Fact Check| ಹಣ ಬೀದಿಗೆ ಎಸೆದ ಇಟಲಿ ಜನ!

 ‘ಕೊರೋನಾವೈರಸ್‌ನಿಂದ ಹೈರಾಣಾದ ಇಟಲಿಯ ಜನರು ಹಣವನ್ನು ಬೀದಿಯಲ್ಲಿ ಎಸೆಯುತ್ತಿದ್ದಾರೆ. ಹಣವೇ ಜೀವನದಲ್ಲಿ ಎಲ್ಲವೂ ಅಲ್ಲ!! ಆರೋಗ್ಯವೇ ಜೀವನ’ ಎಂಬ ಸಂದೇಶವನ್ನು ವಿಶ್ವಕ್ಕೆ ನೀಡಿದ್ದಾರೆ ಎನ್ನುವ ಸಂದೇಶ ವೈರಲ್ ಅಗಿದೆ. ಏನಿದರ ಸತ್ಯಾಸತ್ಯತೆ?

Fact Check Did Italians Throw Away Currency Notes On Road

ರೋಮ್(ಏ.02): ಹಣವನ್ನು ಬೀದಿಯಲ್ಲಿ ಹರಡಿರುವ ಎರಡು ಫೋಟೋಗಳು ಇಂಟರ್ನೆಟ್‌ನಲ್ಲಿ ವೈರಲ್‌ ಆಗಿವೆ. ‘ಕೊರೋನಾವೈರಸ್‌ನಿಂದ ಹೈರಾಣಾದ ಇಟಲಿಯ ಜನರು ಹಣವನ್ನು ಬೀದಿಯಲ್ಲಿ ಎಸೆಯುತ್ತಿದ್ದಾರೆ. ಹಣವೇ ಜೀವನದಲ್ಲಿ ಎಲ್ಲವೂ ಅಲ್ಲ!! ಆರೋಗ್ಯವೇ ಜೀವನ’ ಎಂಬ ಸಂದೇಶವನ್ನು ವಿಶ್ವಕ್ಕೆ ನೀಡಿದ್ದಾರೆ ಎನ್ನುವ ಸಂದೇಶ ಅದರ ಜೊತೆಗಿದೆ.

ಆದರೆ ನಿಜಕ್ಕೂ ಇಟಲಿ ಜನರು ಹಣವನ್ನು ಬೀದಿಯಲ್ಲಿ ಎಸೆದಿದ್ದಾರೆಯೇ ಎಂದು ಪರಿಶೀಲಿಸಿದಾಗ, ಈ ಫೋಟೋಗಳೆಲ್ಲ ಹಳೆಯವು, ಕೊರೋನಾ ವೈರಸ್‌ ಪತ್ತೆಗೂ ಮೊದಲೇ ಇವು ಇಂಟರ್‌ನೆಟ್‌ನಲ್ಲಿ ಲಭ್ಯವಿದ್ದವು ಎಂಬ ಸಂಗತಿ ತಿಳಿದುಬಂದಿದೆ.

ವಾಸ್ತವವಾಗಿ ಇವು 2019ರಲ್ಲಿ ವೆನಿಜುವೆಲಾದಲ್ಲಿ ತೆಗೆದ ಫೋಟೋಗಳು. ಅಲ್ಲಿ ಹಳೆಯ ಕರೆನ್ಸಿ ರದ್ದು ಮಾಡಿ, ಹೊಸ ಕರೆನ್ಸಿ ಜಾರಿಗೆ ತಂದಾಗ ಮೌಲ್ಯ ಕಳೆದುಕೊಂಡ ಹಳೆಯ ಕರೆನ್ಸಿಗಳನ್ನು ಜನ ಬೀದಿ, ಬೀದಿಯಲ್ಲಿ ಚೆಲ್ಲಿದ್ದರು. ಅದೇ ವೇಳೆ ವೆನಿಜುವೆಲಾದ ಜನರು ಬ್ಯಾಂಕನ್ನು ಲೂಟಿ ಮಾಡಿ, ತಮ್ಮ ದೇಶದ ಹಣಕ್ಕೆ ಮೌಲ್ಯವಿಲ್ಲ ಎನ್ನುವುದನ್ನು ತೋರಿಸಲು ಹಣಕ್ಕೆ ಬೆಂಕಿ ಇಟ್ಟಿದ್ದರು. ಅನೇಕ ಪತ್ರಕರ್ತರು ಇದನ್ನೇ ಬರೆದು ಟ್ವೀಟ್‌ ಮಾಡಿದ್ದು, ಟ್ವೀಟ್‌ಗಳು ಸಹ ಲಭ್ಯವಾಗಿವೆ.

Fact Check Did Italians Throw Away Currency Notes On Road

ಕೊರೋನಾ ವೈರಸ್‌ನಿಂದಾಗಿ ಇಟಲಿಯಲ್ಲಿ 12,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 1 ಲಕ್ಷಕ್ಕೂ ಅಧಿಕ ಜನರಿಗೆ ಸೋಂಕು ದೃಢಪಟ್ಟಿದೆ. ಆದರೆ ಕೊರೋನಾಗೂ ವೈರಲ್‌ ಆಗಿರುವ ಈ ಚಿತ್ರಗಳಿಗೂ ಸಂಬಂಧ ಇಲ್ಲ

ಏಪ್ರಿಲ್ 02ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Latest Videos
Follow Us:
Download App:
  • android
  • ios