ಯಶ್ ರಾಧಿಕಾ ದಂಪತಿಗೆ ಅಪ್ಪ ಅಮ್ಮನಾಗಿರುವ ಸಂಭ್ರಮ. ಇಂದು ಬೆಳಗ್ಗೆ ರಾಧಿಕಾ ಹೆಣ್ಮಗುವಿಗೆ ಜನ್ಮ ನೀಡಿದ್ದು, ರಾಕಿಂಗ್ ಕುಟುಂಬದ ಭಾಗ್ಯ ಲಕ್ಷ್ಮಿಯ ಮೊದಲ ಫೋಟೋ ವೈರಲ್ ಆಗಿದೆ.

ಸ್ಯಾಂಡಲ್‌ವುಡ್‌ ಸ್ಟಾರ್ಸ್‌ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಮನೆಗೆ ಹೆಣ್ಮಗುವಿನ ಆಗಮನವಾಗಿದೆ. ಡಿಸೆಂಬರ್‌ನಲ್ಲಿ ನಾನು ತಂದೆಯಾಗಲಿದ್ದೇನೆ ಎಂದು ವಿಡಿಯೋ ಮೂಲಕ ಸಿಹಿ ಸುದ್ದಿ ನೀಡಿದ್ದ ಯಶ್ ಬಾಳಿಗೆ ಪುಟ್ಟ ಲಕ್ಷ್ಮಿ ಎಂಟ್ರಿ ನೀಡಿದ್ದಾರೆ. ಇದೀಗ ಸ್ಯಾಂಡಲ್‌ವುಡ್‌ ದಂಪತಿಯ ಮಗುವಿನ ಮೊದಲ ಫೋಟೋ ಲೀಕ್ ಆಗಿದೆ.

ಇದನ್ನೂ ಓದಿ: ಯಶ್ ರಾಧಿಕಾ ಮನೆಗೆ ಲಕ್ಷ್ಮಿಯ ಆಗಮನ: ಹೆಣ್ಮಗುವಿನ ತಂದೆಯಾದ 'ರಾಕಿಂಗ್ ಸ್ಟಾರ್'

ಇಂದು ಬೆಳಗ್ಗೆ ಸುಮಾರು 06.20ಕ್ಕೆ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ರಾಧಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ನಿನ್ನೆ ರಾತ್ರಿಯಷ್ಟೇ ಯಶ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಫೋಟೋ ಒಂದನ್ನು ಹಾಕಿ ತನಗೆ ಹೆಣ್ಮಗುವೇ ಇಷ್ಟ ಎಂದು ತಿಳಿಸಿದ್ದರು. ಇದೀಗ ಅವರ ನಿರೀಕ್ಷೆಯಂತೆ ಪುಟ್ಟ ಭಾಗ್ಯ ಲಕ್ಷ್ಮಿಯ ಆಗಮನವಾಗಿದೆ.

View post on Instagram

ಸದ್ಯ ಆಸ್ಪತ್ರೆಯಲ್ಲಿರುವ ತಾಯಿ ರಾಧಿಕಾ ಹಾಗೂ ಮಗು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳಿಂದ ತಿಳಿದು ಬಂದಿದೆ. ಯಶ್ ಕುಟುಂಬಸ್ಥರೂ ಪುಟ್ಟ ಕಂದಮ್ಮನ ಆಗಮನದಿಂದ ಫುಲ್ ಖುಷಿಯಾಗಿದ್ದಾರೆ. ಇನ್ನು ಇದೇ ತಿಂಗಳ 21 ರಂದು ಯಶ್ ನಟನೆಯ ಬಹುನಿರೀಕ್ಷಿತ ಕೆಜಿಎಫ್ ಚಿತ್ರ ರಿಲೀಸ್ ಆಗುತ್ತಿದೆ.

View post on Instagram