ಟ್ರೆಂಡಿ Plastic Surgery , ಚೆನ್ನಾಗಿ ಕಾಣಬೇಕಂದ್ರೆ ನೀವೂ ಸೌಂದರ್ಯ ಚಿಕಿತ್ಸೆ ಮಾಡಿಸ್ಕೊಳಿ
ಸೌಂದರ್ಯ ಚಿಕಿತ್ಸೆ ಮೂಲಕ ಸದಾಕಾಲ ಯೌವನಿಗರಂತೆ ಮಿಂಚುವುದು ಸಾಧ್ಯ. ವಯಸ್ಸಾದರೂ ಮುಖದ ಚಾರ್ಮ್ ಅನ್ನು ಹಾಗೆಯೇ ಉಳಿಸಿಕೊಂಡು ಆತ್ಮವಿಶ್ವಾಸದಿಂದ ಇರುವುದು ಸಾಧ್ಯ. ಇದಕ್ಕೆ ಹಲವಾರು ರೀತಿಯ ಪ್ಲಾಸ್ಟಿಕ್ ಸರ್ಜರಿಗಳು ಲಭ್ಯ. ಇತ್ತೀಚಿನ ದಿನಗಳಲ್ಲಿ ಟ್ರೆಂಡಿಯಾಗಿರುವ ಕೆಲವು ಪ್ಲಾಸ್ಟಿಕ್ ಸರ್ಜರಿಗಳಿವೆ.
ಇದು ಕೃತಕ ಯುಗ. ಎಲ್ಲವನ್ನೂ ಕೃತಕವಾಗಿ ನಿರ್ಮಿಸಲು ಸಾಧ್ಯ. ಮನುಷ್ಯನ ಸೌಂದರ್ಯದಿಂದ ಹಿಡಿದು ವಿವಿಧ ಅಂಗಾಂಗಗಳನ್ನೂ ಕೃತಕವಾಗಿ ನಿರ್ಮಿಸಲಾಗುತ್ತಿದೆ. ಹೀಗಾಗಿ, ಪ್ಲಾಸ್ಟಿಕ್ ಸರ್ಜರಿ ಅತ್ಯಂತ ಸಾಮಾನ್ಯವಾಗಿದೆ. ಸೌಂದರ್ಯ ವಲಯದಲ್ಲಿ ಪ್ಲಾಸ್ಟಿಕ್ ಸರ್ಜರಿ ಹೆಚ್ಚು ಪ್ರಚಲಿತದಲ್ಲಿದೆ. ನಿಮಗೆ ನಿಮ್ಮ ಹಳೆಯ ಲುಕ್ ಬೇಸರವಾಗಿದ್ದರೆ ಹೊಸ ಲುಕ್ ನೊಂದಿಗೆ ಕಂಗೊಳಿಸಲು, ಹೊಸ ವ್ಯಕ್ತಿಯಾಗಿ ಮಾರ್ಪಾಡಾಗಲು ಇದು ಸೂಕ್ತ. ಪ್ರಸಕ್ತ ವರ್ಷದಲ್ಲಿ ಕೆಲವು ಬ್ಯೂಟಿ ಟ್ರೆಂಡ್ ಗಳು ಚಾಲ್ತಿಯಲ್ಲಿವೆ. ಅವುಗಳನ್ನು ಅನುಸರಿಸಿ ನಿಮ್ಮ ಆತ್ಮವಿಶ್ವಾಸವನ್ನು ವೃದ್ಧಿಸಿಕೊಳ್ಳಬಹುದು. ನಿಮ್ಮ ಹಳೆಯ ನಿಲುವಿಗೆ ಹೊಸ ಲುಕ್ ಬೇಕು ಎನ್ನುವವರು ನೀವಾಗಿದ್ದರೆ ಈ ಸೌಂದರ್ಯ ಚಿಕಿತ್ಸೆಗಳನ್ನು ನೀವು ಸಹ ಅನುಸರಿಸಬಹುದು. ಪ್ಲಾಸ್ಟಿಕ್ ಸರ್ಜರಿಯ ಬಗ್ಗೆ ಜನ ದೃಷ್ಟಿಕೋನ ಇಂದು ಬದಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಪ್ಲಾಸ್ಟಿಕ್ ಸರ್ಜರಿಯನ್ನು ಹೊಸ ಲುಕ್ ಗಾಗಿಯೂ ಬಳಸಲಾಗುತ್ತಿದೆ. ದೈಹಿಕ ನಿಲುವಿನ ಸುಧಾರಣೆಗೆ ಇದರ ಕೊಡುಗೆ ಹೆಚ್ಚು. ಮಹಿಳೆಯರಂತೂ ಪ್ಲಾಸ್ಟಿಕ್ ಸರ್ಜರಿ ಮೊರೆ ಹೋಗುವುದು ಹೆಚ್ಚಾಗಿ ಕಂಡುಬರುತ್ತಿದೆ. ಮಹಿಳೆಯರು ತಮ್ಮ ವಿಶ್ವಾಸ ಹೆಚ್ಚಿಸಿಕೊಳ್ಳಲು, ಸಬಲರಾಗಲು ಇದನ್ನು ಆಶ್ರಯಿಸುತ್ತಿದ್ದಾರೆ. ವಯೋಮಾನದ ಭೇದವಿಲ್ಲದೆ ಎಲ್ಲ ವಯಸ್ಸಿನ ಮಹಿಳೆಯರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುತ್ತಾರೆ. ಇದು ಕೇವಲ ಸೌಂದರ್ಯಕ್ಕಾಗಿ ಮಾತ್ರವಲ್ಲ, ಜೀವನಕ್ಕೆ ಹೊಸತನ ನೀಡುವಲ್ಲಿಯೂ ಸಫಲವಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಕೆಲವು ಪ್ಲಾಸ್ಟಿಕ್ ಸರ್ಜರಿಗಳು, ಸೌಂದರ್ಯ ಚಿಕಿತ್ಸೆಗಳು ಟ್ರೆಂಡ್ ನಲ್ಲಿವೆ.
• ದೇಹದ ಬಾಹ್ಯ ಸ್ವರೂಪ (Contouring)
ನಿಮ್ಮ ದೇಹದ (Body) ಯಾವುದಾದರೊಂದು ಭಾಗದ ಬಗ್ಗೆ ನಿಮಗೆ ಸಮಸ್ಯೆ ಇದ್ದರೆ, ಮುಜುಗರ, ಹಿಂಜರಿಕೆ ಇದ್ದರೆ ಸುಮ್ಮನೆ ಕುಳಿತಿರಬೇಕಾಗಿಲ್ಲ. ಬಾಡಿ ಕಾಂಟರಿಂಗ್ ಎನ್ನುವ ಚಿಕಿತ್ಸೆ (Treatment) ಇದಕ್ಕೆ ಪರಿಹಾರವಾಗಿದೆ. ಈ ಸೌಂದರ್ಯ (Aesthetic) ಪ್ರಕ್ರಿಯೆ ಪುರುಷರು ಮತ್ತು ಮಹಿಳೆಯರಿಬ್ಬರಲ್ಲೂ ಫೇಮಸ್ ಆಗಿದೆ. ಇದನ್ನು ಬಾಡಿ ಸ್ಕಲ್ಪ್ ಟಿಂಗ್ (Body Sculpting) ಎಂದೂ ಕರೆಯಲಾಗುತ್ತದೆ. ಈ ಚಿಕಿತ್ಸೆಯ ಮೂಲಕ ಅನಗತ್ಯವಾದ ದೇಹದ ಕೊಬ್ಬಿನ ಭಾಗವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯ. ದೇಹದ ಬಾಹ್ಯ ಸ್ವರೂಪವನ್ನು ಬದಲಿಸಿಕೊಳ್ಳಲು ಸಾಧ್ಯ. ಚರ್ಮ (Skin) ಹೆಚ್ಚು ಬಿಗಿಯಾಗಿ, ಹೊಳಪಿನಿಂದ ಕೂಡುತ್ತದೆ. ಈ ಚಿಕಿತ್ಸೆಯ ಬಗ್ಗೆ ಭಯಪಡುವಂಥದ್ದು ಏನೂ ಇಲ್ಲ ಎನ್ನುತ್ತಾರೆ ತಜ್ಞರು.
ಗೋಣಿ ಚೀಲದಲ್ಲಿ ಕುರ್ತಾ ಚಮತ್ಕಾರ, ಈತ ಉರ್ಫಿ ಜಾವೇದ್ ಪುರುಷ ಅವತಾರ ಎಂದ ನೆಟಿಜೆನ್ಸ್!
• ಬೊಟಾಕ್ಸ್ (Botox) ಮತ್ತು ಫಿಲ್ಲರ್ಸ್
ಎಲ್ಲ ವಯೋಮಾನದವರೂ ಇದನ್ನು ಮಾಡಿಸಿಕೊಳ್ಳಬಹುದು. ಬೊಟಾಕ್ಸ್ ಮತ್ತು ಫಿಲ್ಲರ್ಸ್ ನಿಮ್ಮ ಕೊರತೆಗಳನ್ನು ಅಡಗಿಸಿ ಇಡುವಂತೆ ಮಾಡುವುದಿಲ್ಲ. ಬದಲಿಗೆ, ನಿಮ್ಮಲ್ಲಿ ಯೌವನವನ್ನು, ಆತ್ಮವಿಶ್ವಾಸವನ್ನು (Confidence) ಮರಳಿಸಿ ನೀಡುತ್ತದೆ. ಇದು ಯಾವುದೇ ರೀತಿ ಹಾನಿಕಾರಕ ಪ್ರಕ್ರಿಯೆಯಿಂದ ಕೂಡಿರುವುದಿಲ್ಲ. ಮುಖದ (Face) ಮೇಲಿನ ನೆರಿಗೆಗಳು, ಕುಂದುಕೊರತೆಗಳನ್ನು ನಿಭಾಯಿಸುತ್ತದೆ. ಕಣ್ಣುಗಳ ಕೆಳಗಿರುವ ಮಾಂಸಖಂಡಗಳನ್ನು ಬಲಪಡಿಸುವ ಮೂಲಕ ಮುಖದ ಅಂದ ಹೆಚ್ಚಿಸುತ್ತದೆ. ಈ ಪ್ರಕ್ರಿಯೆ ಕಾಯಂ ಆದುದಲ್ಲ. ಇದನ್ನು ಸುಮಾರು ನಾಲ್ಕರಿಂದ ಆರು ತಿಂಗಳಿಗೆ ಒಮ್ಮೆ ಮಾಡಿಸುತ್ತಿರಬೇಕು. ನಿಯಮಿತವಾಗಿ ಬೊಟಾಕ್ಸ್ ಮಾಡಿಸಿಕೊಂಡಾಗ ಮುಖದ ಮೇಲೆ ಕೆಲವೇ ಗೆರೆಗಳನ್ನು ಉಳಿಯುತ್ತದೆ. ಚರ್ಮದ ವಯಸ್ಸಾಗುವಿಕೆ (Aging) ನಿಧಾನವಾಗುತ್ತದೆ.
• ಸ್ತನ ವರ್ಧನೆ (Breast Augmentation)
ಬಹಳಷ್ಟು ಮಹಿಳೆಯರಿಗೆ ಸಣ್ಣ ಸ್ತನಗಳನ್ನು ಹೊಂದಿರುವುದು ಮುಜುಗರದ ಸಂಗತಿ. ಇದಕ್ಕಾಗಿ ಅವರು ಸ್ತನಗಳ ವರ್ಧನ ಚಿಕಿತ್ಸೆಯ ಮೊರೆ ಹೋಗುವುದು ಹೆಚ್ಚು. ಇದೊಂದು ಸರ್ಜಿಕಲ್ ಕ್ರಿಯೆಯಾಗಿದ್ದು, ಸ್ತನಗಳ ಸ್ವರೂಪವನ್ನು ಹೆಚ್ಚಿಸಿ ಅಂದ (Beauty) ನೀಡುತ್ತದೆ. ಇದರಲ್ಲಿ ಸಣ್ಣ ಬ್ರೆಸ್ಟ್ ಇಂಪ್ಲಾಂಟ್ (Implant) ಮತ್ತು ಸ್ತನಗಳನ್ನು ನೈಸರ್ಗಿಕವಾಗಿ ಎತ್ತರಿಸಿಕೊಳ್ಳುವುದು ಜನಪ್ರಿಯ ವಿಧಾನ. ಮಹಿಳೆಯರ ಆತ್ಮವಿಶ್ವಾಸ ಹೆಚ್ಚಲು ನೆರವಾಗುವ ಚಿಕಿತ್ಸೆ ಇದಾಗಿದೆ. ಕೆಲವೊಮ್ಮೆ ಸ್ತನಗಳಲ್ಲಿ ಅಧಿಕ ಕೊಬ್ಬು (Fat) ಹೊಂದಿರುವವರು ಅದನ್ನು ತೆಗೆಸಿಕೊಂಡು ಸ್ತನಗಳ ಗಾತ್ರವನ್ನು ಕಡಿಮೆ ಮಾಡಿಸಿಕೊಳ್ಳುವುದೂ ಇದೆ. ಇವೆರಡೂ ಸದ್ಯ ಟ್ರೆಂಡ್ (Trend) ನಲ್ಲಿರುವ ಸೌಂದರ್ಯ ಚಿಕಿತ್ಸೆಗಳಾಗಿವೆ. ಪುರುಷರೂ ಇದನ್ನು ಮಾಡಿಕೊಳ್ಳುತ್ತಾರೆ ಎಂದರೆ ಅಚ್ಚರಿಯಾಗಬಹುದು. ಎದೆ ಭಾಗದ ಸೌಂದರ್ಯ ಹೆಚ್ಚಿಸಿಕೊಳ್ಳುವುದು ಅವರ ಉದ್ದೇಶ.
ರಾಕಿ ಭಾಯ್ ಯಶ್ ತರ ದಪ್ಪಗೆ ಗಡ್ಡ, ಮೀಸೆ ಬೇಕಾ? ಹಾಗಿದ್ರೆ ಇವನ್ನು ಟ್ರೈ ಮಾಡಿ
• ಥ್ರೆಡ್ ಲಿಫ್ಟ್ (Thread Lift)
ಫೇಶಿಯಲ್ ಲಿಫ್ಟ್ ಬದಲಿಗೆ ಥ್ರೆಡ್ ಲಿಫ್ಟ್ ಮಾಡಿಸಿಕೊಳ್ಳುವ ಪದ್ಧತಿ ಹೆಚ್ಚುತ್ತಿದೆ. ಮುಖದ ಟಿಶ್ಯೂಗಳನ್ನು ಬಿಗಿಗೊಳಿಸುವ ಮೂಲಕ ಚರ್ಮ ಜೋಲದಂತೆ ಮಾಡಲಾಗುತ್ತದೆ. ಇದರಿಂದ ಅವರು ಸದಾಕಾಲ ಯೌವನದಿಂದ ಕೂಡಿರುವಂತೆ ಕಾಣಿಸುತ್ತಾರೆ. ವಯಸ್ಸಾಗುತ್ತಿರುವ ಲಕ್ಷಣಗಳು ಗೋಚರಿಸಿದಾಗ ಈ ಚಿಕತ್ಸೆ ಮಾಡಿಸಿಕೊಳ್ಳಲಾಗುತ್ತದೆ.
• ಕೂದಲ ಕಸಿ (Hair Transplant)
ಕೂದಲನ್ನು ಕಸಿ ಮಾಡಿಸಿಕೊಳ್ಳುವುದು ಇತ್ತೀಚಿನ ವರ್ಷಗಳಲ್ಲಿ ಸರ್ವೇಸಾಮಾನ್ಯವಾದ ಸೌಂದರ್ಯ ಚಿಕಿತ್ಸೆಯಾಗಿದೆ. ಕೂದಲು ಉದುರುವುದು (Hair Fall) ಎಲ್ಲರ ಸಮಸ್ಯೆ. ಅದಕ್ಕೆ ಶಾಶ್ವತ ಪರಿಹಾರವೆಂದರೆ ಕೂದಲ ಕಸಿ. ಇಂದು ಇದರಲ್ಲಿ ಅತ್ಯಂತ ಮುಂದುವರಿದ ವಿಧಾನಗಳು ಬಂದಿದ್ದು, ಹೆಚ್ಚು ಸುರಕ್ಷಿತವಾಗಿವೆ.