49 ವರ್ಷದ ಬಾಲಿವುಡ್ ನಟಿ ಅಮೀಷಾ ಪಟೇಲ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಅವರ ಫಿಟ್ನೆಸ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಅವರ ಹೊಟ್ಟೆಯ ಮೇಲಿನ ಗುರುತುಗಳ ಬಗ್ಗೆ ಕೆಲವರು ಪ್ರಶ್ನಿಸಿದ್ದಾರೆ. ಅಮೀಷಾ, ಸಂಜಯ್ ದತ್ ಅವರ ಸಲುವಾಗಿ ಮಾಡರ್ನ್ ಬಟ್ಟೆ ಧರಿಸುವುದಿಲ್ಲ ಎಂದಿದ್ದಾರೆ. ಸಲ್ಮಾನ್ ಖಾನ್ ಜೊತೆ ಮದುವೆ ವದಂತಿಗಳ ಬಗ್ಗೆಯೂ ಅವರು ಪ್ರತಿಕ್ರಿಯಿಸಿದ್ದಾರೆ.
ಬಾಲಿವುಡ್ ನಟಿ ಅಮೀಷಾ ಪಟೇಲ್ (Bollywood actress Ameesha Patel)ಗೆ ಈಗ 49 ವರ್ಷ ವಯಸ್ಸು. ಅರ್ಧ ಶತಕದ ಹತ್ತಿರ ಇರೋ ಅಮೀಷಾ ಪಟೇಲ್, ಸೌಂದರ್ಯದ ವಿಷ್ಯದಲ್ಲಿ ಈಗ್ಲೂ ಮುಂದಿದ್ದಾರೆ. ಯುವಕರನ್ನು ನಾಚಿಸುವ ಫಿಟ್ನೆಸ್ ಹೊಂದಿರುವ ಅಮೀಷಾ ಪಟೇಲ್, ಸಿನಿಮಾದಿಂದ ದೂರವಿದ್ರೂ ಅಭಿಮಾನಿಗಳ ಕಣ್ಣಿಂದ ದೂರವಾಗಿಲ್ಲ. ಬಾಲಿವುಡ್ ಗೆ ಸಂಬಂಧಿಸಿದ ಕೆಲ್ಸದಲ್ಲಿ ಬ್ಯುಸಿ ಇರುವ ಅಮೀಷಾ ಪಟೇಲ್, ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈಗ ಅಮೀಷಾ ಪಟೇಲ್ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅಮೀಷಾ ಪಟೇಲ್, ಶಾರ್ಟ್ ಟೀ ಶರ್ಟ್ ಹಾಗೂ ಪ್ಯಾಂಟ್ ಧರಿಸಿರೋದನ್ನು ನೀವು ನೋಡ್ಬಹುದು.
Bollywoodstreetsnap ತನ್ನ ಇನ್ಸ್ಟಾ ಖಾತೆಯಲ್ಲಿ ಅಮೀಷಾ ಪಟೇಲ್ ವಿಡಿಯೋ ಹಂಚಿಕೊಂಡಿದೆ. ಅಮೀಷಾ ಪಟೇಲ್ ಏರ್ ಪೋರ್ಟ್ ಲುಕ್ ಅಂತ ಶೀರ್ಷಿಕೆ ಹಾಕಲಾಗಿದೆ. ಜೊತೆಗೆ ಅಮೀಷಾ ಪಟೇಲ್ ಗೆ 49 ವರ್ಷ ಅಂದ್ರೆ ನಂಬ್ತೀರಾ ಅಂತ ಕೇಳಿದ್ದಾರೆ. ಈ ವಿಡಿಯೋದಲ್ಲಿ ಅಮೀಷಾ ಪಟೇಲ್ ಹೊಟ್ಟೆ ಮೇಲೆ ಬಳಕೆದಾರರ ಕಣ್ಣು ಬಿದ್ದಿದೆ. ಅಮೀಷಾ ಪಟೇಲ್ ಗೆ ಮದುವೆ ಆಗಿಲ್ಲ, ಮಕ್ಕಳಾಗಿಲ್ಲ, ಆದ್ರೆ ಹೊಟ್ಟೆ ಮೇಲೆ ಸ್ಟ್ರೆಚ್ ಮಾರ್ಕ್ (stretch marks) ಹೇಗೆ ಇದೆ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಅಮೀಷಾ ಪಟೇಲ್ ಗೆ ಶ್ರೀಮಂತಿಕೆ ಇದೆ, ಹಣ ಇದೆ, ಸಕ್ಸಸ್ ಇದೆ. ಆದ್ರೂ ಯಾಕೆ ಮದುವೆ ಆಗಿಲ್ಲ ಅನ್ನೋದು ಮತ್ತೆ ಕೆಲವರ ಪ್ರಶ್ನೆ. ಅಮೀಷಾ ಪಟೇಲ್ ಈ ವಿಡಿಯೋ ನೋಡಿದ್ರೆ ಅವರಿಗೆ 69 ವರ್ಷ ಆದಂತೆ ಕಾಣ್ತಿದೆ ಎಂದು ಕೆಲವರು ಕಾಲೆಳೆದ್ರೆ ಮತ್ತೆ ಕೆಲವರು ಈ ವಯಸ್ಸಿನಲ್ಲೂ ಅವರು ಫಿಟ್ನೆಸ್ ಮೆಂಟೆನ್ ಮಾಡಿದ್ದಾರೆ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಟ್ರೆಚ್ ಮಾರ್ಕ್ ಗೆ ಪ್ರಗ್ನೆಂಟ್ ಆಗ್ಬೇಕು ಅಂತೇನಿಲ್ಲ. ಇನ್ನು ಅನೇಕ ಕಾರಣಕ್ಕೆ ಸ್ಟ್ರೆಚ್ ಮಾರ್ಕ್ ಕಾಣಿಸಿಕೊಳ್ಳುತ್ತದೆ.
ಲಕ್ಷಲಕ್ಷ ಖರ್ಚು ಮಾಡಿ ಪ್ರಾಣಿಗಳನ್ನು ನೋಡಲು ಕಾಡಿಗೆ ಹೋಗುತ್ತೀನಿ, ಯಾವುದೂ ಫ್ರೀ ಅಲ್ಲ:
ಅಮೀಷಾ ಪಟೇಲ್ ಕೆಲ ದಿನಗಳ ಹಿಂದೆ ಸಂದರ್ಶನದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ತಾವು ಯಾಕೆ ಶಾರ್ಟ್ ಡ್ರೆಸ್ ಹಾಕೋದಿಲ್ಲ ಎಂಬುದನ್ನು ಹೇಳಿದ್ದರು. ಅಮೀಷಾ ಪಟೇಲ್, ಬಾಲಿವುಡ್ ನ ಅನೇಕ ಸೂಪರ್ ಹಿರೋಗಳ ಜೊತೆ ಆಕ್ಟಿಂಗ್ ಮಾಡಿದ್ದಾರೆ. ಗದರ್, ಕಹೋನ ಪ್ಯಾರ್ ಹೇ, ಹಮ್ರಾಜ್ ನಂತಹ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಬಾಲಿವುಡ್ ನಲ್ಲಿ ಸಾಕಷ್ಟು ಸ್ನೇಹಿತರಿದ್ರೂ ಸಂಜಯ್ ದತ್, ಅಮೀಷಾ ಪಟೇಲ್ ಆಪ್ತ ಸ್ನೇಹಿತರು. ಸಂದರ್ಶನವೊಂದರಲ್ಲಿ ಸಂಜಯ್ ದತ್ ಬಗ್ಗೆ ಮಾತನಾಡಿದ ಅಮೀಷಾ ಪಟೇಲ್, ಸಂಜಯ್ ದತ್ ತುಂಬಾ ಪೊಸೆಸಿವ್ ಮತ್ತು ಕಾಳಜಿ ತೋರುವ ಸ್ನೇಹಿತ ಎಂದಿದ್ದಾರೆ. ಸಂಜಯ್ ದತ್ ಮನೆಗೆ ಹೋಗುವ ವೇಳೆ ಅಮೀಷಾ ಪಟೇಲ್ ಎಂದೂ ಶಾರ್ಟ್ ಅಥವಾ ಮಾಡರ್ನ್ ಡ್ರೆಸ್ ಧರಿಸೋದಿಲ್ಲವಂತೆ. ಸಂಜಯ್ ದತ್ ಗೆ ಇದು ಇಷ್ಟವಾಗೋದಿಲ್ಲ ಎನ್ನುವ ಕಾರಣಕ್ಕೆ ಅಮೀಷಾ ತಮ್ಮ ಸ್ಟೈಲ್ ಬದಲಿಸ್ತಾರಂತೆ.
ಚಿರಯೌವ್ವನೆ ನಟಿ ರೇಖಾ ಅಂದಚೆಂದದ ಫೋಟೋಗಳು ಇಲ್ಲಿವೆ, ನೋಡಿ.. ಸದಾ ತರುಣಿ..!
ಇದೇ ವೇಳೆ ಅಮೀಷಾ ತಮ್ಮ ಮದುವೆ ಬಗ್ಗೆಯೂ ಮಾತನಾಡಿದ್ದರು. ಬಾಲಿವುಡ್ ಮೋಸ್ಟ್ ಎಲಿಜಿಬಲ್ ಬ್ಯಾಚ್ಯುಲರ್ ಸಲ್ಮಾನ್ ಖಾನ್ ಜೊತೆ ಮದುವೆ ಆಗ್ಬೇಕು ಎನ್ನುವ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬಂದಿತ್ತು. ಅದನ್ನು ನೋಡಿ ನಾನು ನಕ್ಕಿದ್ದೆ ಎಂದು ಅಮೀಷಾ ಹೇಳಿದ್ದರು. ಸಲ್ಮಾನ್ ಖಾನ್ ಹಾಗೂ ಅಮೀಷಾ ಪಟೇಲ್ ಇಬ್ಬರು ಗುಡ್ ಲುಕ್ ಹೊಂದಿದ್ದು, ಅವರಿಗೆ ಹುಟ್ಟುವ ಮಗು ಸುಂದರವಾಗಿರುತ್ತದೆ ಎಂಬುದು ಫ್ಯಾನ್ಸ್ ಅಭಿಪ್ರಾಯವಾಗಿತ್ತು. ಇದನ್ನು ಪ್ರಸ್ತಾಪಿಸಿದ ಅಮೀಷಾ ಪಟೇಲ್, ಸಲ್ಮಾನ್ ಖಾನ್ ಮೂಡಿಯಲ್ಲ. ಅವರು ಸ್ನೇಹಿತರ ಜೊತೆ ಸ್ನೇಹಿತರಾಗಿ ಇರ್ತಾರೆ. ಎಲ್ಲರಿಗೂ ಸಹಾಯ ಮಾಡ್ತಾರೆ ಎನ್ನುತ್ತ ಅವರನ್ನು ಹೊಗಳಿದ್ದರು.
