Fashion News : ಫ್ಯಾಷನ್ ಜೊತೆ ಶ್ರೀಮಂತಿಕೆ ತೋರಿಸ್ಬೇಕೆಂದ್ರೆ ಧರಿಸಿ ಬಂಗಾರದ ಮಾಸ್ಕ್
ದಿನ ದಿನಕ್ಕೂ ಫ್ಯಾಷನ್ ಬದಲಾಗುತ್ತೆ. ಜನರ ಭಾವನೆ, ಜಗತ್ತಿನಲ್ಲಾಗ್ತಿರುವ ಬದಲಾವಣೆಗೆ ತಕ್ಕಂತೆ ಫ್ಯಾಷನ್ ಬರ್ತಿರುತ್ತದೆ. ಈಗ ಮಾಸ್ಕ್ ಅನಿವಾರ್ಯ ಹಾಗೂ ಅವಶ್ಯಕ. ಇದ್ರಲ್ಲೇ ಸಾಕಷ್ಟು ವೆರೈಟಿ ನೋಡ್ಬಹುದು. ಬಂಗಾರದಲ್ಲೂ ಬಗೆ ಬಗೆ ಮಾಸ್ಕ್ ಗಮನ ಸೆಳೆಯುತ್ತಿದೆ.
ಕೊರೊನಾ (Corona) ಇಡೀ ಜಗತ್ತನ್ನು ಬದಲಿಸಿದೆ. ಕೊರೊನಾಕ್ಕೆ ನಮ್ಮನ್ನು ಬಿಟ್ಟು ಹೋಗುವ ಮನಸ್ಸಿಲ್ಲ. ಈ ಸೋಂಕಿ (Infection) ನ ಕಾರಣದಿಂದಾಗಿ ಜಗತ್ತಿನ ಜನರು ಮುಖಕ್ಕೆ ಮಾಸ್ಕ್ (Mask) ಹಾಕುವುದು ಅನಿವಾರ್ಯವಾಗಿದೆ. ಎಲ್ಲೋ ತೀರಾ ಅಪರೂಪಕ್ಕೆ ಮಾಸ್ಕ್ ಧರಿಸಲಾಗ್ತಿತ್ತು. ಆದ್ರೆ ಕೊರೊನಾ ಬಂದ್ಮೇಲೆ ಮಾಸ್ಕ್ ಇಲ್ಲದೆ ಮನೆಯಿಂದ ಹೊರಗೆ ಬರುವಂತಿಲ್ಲ. ಮಾಸ್ಕ್ ಅನಿವಾರ್ಯವಾಗಿದ್ದರಿಂದ ಅದಕ್ಕೆ ಬೇಡಿಕೆ ಕೂಡ ಸಹಜವಾಗಿಯೇ ಹೆಚ್ಚಾಗುತ್ತದೆ. ಹಾಗೆ ಅದ್ರಲ್ಲಿ ಜನರು ಫ್ಯಾಷನ್ ಹುಡುಕಾಟ ಶುರು ಮಾಡ್ತಾರೆ. ಮಾರುಕಟ್ಟೆಗೆ ಈಗ ಬಗೆ ಬಗೆಯ ಮಾಸ್ಕ್ ಲಗ್ಗೆಯಿಟ್ಟಿದೆ. ಡ್ರೆಸ್, ಸೀರೆ ಸೇರಿದಂತೆ ಎಲ್ಲ ಡ್ರೆಸ್ ಗಳಿಗೆ ಮ್ಯಾಚಿಂಗ್ ಮಾಸ್ಕ್ ನೀಡುವುದು ಈಗ ಸಾಮಾನ್ಯ. ಇಷ್ಟೇ ಅಲ್ಲ ಮಕ್ಕಳನ್ನು ಸೆಳೆಯುವ ಸಾಕಷ್ಟು ಮಾಸ್ಕ್ ಗಳೂ ಮಾರುಕಟ್ಟೆಯಲ್ಲಿವೆ. ಭಾರತ ಅಂದ್ಮೇಲೆ ಚಿನ್ನ ಬಿಡೋಕೆ ಆಗುತ್ತಾ? ಇಲ್ಲಿನ ಜನರು ಚಿನ್ನ ಪ್ರಿಯರು. ಫ್ಯಾಷನ್ ಗಾಗಿ ಮಾತ್ರವಲ್ಲ ಸೇವಿಂಗ್ ರೂಪದಲ್ಲಿಯೂ ಚಿನ್ನವನ್ನು ಖರೀದಿ ಮಾಡ್ತಾರೆ. ಚಿನ್ನ ಇಷ್ಟಪಡುವವರಿಗಾಗಿಯೇ ಚಿನ್ನದ ಮಾಸ್ಕ್ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಇತ್ತೀಚಿಗೆ ಚಿನ್ನದ ಮಾಸ್ಕ್ ಒಂದು ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪಾಟ್ನಾದ ಜ್ಯುವೆಲರಿ ಪ್ರದರ್ಶನದಲ್ಲಿ ಚಿನ್ನದ ಮಾಸ್ಕ್ ಗಳನ್ನು ಪ್ರದರ್ಶಿಸಲಾಗಿದೆ.
ಈ ಮಾಸ್ಕ್ ಕೇವಲ ಕೊರೊನಾದಿಂದ ನಿಮ್ಮನ್ನು ದೂರವಿಡುವುದು ಮಾತ್ರವಲ್ಲ, ಮದುವೆ, ಸಮಾರಂಭಗಳಲ್ಲಿ ಬಂಗಾರ ಧರಿಸುವ ನಿಮ್ಮ ಆಸೆಯನ್ನು ಈಡೇರಿಸುತ್ತದೆ. ನೀವು ಇಷ್ಟು ದಿನ ಬಂಗಾರದ ಆಭರಣ ಮಾತ್ರ ಧರಿಸ್ತಾ ಇದ್ದರಿ. ಇನ್ಮುಂದೆ ಬಂಗಾರದ ಮಾಸ್ಕ್ ಧರಿಸಿ ಎಲ್ಲರ ಗಮನ ಸೆಳೆಯಬಹುದು.
ಎಲ್ಲಿ ನಡೆದಿತ್ತು ಪ್ರದರ್ಶನ : ಪಾಟ್ನಾಸ ಜ್ಞಾನ ಭವನದಲ್ಲಿ ಬಂಗಾರದ ಮಾಸ್ಕ್ ಪ್ರದರ್ಶನ ನಡೆದಿತ್ತು. ಮೂರು ದಿನಗಳ ಕಾಲ ನಡೆದ ಪ್ರದರ್ಶನದ ನಂತ್ರ ಮಾಸ್ಕ್ ಎಲ್ಲರ ಚರ್ಚೆಗೆ ಕಾರಣವಾಗಿದೆ. ಮಾಸ್ಕ್ ಎಲ್ಲರಿಗೂ ಇಷ್ಟವಾಗಿದೆಯಂತೆ.
ಚಿನ್ನದ ಮಾಸ್ಕ್ ಬೆಲೆ ಎಷ್ಟು ಗೊತ್ತಾ? : ಚಿನ್ನದ ಮಾಸ್ಕ್ ಬೆಲೆ ತೂಕಕ್ಕೆ ತಕ್ಕಂತೆ ಬದಲಾಗುತ್ತದೆ. ಚಿನ್ನದ ಮಾಸ್ಕ್ 75 ಸಾವಿರದಿಂದ 1.5 ಲಕ್ಷ ರೂಪಾಯಿ ಇರಲಿದೆ ಎಂದು ಕಂಪನಿ ಹೇಳಿದೆ. 22 ಕ್ಯಾರೆಟ್ ನಿಂದ ಸಿದ್ಧವಾದ ಈ ಮಾಸ್ಕ್ ತೂಕ 25 ಗ್ರಾಂ ಇದೆಯಂತೆ. ಇದರ ಬೆಲೆ 75 ಸಾವಿರ ರೂಪಾಯಿ ಎಂದು ಕಂಪನಿ ಹೇಳಿದೆ.
ಹೆಚ್ಚಾಗಲಿದೆ ಮಾಸ್ಕ್ ಗೆ ಬೇಡಿಕೆ : ತಜ್ಞರ ಪ್ರಕಾರ, ಶೀಘ್ರದಲ್ಲೇ ಚಿನ್ನದ ಮಾಸ್ಕ್ ಗೆ ಬೇಡಿಕೆ ಹೆಚ್ಚಾಗಲಿದೆಯಂತೆ. ನಾವು ಧರಿಸುವ ಬೇರೆ ಎಲ್ಲ ಬಂಗಾರದ ಆಭರಣಕ್ಕಿಂತ ಮಾಸ್ಕ್ ಹೆಚ್ಚು ಟ್ರೆಂಡಿಯಾಗಿದೆ. ಹಾಗೆ ಮುಖಕ್ಕೆ ಸುಂದರವಾಗಿ ಕಾಣುತ್ತದೆ.
ಸ್ಟೈಲಿಶ್ ಉಗುರು ನಿಮ್ಮದಾಗಬೇಕೆ ? ಹಾಗಾದ್ರೆ ಇಂಥಾ ತಪ್ಪು ಮಾಡಬೇಡಿ
ಚಿನ್ನದ ಮಾಸ್ಕ್ ತಯಾರಿಸಿದ್ದು ಯಾವ ಕಂಪನಿ ? : ಈ ಚಿನ್ನದ ಮಾಸ್ಕನ್ನು ಎಸ್‌ಎಲ್ ಗೋಲ್ಡ್ ಕಂಪನಿ ತಯಾರಿಸಿದೆ. ಕಂಪನಿ ಮಾಲೀಕ ಜಯಂತ್ ಸೋನಿ ಈ ಉತ್ಪನ್ನದ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ. ಈ ಮಾಸ್ಕ್ ಸಂಪೂರ್ಣ ಹ್ಯಾಂಡ್ ಮೇಡ್. ಇದನ್ನು ಜನರು ಇಷ್ಟಪಡ್ತಿದ್ದಾರೆ ಎಂದಿದ್ದಾರೆ. ಈ ಹಿಂದೆ ಚಂಡೀಗಢದಲ್ಲಿ ಚಿನ್ನದ ಮಾಸ್ಕ್ ಪರಿಚಯಿಸಲಾಗಿತ್ತು. ಈಗ ಬಿಹಾರದಲ್ಲೂ ಜನರು ಇದನ್ನು ಇಷ್ಟಪಡ್ತಿದ್ದಾರೆ.
ಮುಖದ ಹೊಳಪಿಗೆ ದುಬಾರಿ ಕ್ರೀಮುಗಳೇಕೆ? ಕೇಸರಿ ಬಳಸಿ ಸಾಕು..
ಹೂಡಿಕೆ ಮೂಲವಾಗ್ತಿದೆ ಮಾಸ್ಕ್ : ಕಂಪನಿ ಈವರೆಗೆ 17 ಮಾಸ್ಕ್ ಗಳನ್ನು ಮಾರಾಟ ಮಾಡಿದೆಯಂತೆ. ಇನ್ನೂ ಅನೇಕರು ಮಾಸ್ಕ್ ಖರೀದಿಸುವ ಆಸಕ್ತಿ ಹೊಂದಿದ್ದಾರಂತೆ. ಅನೇಕರು ಬಂಗಾರದ ಮಾಸ್ಕನ್ನು ಹೂಡಿಕೆ ರೀತಿಯಲ್ಲಿ ಬಳಸ್ತಿದ್ದಾರೆ. ವಧುವಿಗೆ ಹೊಸ ಲುಕ್ ನೀಡಲು ಬಂಗಾರದ ಮಾಸ್ಕ್ ಖರೀದಿ ಮಾಡುವವರಿದ್ದಾರೆ. ಮಾಸ್ಕನ್ನು ಜಾಲರಿಯಂತೆ ಮಾಡಲಾಗಿದೆ. ಫ್ಯಾಷನ್ ಜೊತೆ ಉಸಿರಾಟಕ್ಕೆ ನೆರವಾಗುವಂತೆ ಅದನ್ನು ಸಿದ್ಧಪಡಿಸಲಾಗಿದೆ.