Fashion Tips: ವಯಸ್ಸಾದಂತೆ ತೋರ್ಪಡಿಸುವ ಫ್ಯಾಷನ್‌ ಸ್ಟೈಲ್‌ ಇವು

ವಯಸ್ಸಾದಂತೆ ಕಾಣಿಸಿಕೊಳ್ಳುವುದು ಯಾರಿಗೂ ಇಷ್ಟವಾಗುವುದಿಲ್ಲ. ಹೀಗಾಗಿ, ಬಹಳಷ್ಟು ಮಹಿಳೆಯರು ಏನೇನೋ ಕಸರತ್ತು ಮಾಡುತ್ತಾರೆ. ನೆನಪಿಡಿ, ಕೆಲವು ಸ್ಟೈಲ್‌ ಗಳಿಂದ ಇನ್ನೂ ಹೆಚ್ಚು ವಯಸ್ಸಾದಂತೆ ಕಾಣಬಹುದು. ಅವುಗಳ ಕುರಿತು ಎಚ್ಚರಿಕೆ ಇರಲಿ.

Avoid these fashion style looking older than your real age

ವಯಸ್ಸಾದರೂ (Old) ವಯಸ್ಸಾದಂತೆ ಕಾಣುವುದು ಯಾರಿಗೂ ಇಷ್ಟವಾಗುವುದಿಲ್ಲ. ತಮ್ಮ ನಿಜವಾದ ವಯಸ್ಸಿಗಿಂತ ನಾಲ್ಕಾರು ವರ್ಷ ಚಿಕ್ಕವರಂತೆ ಕಂಡರೆ ಏನೋ ಹರ್ಷ. ಕೆಲವು ಪುರುಷರು (Male) ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ಮಹಿಳೆಯರು (Female) ಹಾಗಲ್ಲ. ಅವರಿಗೆ ವಯಸ್ಸಾದಂತೆ ಕಾಣಿಸಿಕೊಳ್ಳುವುದು ಸ್ವಲ್ಪವೂ ಇಷ್ಟವಾಗುವುದಿಲ್ಲ. ಹೀಗಾಗಿ, ಏನೇನೋ ಫ್ಯಾಷನ್‌ (Fashion) ಮಾಡುತ್ತಾರೆ. ಆದರೆ, ಕೆಲವು ಫ್ಯಾಷನ್‌ ಸ್ಟೈಲ್‌ ಗಳು ಅವರ ವಯಸ್ಸನ್ನು ಮರೆಮಾಚುವುದಿಲ್ಲ, ಬದಲಿಗೆ ಇನ್ನಷ್ಟು ವೃದ್ಧರಂತೆ ಕಾಣಿಸುವಂತೆ ಮಾಡಿಬಿಡುತ್ತವೆ. ಅಂತಹ ಫ್ಯಾಷನ್‌ ಸ್ಟೈಲ್‌ ಗಳು ಯಾವುವು ಎಂದು ನೋಡಿಕೊಳ್ಳಿ.

•    ಹೇರ್‌ ಸ್ಟೈಲ್ (Hair Style)
ಹಳೆಯ ಬಾಲಿವುಡ್‌ ಸಿನಿಮಾಗಳನ್ನು ನೆನಪಿಸಿಕೊಳ್ಳಿ. ಅಂದಿನ ಹಿರೋಯಿನ್‌ ಗಳು ದೊಡ್ಡದಾದ ಗಂಟು, ತಲೆಗಿಂತ ದೊಡ್ಡದಾಗಿರುವ ಹೇರ್‌ ಸ್ಟೈಲ್‌ ಮಾಡಿಕೊಳ್ಳುತ್ತಿದ್ದರು. ಇತ್ತೀಚೆಗೆ ಈ ಟ್ರೆಂಡ್‌ ಅಲ್ಲಲ್ಲಿ ಮತ್ತೆ ಕಂಡುಬರುತ್ತಿದೆ. ಆದರೆ, ಇದರಿಂದ ಮಹಿಳೆಯರು ಇನ್ನಷ್ಟು ವಯಸ್ಸಾದಂತೆ ಕಾಣುತ್ತಾರೆ. 

ಲಿಪ್‌ಸ್ಟಿಕ್ ಹಚ್ಚಲು ಇಲ್ಲಿವೆ ಟಿಪ್ಸ್

•    ಒಂದೇ ಬಣ್ಣದ ಟಾಪ್‌, ಬಾಟಮ್‌ (Same Color Top and Bottom)
ಒಂದೇ ಬಣ್ಣದ ಟಾಪ್‌ ಹಾಗೂ ಬಾಟಮ್‌ ಧರಿಸುವುದರಿಂದ ನಿಜವಾದ ವಯಸ್ಸಿಗಿಂತ ಹೆಚ್ಚು ವಯಸ್ಸಾದಂತೆ ಕಾಣುವುದು ಗ್ಯಾರೆಂಟಿ. ಈಗಂತೂ ಬಣ್ಣಗಳ ಕಾಂಬಿನೇಷನ್‌ ಕೂಡ ಮಾಡುವುದಿಲ್ಲ. ಮಿಕ್ಸಿಂಗ್‌ ಪ್ರಿಂಟ್‌ ಹಾಗೂ ಪ್ಯಾಟರ್ನ್‌ (Pattern) ಇಂದಿನ ಟ್ರೆಂಡ್. 

•    ತೆಳುವಾದ ಐಬ್ರೋ (Eyebrow)
ಒಂದು ಕಾಲದಲ್ಲಿ ತೆಳುವಾದ ಹುಬ್ಬು ಫ್ಯಾಷನ್‌ ಆಗಿತ್ತು. ಈಗ ಹಾಗಿಲ್ಲ. ತೆಳ್ಳನೆಯ ಹುಬ್ಬು ಮುಖವನ್ನು ವಯಸ್ಸಾದಂತೆ ತೋರುತ್ತದೆ. ಹೀಗಾಗಿ, ನಿಮ್ಮ ಹುಬ್ಬು ಸ್ವಲ್ಪ ದಪ್ಪಗೆ ಇರಲಿ. ಹೇಗೆ ಬೇಕೋ ಹಾಗೆ ಹುಬ್ಬನ್ನು ಬಿಟ್ಟುಕೊಳ್ಳುವುದು ಈಗಿನ ಟ್ರೆಂಡ್‌ ಕೂಡ ಹೌದು. 

•    ನಿಯಮಿತ ಸ್ಕಿನ್‌ ಕೇರ್‌ (Skin Care) ಮರೆತ್ರಾ?
ನಿಮ್ಮ ಯೌವನದ ದಿನಗಳನ್ನು ಒಮ್ಮೆ ನೆನಪಿಸಿಕೊಳ್ಳಿ. ಅಂದು ದಿನವೂ ಮುಖಕ್ಕೆ ಉತ್ತಮ ಕ್ರೀಮ್‌ ಗಳನ್ನು ಹಚ್ಚಿಕೊಳ್ಳುವುದನ್ನು ಮರೆಯುತ್ತಿರಲಿಲ್ಲ. ಆದರೆ, ಮೂವತ್ತು ದಾಟಿದಂತೆ ಅದನ್ನು ಬಿಟ್ಟುಬಿಡುವುದು ಸಹಜ. ಆದರೆ, ಮುಖದ ಚರ್ಮಕ್ಕೆ ಚೂರು ಆರೈಕೆ ಬೇಕು. ಹೀಗಾಗಿ, ಅತ್ಯುತ್ತಮ ಗುಣಮಟ್ಟದ ಕ್ರೀಮ್‌ ಅಥವಾ ತೈಲವನ್ನು ದಿನವೂ ಮುಖಕ್ಕೆ ಬಳಸಿ. ವಾರಕ್ಕೊಮ್ಮೆ ಮಸಾಜ್‌ ಮಾಡಿಕೊಳ್ಳಿ.

•    ಡ್ರೆಸ್‌ ಬಣ್ಣಕ್ಕೆ ಲಿಪ್‌ಸ್ಟಿಕ್‌ ಮ್ಯಾಚ್‌ (Matching Lipstick) ಮಾಡುವುದು ಮತ್ತು ಗಾಢ (Dark) ಲಿಪ್‌ ಸ್ಟಿಕ್
ಡ್ರೆಸ್‌ ಹಾಗೂ ಲಿಪ್‌ ಸ್ಟಿಕ್‌ ಬಣ್ಣವನ್ನು ಮ್ಯಾಚ್‌ ಮಾಡುವುದು ಹಳೆಯ ಫ್ಯಾಷನ್. ಇದರಿಂದ ಹಳೆಯ ಲುಕ್‌ ದೊರೆಯುತ್ತದೆ. ಗಾಢ ಬಣ್ಣದ ಲಿಪ್‌ಸ್ಟಿಕ್‌ ಬಳಕೆ ಮಾಡುವುದು ಸಹ ಇಂಥದ್ದೇ ಫ್ಯಾಷನ್. ಇದರಿಂದ ತುಟಿಗಳ ಮೇಲಿನ ಗೆರೆಗಳು ಎದ್ದು ಕಾಣಿಸುತ್ತವೆ. ಹೀಗಾಗಿ, ತೆಳು ಬಣ್ಣದ ಲಿಪ್‌ಸ್ಟಿಕ್‌ ಗಳು ಅತ್ಯುತ್ತಮ. 

•    ಸನ್‌ ಗ್ಲಾಸ್‌ (Sunglass) ಬಳಕೆಯಲ್ಲಿ ಎಚ್ಚರವಿರಲಿ
ಬೇಸಿಗೆ ಸಮಯದಲ್ಲಿ ಧರಿಸುವ ಸನ್‌ ಗ್ಲಾಸುಗಳು ಎಲ್ಲ ಕಾಲಕ್ಕೂ ಹೊಂದುವುದಿಲ್ಲ. ದಟ್ಟ ಬಣ್ಣದ ಸನ್‌ ಗ್ಲಾಸುಗಳು ಟ್ರೆಂಡಿಯಾದರೂ ಎಲ್ಲರಿಗೂ ಹೊಂದಾಣಿಕೆ ಆಗುವುದಿಲ್ಲ. ಇದರಿಂದ ಮುಖದ ಮೇಲಿ =ನ ಸುಕ್ಕುಗಳು ಹೆಚ್ಚು ಕಾಣಿಸುತ್ತವೆ. ಲಘು ಬಣ್ಣದ ಸನ್‌ ಗ್ಲಾಸುಗಳು ಎಲ್ಲರಿಗೂ ಓಕೆ.

ಸೀರೆ ಹೇಗೆ ಉಡಬೇಕು ಅಂತ ವಿದ್ಯಾ ಬಾಲನ್‌ನಿಂದ ಕಲಿಯಬೇಕು

* ಒಂದೇ ರೀತಿಯ ಹೇರ್‌ ಸ್ಟೈಲ್‌ ಏಕೆ?
ಜೀವನವಿಡೀ ಒಂದೇ ರೀತಿಯ ಹೇರ್‌ಸ್ಟೈಲ್‌ ಇಟ್ಟುಕೊಂಡರೆ ಬೋರಾಗುತ್ತದೆ. ಹೀಗಾಗಿ, ಕೆಲವು ವರ್ಷಗಳಿಗೆ ಒಮ್ಮೆಯಾದರೂ ಹೇರ್‌ ಸ್ಟೈಲ್‌ ಬದಲಾವಣೆ ಮಾಡಿ. ಇದರಿಂದ ನಿಮ್ಮ ಲುಕ್‌ ಬದಲಾಗುತ್ತದೆ. ಮುಖಕ್ಕೆ ಹೊಂದುವಂತೆ ಬದಲಾವಣೆ ಮಾಡಿಕೊಳ್ಳಿ. ಉತ್ತಮ ಹೇರ್‌ ಸ್ಟೈಲ್‌ ನಿಮ್ಮ ವಯಸ್ಸನ್ನು ಮರೆಮಾಚುತ್ತದೆ, ನಿಮ್ಮಲ್ಲೂ ಹೊಸ ಉತ್ಸಾಹ ತುಂಬುತ್ತದೆ. 

•    50ರ ಮೇಲೆ ಕಪ್ಪು ಬಣ್ಣ (Black Color) ಬೇಡ
ವಯಸ್ಸಾಗುತ್ತಿರುವಾಗ ಕಪ್ಪು ಬಣ್ಣದ ಬಳಕೆ ಕಡಿಮೆ ಮಾಡುವುದು ಉತ್ತಮ. ವಯಸ್ಸಾದಂತೆ ಚರ್ಮ ಕಳೆಗುಂದುವುದು ಸಹಜ.ಕಪ್ಪು ಬಣ್ಣ ಕಳೆಗುಂದಿದ ಚರ್ಮವನ್ನು ಇನ್ನೂ ದಟ್ಟವಾಗಿ ತೋರುತ್ತದೆ. ಕಪ್ಪು ಬಣ್ಣದ ಕಾಂಬಿನೇಷನ್‌ ಇರಲಿ, ಆದರೆ, ಇಡೀ ಡ್ರೆಸ್‌ ಕಪ್ಪು ಬಣ್ಣದಲ್ಲಿರುವುದು ಬೇಡ.
 

Avoid these fashion style looking older than your real age


 

Latest Videos
Follow Us:
Download App:
  • android
  • ios