾಲಿವುಡ್ ಮಂದಿ ಯಾಕೆ ಇಷ್ಟು ಕೆಟ್ಟದಾಗಿ ಡ್ರೆಸ್ ಹಾಕುತ್ತಾರೆ' ಎಂದು ಒಬ್ಬ ಬಳಕೆದಾರರು ಪ್ರಶ್ನಿಸಿದ್ದಾರೆ. ಇನ್ನೊಬ್ಬ ವ್ಯಕ್ತಿ, 'ನಾವು ಭಾರತೀಯರು ಪಾಶ್ಚಿಮಾತ್ಯ ಉಡುಗೆಯನ್ನು ಏಕೆ ನಕಲಿಸಬೇಕು. ನಾವು ನಮ್ಮದೇ ಆದ ಸುಂದರವಾದ ಬಟ್ಟೆಗಳನ್ನು ಹೊಂದಿದ್ದೇವೆ' ಎಂದು ಕಮೆಂಟಿಸಿದ್ದಾರೆ. ಮತ್ತೊಬ್ಬರು, 'ಮೌನಿ, ಉರ್ಫಿಯನ್ನೂ ನಾಚಿಸುವಂತೆ ಕಡಿಮೆ ಬಟ್ಟೆ ಹಾಕಿದ್ದಾರೆ' ಎಂದು ತಿಳಿಸಿದ್ದಾರೆ.

ಇನ್ನೊಬ್ಬ ವ್ಯಕ್ತಿ, 'ಜನರಲ್ಲಿ ಎಷ್ಟು ಕಡಿಮೆ ಬಟ್ಟೆ ಇದೆಯೋ, ಅಷ್ಟು ಕಡಿಮೆ ಬಟ್ಟೆ ಹಾಕುತ್ತಾರೆ' ಎಂದು ಹೀಯಾಳಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, 'ಭಾರತೀಯರು ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಅನುಸರಿಸುತ್ತಾರೆ ಆದರೆ ವಿದೇಶಿಯರು ಭಾರತೀಯ ಸಂಸ್ಕೃತಿಯನ್ನು ಅನುಸರಿಸುತ್ತಾರೆ' ಎಂದು ತಿಳಿಸಿದ್ದಾರೆ.

ಹಾಟ್​​​ ಲುಕ್‌ನಲ್ಲಿ KGF ಬೆಡಗಿ ಮೌನಿ ರಾಯ್​: ಅಯ್ಯಯ್ಯೋ ನಿಮ್ಮ ಡ್ರೆಸ್ ಜಾರಿ ಬೀಳುತ್ತೆ ಎಂದ ಫ್ಯಾನ್ಸ್!

ಹಲವಾರು ಸೀಸನ್‌ಗಳಲ್ಲಿ ಪ್ರಮುಖ ಜನಪ್ರಿಯ ಶೋ ನಾಗಿನ್‌ನಿಂದ ಮೌನಿ ರಾಯ್ ಹೆಚ್ಚು ಪ್ರಸಿದ್ಧಿಯಾದರು. ಆ ನಂತರ ಅಕ್ಷಯ್ ಕುಮಾರ್ ಅವರ ಗೋಲ್ಡ್ (2018) ನೊಂದಿಗೆ ಚಲನಚಿತ್ರಗಳಿಗೆ ಪಾದಾರ್ಪಣೆ ಮಾಡಿದರು. ಮೇಡ್ ಇನ್ ಚೀನಾ, ರೋಮಿಯೋ ಅಕ್ಬರ್ ವಾಲ್ಟರ್ ಮತ್ತು ವೆಲ್ಲೆಯಂತಹ ಸಿನಿಮಾಗಳಲ್ಲಿ ನಟಿಸಿದ ನಂತರ, ರಣಬೀರ್ ಕಪೂರ್-ಆಲಿಯಾ ಭಟ್ ಅವರ ಬ್ರಹ್ಮಾಸ್ತ್ರ ಚಿತ್ರದಲ್ಲಿಯೂ ನಟಿಸಿದ್ದಾರೆ. ಕೆಜಿಎಫ್ ಚಿತ್ರದಲ್ಲಿ ಮೌನಿ ರಾಯ್‌ ಐಟಂ ಸಾಂಗ್ ಹೆಚ್ಚು ವೈರಲ್ ಆಗಿತ್ತು.

Follow Us:
Download App:
  • android
  • ios