ಯು ಟ್ಯೂಬ್ ನಲ್ಲಿ ಕೆಜಿಎಫ್ ಟ್ರೈಲರ್ ಹವಾ ಸೃಷ್ಟಿ ಮಾಡಿದೆ. 5 ಭಾಷೆಗಳಲ್ಲಿ ಬಿಡುಗಡೆಯಾಗಿರುವ ಟ್ರೈಲರ್ 10 ಲಕ್ಷ ವೀವ್ಸ್ ದಾಟಿದೆ. ಸಿನಿಮಾ ತಂತ್ರಜ್ಞರು ಸಹ ಕೆಜಿಎಫ್ ಗೆ ಉಘೆ ಉಘೆ ಹೇಳಿದ್ದಾರೆ.
ಕೆಜಿಎಫ್ ಚಿತ್ರದ ಟ್ರೈಲರ್ ಗೆ ರಾಮ್ ಗೋಪಾಲ್ ವರ್ಮಾ, ಕಿಚ್ಚ ಸುದೀಪ್, ನಟ ರಾಣಾ ದಗ್ಗೂಬಾಟಿ ಸೇರಿದಂತೆ ಹಲವು ತಾರೆಯರು ಮೆಚ್ಚುಗೆ ಸೂಚಿಸಿದ್ದಾರೆ. ಮುನ್ನುಗ್ಗುತ್ತಿರುವ ಪರಿಗೆ ಯಶ್ ಸಹ ತಮ್ಮ ಸಂಭ್ರಮ ಹಂಚಿಕೊಂಡಿದ್ದಾರೆ.
ಕಿಚ್ಚ ಸುದೀಪ್ ಕೂಡಾ ಕೆಜಿಎಫ್ ಚಿತ್ರದ ಟ್ರೈಲರ್ನ ಹಾಡಿ ಹೊಗಳಿದ್ದಾರೆ. ಹೌದು, ಲಾವಾರಸ ಎದ್ದು ಬರುವಂತಿದೆ ಎಂದು ಸುದೀಪ್ ನಿರ್ದೇಶಕ ಪ್ರಶಾಂತ್ ಮತ್ತು ಹೊಂಬಾಳೆ ಸಂಸ್ಥೆಗೆ ಗುಡ್ ಲಕ್ ಹೇಳಿದ್ದಾರೆ.
ಯಶ್ ಗೆ ದಮ್ಮಯ್ಯ ಅಂದಿದ್ದ ರೆಬಲ್ ಸ್ಟಾರ್ ಅಂಬರೀಶ್
ನಿರ್ದೇಶಕ ರಾಮಗೋಪಾಲ ವರ್ಮಾ ಟ್ವೀಟ್ ಮಾಡಿದ್ದಾರೆ. ಕೆಜಿಎಫ್ ನೋಡಲೇಬೇಕಾದ ಸಿನಿಮಾ. ಚಿತ್ರದ ಟ್ರೈಲರ್ ಅಮೇಜಿಂಗ್ ಆಗಿದ್ದು, ರೋಮಾಂಚನವನ್ನ ಹೆಚ್ಚಿಸುತ್ತಿದೆ. ದಕ್ಷಿಣ ಭಾರತದ ಸಿನಿಮಾಗಳು ಉತ್ತರ ಭಾರತದ ಸಿನಿಮಾಗಳಿಗಿಂತ ಹೆಚ್ಚು ಎತ್ತರಕ್ಕೆ ಏರುತ್ತಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
