ಝೀ ಕನ್ನಡ ವಾಹಿನಿಯಲ್ಲಿ ‘ಕನ್ನಡದ ಕಣ್ಮಣಿ’ ರಿಯಾಲಿಟಿ ಶೋ ಶುರುವಾಗುತ್ತಿದೆ. ಕನ್ನಡದ ಕಣ್ಮಣಿ ಅಪ್ಪಟ ಕನ್ನಡ ನೆಲದ ಟಾಕ್‌ ಶೋ ಆಗಿದ್ದು, ಇಲ್ಲಿ ಪ್ರತಿಭಾವಂತ ಮಕ್ಕಳು ಪ್ರೇಕ್ಷಕರಿಗೆ ಮನೋರಂಜನೆ ನೀಡುವ ಜೊತೆಗೆ ಸಾಕಷ್ಟುಮಾಹಿತಿಗಳನ್ನು ಕೂಡಾ ನೀಡುತ್ತಾರೆ. 

ಅಭಿನವ ಬೀಚಿ ಗಂಗಾವತಿ ಪ್ರಾಣೇಶ್‌, ಸಾಹಿತಿ ಜಯಂತ್‌ ಕಾಯ್ಕಿಣಿ ಮತ್ತು ಜಗ್ಗೇಶ್‌ ತೀರ್ಪುಗಾರರು. ಕಿರಿಕ್‌ ಕೀರ್ತಿ ಈ ಕಾರ್ಯಕ್ರಮದ ನಿರೂಪಕ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಕನ್ನಡದ ಕಣ್ಮಣಿ ರಿಯಾಲಿಟಿ ಕಾರ್ಯಕ್ರಮ ಇದೇ ಫೆæ. 23ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 5 ಗಂಟೆಗೆ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆಯ ಮೇಲಿನ ಪ್ರೇಮ ಹಾಗೂ ಅಭಿಮಾನದ ಪ್ರತೀಕವಾಗಿ ಶುರುವಾಗುತ್ತಿರುವ ಈ ಹೊಸ ರಿಯಾಲಿಟಿ ಶೋಗಾಗಿ ಕರ್ನಾಟಕ ರಾಜ್ಯದ ಹತ್ತು ಜಿಲ್ಲಾ ಕೇಂದ್ರಗಳಲ್ಲಿ ಭಾಗವಹಿಸಿದ್ದ ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳಲ್ಲಿ ಆಡಿಷನ್‌ ಮೂಲಕ ಸೂಕ್ತ ಮಕ್ಕಳನ್ನು ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಮಕ್ಕಳನ್ನು ಮೂರು ಹಂತಗಳಲ್ಲಿ ಪರೀಕ್ಷೆಗೊಳಪಡಿಸಿ ಮತ್ತೆ ಅವರಲ್ಲಿ 14 ಜನ ಪ್ರತಿಭಾವಂತ ಮಕ್ಕಳನ್ನು ಆಯ್ಕೆಮಾಡಿಕೊಂಡು ವೇದಿಕೆಗೆ ಕರೆತರಲಾಗುತ್ತಿದೆ.

ಋತ್ವಿಕ್ ಕಂಠ ನಿಷ್ಕಲ್ಮಶ: ಕಣ್ಣು ಕೊಡ್ತಿನಿ ಎಂದ ಅಜ್ಜ!