ಬೆಂಗಳೂರು (ಜ. 30): ಎಪಿ ಅರ್ಜುನ್‌ ನಿರ್ದೇಶನದ ‘ಕಿಸ್‌’ ಚಿತ್ರದ ಹಾಡು ನಿಧಾನಕ್ಕೆ ಸದ್ದು ಮಾಡುತ್ತಿವೆ. ಯಶ್‌ ಚಿತ್ರದ ಎರಡನೇ ಹಾಡು ಬಿಡುಗಡೆ ಮಾಡಿದ್ದಾರೆ.

‘ನೀನೇ ಮೊದಲು ನೀನೇ ಕೊನೆ... ಯಾರೂ ಬೇಡ ನನಗೆ ಉಸಿರು ಇರುವ ಕೊನೆಯವರೆಗೂ ಇರಲೇಬೇಕು ನನ್ನ ಜತೆ’ ಎಂದು ಸಾಗುವ ಈ ಹಾಡಿಗೆ ಶ್ರೇಯಾ ಘೋಶಾಲ್‌ ಧ್ವನಿ ನೀಡಿದ್ದಾರೆ. ಇದು ರೊಮ್ಯಾಂಟಿಕ್‌ ಮೆಲೋಡಿ ಹಾಡು ಆಗಿದ್ದು, ಯಶ್‌ ಹಾಡು ಕೇಳಿಸಿಕೊಂಡು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ ಎಂಬುದು ನಿರ್ದೇಶಕರ ವಿವರಣೆ.

‘ಹಾಡು ಕೇಳುತ್ತಿದ್ದಂತೇ ಮೊದಲ ಸಾರಿಯೇ ಇಷ್ಟವಾಗಿಬಿಡುತ್ತದೆ. ಎ.ಪಿ.ಅರ್ಜುನ್‌ ಚಿತ್ರಗಳಲ್ಲಿ ಹಾಡುಗಳಿಗೆ ಮಹತ್ವ ಇರುತ್ತದೆಂಬುದು ಮತ್ತೊಮ್ಮೆ ಸಾಬೀತಾಗಿದೆ’ ಎಂದು ಯಶ್‌ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರಂತೆ. ಈ ಹಾಡಿಗೆ ನಿರ್ದೇಶಕ ಎ.ಪಿ.ಅರ್ಜುನ್‌ ಅವರೇ ಸಾಹಿತ್ಯ ರಚಿಸಿದ್ದಾರೆ.

ಭಾರತದ ಏಳು ಪ್ರಮುಖ ಸ್ಥಳಗಳಲ್ಲಿ ಈ ಹಾಡಿನ ಚಿತ್ರೀಕರಣ ನಡೆಸಲಾಗಿದೆ. ವಿರಾಟ್‌, ಶ್ರೀಲೀಲಾ ಈ ಚಿತ್ರದ ಜೋಡಿ. ರವಿಕುಮಾರ್‌ ನಿರ್ಮಾಪಕರು. ಈಗಾಗಲೇ ‘ಕಿಸ್‌’ ಚಿತ್ರದ ‘ಶೀಲಾ... ಸುಶೀಲಾ’ ಎಂಬ ಮೊದಲ ಹಾಡು ಬಿಡುಗಡೆಯಾಗಿ ಆಗಿದೆ.