ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಇಂದು ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ. ತಾಜ್ ವೆಸ್ಟೆಂಡ್​'ನಲ್ಲಿ ಮಧ್ಯಾಹ್ನ ಅಭಿಜಿನ್ ಮುಹೂರ್ತದಲ್ಲಿ  ಮದುವೆ ಆಗುತ್ತಿದ್ದಾರೆ. ಈ ಶುಭ ಘಳಿಗೆಗೆ ಹೋಟೆಲ್​'ನಲ್ಲಿ  ಸೋಮನಾಥಪುರ ರೀತಿಯ ದೇವಾಲಯವನ್ನು ಹೋಲುವ ಮಂಟಪ ರೆಡಿಯಾಗಿದೆ.

ಸ್ಯಾಂಡಲ್​ವುಡ್​ ತಾರಾಜೋಡಿ ಯಶ್ ಮತ್ತು ರಾಧಿಕಾ ಮದುವೆ ಮಧ್ಯಾಹ್ನ ನಡೆಯಲಿದೆ. ಇದಕ್ಕಾಗಿ ತಾಜ್ ವೆಸ್ಟೆಂಡ್ ಹೋಟೆಲ್ ತಯಾರಾಗಿದೆ. ಸೋಮನಾಥಪುರದ ಟೆಂಪಲ್ ರೀತಿ ಸೆಟ್ ಹಾಕಿದ್ದು ಶಿವ-ಪಾರ್ವತಿ ಮೂರ್ತಿಗಳ ಮುಂದೆ ಸಪ್ತಪದಿ ತುಳಿಯಲಿದ್ದಾರೆ.

ಬೆಳಗ್ಗೆಯಿಂದಲೇ ವಿವಿಧ ಕಾರ್ಯಕ್ರಮಗಳು

ಬೆಳಗ್ಗೆಯಿಂದಲೇ ತಾಜ್ ಹೋಟೆಲ್'​ನಲ್ಲಿ ವಿವಾಹ ಸಂಬಂಧಿ ಕಾರ್ಯಕ್ರಮಗಳು ನಡೆಯಲಿದೆ. 12.10 ರ ಶುಭ ಮುಹೂರ್ತದಲ್ಲಿ ಯಶ್ ಮತ್ತು ರಾಧಿಕಾ ಸತಿ-ಪತಿ ಆಗಲಿದ್ದಾರೆ. ಗುರು ಹಿರಿಯರು ಮತ್ತು ಆಪ್ತರು ಹಾಗೇನೆ, ಸಿನಿರಂಗದ ಸಮ್ಮಖದಲ್ಲಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದೆ.

ಅರಮನೆ ಮೈದಾನದಲ್ಲಿ ಆರತಕ್ಷತೆ

ಇನ್ನು ನಾಳೆ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಈ ಸಂಭ್ರಮದಲ್ಲಿ ಭಾಗಿಯಾಗಲು ಇಡೀ ಇಂಡಸ್ಟ್ರೀಗೆ ಆಹ್ವಾನ ಕೊಡಲಾಗಿದೆ. ಅಭಿಮಾನಿಗಳು ಮತ್ತು ಗೆಳೆಯರಿಗಾಗಿ ಡಿಸೆಂಬರ್-11 ರಂದು ತ್ರಿಪುರ ವಾಸಿನಿಯಲ್ಲಿಯೇ ಮತ್ತೊಮ್ಮೆ ರೆಸೆಪ್ಷನ್ ಮಾಡಿಕೊಳ್ಳುತ್ತಿದ್ದಾರೆ. ಒಟ್ನಲ್ಲಿ ಚಂದನವನದ ಅದ್ದೂರಿ ಕಲ್ಯಾಣಕ್ಕೆ ಯಶ್ ಮತ್ತು ರಾಧಿಕಾ ಸಾಕ್ಷಿಯಾಗ್ತಿದ್ದಾರೆ.