ಮನರಂಜನೆ ಅನುಭಿಸಲು ಕಿರುತೆರೆ ಪ್ರೇಕ್ಷಕರು ಮತ್ತೆ ಸಜ್ಜಾಗಿ ಎನ್ನುತ್ತಿದೆ ‘ಕಾಮಿಡಿ ಕಿಲಾಡಿಗಳು’.

ಮೂರನೇ ಸೀಜನ್‌ಗೆ ಕಾಮಿಡಿ ಶೋನ ವೇದಿಕೆ ಸಜ್ಜಾಗಿದ್ದು, ಆ.31ರಿಂದ ಕಾಮಿಡಿ ಕಿಲಾಡಿಗಳು 3ನೇ ಸರಣಿ ಮೂಡಿ ಬರುತ್ತಿದೆ. ಝೀ ಕನ್ನಡ ವಾಹಿನಿಯಲ್ಲಿ, ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 7.30ಕ್ಕೆ ಕಾಮಿಡಿ ಕಿಲಾಡಿಗಳು ಸೀಸನ್ 3 ಪ್ರಸಾರವಾಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಗಾಗಲೇ ರಾಜ್ಯಾದ್ಯಾಂತ 9 ಜಿಲ್ಲೆಗಳಲ್ಲಿ ನಡೆಸಿದ ಆಡಿಷನ್‌ನಲ್ಲಿ ನೂರಾರು ಉತ್ಸಾಹಿ ಪ್ರತಿಭಾವಂತ ಕಲಾವಿದರು ಭಾಗವಹಿಸಿದ್ದರು, ಅವರಲ್ಲಿ ಆಯ್ಕೆಯಾದ ಕಿಲಾಡಿಗಳನ್ನು ಮೆಗಾ ಆಡಿಷನ್ ಮೂಲಕ ಕರ್ನಾಟಕಕ್ಕೆ ಪರಿಚಯಿಸಲಾಗುತ್ತಿದೆ.

ಎಂದಿನಂತೆ ಜಗ್ಗೇಶ್, ರಕ್ಷಿತಾ ಪ್ರೇಮ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ತೀರ್ಪುಗಾರರು. ಮಾಸ್ಟರ್ ಆನಂದ್ ಈ ಕಾರ್ಯಕ್ರಮದ ನಿರೂಪಕ. ಕನ್ನಡ ಚಿತ್ರರಂಗಕ್ಕೆ ಅತ್ಯುತ್ತಮ ಹಾಸ್ಯ ಕಲಾವಿದರ ಸಾಲಿಗೆ ಕೊಡುಗೆಯಾಗಿ ನೀಡುವ ನಿಟ್ಟಿನಲ್ಲಿ ಕಾಮಿಡಿ ಕಿಲಾಡಿಗಳು ಸೀಸನ್ ೩ ರಿಯಾಲಿಟಿ ಶೋ ಕಾರ್ಯಕ್ರಮ ವಿಭಿನ್ನತೆಯ ಜೊತೆಗೆ ಹೊಸತನದ ಕಚಗುಳಿಯ ಅಲೆಯೊಂದಿಗೆ ತೆರೆಮೇಲೆ ಬರಲಿದೆ.