ಮಗಳಿಗೆ ಸ್ಪೆಷಲ್ ಗಿಫ್ಟ್ ನೀಡಿದ ರಾಕಿಭಾಯ್ ದಂಪತಿ | ಮಗಳ ಬಾಲ್ಯದ ನೆನಪನ್ನು ಸ್ಮರಣೀಯವಾಗಿಸಿದ ಯಶ್- ರಾಧಿಕಾ | 

ಯಶ್- ರಾಧಿಕಾ ಮತ್ತೊಂದು ಮಗಳು ಐರಾಳ ಪುಟಾಣಿ ಕೈ ಕಾಲಿನ ಅಚ್ಚನ್ನು ಮಾಡಿಸಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

ನಾನು, ಯಶ್, ಐರಾಳ ಐರಾಳ ಜೊತೆಗಿನ ಪ್ರತಿಯೊಂದು ಕ್ಷಣವನ್ನು ಮೆಮೋರೆಬಲ್ ಆಗಿಡಲು ಇಷ್ಟಪಡುತ್ತೇವೆ. ಅವಳ ಪುಟಾಣಿ ಕೈ ಕಾಲುಗಳ ಅಚ್ಚನ್ನು ಮಾಡಿಸಬೇಕೆಂದು ನಿರ್ಧರಿಸಿದ್ದೆವು. ಇಂತದ್ದೊಂದು ಐಡಿಯಾವನ್ನು ಸಾಕಾರಗೊಳಿಸಿದವರು ಆರ್ಟಿಸ್ಟ್ ಪ್ರಶಾಂತ್. ಅವರಿಗೆ ನಮ್ಮ ಕಡೆಯಿಂದ ಥ್ಯಾಂಕ್ಸ್ ಅಂತ ರಾಧಿಕಾ- ಯಶ್ ಹೇಳಿದ್ದಾರೆ. 

ಸದ್ಯಕ್ಕೆ ರಾಧಿಕಾ- ಯಶ್ ಇನ್ನೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಐರಾಳ ನಾಮಕರಣ ಶಾಸ್ತ್ರದಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಐರಾಳ ಮೊದಲ ಫೋಟೋ ರಿವೀಲ್ ಮಾಡುವುದರಿಂದ ಹಿಡಿದು, ನಾಮಕರಣ, ಪ್ರೆಗ್ನೆನ್ಸಿ ಗುಟ್ಟನ್ನು ರಿವೀಲ್ ಮಾಡುವುದೆಲ್ಲವನ್ನು ವಿಭಿನ್ನವಾಗಿ ಮಾಡಿದ್ದಾರೆ.

View post on Instagram