ಕೊರೋನಾ ವೈರಸ್ ಪ್ರಕರಣ ದಿಢೀರ್ ಏರಿಕೆಯಾಗಿದೆ. ಕಳೆದ ಕೆಲದಿನಗಳಿಂದ ಪ್ರತಿ ದಿನ 2.5 ಲಕ್ಷ ಹೊಸ ಕೇಸ್ ಪತ್ತೆಯಾಗುತ್ತಿದೆ. ಇದರ ನಡುವೆ ಕೆಲ ರಾಜ್ಯಗಳು ನೈಟ್ ಕರ್ಫ್ಯೂ ಸೇರಿದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ಇದರ ನಡುವೆ ಕೇಂದ್ರ ಸರ್ಕಾರ ಸಂಪೂರ್ಣ ಭಾರತ ಲಾಕ್‌ಡೌನ್ ಮಾಡಲಿದೆ ಅನ್ನೋ ಸುದ್ದಿಗಳು ಹರಿದಾಡುತ್ತಿದೆ. ಈ ಕುರಿತು ಸ್ಪಷ್ಟನೆ ಇಲ್ಲಿದೆ.

ನವದೆಹಲಿ(ಏ.18): ಕೊರೋನಾ ವೈರಸ್ ಭಾರತದಲ್ಲಿ ಅತಿಯಾಗಿದೆ ನಿಜ. ಆದರೆ ಆತಂಕ ಪಡುವ ಅಗತ್ಯವಿಲ್ಲ. ಎಚ್ಚರಿಕೆ, ಮುಂಜಾಗ್ರತೆ ಅತೀ ಅಗತ್ಯ. ಕೊರೋನಾ ಭೀಕರತೆ ಬೆದರಿದ ಜನತೆಗೆ ಭಾರತ ಲಾಕ್‌ಡೌನ್ ಸುದ್ದಿ ಮತ್ತಷ್ಟು ಭೀತಿ ಹುಟ್ಟಿಸಿದೆ. ಆದರೆ ಕೊರೋನಾ ವೈರಸ್ ನಿಯಂತ್ರಣಕ್ಕೆ ಸಂಪೂರ್ಣ ಭಾರತ ಲಾಕ್‌ಡೌನ್ ಮಾಡುವ ಯಾವುದೇ ನಿರ್ಧಾರ ಕೇಂದ್ರದ ಮುಂದಿಲ್ಲ. ಈ ರೀತಿ ಲಾಕ್‌ಡೌನ್ ಸುದ್ದಿ ಸುಳ್ಳು ಅನ್ನೋದು ಸಾಬೀತಾಗಿದೆ

ಶಾಲಾ-ಕಾಲೇಜುಗಳಿಗೆ 15 ದಿನ ರಜೆನಾ? ಸುತ್ತೋಲೆ ಬಗ್ಗೆ ಶಿಕ್ಷಣ ಇಲಾಖೆ ಸ್ಪಷ್ಟನೆ

ಲೋಕಮತ ಸೇರಿದಂತೆ ಕೆಲ ಮಾಧ್ಯಮಗಳು ನರೇಂದ್ರ ಮೋದಿ ಸರ್ಕಾರ ಶೀಘ್ರದಲ್ಲೇ ಲಾಕ್‌ಡೌನ್ ಹೇರಲಿದೆ ಅನ್ನೋ ಸುದ್ದಿ ಪ್ರಕಟಿಸಿದೆ. ಇದು ಶರವೇಗದಲ್ಲಿ ಹರಿದಾಡಿದೆ. ಕೊರೋನಾಗೆ ಕಂಗೆಟ್ಟ ಜನತೆ ಆತಂಕ ಹೆಚ್ಚಾಗಿದೆ. ಈ ಸುದ್ದಿ ಸತ್ಯಾಸತ್ಯತೆಯನ್ನು ಭಾರತದ ಪ್ರೆಸ್ ಇನ್ಫೋಮರ್ಶೇನ್ ಬ್ಯೂರೋ(PIB) ಪತ್ತೆ ಹಚ್ಚಿದೆ. ಭಾರತ ಲಾಕ್‌ಡೌನ್ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಈ ರೀತಿಯ ಯಾವುದೇ ನಿರ್ಧಾರಗಳು ಕೇಂದ್ರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದೆ.

Scroll to load tweet…

Fact Check : ಫೈಝರ್‌ ಲಸಿಕೆ ಪಡೆದ ನರ್ಸ್‌ ಸಾವನ್ನಪ್ಪಿ ಬಿಟ್ರಾ..?

ಕೊರೋನಾ ವೈರಸ್ ನಿಯಂತ್ರಣಕ್ಕೆ ಕೇಂದ್ರ ಹಾಗೂ ಯಾವುದೇ ರಾಜ್ಯ ಸರ್ಕಾರ ಲಾಕ್‌ಡೌನ್ ನಿರ್ಧಾರ ಮಾಡಿಲ್ಲ ಹಾಗೂ ಮಾಡುವ ಸಾಧ್ಯತೆಗಳು ಸದ್ಯದ ಮಟ್ಟಿಗಿಲ್ಲ. ಲಾಕ್‌ಡೌನ್ ಇಲ್ಲದೆ ಕೊರೋನಾ ನಿಯಂತ್ರಕ್ಕೆ ಎಲ್ಲಾ ಸರ್ಕಾರ ಪ್ರಯತ್ನಿಸುತ್ತಿದೆ. ಕಠಿಣ ನಿಮಯಗಳು ಜಾರಿಯಾಗುವ ಸಾಧ್ಯತೆ ಇದೆ. 

ಭಾರತ ಲಾಕ್‌ಡೌನ್ ಕುರಿತು ಸುದ್ದಿಗಳಿಗೆ ಜನರು ಆತಂಕ ಪಡುವ ಅಗತ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಟೆಸ್ಟ್, ಟ್ರಾಕ್ ಹಾಗೂ ಟ್ರೀಟ್ಮೆಂಟ್ ಸೂತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಇದರ ಜೊತೆಗೆ ಪ್ರತಿಯೊಬ್ಬರು ಕೊರೋನಾ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.