ಸರಳವಾಗಿ 44ನೇ ಹುಟ್ಟು ಹಬ್ಬ ಆಚರಿಸಿಕೊಂಡ ನಿರ್ದೇಶಕ, ಗೀತೆ ರಚನೆಕಾರ ಹಾಗು ನಿರ್ಮಾಪಕ ಯೋಗ್ ರಾಜ್ ಭಟ್

ಕನ್ನಡ ಚಿತ್ರರಂಗದ ಟ್ರೆಂಡಿಂಗ್ ನಿರ್ದೇಶಕರಲ್ಲೊಬ್ಬರಾದ ಯೋಗರಾಜ್ ಭಟ್ ಗೆ ಇಂದು 44ನೇ ಹುಟ್ಟು ಹಬ್ಬದ ಸಂಭ್ರಮ.

ಸದ್ಯ ದನಕಾಯೋನು ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲ್ತಾ ಇರೋ ಭಟ್ರು ಪ್ರತಿವರ್ಷ ತಮ್ಮ ಹುಟ್ಟುಹಬ್ಬವನ್ನ ಫ್ಯಾಮಿಲಿ ಹಾಗು ಸ್ನೇಹಿತರ ಜೊತೆ ಸಿಂಪಲ್ ಆಗಿ ಆಚರಿಸಿಕೊಳ್ಳುತ್ತಾರೆ.

ಆದರೆ ಈ ವರ್ಷ ಯೋಗರಾಜ್ ಭಟ್ ಎಲ್ಲಾ ಶಿಷ್ಯರು ಭಟ್ರಿಗೆ ಸ್ಪೆಷಲ್ ಸಾಂಗ್’ನ್ನು ವಿಶೇಷವಾಗಿ ಮಾಡಿದ್ದಾರೆ.

ಈ ಹಾಡಿನಲ್ಲಿ ಯೋಗರಾಜ್ ಭಟ್ ಹತ್ತಿರ ಕೆಲಸ ಮಾಡಿದ ಎಲ್ಲಾ ಶಿಷ್ಯಂದಿರ ಭಾವ ಚಿತ್ರಗಳು ಬಂದು ಹೋಗುತ್ತವೆ.

ಹಾಗೇ ಒಂದು ಗೊಂಬೆ ಯೋಗರಾಜ್ ಭಟ್ ಅವರ ಸಿನಿಮಾಗಳು ಮತ್ತು ಅವರ ಶಿಷ್ಯ ವರ್ಗದ ಬಗ್ಗೆ ಈ ಹಾಡಿನಲ್ಲಿ ತೋರಿಸಲಾಗಿದೆ..