ಕೊರೋನಾ ನಂತರ ಸೋಷಿಯಲ್ ಡಿಸ್ಟೆನ್ಸಿಂಗ್ ಪ್ರಾಮುಖ್ಯತೆ ಹೆಚ್ಚಿದೆ. ಈ ಶೂಸ್ 1 ಮೀಟರ್ ಉದ್ದವಿದೆ. ಆದ್ರೆ ಇದನ್ನು ಧರಿಸಿ ನಡೆಯೋದ್ ಹೇಗಪ್ಪಾ..?

ಇತ್ತೀಚಿನ ಫ್ಯಾಷನ್ ಟ್ರೆಂಡ್ಗಳನ್ನು ಜನ ಸಾಮಾನ್ಯರು ಅರ್ಥ ಮಾಡಿಕೊಳ್ಳುವುದೇ ಕಷ್ಟ. ಸೋಷಿಯಲ್ ಡಿಸ್ಟೆನ್ಸಿಂಗ್ ಕಾಪಾಡಿಕೊಳ್ಳೋಕೆ ಏನೇನೋ ಐಡಿಯಾಗಳನ್ನು ಮಾಡುತ್ತಿದ್ದಾರೆ ಜನ. ಇದೀಗ ಅಡಿಡಾಸ್ ಮಾಡಿರೋ ಐಡಿಯಾ ನೋಡಿ.

ವಿನ್ಯಾಸಕ ಎಸ್ಟೋನಿಯನ್ ರ್ಯಾಪರ್ ಟಾಮಿ ಕ್ಯಾಷ್ ಅವರು ವಿನ್ಯಾಸ ಮಾಡಿದ ಶೂ ಬಿಡುಗಡೆ ಮಾಡಿದೆ ಅಡಿಡಾಸ್. ಇವರು ಒಂದು ಮೀಟರ್ ಉದ್ದದ ಶೂ ವಿನ್ಯಾಸ ಮಾಡಿದ್ದಾರೆ.

ಡಿಯೋಡ್ರಂಟ್ ಪರಿಮಳವೇನೋ ಇಷ್ಟ, ಆದ್ರೆ ಅಪಾಯ..?

ಇದು ಶೂಸ್ಗಳಲ್ಲಿ ಅತ್ಯಂತ ಉದ್ದದ ಶೂ. ಇದೀಗ ಕೊರೋನಾದಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿದ್ದು, ಈ ಶೂ ಹೆಚ್ಚು ಪ್ರಾಮುಖ್ಯತೆ ಪಡೆದಿದೆ.

ಈ ಶೂಸ್ ಬ್ಲಾಕ್ & ವೈಟ್ ಕಾಂಬಿನೇಷನ್‌ನಲ್ಲಿದೆ. 29 ವರ್ಷದ ಹಿಪ್‌ಹಾಪ್ ಆರ್ಟಿಸ್ಟ್ ಅಡಿಡಾಸ್ ಜೊತೆ ಟೀಮ್‌ಅಪ್ ಆಗಿದ್ದಾರೆ. ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ತಮ್ಮ ಸಹಯೋಗದೊಂದಿಗೆ ಅಡೀಡಸ್ಗೆವಿಶ್ವದ ಉದ್ದದ ಶೂಗಳನ್ನು ಮಾಡಲು ಬಯಸುತ್ತಿರುವುದಾಗಿ ಹೇಳಿದ್ದಾರೆ.

ಉಗುರಿನ ಮೇಲಿನ ಹಳದಿ ಕಲೆ: ನಿವಾರಣೆಗೆ ಇಲ್ಲಿದೆ ಬೆಸ್ಟ್ ಟಿಪ್ಸ್...

ಆದರೆ ಇದು ಕೇಳಿದಾಗ ಸ್ವಲ್ಪ ಸಂಶಯ ಎನಿಸಿತ್ತು. ಐದು ತಿಂಗಳ ನಂತರ ನಾವು ಇಲ್ಲಿದ್ದೇವೆ ಎಂದು ಪೋಸ್ಟ್ ಹಾಕಿದ್ದಾರೆ. ಫಲಿತಾಂಶವು ಅಡೀಡಸ್ ಸೂಪರ್‌ಸ್ಟಾರ್ ಅನ್ನು ಒಳಗೊಂಡಿರುವ ಬಹಳ ಸೀಮಿತ ಆವೃತ್ತಿಯಾಗಿದ್ದು ಈ ಶೂಸ್ 1 ಮೀಟರ್ ಉದ್ದವಾಗಿದೆ.

Scroll to load tweet…