ಸಾಧಕರ ಕಥೆ ಹೇಳುವ ಮೂಲಕ ಜನರಿಗೆ ಸ್ಫೂರ್ತಿ ನೀಡುವ ರಮೇಶ್ ಅರವಿಂದ್ ಈಗ ಮತ್ತೊಂದು ಪ್ರಯತ್ನದ ಮೂಲಕ ಪ್ರತಿಭಾವಂತರನ್ನು ಬೆನ್ನು ತಟ್ಟುವ ಕೆಲಸ ಮಾಡುತ್ತಿದ್ದಾರೆ. ಅದುವೇ 'ಶೇಕ್ ಹ್ಯಾಂಡ್ ವಿತ್ ರಮೇಶ್'.
ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪ್ರಖ್ಯಾತ ರಿಯಾಲಿಟಿ ಶೋ 'ವೀಕೆಂಡ್ ವಿತ್ ರಮೇಶ್' ಈಗಾಗಲೆ ಸೀಸನ್-4 ನಡೆಯುತ್ತಿದ್ದು ಸಾಧಕರ ಕಥೆ ಹೇಳುವ ಮೂಲಕ ಕೋಟಿಗಟ್ಟಲೆ ಜನರಿಗೆ ಸ್ಫೂರ್ತಿ ನೀಡುವಂತಹ ಕಾರ್ಯಕ್ರಮವಾಗಿದೆ. ಈಗ ಅದೇ ಸಾಲಿನಲ್ಲಿ 'ಶೇಕ್ ಹ್ಯಾಂಡ್ ವಿತ್ ರಮೇಶ್' ಶುರುವಾಗಿದೆ.
ಪರೀಕ್ಷೆಯಲ್ಲಿ ಔಟ್ ಆಫ್ ಔಟ್ ಮಾರ್ಕ್ಸ್ ತೆಗೆದಿರುವ ಎಷ್ಟೋ ವಿದ್ಯಾರ್ಥಿಗಳು ಕಣ್ಣಿಗೆ ಕಾಣಿಸದೆ ಹಾಗೆ ಹೋಗುತ್ತಾರೆ. ಅಥವಾ ಎಷ್ಟೋ ಪ್ರತಿಭಾವಂತ ಜನರು ಕಣ್ಣಿಗೆ ಕಾಣದೆ ಹೋಗುತ್ತಾರೆ ಅಂತವರನ್ನು 'ಶೇಕ್ ಹ್ಯಾಂಡ್ ವಿತ್ ರಮೇಶ್ ' ಮೂಲಕ ಜನರಿಗೆ ಪರಿಚಯ ಮಾಡಿಕೊಡಲಾಗುತ್ತದೆ.
ಈ ಸರಣಿಯಲ್ಲಿ ಮೊದಲ ಅತಿಥಿಯಾಗಿ ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625/625 ಅಂಕಗಳಿಸಿದ ವಿದ್ಯಾರ್ಥಿನಿ ಸೃಜನಾಗೆ ರಮೇಶ್ ಶೇಕ್ ಹ್ಯಾಂಡ್ ನೀಡಿದ್ದಾರೆ. ಸೃಜನಾ ಮೂಲತಃ ಅನೇಕಲ್ ಹುಡುಗಿ.
