Fact Check: ತಳ್ಳುಗಾಡಿಯ ಮೇಲೆ ಹಣ್ಣು ಮಾರುವವ ಮೂತ್ರ ಸುರಿದಿದ್ದು ನಿಜಾನಾ?

ತಳ್ಳುಗಾಡಿಯಲ್ಲಿ ಹಣ್ಣು ಮಾರುತ್ತಿದ್ದ ಮುಸ್ಲಿಂ ವ್ಯಕ್ತಿಯೊಬ್ಬರು ಹಣ್ಣಿನ ಮೇಲೆ ಮೂತ್ರ ವಿಸರ್ಜಿಸಿದ್ದಾರೆ ಎಂಬ 2 ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ. ಏನೀ ವೀಡಿಯೋನ ಸತ್ಯಾಸತ್ಯತೆ?

Fact check of elderly Muslim vendor sprinkled urine on fruits

ತಳ್ಳುಗಾಡಿಯಲ್ಲಿ ಹಣ್ಣು ಮಾರುತ್ತಿದ್ದ ಮುಸ್ಲಿಂ ವ್ಯಕ್ತಿಯೊಬ್ಬರು ಹಣ್ಣಿನ ಮೇಲೆ ಮೂತ್ರ ವಿಸರ್ಜಿಸಿದ್ದಾರೆ ಎಂಬ 2 ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ.

ಮೊದಲ ವಿಡಿಯೋಗಳಲ್ಲಿ ಹಣ್ಣು ಮಾರುವ ವ್ಯಕ್ತಿ, ಬಸ್ಕಿ ಹೊಡೆಯುತ್ತಾ, ‘ನನ್ನಿಂದ ತಪ್ಪಾಗಿದೆ. ನಾನು ಬಡವ, ನನಗೆ ಹೃದಯ ಸಮಸ್ಯೆ ಇದೆ’ ಎಂದು ಬೇಡಿಕೊಳ್ಳುವ ಮತ್ತು ಹಿನ್ನೆಲೆಯಲ್ಲಿ ವಿಡಿಯೋ ಚಿತ್ರೀಕರಿಸಿರುವ ವ್ಯಕ್ತಿ ಬಾಟಲಿಯಲ್ಲಿ ಮೂತ್ರ ಮಾಡಿ ಹಣ್ಣಿನ ಮೇಲೆ ಚಿಮುಕಿಸಿದ್ದೀಯ ಎಂದು ಹೇಳುವ ಧ್ವನಿ ಇದೆ. ಈ ವಿಡಿಯೋವನ್ನು ಬಿಜೆಪಿ ಮಾಧ್ಯಮ ವಕ್ತಾರ ರೋಹಿತ್‌ ಚಾಹಲ್‌ ಟ್ವೀಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಇದೀಗ ವೈರಲ್‌ ಆಗುತ್ತಿದೆ.

ಆದರೆ  ವಿಡಿಯೋ ಹಿಂದಿನ ಸತ್ಯಾಸತ್ಯ ಬಯಲಿಗೆಳೆದು ಇದು ಕೋಮು ದ್ವೇಷ ಹರಡುವ ಸುಳ್ಳುಸುದ್ದಿ ಎನ್ನುವುದನ್ನು ಸಾಬೀತುಪಡಿಸಿದೆ. ವಿಡಿಯೋದಲ್ಲಿರುವ ‘ಬಿಜ್ನೋರ್‌’ ಎಂಬ ಧ್ವನಿಯ ಜಾಡು ಹಿಡಿದು ಅಲ್ಲಿನ ಪೊಲೀಸ್‌ ಇಲಾಖೆ ಸಂಪರ್ಕಿಸಿದಾಗ ವಾಸ್ತವ ಬಯಲಾಗಿದೆ.

ಏ.20 ರಂದು ಹಣ್ಣು ವ್ಯಾಪಾರಿಯೊಬ್ಬರು ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜಿಸಿ, ಗಾಡಿಯಲ್ಲಿದ್ದ ನೀರಿನ ಬಾಟಲಿಯಿಂದ ಕೈ ತೊಳೆದುಕೊಂಡಿದ್ದಾರೆ. ಬಳಿಕ ಅದೇ ನೀರನ್ನು ಹಣ್ಣಿನ ಮೇಲೂ ಚಿಮುಕಿಸಿದ್ದಾರೆ. ಇದನ್ನೇ ತಪ್ಪಾಗಿ ಅರ್ಥೈಸಿಕೊಂಡ ಸ್ಥಳೀಯರು ಬಾಟಲಿಯಲ್ಲಿ ಮೂತ್ರ ವಿಸರ್ಜಿಸಿ ಹಣ್ಣಿನ ಮೇಲೆ ಚೆಲ್ಲಿದ್ದಾರೆ ಎಂದು ಆರೋಪ ಮಾಡಿದ್ದರು.

ಇದೇ ಕಾರಣದಿಂದ ಹಣ್ಣು ವ್ಯಾಪಾರಿಯನ್ನು ಮೊದಲು ಬಂಧಿಸಲಾಗಿದ್ದು, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ವಿಡಿಯೋವನ್ನು ಹರಿಬಿಟ್ಟು ಸುಳ್ಳುಸುದ್ದಿ ಹರಡಿದವರಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Latest Videos
Follow Us:
Download App:
  • android
  • ios