ಆಯುರ್ವೇದದಲ್ಲಿ ಅಶ್ವಗಂಧದಿಂದ ಹಲವಾರು ಲಾಭಗಳಿವೆ. ಆದರಿದನ್ನು ಕೇವಲ ಆರೋಗ್ಯಕ್ಕೆ ಮಾತ್ರವಲ್ಲ, ಬದಲಾಗಿ ಸೌಂದರ್ಯಕ್ಕೂ ಹಲವು ಲಾಭಗಳಿವೆ. ಅಷ್ಟಕ್ಕೂ ಸೌಂದರ್ಯ ಹೆಚ್ಚಿಸಿಕೊಳ್ಳಲು ಅಶ್ವಗಂಧವನ್ನು ಬಳಸುವುದು ಹೇಗೆ..?

ಮುಖದ ಹೊಳಪಿಗೆ ನ್ಯಾಚುರಲ್ ಫೇಸ್‌ವಾಷ್...

  • ಅಶ್ವಗಂಧ‌ದಲ್ಲಿರುವ ಆ್ಯಂಟಿ ಬಯೋಟಿಕ್ಸ್ ತತ್ವ ವಯಸ್ಸಾಗುವಿಕೆ ಲಕ್ಷಣವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಫ್ರೀ ರೇಡಿಕಲ್ಸ್‌ನಿಂದ ರಕ್ಷಿಸುತ್ತದೆ. 
  • ಅಶ್ವಗಂಧವನ್ನು ಟೋನರ್ ರೂಪದಲ್ಲಿಯೂ ಬಳಸುತ್ತಾರೆ. ಇದು ತ್ವಚೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. 
  • ಸ್ಕಾಲ್ಪ್‌ಗೆ ಇದರಿಂದ ಮಸಾಜ್ ಮಾಡಿಕೊಂಡರೆ, ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ. ಇದರಿಂದ ಕೂದಲು ಸೊಂಪಾಗಿ, ಸದೃಢವಾಗಿ ಬೆಳೆಯುತ್ತದೆ. 
  • ತಲೆಹೊಟ್ಟು ಸಮಸ್ಯೆ ನಿವಾರಣೆಗೂ ಇದು ಒಳ್ಳೆ ಮದ್ದು. ಇದರಿಂದ ಕೂದಲು ಉದುರುವ ಸಮಸ್ಯೆ ಇರುವುದಿಲ್ಲ. 
  • ಇತ್ತೀಚಿನ ದಿನಗಳಲ್ಲಿ ಕೂದಲು ಬಿಳಿಯಾಗುವ ಸಮಸ್ಯೆ ಹೆಚ್ಚಿದೆ. ಮೆಲನಿನ್ ಉತ್ಪಾದನೆ ಹೆಚ್ಚಿದ್ದರೆ ಕೂದಲು ಕಪ್ಪಾಗುತ್ತದೆ. ಬಿಳಿ ಕೂದಲನ್ನು ಮತ್ತೆ ಕಪ್ಪು ಮಾಡಲು ಅಶ್ವಗಂಧ ಸಹಾಯ ಮಾಡುತ್ತದೆ.