Fashion Tips : ಟೈ ಧರಿಸುವ ಪುರುಷರಿಗೊಂದಿಷ್ಟು ಸಲಹೆಗಳು
ಗೌರವ ಹೆಚ್ಚಿಸುವ ಟೈ ಈಗ ಫ್ಯಾಷನ್ ಕೂಡ ಹೌದು. ಕೇವಲ ಫಾರ್ಮಲ್ ಡ್ರೆಸ್ ಗೆ ಮಾತ್ರವಲ್ಲ, ಸ್ಟೈಲಿಶ್ ಡ್ರೆಸ್ ಗೂ ಟೈ ಧರಿಸುವವರಿದ್ದಾರೆ. ಯಾವ ಡ್ರೆಸ್ ಮೇಲೆ ನೀವು ಟೈ ಧರಿಸಿದ್ದೀರಿ ಎಂಬುದು ಮುಖ್ಯವಲ್ಲ, ಟೈ ಧರಿಸಿದಾಗ ನೀವು ಹೇಗೆ ಕಾಣ್ತೀರಿ ಎಂಬುದು ಇಂಪಾರ್ಟೆಂಟ್ ಆಗುತ್ತದೆ.
ಟೈ (Tie) ಧರಿಸಿದ ಹೊರತು ಫಾರ್ಮಲ್ ಡ್ರೆಸ್ (Formal Dress) ಪೂರ್ಣಗೊಳ್ಳುವುದಿಲ್ಲ. ಟೈ ಡ್ರೆಸ್ ಗೆ ವಿಶೇಷ ಲುಕ್ (Look )ನೀಡುತ್ತದೆ. ಮಾರುಕಟ್ಟೆಯಲ್ಲಿ ಬಗೆ ಬಗೆಯ ವಿನ್ಯಾಸದ, ಬಣ್ಣದ ಟೈಗಳು ಲಭ್ಯವಿದೆ. ಕೆಲವರು ಪ್ರತಿ ದಿನ ಟೈ ಧರಿಸುತ್ತಾರೆ. ಆದ್ರೆ ಸಾಕಷ್ಟು ಕಷ್ಟಪಟ್ಟು ಟೈ ಕಟ್ಟಿದ ನಂತರವೂ ಲುಕ್ ಸಂಪೂರ್ಣವಾಗಿ ಪರ್ಫೆಕ್ಟ್ ಎನ್ನಿಸುವುದಿಲ್ಲ. ಟೈ ಕಟ್ಟುವಾಗ ಪುರುಷರು ಸಾಮಾನ್ಯವಾಗಿ ಕೆಲವು ತಪ್ಪುಗಳನ್ನು ಮಾಡ್ತಾರೆ. ಈ ತಪ್ಪುಗಳು ನಿಮ್ಮ ಡ್ರೆಸ್ ಸೆನ್ಸ್ ಹಾಳು ಮಾಡ್ತವೆ. ಟೈ ಧರಿಸುವವರು ಅದ್ರ ಬಗ್ಗೆ ಸಾಮಾನ್ಯ ಜ್ಞಾನ ಹೊಂದಿರಬೇಕು. ಯಾವ ರೀತಿಯ ಟೈ,ಯಾವ ಬಣ್ಣ (Color )ದ ಟೈ,ಯಾವ ಡ್ರೆಸ್ (Dress )ಗೆ ಟೈ ಹೀಗೆ ಅನೇಕ ಫ್ಯಾಷನ್ ವಿಷ್ಯಗಳನ್ನು ಅವರು ತಿಳಿದಿರಬೇಕು.
ಟೈ ಧರಿಸುವ ವೇಳೆ ಮಾಡುವ ಸಾಮಾನ್ಯ ತಪ್ಪುಗಳು
ಟೈ ಗಾತ್ರ : ಟೈಗೆ ಒಂದು ಸರಿಯಾದ ಉದ್ದವಿರುತ್ತದೆ. ಅತಿ ಚಿಕ್ಕ ಟೈ ಅಥವಾ ಅತಿ ಉದ್ದ ಟೈ ಎರಡೂ ನಿಮ್ಮ ಲುಕ್ ಹಾಳು ಮಾಡಬಹುದು. ಅನೇಕರು ಅಂದಾಜಿನ ಮೇಲೆ ಟೈ ಧರಿಸುತ್ತಾರೆ ಇದು ತಪ್ಪು. ಟೈನ ಉದ್ದವು ಪ್ಯಾಂಟ್ ಬೆಲ್ಟ್ ಬಕಲ್ ವರೆಗೆ ಇರಬೇಕು. ಟೈ ಕಟ್ಟುವಾಗ, ಅದರ ಉದ್ದದ ಬಗ್ಗೆ ಗಮನ ಹರಿಸಿ.
ಟೈ ಬಣ್ಣ : ಹೆಚ್ಚಿನ ಪುರುಷರು ಟೈ ಬಣ್ಣ ಮತ್ತು ವಿನ್ಯಾಸದ ಬಗ್ಗೆ ಗಮನ ನೀಡುವುದಿಲ್ಲ. ಅವರ ತಪ್ಪು ಆಯ್ಕೆಯಿಂದ ಲುಕ್ ಹಾಳಾಗುತ್ತದೆ. ಶರ್ಟ್ ಮತ್ತು ಸೂಟ್‌ಗೆ ಪೂರಕವಾಗುವಂತೆ ಟೈ ಬಣ್ಣವನ್ನು ಆಯ್ಕೆ ಮಾಡಬೇಕಾಗುತ್ತದೆ.ಬಣ್ಣದ ಬಗ್ಗೆ ಗೊಂದಲವಿದ್ದರೆ ಎಲ್ಲ ಬಣ್ಣದ ಟೈಗೆ ಹೊಂದಿಕೆಯಾಗಬಲ್ಲ ಸೂಟ್ ಖರೀದಿ ಮಾಡಿ. ಚಾರ್ಕೋಲ್ ಸೂಟ್, ಡಾರ್ಕ್ ನೇವಿ ಅಥವಾ ವೈಟ್ ಸೂಟ್ ಖರೀದಿಸಬಹುದು.
Blouse Designs: ಮದ್ವೆ ಸೀಸನ್ ಶುರು, ರಶ್ಮಿಕಾ ಸ್ಟೈಲಿಷ್ ಬ್ಲೌಸ್ ಡಿಸೈನ್ಸ್ ಇಲ್ಲಿವೆ
ಸ್ವಚ್ಛತೆ : ಟೈ ನಿಮ್ಮ ವೃತ್ತಿಯ ಗೌರವ. ಆದ್ದರಿಂದ ಟೈ ಅನ್ನು ಸ್ವಚ್ಛವಾಗಿರಿಸಿಕೊಳ್ಳುವುದು ಮುಖ್ಯ. ಅದು ಕೊಳಕಾಗದಂತೆ ನೋಡಿಕೊಳ್ಳಿ. ಹಾಗೆ ಟೈ ಮೇಲೆ ರಿಂಕಲ್ ಬೀಳದಂತೆ ಇಡಬೇಕು. ಪ್ರತಿ ಬಾರಿ ಟೈ ಸ್ವಚ್ಛತೆ ಬಗ್ಗೆ ಗಮನ ನೀಡಿ. ಟೈಗೆ ಹಾಕಿರುವ ಗಂಟನ್ನು ಬಿಚ್ಚಿಡಿ.
ಟೈ ಅಗಲ : ಟೈ ಅಗಲದ ಬಗ್ಗೆಯೂ ಗಮನ ನೀಡುವ ಅಗತ್ಯವಿದೆ. ನಿಮ್ಮ ದೇಹ ಅಥವಾ ಸೂಟ್‌ಗೆ ಅನುಗುಣವಾಗಿ ಟೈನ ಅಗಲವನ್ನು ನೀವು ಆರಿಸಬೇಕಾಗುತ್ತದೆ.
ಆಕ್ಸೆಸರಿ ಓವರ್ಲೋಡ್ : ಟೈನೊಂದಿಗೆ ಸಾಮಾನ್ಯವಾಗಿ ಟೈ-ಕ್ಲಿಪ್ ಮತ್ತು ಬಾರ್ಸ್, ಟೈ ಚೈನ್ಸ್ ಗಳನ್ನು ಧರಿಸಲಾಗುತ್ತದೆ. ಆದ್ರೆ ಸದ್ಯ ಟೈ ಬಾರ್ಸ್ ಫ್ಯಾಷನ್‌ನಲ್ಲಿದೆ. ಟೈ ಪಿನ್‌ಗಳು, ಚೈನ್ ಚಾಲ್ತಿಯಲ್ಲಿಲ್ಲ. ಹಾಗಾಗಿ ಟೈ ಜೊತೆ ಹೆಚ್ಚು ಆಕ್ಸೆಸರಿಗೆ ಧರಿಸಬೇಡಿ.
Fashion Tips : ಬಾಲಿವುಡ್ ನಟಿಯರಂತೆ ಮಿಂಚಲು ವಾರ್ಡ್ರೋಬ್ ನಲ್ಲಿರಲಿ ಈ ವಸ್ತು
ಟೈ ಗಂಟು : ಮೊದಲ ಬಾರಿ ಟೈ ಧರಿಸುವವರು ಮಾತ್ರವಲ್ಲ ಪ್ರತಿ ದಿನ ಟೈ ಧರಿಸುವವರೂ ಟೈ ಕಟ್ಟುವಾಗ ಸಮಸ್ಯೆ ಎದುರಿಸುತ್ತಾರೆ. ವರ್ಷವಾದ್ರೂ ಅನೇಕರಿಗೆ ಟೈ ಧರಿಸುವುದನ್ನು ಕಲಿಯುವುದಿಲ್ಲ. ಸರಿಯಾಗಿ ಟೈ ಗಂಟು ಹಾಕದೆ ಹೋದಲ್ಲಿ ನೋಡಲು ಚೆನ್ನಾಗಿ ಕಾಣುವುದಿಲ್ಲ. ಇಂಟರ್ನೆಟ್ ನಲ್ಲಿ ಸಾಕಷ್ಟು ವಿಡಿಯೋಗಳು ಲಭ್ಯವಿದೆ. ಅದ್ರಲ್ಲಿ ಟೈ ಹೇಗೆ ಕಟ್ಟಬೇಕೆಂಬ ಮಾಹಿತಿ ಸಿಗುತ್ತದೆ. ಅದನ್ನು ನೋಡಿ ನೀವು ಕಲಿಯಬಹುದು.
ಖರೀದಿ ವೇಳೆ ಗಮನವಿರಲಿ : ಸಾಮಾನ್ಯವಾಗಿ ಚೆಂದದ ಟೈ ಖರೀದಿಸಿ ಬರ್ತೇವೆ. ಖರೀದಿಸಿದ ಟೈ ನಿಮ್ಮ ವಾರ್ಡೋಬ್ ನಲ್ಲಿರುವ ಡ್ರೆಸ್ ಅಥವಾ ಸೂಟ್ ಗೆ ಮ್ಯಾಚ್ ಆಗುತ್ತಾ ಎಂಬುದನ್ನು ಗಮನಿಸಿರುವುದಿಲ್ಲ. ಸಾಧ್ಯವಾದಷ್ಟು ನಿಮ್ಮ ಡ್ರೆಸ್ ಗೆ ಹೊಂದಿಕೆಯಾಗಬಲ್ಲ ಟೈ ಖರೀದಿ ಮಾಡಿ.