ಯುಟ್ಯೂಬ್ ಜೂಜಾಟದ ಜಾಹೀರಾತುಗಳ ನಿಯಮಗಳನ್ನು ಕಠಿಣಗೊಳಿಸಿದೆ. ಮಾರ್ಚ್ 19 ರಿಂದ ಜಾರಿಗೆ ಬರುವ ಈ ಹೊಸ ನಿಯಮಗಳ ಪ್ರಕಾರ, ಪ್ರಮಾಣೀಕರಿಸದ ಜೂಜಿನ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ಪ್ರಚಾರ ಮಾಡುವಂತಿಲ್ಲ. ನಿಯಮ ಉಲ್ಲಂಘಿಸಿದರೆ ಖಾತೆ ನಿಷ್ಕ್ರಿಯಗೊಳ್ಳುತ್ತದೆ. ಯುವಕರ ಮೇಲೆ ಜೂಜಾಟದ ನಕಾರಾತ್ಮಕ ಪ್ರಭಾವವನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ.  

ವಿಶ್ವದ ಅತಿದೊಡ್ಡ ವೀಡಿಯೊ ಷೇರಿಂಗ್ ಪ್ಲಾಟ್ಫಾರ್ಮ್ (video sharing platform) ನಲ್ಲಿ ಯೂಟ್ಯೂಬ್ (YouTube) ಕೂಡ ಒಂದು. ಅದ್ರಲ್ಲಿ ದಿನಕ್ಕೆ ಲಕ್ಷಾಂತರ ವಿಡಿಯೋ ಅಪ್ಲೋಡ್ ಆಗ್ತಿರುತ್ತವೆ. ಯುಟ್ಯೂಬ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದ್ದು, ವಿಡಿಯೋ ಮೂಲಕ ಸಾವಿರಾರು ರೂಪಾಯಿ ಗಳಿಸುವವರ ಸಂಖ್ಯೆ ಕೂಡ ಏರಿಕೆ ಆಗ್ತಾನೆ ಇದೆ. ಯೂಟ್ಯೂಬ್ ಈಗ ಆದಾಯದ ಮೂಲವಾಗಿದೆ. ನೀವೂ ಯುಟ್ಯೂಬರ್ ಆಗಿದ್ದು, ಕಂಟೇಟ್ ಪೋಸ್ಟ್ ಮಾಡ್ತೀರಿ ಎಂದಾದ್ರೆ ಯೂಟ್ಯೂಬ್ ಹೊಸ ನಿಯಮವನ್ನು ತಪ್ಪದೆ ತಿಳಿದುಕೊಳ್ಳಿ.

ಭಾರತ ಮತ್ತು ಇತರ ದೇಶಗಳಲ್ಲಿ ಯೂಟ್ಯೂಬ್ ಮತ್ತು ಇತರ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಿನ ಬಗ್ಗೆ ಜಾಹೀರಾತುಗಳು ಕಾಣಸಿಗ್ತವೆ. ಇದನ್ನು ಗಮನದಲ್ಲಿಟ್ಟುಕೊಂಡು ಯೂಟ್ಯೂಬ್ ಈಗ ತನ್ನ ಪ್ಲಾಟ್‌ಫಾರ್ಮ್‌ನ ನಿಯಮಗಳನ್ನು ಮೊದಲಿಗಿಂತ ಹೆಚ್ಚು ಕಠಿಣಗೊಳಿಸಿದೆ. ಈ ಹೊಸ ನಿಯಮಗಳು ಮಾರ್ಚ್ 19 ರಿಂದ ಜಾರಿಗೆ ಬರಲಿವೆ. ಜೂಜಾಟಕ್ಕೆ ಸಂಬಂಧಿಸಿದ ವಿಷ್ಯವನ್ನು ಕಂಟ್ರೋಲ್ ಗೆ ತರುವುದು ಯೂಟ್ಯೂಬ್ ಮುಖ್ಯ ಉದ್ದೇಶವಾಗಿದೆ. ಹೊಸ ನಿಯಮದ ಪ್ರಕಾರ, ಪ್ರಮಾಣೀಕರಿಸದ ಜೂಜಿನ ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ಯೂಟ್ಯೂಬರ್ ಪ್ರಚಾರ ಮಾಡುವಂತಿಲ್ಲ. ಒಂದ್ವೇಳೆ ಪ್ರಚಾರ ಮಾಡಿದ್ರೆ ಖಾತೆ ಬಂದ್ ಆಗಲಿದೆ. ಅಷ್ಟೇ ಅಲ್ಲ, ನೀವು ಗೂಗಲ್ ಒಪ್ಪಿಗೆ ನೀಡದ ಯಾವುದೇ ಜೂಜಿನ ಸೇವೆಗಳು, ಅಪ್ಲಿಕೇಷನ್ ಗಳ ಫೋಟೋ, ಲೋಗೋವನ್ನು ಕೂಡ ಯೂಟ್ಯೂಬ್ ವಿಡಿಯೋದಲ್ಲಿ ತೋರಿಸಬಾರದು. ಯೂಟ್ಯೂಬರ್ ನಿಯಮ ಮೀರಿದ್ರೆ ಕಠಿಣ ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ. ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. 

ಈ ನಟಿಗೆ ಮದುವೆ ಆಗಿಲ್ಲ, ಮಕ್ಕಳಾಗಿಲ್ಲ ಸ್ಟ್ರೆಚ್‌ ಮಾರ್ಕ್‌ ಹೇಗೆ ಎನ್ನುತ್ತಿದ್ದಾರೆ ಫ್ಯಾನ್ಸ್!

ಯೂಟ್ಯೂಬ್ ಕಠಿಣ ನಿರ್ಧಾರಕ್ಕೆ ಕಾರಣ ಏನು? : ಈ ನಿರ್ಧಾರಕ್ಕೆ ಕಾರಣ ಏನು ಎಂಬುದನ್ನು ಯುಟ್ಯೂಬ್ ವಿವರಿಸಿದೆ. ಯುಟ್ಯೂಬ್ ಪ್ರಕಾರ, ಯೂಟ್ಯೂಬ್ ವಿಡಿಯೋಗಳಲ್ಲಿ ಜೂಜಾಟದ ಬಗ್ಗೆ ತೋರಿಸೋದ್ರಿಂದ ಅದು ಯುವಕರ ಮೇಲೆ ನಕಾರಾತ್ಮಕ ಪ್ರಭಾವ ಬೀರುವ ಸಾಧ್ಯತೆ ಹೆಚ್ಚು. ಜೂಜಾಟದ ವಿಷಯವು ಯುವಕರನ್ನು ದಾರಿ ತಪ್ಪಿಸುತ್ತದೆ. ಇದು ಅವರ ಮಾನಸಿಕ ಮತ್ತು ಆರ್ಥಿಕ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಕಂಪನಿ ನಂಬಿದೆ. 

ಯುಟ್ಯೂಬ್ ಈ ನಿರ್ಧಾರದಿಂದ ಕ್ಯಾಸಿನೊ ಆಟಗಳು ಮತ್ತು ಅಪ್ಲಿಕೇಶನ್‌ಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ಪೋಸ್ಟ್ ಮಾಡುವ ಯೂಟ್ಯೂಬರ್ ಗಳಿಗೆ ನಷ್ಟವಾಗಲಿದೆ. ಜೂಜಾಟದ ಸೈಟ್‌ಗಳು ಅಥವಾ ಅಪ್ಲಿಕೇಶನ್‌ಗಳನ್ನು ಪ್ರಚಾರ ಮಾಡುವ ವೀಡಿಯೊಗಳ ಮೇಲೆ ಈಗ ಯೂಟ್ಯೂಬ್ ವಯಸ್ಸಿನ ನಿರ್ಬಂಧಗಳನ್ನು ವಿಧಿಸುತ್ತದೆ. ಈ ವಿಡಿಯೋಗಳನ್ನು ಸೈನ್ ಔಟ್ ಮಾಡಿದ ಬಳಕೆದಾರರಿಗೆ ಮತ್ತು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರಿಗೆ ತೋರಿಸಲಾಗುವುದಿಲ್ಲ. ಹೊಸ ನಿಯಮಗಳು ಜಾರಿಗೆ ಬಂದ ನಂತರ, ಯಾವುದೇ ಯೂಟ್ಯೂಬರ್ ಇಂಥಹ ಯಾವುದೇ ಸೈಟ್ ಅಥವಾ ಅಪ್ಲಿಕೇಶನ್‌ನಿಂದ ಖಾತರಿಯ ಆದಾಯವನ್ನು ಕ್ಲೈಮ್ ಮಾಡುವಂತಿಲ್ಲ. ಅಂತವರ ಖಾತೆಯನ್ನೂ ಯೂಟ್ಯೂಬ್ ಡಿಲೀಟ್ ಮಾಡಲಿದೆ. ನಿಯಮಗಳನ್ನು ಉಲ್ಲಂಘಿಸುವ ವೀಡಿಯೊಗಳ ವಿರುದ್ಧ ಯೂಟ್ಯೂಬ್ ಕಠಿಣ ಕ್ರಮ ಕೈಗೊಳ್ಳುತ್ತಿದೆ. 

ಹೈ ಫೀವರ್​ನಿಂದ ಬೋಲ್ಡ್ ಸೀನ್​ನಲ್ಲಿ ನಟಿಸಿದ ಹೀರೋ, ಹೀರೋಯಿನ್, ಶೂಟಿಂಗ್​ನಿಂದ ಜಂಪ್

9 ಲಕ್ಷ ವಿಡಿಯೋ ಡಿಲೀಟ್ : ಇತ್ತೀಚೆಗೆ ಯೂಟ್ಯೂಬ್ ತನ್ನ ನೀತಿಗೆ ವಿರುದ್ಧವಾಗಿ ಮಾಡಿದ 9 ಲಕ್ಷಕ್ಕೂ ಹೆಚ್ಚು ವೀಡಿಯೊಗಳನ್ನು ಡಿಲೀಟ್ ಮಾಡಿದೆ. ಡಿಲೀಟ್ ಮಾಡಲಾದ ವೀಡಿಯೊಗಳಲ್ಲಿ, ಗರಿಷ್ಠ ಸಂಖ್ಯೆಯ ವೀಡಿಯೊ ಭಾರತೀಯ ರಚನೆಕಾರರದ್ದಾಗಿದೆ. ಭಾರತೀಯ ಸೃಷ್ಟಿಕರ್ತರಿಂದ 3 ಮಿಲಿಯನ್‌ಗಿಂತಲೂ ಹೆಚ್ಚು ವೀಡಿಯೊಗಳನ್ನು ಡಿಲಿಟ್ ಮಾಡಲಾಗಿದೆ. ನೀತಿಯನ್ನು ಉಲ್ಲಂಘಿಸದಂತೆ ಖಚಿತಪಡಿಸಿಕೊಳ್ಳಲು, ಯೂಟ್ಯೂಬ್ ಈಗ ತನ್ನ ವೇದಿಕೆಯಲ್ಲಿ AI ಆಧಾರಿತ ವ್ಯವಸ್ಥೆಯನ್ನು ಬಳಸುತ್ತಿದೆ. ವೀಡಿಯೊಗಳನ್ನು ತೆಗೆದುಹಾಕುವುದರ ಜೊತೆಗೆ, ಯೂಟ್ಯೂಬ್ ಸುಮಾರು 4.8 ಮಿಲಿಯನ್ ಚಾನೆಲ್‌ಗಳನ್ನು ಸಹ ತೆಗೆದುಹಾಕಿದೆ.