ಬೆಂಗಳೂರು[ಡಿ.23] ಹೊಸ ಇತಿಹಾಸಕ್ಕೆ ಕಾರಣವಾದ KGFನ ಹಿಂದಿ ಮತ್ತು ತೆಲುಗು ಅವತರಿಣಿಕೆಗಳು ಲೀಕ್ ಆಗಿವೆ. 

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತೀ ದೊಡ್ಡ ಪ್ರಮಾಣದ ಹಿಟ್ ಎಂಬ ಖ್ಯಾತಿಗೆ ಪಾತ್ರವಾಗಿರುವ ಯಶ್ ನಟನೆಯ ಕೆಜಿಎಫ್ ಚಿತ್ರ ಆನ್ ಲೈನ್ ನಲ್ಲಿ ಸಂಪೂರ್ಣ ಲೀಕ್ ಆಗಿದೆ. ಕಿಡಿಗೇಡಿಗಳು ಈ ಸಿನಿಮಾದಲ್ಲಿಯೂ ತಮ್ಮ ದುರ್ಬುದ್ಧಿ ತೋರಿಸಿದ್ದಾರೆ.

KGF ಸಿನಿಮಾ ಹೇಗಿದೆ? ಚಿತ್ರ ವಿಮರ್ಶೆ

 ಬಿಡುಗಡೆಯಾದ ದಿನವೇ ಥಿಯೇಟರ್ ನಲ್ಲಿ ಕಿಡಿಗೇಡಿಗಳು ಚಿತ್ರವನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡು ಲೀಕ್ ಮಾಡಿದ್ದಾರೆ. ಮೂವೀಜ್ ರೂಲ್ಸ್ ಎಂಬ ಮೂವಿ ವೆಬ್ ಸೈಟ್ ನಲ್ಲಿ ಕೆಜಿಎಫ್ ಚಿತ್ರದ ಪೂರ್ತಿ ವಿಡಿಯೋ ಲಿಂಕ್ ಅಪ್ಲೋಡ್ ಆಗಿದೆ.

ಕೆಜಿಎಫ್ ಬಿಡುಗಡೆಯಾದ ದಿನವೇ ಬಿಡುಗಡೆಯಾಗಿದ್ದ ತೆಲುಗಿನ ಅಂತರಿಕ್ಷಂ ಮತ್ತು ಪಡೀ ಪಡೀ ಲೇಚೆ ಮನಸು ಚಿತ್ರಗಳೂ ಕೂಡ ಲೀಕ್ ಆಗಿವೆ. ತಮಿಳಿನಲ್ಲಿ ಧನುಷ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಮಾರಿ-2 ಕೂಡ ಲೀಕ್ ಆಗಿದ್ದು ತಂತ್ರಜ್ಞಾನವನ್ನು ಪೈರಸಿಗಾಗಿ ಬಳಸಿಕೊಳ್ಳುತ್ತಿರಿವುದು ಮಾತ್ರ ಸಿನಿಮಾ ಉದ್ಯಮಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ.