ಬೆಂಗಳೂರು, (ಏ.01):  ರಾಜ್ಯದ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಿಗೆ ಮುಂದಿನ ತಿಂಗಳು ಮೇ 20ರ ವರೆಗೆ ರಜೆ ವಿಸ್ತರಿಸಲಾಗಿದೆ.

ಹೀಗೊಂದು ಸರ್ಕಾರದ ಸುತ್ತೋಲೆ ರೀತಿಯಲ್ಲಿರುವ ಲೆಟರ್‌ವೊಂದು ಸಾಮಾಜಿಕ ಜಾಲತಾಣಳಲ್ಲಿ ಹರಿದಾಡುತ್ತಿದೆ. ಆದ್ರೆ, ಇದೊಂದು ಸುಳ್ಳು ಸುತ್ತೋಲೆ ಎಂದು ಕಾಲೇಜು ಶಿಕ್ಷಣ ಇಲಾಖೆ ಸ್ಪಷ್ಟಪಡಿಸಿದೆ.

ಲಾಕ್‌ಡೌನ್: ಶಿಕ್ಷಕರ ರಜೆ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕಾಲೇಜು ಶಿಕ್ಷಣ ಇಲಾಖೆ, ವಿದ್ಯಾರ್ಥಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ರಜೆಯನ್ನು ಈ ಮೊದಲು ಮಾರ್ಚ್ 31ರ ವರೆಗೆ ನೀಡಲಾಗಿತ್ತು. ಇದೀಗ ಇದನ್ನು ಏಪ್ರಿಲ್  14ರ ವರಗೆ ರಜೆಯನ್ನು ವಿಸ್ತರಿಸಿರುವುದು ನಿಜ.

ಆದ್ರೆ, ಮೇ 20ರ ವರೆಗೆ ಅಂದ್ರೆ 50 ದಿನ ರಜೆ ನೀಡಿದೆ ಎನ್ನುವ ಸುತ್ತೋಲೆ ಸುಳ್ಳಾಗಿರುತ್ತದೆ ಎಂದು ಕಾಲೇಜು ಶಿಕ್ಷಣ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ರೀತಿ ಸುಳ್ಳು ಸುತ್ತೋಲೆಯನ್ನು ಸೃಷ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಜನರನ್ನು ಗೊಂದಲಕ್ಕೀಡು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಇನ್ನು ನಕಲಿ ಮತ್ತು ಅಸಲಿ ಸುತ್ತೋಲೆಗಳು ಈ ಕೆಳಗಿನಂತಿವೆ ನೋಡಿ.

ನಕಲಿ ಸುತ್ತೋಲೆ ಇದು


ಸುಳ್ಳು ಸುದ್ದಿ ಹಬ್ಬಿದ ಬಳಿಕ ಅಧಿಕೃತ ಸುತ್ತೋಲೆ ಇದು